JP EXCLUSIVE  ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಮಂಗಳೂರು, ಬೆಂಗಳೂರು, ಕೇರಳ ಲಿಂಕ್​?

jp exclusive a bison 15 lakh business.. a profit of thousands of crores a year! mangalore, bengaluru, kerala link?

JP EXCLUSIVE   ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ!  ಮಂಗಳೂರು, ಬೆಂಗಳೂರು, ಕೇರಳ ಲಿಂಕ್​?
jp exclusive a bison 15 lakh business.. a profit of thousands of crores a year! mangalore, bengaluru, kerala link?

JP EXCLUSIVE  ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್​ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್​? ಪಾರ್ಟ್-2

ಪುಷ್ಪಾ ಸಿನಿಮಾದಲ್ಲಿ ರಕ್ತ ಚಂದನ ಸಿಂಡಿಕೇಟ್ ತರದಲ್ಲಿಯೇ ಮಲೆನಾಡು ಜಿಲ್ಲೆಗಳಲ್ಲಿ ಕಾಡು ಮಾಂಸದ ಜಾಲವೊಂದು ತಲೆಯೆತ್ತಿದೆ.

ಈ ಸಿಂಡಿಕೇಟ್ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಆಗಿವೆ. ಇಲ್ಲಿ ಹಂಚಿಕೆ ಆಗುವುದು ಕೋಟಿಗಳು..ಕೆಲವೇ ಕೋಟಿಗಳಲ್ಲ ನೂರಾರು ಸಾವಿರಾರು ಕೋಟಿಗಳ ವ್ಯವಹಾರ ಈ ಕಾಡು ಮಾಂಸದ ಬ್ಯುಸಿನೆಸ್ ನಲ್ಲಿ ನಡೆಯುತ್ತಿದೆ.

ಕಾಡಿನಲ್ಲಿ ವ್ಯವಸ್ಥಿತ ಬೇಟೆ ಹೇಗೆ ಆಗುತ್ತೆ ಎಂಬುದನ್ನ ಹಿಂದಿನ ಪಾರ್ಟ್​ನಲ್ಲಿ ಓದಿದ್ದೀರಿ. ಬೇಟೆಯ ನಂತರ ನಡೆಯುವ ಕಥೆ ಇದು...

ವೃತ್ತಿಪರ ಬೇಟೆಗಾರ ಸೈಲೆನ್ಸರ್ ಗನ್​ನಲ್ಲಿ ಕಾಡುಕೋಣವೊಂದನ್ನ ಹೊಡೆದು ಉರುಳಿಸುತ್ತಾನೆ. ಏಕೆ ಕಾಡುಕೋಣ ಎಂಬುದನ್ನ ಈ ವರದಿಯ ಲಾಸ್ಟ್​ನಲ್ಲಿ ಹೇಳುತ್ತೇನೆ.

ಸ್ನೇಹಿತರೆ, ಕಾಡಲ್ಲಿ ಬೇಟೆ ನಂತರ ಬೈಕ್ ನಲ್ಲಿ ಮಾಂಸ ಸಾಗಿಸಿಕೊಂಡು ಬಂದು ತಮ್ಮ ಸ್ಕಾರ್ಪಿಯೋ ಇಲ್ಲವೇ ಇನ್ನೋವ್ಹಾ , ತವೇರಾ ದಂತ ವಾಹನಗಳಿಗೆ ಲೋಡ್ ಮಾಡಲಾಗುತ್ತದೆ.

ನಂತರ ಫಾರೆಸ್ಟ್ ಚೆಕ್ ಪೋಸ್ಟ್ ನ್ನು ಬೈಪಾಸ್​ ಮಾಡಿಕೊಂಡೋ , ಅಥವಾ ಗೊತ್ತಾಗದ ಹಾಗೆ ಕ್ರಾಸ್ ಮಾಡಿಯೋ ಅಥವಾ ಕಾಡಿನ ನಡುವಿನ ಅಡ್ಡ ಹಾದಿಯಲ್ಲೋ ಹೊಗುವ ಬೇಟೆಗಾರರು ಸಿಂಡಿಕೇಟ್ ಸೂಚಿಸಿದ ಸ್ಥಳಕ್ಕೆ ಮಾಂಸ ಪೂರೈಕೆ ಮಾಡುತ್ತಾರೆ.

ಒಂದು ಪ್ರದೇಶದಲ್ಲಿ ಭೇಟೆಯಾದ್ರೆ..ಮತ್ತೆ ಬೇಟೆಗಾರ ಆ ಸ್ಥಳಕ್ಕೆ ಬರೋದೇ ಡೌಟು

ಐದು ಜಿಲ್ಲೆಗಳಲ್ಲಿ ಮಾಫೀಯದವರು ವನ್ಯಪ್ರಾಣಿ ಬೇಟೆಯಾಡಲು ಮಾಡಿಕೊಂಡಿರುವ ಪಾಯಿಂಟ್ ಗಳಿಗೆ ಒಬ್ಬ ಬೇಟೆಗಾರ ಒಂದು ಸಲ ತನ್ನ ಕೆಲಸ ಪೂರೈಸಿ ಬಂದ ನಂತರ ಮತ್ತದೇ ಜಾಗಕ್ಕೆ ಆತ ಬರೋದೇ ಡೌಟು.

