ಈ ಮರಕ್ಕಿದೆ ಆನೆಯ ಖಾಸಗಿ ಭಾಗದ ಹೆಸರು? ಏಕೆ ಹೀಗೆ? ಈ ಮರದ ವಿಶೇಷವೇನು ಗೊತ್ತಾ?

ಇದೊಂದು ಔಷಧೀಯ ಮರ, ವಾಯು,ಸಂಧಿವಾತ, ಚರ್ಮ ರೋಗ ದಂತ ಕಾಯಿಲೆಗಳಿಗೆ ಇದರಿಂದ ಔಷಧಿ ತಯಾರಿಸ್ತಾರಂತೆ. ಅಂದರೆ ಕಾಯಿಯನ್ನು ಒಣಗಿಸಿ ಅಥವಾ ಬೇಯಸಿ ಔಷಧಿಯನ್ನು ತಯಾರಿಸಲಾಗುತ್ತದೆಯಂತೆ.

ಶಿವಮೊಗ್ಗ ನಗರದಲ್ಲಿಯೇ ಕಾಣಸಿಕ್ಕಿರುವ ಈ ಮರದ ಆ ಭಾಗದಲ್ಲಿ ಹೋಗಿ ಬರುತ್ತಿರುವವರ ಗಮನ ಸೆಳೆದಿತ್ತು. ಅದರ ನಡುವೆ ಗುಂಪೊಂದು ಇದೇನು ಗುರು ಹಿಂಗಿದೆ ಇದರ ಕಾಯಿ,, ಒಳ್ಳೆ ಆನೆ ತರಡು ಇದ್ದಾಗೆ ಅನ್ನೋ ಸಂಭಾಷಣೆ ನಡೆಸಿದ್ರು. ಈ ವೇಳೆ ಅಲ್ಲಿದ್ದವರು ಒಬ್ಬರು ಹೌದು ಕಣ್ರಿ, ಇದು ಆನೆ ತರಡಿನ ಮರ ಎಂದರು. ಕೇಳಿದವರಿಗೆಲ್ಲಾ ಅಚ್ಚರಿಯೋ ಅಚ್ಚರಿ, ಹೀಗೂ ಐತಾ ಇದೇನ್ ವಿಚಿತ್ರ , ಅರೆ ಇಸ್ಕಿ ಅಂತಾ ಗುನಗ ತೊಡಗಿದ್ರು. ಅಲ್ಲದೆ ಮರದ ಬಗ್ಗೆ ಒಂದು ತೌಲೋನಿಕ ಅಧ್ಯಯನ ಮಾಡಲೇ ಬೇಕು ಎಂದು, ಮರದ ವಿಡಿಯೋ ಮಾಡಿ, ಅದರ ಬಗ್ಗೆ ಮಾಹಿತಿ ಹೆಕ್ಕಲು ಆರಂಭಿಸಿದ್ರು. ಆಗ ಸಿಕ್ಕಿದ್ದು ಈ ವಿಶೇಷ ಸಂಗತಿ.. 

ಇದನ್ನು ಸಹ ಓದಿ : ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ, ತಾಳಗುಪ್ಪ -ಮೈಸೂರು ಎಕ್ಸ್​ಪ್ರೆಸ್​ ರೈಲು ಹತ್ತುವಾಗ, ಕಾಲು ಜಾರಿ ಬಿದ್ದ ಪ್ರಯಾಣಿಕ

ಮರದ ಕೊಂಬೆಗಳಿಗೆ ಹಲಸಿನ ಹಣ್ಣಿನ ಸ್ಟೈಲ್​ನಲ್ಲಿ ಜೋತುಬಿದ್ದ ದೊಡ್ಡ ಗಾತ್ರ ಕಾಯಿಗಳನ್ನು ಹೊಂದಿರುವ ಈ ಮರವನ್ನು ಸೈಂಟಿಫಿಕ್ ಭಾಷೆಯಲ್ಲಿ ಕಿಗೇಲಿಯಾ ಪಿನ್ನಾಟ (Kigelia) ಎಂದು ಎಂದು ಕರೆಯುತ್ತಾರೆ. ಅಲ್ಲದೆ ಕಿಗೇಲಿಯಾ ಆಫ್ರಿಕನಾ (sausage tree kigelia pinnata) ಎಂದು ಸಹ ಕರೆಯುತ್ತಾರೆ. ಅಲ್ಲದೆ ಬಲಮ್​ ಖೀರಾ, ಝಾಢು ಫನಾಸ್ ಎಂಬ ಹೆಸರುಗಳಿವೆ. ಅದಷ್ಟೆ ಅಲ್ಲದೆ ವಿಶೇಷವಾಗಿ ಸಾಸೇಜ್​ ಟ್ರೀ (sausagetree) ಎಂದು ಸಹ ಕರೆಯುತ್ತಾರೆ. ಹೀಗಂದರೆ ತೂಗು ಹಾಕಿರುವ ಪ್ರಾಣಿಗಳ ಮಾಂಸ ಎಂಬ ಅರ್ಥವಿದೆಯಂತೆ. 

ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಇಷ್ಟೆ ಅಲ್ಲ, ಇನ್ನೊಂದು ವಿಶೇಷ ಅಂದರೆ, ಈ ಮರವನ್ನು ಬ್ರಿಟಿಷರು ಎಲಿಫೆಂಟ್​ ಕುಕುಂಬರ್​ ಎಂದು ಕರೆಯುತ್ತಿದ್ದರಂತೆ, ಅಂದರೆ, ಆನೆ ಸೌತೆಕಾಯಿ ಎಂದು ಕನ್ನಡದಲ್ಲಿ ಅರ್ಥ ಬರುತ್ತದೆ. ಇನ್ನೂ ನಮ್​ ಲೋಕಲ್​ ಮಲೆನಾಡು ಭಾಷೆಯಲ್ಲಿ ಇದನ್ನ ಆನೆ ತರಡು ಮರ ಎಂದು ಕರೆಯುವರೇ ಹೆಚ್ಚು ಎಂಬ ಮಾಹಿತಿ ತಿಳಿದವರು ನೀಡಿದ್ರು. 

ಮಿಸ್ ಮಾಡ್ಕೋಳದೇ ನೋಡಿ : ನಿಮ್ಮ ಮನೆ ಸನಿಹ ಕಾಳಿಂಗ ಸರ್ಪ ಗೂಡು ಕಟ್ಟಿದೆ ಎಂದು ನಿಮಗೆ ಗೊತ್ತಾಗೋದು ಹೇಗೆ? ನಂತರ ನೀವೇನು ಮಾಡಬೇಕು

ಇಷ್ಟಾಯ್ತಾ, ಹಾಗೆ ಈ ಮರದ ಉಪಯೋಗವೇನು? ಎಂದು ಕೇಳಲಾಯ್ತು, ಅದಕ್ಕೆ ಸಿಕ್ಕ ಉತ್ತರ, ಈ ಜಾತಿಯ ಮರಗಳಲ್ಲಿ ವಿಶಿಷ್ಟವಾದ ಹೂವುಗಳು ಬೆಳೆಯುತ್ತವಂತೆ ಅದು ನೋಡಲು ದೊಡ್ಡದಾಗಿ ಸುಂದರವಾಗಿಯು ಇರುತ್ತವೆ ಎನ್ನುತ್ತಾರೆ. ಮುಖ್ಯವಾಗಿ ಇದೊಂದು ಔಷಧೀಯ ಮರ,  ವಾಯು,ಸಂಧಿವಾತ, ಚರ್ಮ ರೋಗ ದಂತ ಕಾಯಿಲೆಗಳಿಗೆ ಇದರಿಂದ ಔಷಧಿ ತಯಾರಿಸ್ತಾರಂತೆ. ಅಂದರೆ ಕಾಯಿಯನ್ನು ಒಣಗಿಸಿ ಅಥವಾ ಬೇಯಸಿ ಔಷಧಿಯನ್ನು ತಯಾರಿಸಲಾಗುತ್ತದೆಯಂತೆ. 

ಮಲೆನಾಡ ರಾಜಕಾರಣದ ವಿಡಿಯೋ ನೋಡಿ :ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ

ಹಾಗಂತ ಡೈರಕ್ಟ್ ಆಗಿ ಈ ಮರದ ಕಾಯಿಯನ್ನು ತಿನ್ನುವಂತಿಲ್ಲ. ಹಾಗೆಯೇ ಕೊಯ್ದು ತಿಂದರೆ ವಾಂತಿ, ಬೇಧಿ ಶುರುವಾಗುತ್ತದೆಯಂತೆ. ಅಷ್ಟರಮಟ್ಟಿಗೆ ಇದು ಪಾಯಿಸನ್​ ಎಂಬ ವಿಚಾರವಿದೆ. ಮೇಲಾಗಿ ಈ ಮರದ ಕೆಳಗೆ ಓಡಾಡುವುದು ಕೂರುವುದು ಸಹ ಅಪಾಯಕಾರಿಯೇ. ಗೃಹಚಾರ ಕೆಟ್ಟು ಕಾಯಿ ಬಿದ್ರೆ ಮಂಡೆ ಒಡೆಯುವುದು ಗ್ಯಾರಂಟಿ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link