ನಿಮ್ಮನೆಯಲ್ಲಿಯು ಹೀಗೆ ನಡೆದಿರಬಹುದು! ಮಲ್ನಾಡ್​ ಜಿಲ್ಲೆಯಲ್ಲಿ ಈ ರೀತಿ ಇದೇ ಮೊದಲು ಈ ಥರ! ‘ದನ’ ಜಾಗ್ರತೆ!

MT report on the strange path of cattle smuggling going on in Shivamogga district

ನಿಮ್ಮನೆಯಲ್ಲಿಯು ಹೀಗೆ ನಡೆದಿರಬಹುದು! ಮಲ್ನಾಡ್​ ಜಿಲ್ಲೆಯಲ್ಲಿ ಈ ರೀತಿ ಇದೇ ಮೊದಲು ಈ ಥರ!  ‘ದನ’ ಜಾಗ್ರತೆ!
Shivamogga District, Thirthahalli Taluk, Cattle Smuggling, ಶಿವಮೊಗ್ಗ ಜಿಲ್ಲೆ , ತೀರ್ಥಹಳ್ಳಿ ತಾಲ್ಲೂಕು, ದನಗಳ್ಳತನ,

SHIVAMOGGA  |  Dec 29, 2023  |  ಶಿವಮೊಗ್ಗದಲ್ಲಿ ದನಗಳ್ಳರ ಹಾವಳಿ ವಿಪರೀತವಾಗಿ! ಕಾಯಿದೆ ಕಟ್ಟಲೇ ಬಿಗಿ ಮಾಡಿದ್ರೂ ಹಟ್ಟಿಯೊಳಗಿರುವ ಮೂಕಪ್ರಾಣಿಗಳನ್ನ ಹೊಡ್ಕೊಂಡು ಹೋಗುತ್ತಿರುವ ಘಟನೆಗಳ ನಡೆಯುತ್ತಲೇ ಇವೆ. ಖರ್ಚಿಲ್ಲದೇ ಎರಡು ಬ್ರೆಡ್​, ಬಾಳೆಹಣ್ಣು ಕೊಟ್ಟು ಹಸುಗಳ ಮೂಗುದಾರ ಹಿಡಿದು ಕಾರಿಗೆ ತುಂಬು ಕಿರಾತಕರು, ಅದನ್ನ ತಮಗಿಷ್ಟ ಬಂದ ಬೆಲೆಗೆ ಮಾರಿ ಲಾಭ ಮಾಡಿಕೊಳ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಯಲ್ಲಿ ಇದು ಸಹ ಅಕ್ರಮ ಉದ್ಯಮವಾಗಿ ಪರಿವರ್ತನೆಯಾಗಿದೆ ಅನ್ನುತ್ತದೆ ಪೊಲೀಸ್ ಮೂಲಗಳು. ಇದೆಲ್ಲದರ ನಡುವೆ  ನಮ್ಮ ಮಲ್ನಾಡ್​ ಜಿಲ್ಲೆಯಲ್ಲಿ ಇನ್ನೊಂದು ರೀತಿಯ ಹಸು ವ್ಯಾಪಾರ ನಡೆಯುತ್ತಿದೆ. ಪಾಪ ಪುಣ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ಅಕ್ರಮ ದಂಧೆಯ ಬಗ್ಗೆ ಇದೆ ಮೊದಲ ಸಲ ಸುದ್ದಿಯಾಗುತ್ತಿದೆ.. 

ಐಶಾರಾಮಿ ಕಾರುಗಳಲ್ಲಿ ಬಂದು ದನಗಳ್ಳತನ

ಇತ್ತೀಚೆಗೆ ಸಕ್ರೆಬೈಲ್​ ನಲ್ಲಿ ವಿಜಿ ಎಂಬವರಿಗೆ ಸೇರಿದ ಗಬ್ಬ ಕಟ್ಟಿದ್ದ ಹಸುಗಳನ್ನ ಅನಾಮತ್ತಾಗಿ ಐಶಾರಾಮಿ ಕಾರಿನಲ್ಲಿ ತುಂಬಿಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದರು. ದುಬಾರಿ ಕಾರಿನಲ್ಲಿ ಹಸುಗಳನ್ನ ಸಾಗಿಸಿದರೇ ಅನುಮಾನ ಬರುವುದಿಲ್ಲ ಎಂಬುದು ಕದ್ದವರ ಬುದ್ದಿ. ಈ ಹಿಂದೆ ಐಶಾರಾಮಿ ಕಾರೊಂದು ಅಪಘಾತವಾಗಿದ್ದ ಸಂದರ್ಭದಲ್ಲಿ  ಅದರೊಳಗೆ ಗೋಮಾಂಸ ಪತ್ತೆಯಾಗಿತ್ತು ಎಂದು ಹೇಳಲಾಗಿತ್ತು. ಆನಂತರ ಆ ಕೇಸ್​ ಏನಾಯ್ತು ಎಂಬುದು ಭಗವಂತ ಬಲ್ಲ. 

ದನ ಸಾಕುವುದನ್ನೆ ಬಿಡುತ್ತಿರುವ ಮಲೆನಾಡಿಗರು

ಯಾವುದೇ ಪ್ರಾಣಿಗಳನ್ನು ಹಿಂಸಾತ್ಮಕವಾಗಿ ಸಾಗಿಸುವಂತಿಲ್ಲ. ಅದರಲ್ಲಿ ಗೋವಿನ ವಿಚಾರದಲ್ಲಿ ವಿಶೇಷ ಕಾನೂನುಗಳಿವೆ. ಆದರೆ ದನಗಳ್ಳರಿಗೆ ಇದ್ಯಾವುದು ಸೋಕುತ್ತಿಲ್ಲ. ಹಟ್ಟಿಯೊಂದರಲ್ಲಿ ಎಷ್ಟು ಹಸುವಿದೆ ಎಂಬ ಲೆಕ್ಕಸಿಕ್ಕರೇ, ಅಲ್ಲೊಂದು ದಿನ ಕಳ್ಳತನ ನಡೆಸಿಯೇ ತೀರುತ್ತಾರೆ. ಎಷ್ಟರಮಟ್ಟಿಗೆ ಎಂದರೆ, ಹಸುಗಳನ್ನ ಕಳ್ಕೊಂಡು ಪಾಪದ ಪ್ರಾಣಿ ಹೋಯ್ತಲ್ಲ ಎಂದು ಕಣ್ಣೀರು ಹಾಕುವ  ಮಲ್ನಾಡ್​ ಮನೆಮಂದಿ ಮತ್ತೆ ದನಗಳನ್ನ ಸಾಕುವ ಪ್ರಯತ್ನವನ್ನೆ ಮಾಡುತ್ತಿಲ್ಲ. ಗಿಣಿಯಂತೆ ಸಾಕಿ ಗಿಡುಗನ ಕೈಗೆ ಕೊಟ್ಟಂತೆ ಆಗುತ್ತದೆ. ಆ ಪಾಪ ತಮಗೆ ಸುತ್ತುಕೊಳ್ಳುವುದು ಬೇಡವೆಂದು ದನಕರ ಕಟ್ಟುವುದನ್ನೆ ಬಿಟ್ಟು ಬಿಡುತ್ತಿದ್ದಾರೆ. 

READ : ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗಳಿಂದ ರೋಚಕ ಚೇಸಿಂಗ್​! ಸಿನಿಮಾ ಸ್ಟೈಲ್​ನಲ್ಲಿ ಸಿಕ್ಕಿಬಿದ್ದವರು ಮಾಡಿದ್ದೇನು ಗೊತ್ತಾ?

ದನಗಳ ಪ್ರಜ್ಞೆ ತಪ್ಪಿಸಿ ಸಾಗಿಸ್ತಾರೆ ಗೊತ್ತಾ?/Cattle Smuggling

ಇದೆಲ್ಲ ಒಂದು ಕಥೆಯಾದರೆ ಇನ್ನೂ ಕೆಲವೆಡೆ ಕ್ಲೋರೋಫಾರಮ್​ನ್ನ ಬಳಸಿಕೊಂಡು ದನಗಳ ಪ್ರಜ್ಞೆ ತಪ್ಪಿಸಿ ಅವುಗಳನ್ನ ಎತ್ತಿಕೊಂಡು ಸಾಗಿಸುತ್ತಿರುವ ಬಗ್ಗೆಯು ಈಗಾಗಲೇ  ಹಲವು ಸಲ ವರದಿಯಾಗಿದೆ. ಇಂತಹ ಕೃತ್ಯಗಳನ್ನ ಕಾಣುತ್ತಿರುವ ಸಿಸಿ ಕ್ಯಾಮರಾಗಳು ನಡೆಯುವ ಘಟನೆಗೆ ಮೂಕ ಸಾಕ್ಷಿಯಾದರೆ, ಪೊಲೀಸ್ ಸ್ಟೇಷನ್​ಗಳಲ್ಲಿನ ಎಫ್​ಐಆರ್​ಗಳು ನಡೆದ ಕೃತ್ಯಗಳ ಲೆಕ್ಕ ಹೇಳುತ್ತಿವೆ. 

ಗೊಡ್ಡು ಹಸುವನ್ನ ಕೇಳಿಕೊಂಡು ಬರ್ತಾರೆ

ಇನ್ನೂ ವಿಚಿತ್ರ ಹಾಗೂ ಎಕ್ಸ್​ಕ್ಲ್ಯೂಸಿವ್ ಮಾಹಿತಿ ಅಂದರೆ,  ಮಲ್ನಾಡ್​ ಜಿಲ್ಲೆಯ ತಾಲ್ಲೂಕುಗಳಲ್ಲಿ ಗಂಡು ಕರ ಕೇಳಿಕೊಂಡೋ ಅಥವಾ ಗೊಡ್ಡು ಹಸು ಇದ್ರೆ ಕೊಡಿ ಎಂದು ಕೇಳಿಕೊಂಡು ಅಪರಿಚಿತ ತಂಡವೊಂದು ಹಸು ವ್ಯಾಪಾರ ನಡೆಸ್ತಿದೆ. ಈ ವಹಿವಾಟು ಹೇಗೆ ನಡೆಯುತ್ತಿದೆ ಎಂಬುದೇ ಸ್ಟೋರಿ… 

ಮಠಕ್ಕೆ ಹಸು ಕೊಡ್ತೀರಾ?

ತೀರ್ಥಹಳ್ಳಿ ಭಾಗದಲ್ಲಿ ಇಂತಹ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ ಎಂಬ ಮಾಹಿತಿಯಿದೆ. ಹೊಸನಗರ ಭಾಗದ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ. ಆದರೆ ಮನೆ ಮನೆಗಳಿಗೆ ಬೇಟಿಕೊಡ್ತಿರುವ ಕೆಲವರು ಮನೆಯಲ್ಲಿನ ಗೊಡ್ಡು ಹಸು ಹಾಗೂ ಗುಡ್ಡಗಳನ್ನ ಕೇಳುತ್ತಿದ್ದಾರೆ. ಅದು ಸಹ ಉಚಿತವಾಗಿ. ಹಸುವಿನ ಪಾಲನೆಯಲ್ಲಿ ಹಾಲು ನೀಡದ ಹಸುಗಳು ಹಾಗೂ ಗಂಡು ಕರುಗಳನ್ನ ಸಾಕುವುದು ಮನೆಯವರಿಗೂ ತ್ರಾಸದಾಯಕ. ಈ ವಿಚಾರ ತಿಳಿದೇ ಮನೆಗಳಿಗೆ ಭೇಟಿಕೊಡುವ ಆಗಂತುಕರು ಮಠ, ದೇವಸ್ಥಾನದ ಹೆಸರು ಹೇಳುತ್ತಿದ್ದಾರಂತೆ. 

ಹೌದು, ನಿಮಗೆ ಸಾಕಲಾಗದ ಹಸುಗಳನ್ನ ನಮಗೆ ಕೊಡಿ, ಅದನ್ನು ಗೋಶಾಲೆಗೆ ತಲುಪಿಸುತ್ತೇವೆ. ಮಠಗಳಿಗೆ ನೀಡುತ್ತೇವೆ. ದೇವಸ್ಥಾನದ ಆಶ್ರಯಕ್ಕೆ ಒಪ್ಪಿಸುತ್ತೇವೆ. ನಿಮಗೆ ಉಪದ್ರ ತಪ್ಪುತ್ತೆ. ಹಲವು ಕಡೆ ದನ ಕರ ಒಟ್ಟು ಮಾಡಿ ತೆಗೆದುಕೊಂಡು ಹೋಗುತ್ತೇವೆ ಎಂದೆಲ್ಲಾ ನಯವಿನಯದ ಮಾತುಗಳನ್ನ ಆಡುವ ಮಂದಿ ಆನಂತರ ಮಾಡುವ ಕೃತ್ಯವೆ ಬೇರೆ ಎನ್ನಲಾಗುತ್ತಿದೆ. 



