ವಿಷ ಕುಡಿದವರನ್ನ ರಕ್ಷಿಸಿದ್ದೇಗೆ ಪೊಲೀಸರು! ಶಿವಮೊಗ್ಗದಲ್ಲಿ ಒಟ್ಟಾರೆ ಏನೆಲ್ಲಾ ನಡೆಯಿತು! ಹಲವು ಸುದ್ದಿಗಳು ಒಂದೇ ಪುಟದಲ್ಲಿ

Shivamogga Police News / ಶಿವಮೊಗ್ಗ: ಜಿಲ್ಲೆ ವಿವಿಧ ತಾಲ್ಲೂಕುಗಳಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂದಿಸಿದಂತೆ ಇವತ್ತಿನ ಶಿವಮೊಗ್ಗ ರೌಂಡಪ್​ ನ್ಯೂಸ್ ಹೀಗಿದೆ. 

ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗಲಿರುವ ಹೈ-ಸೆಕ್ಯೂರಿಟಿ ಜೈಲಿನ ಸ್ಥಳಕ್ಕೆ  ಡಿಸಿ ಮತ್ತು ಎಸ್ಪಿ ಭೇಟಿ

Shivamogga Police News ಭದ್ರಾವತಿ: ಬೈಕ್ ಮತ್ತು ಕಾರಿನ ನಡುವೆ ಅಪಘಾತ 

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 28.01.2026 ರಂದು ಬೈಕ್ ಹಾಗೂ ಕಾರಿನ ನಡುವೆ ಅಪಘಾತವಾಗಿರತ್ತು. ವಿಷಯ ತಿಳಿದು ಸ್ಥಳಕ್ಕೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ,  ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ ವಾಹನಗಳನ್ನು ಠಾಣೆಗೆ ಶಿಫ್ಟ್​ ಮಾಡಿಸಿ ಮುಂದಿನ ಕ್ರಮಕ್ಕೆ ಅನುವು ಮಾಡಿದ್ದಾರೆ. 

 Shivamogga Police News 112 report : Woman Saved from Suicide Attempt, Accidents in Bhadravathi and Thirthahalli Reported
Shivamogga Police News 112 report : Woman Saved from Suicide Attempt, Accidents in Bhadravathi and Thirthahalli Reported

Shivamogga Police News ತುಂಗಾನಗರ: ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಾಣಕ್ಕೆ ತಡೆ 

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 27.01.2026 ರಂದು ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಾಣ ಮಾಡುತ್ತಿರುವುದರ ಬಗ್ಗೆ ಪೊಲೀಸರಿಗೆ ಕಂಪ್ಲೆಂಟ್ ಬಂದಿತ್ತು. ಈ ಹಿನ್ನೆಲೆಯಲ್ಲಿ  ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಅಲ್ಲಿದ್ದ ಜನಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ ಅರ್ಜಿ ಹಾಕಿ ಮನೆಯನ್ನು ಪಡೆಯಲು ಸೂಕ್ತ ತಿಳುವಳಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟರು. 

ಮಲವಗೊಪ್ಪ: ವಿಷ ಸೇವಿಸಿದ್ದ ಮಹಿಳೆಯ ಜೀವ ರಕ್ಷಣೆ 

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲವಗೊಪ್ಪದಿಂದ ERSS ಗೆ ಕರೆಯೊಂದು ಬಂದಿತ್ತು. ಓರ್ವ ಮಹಿಳೆ ವಿಷ ಸೇವಿಸಿದ್ದಾಗಿ ಕರೆಮಾಡಿದವರು ತಿಳಿಸಿದ್ದರು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಮಹಿಳೆಯನ್ನ ರಕ್ಷಿಸಿ ERSS ವಾಹನದಲ್ಲಿ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಆಕೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಕದ ಮನೆಯವರು ಗಲಾಟೆ ಮಾಡಿ ಹೊಡೆದಿರುವ ಬಗ್ಗೆ ಮನನೊಂದು ಮಹಿಳೆ ಕಳೆನಾಶಕ ಸೇವಿಸಿದ್ದರು. ಇನ್ನೂ ಪೊಲೀಸರ ಕಾರ್ಯಕ್ಕೆ  ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸಿಬ್ಬಂದಿಯನ್ನ ಗೌರವಿಸಲಾಗಿದೆ. 

ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ

ತೀರ್ಥಹಳ್ಳಿ: ನಿಯಂತ್ರಣ ತಪ್ಪಿ ಆಟೋ ಪಲ್ಟಿ 

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 28.01.2026 ರಂದು ದೂರುದಾರರು 112 ಕ್ಕೆ ಕರೆ ಮಾಡಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಒಂದು ಅಪಘಾತವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಪರಿಶೀಲಸಿದರು./ ಘಟನೆಯಲ್ಲಿ ಗಾಯಗೊಂಡರವನ್ನು ಆಸ್ಪತ್ರೆಗೆ ಕಳುಹಿಸಿ ಮುಂದಿನ ಕ್ರಮಕ್ಕೆ ಮಾಹಿತಿಯನ್ನು ಠಾಣೆಗೆ ನೀಡಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ ಪೊಲೀಸ್ ವರದಿ: ವಿಷ ಸೇವಿಸಿದ್ದ ಮಹಿಳೆ ರಕ್ಷಣೆ, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ಅಪಘಾತ – ಜನವರಿ 30, 2026 Shivamogga Police News 112 report : Woman Saved from Suicide Attempt, Accidents in Bhadravathi and Thirthahalli Reported
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು