ನಂಬುತ್ತೀರೋ ಇಲ್ಲವೋ? ಈ ಫೋಟೋದಲ್ಲಿರೋರು ಹುಡುಗಿಯರಲ್ಲ, ಹುಡುಗರು/ ನಿಮಗೆ ಗೊತ್ತಾ ಇದೊಂದು ದೇವರ ಆರಾಧನೆ/ VIRAL POST

Believe it or not! These beauty are not women, but men dressed as women/ Chamayavilakku festival held at Kottankulangara Sree Devi Temple, Kollam is celebrated on the 10th and 11th day of the Malayalam Meenam Maasam (March 15 - April 14)

ನಂಬುತ್ತೀರೋ ಇಲ್ಲವೋ? ಈ ಫೋಟೋದಲ್ಲಿರೋರು ಹುಡುಗಿಯರಲ್ಲ, ಹುಡುಗರು/  ನಿಮಗೆ ಗೊತ್ತಾ ಇದೊಂದು ದೇವರ ಆರಾಧನೆ/ VIRAL POST

ಸೋಶಿಯಲ್​ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದ ಈ ಫೋಟೋ ಹರಿದಾಡುತ್ತಿದೆ, ತನ್ನ ಮೋಹಕ ಚೆಲುವಿನಿಂದ ಇಂಟರ್​ ನೆಟ್ ಮಂದಿಯ ಗಮನ ಸೆಳೆದ ಈ ಫೋಟೋದಲ್ಲಿರುವವರು ಹುಡುಗಿಯಲ್ಲ ಹುಡುಗ.. 

ಹೌದು, ಕೇರಳದ ದೇವಾಲಯವೊಂದರಲ್ಲಿ ಗಂಡಸರು , ಅಪ್ಪಟ ಹೆಣ್ಣಿನ ಹಾಗೆ ವೇಷ ಧರಿಸಿ, ಅಲ್ಲಿಯೇ ದೇವಿಗೆ ಪೂಜೆ ಸಲ್ಲಿಸಿ ದೀಪ ಹಚ್ಚುತ್ತಾರೆ. ಆ ದೇವಿಯ ಜಾತ್ರೆಯಲ್ಲಿ  ತೆಗೆದ ಫೋಟೋ ಇದು. ಮತ್ತೀವರು, ಜಾತ್ರೆಯಲ್ಲಿ ತಮ್ಮ ಅಲಂಕಾರಕ್ಕಾಗಿ ಮೊದಲ ಬಹುಮಾನ ಪಡೆದುಕೊಂಡಿದ್ದಾರಂತೆ.

ಪ್ರತಿಸಲವು ಕೇರಳದಲ್ಲಿ ಈ ಜಾತ್ರೆ ನಡೆದಾಗ, ಫೋಟೋಗ್ರಾಫರ್​ಗಳು ಮುಗಿಬಿದ್ದು, ಫೋಟೋ ವಿಡಿಯೋಗಳನ್ನು ತೆಗೆದು ಸಮಾಜದ ನಡುವೆ ಹರಿಬಿಡುತ್ತಾರೆ. ಈ ಸಲ ಇವರ ಫೋಟೋ ವೈರಲ್​ ಆಗಿದೆ. 

ಕೇರಳದ ಕೊಲ್ಲಂನಲ್ಲಿರುವ ಕೊಟ್ಟಂಕುಲಂಗರ ಶ್ರೀ ದೇವಿ ದೇವಸ್ಥಾನದಲ್ಲಿ (ಕೊಲ್ಲಂ) ಮಾರ್ಚ್ ತಿಂಗಳಲ್ಲಿ ಈ  ಉತ್ಸವ ನಡೆಯುತ್ತದೆ. ಉತ್ಸವರ ಹ ಹೆಸರು ಚಾಮಯವಿಳಕ್ಕು.  ಈ ಸಮಯದಲ್ಲಿ, ಪುರುಷರು ಮಹಿಳೆಯರ ಬಟ್ಟೆಗಳನ್ನು ಧರಿಸಿ ಪೂಜಿಸುತ್ತಾರೆ. ನೂರಾರು ಪುರುಷರು ಮಹಿಳೆಯರ ಗೆಟಪ್ ಗಳಲ್ಲಿ ಕಾಣಿಸಿಕೊಂಡರು. ಈ ಪೈಕಿ ಕೆಲವರು ತಮ್ಮ ಗೆಟಪ್ ನಲ್ಲಿ ಎಷ್ಟು ಹೊಂದಿಕೊಂಡಿದ್ದರೆಂದರೆ, ಅವರು ಹೆಣ್ಣೋ ಗಂಡೋ ಎಂದು ಊಹಿಸುವುದಕ್ಕೆ ಕಣ್ಣೆ ಮೋಸ ಮಾಡುತ್ತಿತ್ತು. 

ಇಲ್ಲಿ ಹೆಣ್ಣಿನ ವೇಷ ಧರಿಸಲೆಂದರೆ ಬರುವ ಭಕ್ತರಿಗೆ, ಮೇಕಪ್ ಮಾಡಲು ಬ್ಯೂಟಿಪಾರ್ಲರ್​ಗಳ ಸಾಲೆ ಇಲ್ಲಿದೆ. ಮೇಲಾಗಿ ಹೆಣ್ಣಿನ ವೇಷ ಧರಿಸುವುದರಲ್ಲಿಯೇ ಇಲ್ಲೊಂದು ಕಾಂಫಿಟೇಶನ್​ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವೂ ನೀಡಲಾಗುತ್ತದೆ .19 ದಿನಗಳ ಕಾಲ ನಡೆಯಲಿರುವ ಈ ಜಾತ್ರೆ ಫೋಟೋ ವಿಡಿಯೋಗಳು ವೈರಲ್​ ಆಗುತ್ತಿವೆ. ಅರಣ್​ ಎಂಬ ಛಾಯಗ್ರಾಹಕ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ಧಾರೆ.

ಇನ್ನೂ ಟ್ವಿಟ್ಟರ್​ ಫೇಸ್​ಬುಕ್​ಗಳಲ್ಲಿ  ಸಾಕಷ್ಟು ಫೋಟೋ ವಿಡಿಯೋಗಳು ಹರಿದಾಡುತ್ತಿದೆ. ಈ  ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ಮತ್ತು ಇದೇ ರೀತಿಯ ವೈರಲ್ ಸುದ್ದಿಗಳಿಗಾಗಿ  ಮಲೆನಾಡು ಟುಡೆ. ಕಾಂ ಅನ್ನು ಓದುತ್ತಲೇ ಇರಿ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news