ಕಸಾಯಿಖಾನೆಗಳಿಗೆ ಸಾಗಾಟವಾಗ್ತಿದೆ ಹಸುಗಳು

ಪ್ರೀತಿಯಿಂದ ಸಾಕುವ ಹಸುಗಳನ್ನ ಅವುಗಳಿಂದ ಉಪಯೋಗ ಇಲ್ಲದ ಮೇಲೆ ಕಸಾಯಿಖಾನೆಗೆ ಅಟ್ಟುವ ಮನಸ್ಸು ಯಾರು ಮಾಡಲ್ಲ. ಹಾಗಾಗಿ ಅವುಗಳಿಗೆ ಒಂದು ನೆಲೆ ಸಿಗುತ್ತೆ ಅಂದರೆ ಒಳ್ಳೆಯದೇ ಅಲ್ಲವೇ ಎಂದು ಗೊಡ್ಡು ಹಸುಗಳನ್ನ , ಗಂಡು ಕರುಗಳನ್ನ ಜನರು ಉಚಿತವಾಗಿ ಕೇಳಿಬಂದವರಿಗೆ ನೀಡುತ್ತಿದ್ದಾರೆ. ಆದರೆ ಹೀಗೆ ದನಗಳನ್ನ ಕೊಂಡೊಯ್ಯುವ ಟೀಂ ಮಾಡುವ ಕೆಲಸದ ಬಗ್ಗೆ ಅಚ್ಚರಿ ಮೂಡುತ್ತಿದೆ. 

ತೀರ್ಥಹಳ್ಳಿ ಭಾಗದಲ್ಲಿ ಆಕ್ಟೀವ್ ಆಗಿದೆ ಟೀಂ

ತೀರ್ಥಹಳ್ಳಿ ಭಾಗದಲ್ಲಿ ಹೀಗೇ ಸಾಗಿಸಲಾಗ್ತಿರುವ ಹಸುಗಳನ್ನು ತೀರ್ಥಹಳ್ಳಿ ಸೆಂಟರ್ ಪ್ರದೇಶವೊಂದರಲ್ಲಿ ತಂದು ಅಲ್ಲಿಂದ ಕಸಾಯಿಖಾನೆಗಳಿಗೆ ರವಾನಿಸಲಾಗುತ್ತಿದೆ ಎಂಬ ವರದಿಯೊಂದು ಲಭ್ಯವಾಗಿದೆ. ಇದಕ್ಕಾಗಿ ತಂಡವೊಂದು ಕೆಲಸ ಮಾಡುತ್ತಿದೆ ಎಂಬುದು ಮಲೆನಾಡು ಟುಡೆಗೆ ಸಿಕ್ಕ ಮಾಹಿತಿ. ಖರ್ಚಿಲ್ಲದೇ ಜನರಿಂದಲೇ ಹಸುಗಳನ್ನ ಪಡೆದುಕೊಂಡು ಆನಂತರ ಅವುಗಳನ್ನ ಕಸಾಯಿಖಾನೆಗೆ ಕಳುಹಿಸಿ ಲಾಭ ಮಾಡಿಕೊಳ್ತಿರುವ ಆ ದುಷ್ಕರ್ಮಿಗಳ ಬಗ್ಗೆ ಪೊಲೀಸ್ ಇಲಾಖೆಯಲ್ಲಿಯು ಅಲ್ಪಸಲ್ಪ ಮಾಹಿತಿ ಇದೆಯೆಂದು ಕಾಣುತ್ತದೆ. ಮಲೆನಾಡು ಟುಡೆ ತಂಡ ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರತರಲು ಪ್ರಯತ್ನಿಸುತ್ತಿದೆ.