ತೀರ್ಥಹಳ್ಳಿಯಲ್ಲಿ ತೋಟದಲ್ಲಿ ನಡೆಯುತ್ತಿದ್ದ ಗಾಂಜಾ ಕೃಷಿಗೆ ಪೊಲೀಸರು ನೀಡಿದ್ರು ಶಾಕ್!

Malenadu Today

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS 

ತೀರ್ಥಹಳ್ಳಿ ಪೊಲೀಸರು ಅಕ್ರಮವಾಗಿ ತೋಟದಲ್ಲಿಯೇ ಬೆಳದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿ ಕೇಸ್ ದಾಖಲಿಸಿದ್ಧಾರೆ. 

ಏನಿದು ಪ್ರಕರಣ?

ನಿನ್ನೆ  ದಿನಾಂಕಃ 09-08-2023 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಂದೂರು ಕೋಲಿಗೆ ಗ್ರಾಮದ ತೋಟವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ. 

ಮಾಹಿತಿಯನ್ನ ಆಧರಿಸಿ  ತೀರ್ಥಹಳ್ಳಿ ಡಿವೈಎಸ್​ಪಿ ಗಜಾನನ  ವಾಮನ ಸುತಾರರವರ ನೇತೃತ್ವದಲ್ಲಿ  ಪೊಲೀಸ್ ನಿರೀಕ್ಷಕ ಅಶ್ವತ್ ಗೌಡ , ಎಸ್​ಐ ಗಾದಿ ಲಿಂಗಪ್ಪ ಗೌಡರ್ ಮತ್ತು ಸಿಬ್ಬಂಧಿ ದಾಳಿ ನಡೆಸಿದ್ದಾರೆ. ಈ ವೇಳೇ  ,ಅಂದಾಜು ಮೌಲ್ಯ 80,000/- ರೂ ಗಳ, 2 ಕೆಜಿ 164  ಗ್ರಾಂ ತೂಕದ ಹಸಿ ಗಾಂಜಾ ಗಿಡಗಳು ಪತ್ತೆಯಾಗಿದ್ದು ಅವುಗಳನ್ನ ಜಪ್ತಿ ಮಾಡಲಾಗಿದೆ.  

ಇನ್ನೂ  ಗಾಂಜಾ ಗಿಡ ಬೆಳಸಿದ ಆರೋಪಕ್ಕೆ ಸಂಬಂಧಿಸಿದಂತೆ   ಸುನಿಲ್ 34 ವರ್ಷ, ಕೋಲಿಗೆ ಗ್ರಾಮ, ಕೋಣಂದೂರು, ತೀರ್ಥಹಳ್ಳಿ ಮತ್ತು ಕಾರ್ತಿಕ್ 29 ವರ್ಷ, ಕೋಲಿಗೆ ಗ್ರಾಮ, ಕೋಣಂದೂರು, ತೀರ್ಥಹಳ್ಳಿ ರನ್ನ ಬಂದಿಸಲಾಗಿದೆ. ಈ ಸಂಬಂಧ ಐಪಿಸಿ 8(a), 20(a) (i) NDPS ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. 

ಇನ್ನಷ್ಟು ಸುದ್ದಿಗಳು

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article