ಆತ ಉಳಿದ ಪಾಯಿಂಟ್ ಗಳಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸುತ್ತಲೇ ಹೊಗ್ತಾನೆ. ಅರಣ್ಯ ಅಧಿಕಾರಿಗಳಿಗೂ ಆರೋಪಿಗಳು ಯಾರು ಎಂದು ಪತ್ತೆ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ.

ಸ್ಥಳೀಯರಲ್ಲದ ವೃತ್ತಿಪರ ಬೇಟೆಗಾರರು ಬಂದು ಬೇಟೆ ಮಾಡಿ, ಮತ್ತೆಂದು ಅಲ್ಲಿಗೆ ಸುಳಿಯದಂತೆ ನಡೆದುಕೊಳ್ಳುವುದು ಸಾಕ್ಷ್ಯ ನಾಶ ಅಥವಾ ಸಾಕ್ಷ್ಯ ಸಿಗದೇ ಇರಲಿ ಎಂಬ ಕಾರಣಕ್ಕೆ .

ಈ ದಂಧೆಯಲ್ಲಿ ಇವರೇ ಬೇಟೆಗಾರರು ಎಂದು ಹಿಡಿಯಲು ಕಷ್ಟಸಾಧ್ಯದ ಕೆಲಸ. ಹೆಚ್ಚೆಂದರೆ, ಸ್ಥಳೀಯರ ಲೀಡ್​ ವ್ಯಕ್ತಿ ಮಾತ್ರ ಅರಣ್ಯ ಸಿಬ್ಬಂದಿ ಕೈಗೆ ಸಿಗಬೇಕು. ಅದು ಕೂಡ ಯಾರೋ ಲೋಕಲ್​ನವರು ಹಾಕಿಕೊಟ್ಟರೆ ಮಾತ್ರ.

ಕಾಡು ಬಾಡಿನ ಮ್ಯಾಟರ್​ ಅಷ್ಟು ಸುಲಭವಾಗಿ ಲೀಕ್ ಆಗದು. ಈ ಸೀಕ್ರೆಟ್​ನ್ನ ನಂಬಿಯೇ ಮಲೆನಾಡು ಪ್ರದೇಶಗಳಲ್ಲಿ ವ್ಯನ್ಯಜೀವಿಗಳ ಮಾಂಸದ ದಂಧೆ ದೊಡ್ಡ ರಾಕೆಟ್ ಆಗಿ ಬೆಳೆದಿದೆ. ಅಕ್ರಮ ಕೂಟದ ಒಗ್ಗಟ್ಟಿಗೆ ದುಡ್ಡಿನ ಸುರಿಮಳೆಯೇ ಪೌಷ್ಟಿಕಾಂಶ

ಸಿಂಡಿಕೇಟ್ ಸದಸ್ಯರ ಸಂಖ್ಯೆ 200 ರಿದ್ರೂ ಹೆಚ್ಚು

ಅಂದಹಾಗೆ ಈ ಸಿಂಡಿಕೇಟ್ ನ ಸಂಖ್ಯೆ ಐದು ಜಿಲ್ಲೆಗಳಿಂದ ಹೆಚ್ಚೆಂದರೂ 200ರ ಗಡಿ ದಾಟೋದಿಲ್ಲ. ಈವರೆಗೂ ಐದು ಜಿಲ್ಲೆಗಳ ವನ್ಯಪ್ರಾಣಿ ಬೇಟೆ ಪ್ರಕರಣಗಳಲ್ಲಿ ಸಿಲುಕಿಕೊಂಡ ಆರೋಪಿಗಳ ಸಂಖ್ಯೆ 250 ರ ಗಡಿ ದಾಟಿದ್ರೂ ಹೆಚ್ಚು.

ಕಾಡಿನ ಮಾಂಸಕ್ಕೆ ಎಲ್ಲಾ ಕಡೆ ಒಂದೇ ಧರ

ಕಾಡಿನ ಪ್ರದೇಶದಲ್ಲಿ ಕಾಡುಮಾಂಸ ದಂಧೆ ಸಿಂಡಿಕೇಟ್ ಆಗಿದೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿ ಎಂದರೆ, ಅದರ ರೇಟು. ಎಲ್ಲೆ ಹೋದರೂ ನಿಮಗೆ ಜಿಂಕೆ, ಕಾಡುಕೋಣ, ಕಡವೆಗೆ ಇಂತಿಷ್ಟು ಅಂತಾ ನಿಗದಿತ ದರಗಳನ್ನು ಫಿಕ್ಸ್ ಮಾಡಲಾಗಿರುತ್ತದೆ. ಗೌಪ್ಯವಾಗಿ ನಡೆಯುವ ವ್ಯವಹಾರ ಶಿವಮೊಗ್ಗದಿಂದ ಚಾಮರಾಜ ನಗರಕ್ಕೆ ಹೋದ್ರೂ...ಕಾಡುಮಾಂಸದ ದರ ಇಷ್ಟೆ ಎಂಬ ಸೇಮ್​ರೇಟ್​ ನಿಗದಿಯಾಗಿರುತ್ತೆ...ಇದನ್ನು ಸಿಂಡಿಕೇಟ್ ಸದಸ್ಯರು ನಿಯಂತ್ರಿಸುತ್ತಾರೆ.

ಸಾವಿರಾರು ವನ್ಯಪ್ರಾಣಿಗಳ ಹತ್ಯೆ ವರ್ಷಕ್ಕೆ ಸಾವಿರಾರು ರೂಪಾಯಿ ವಹಿವಾಟು.

ಹೌದು ಐದು ಜಿಲ್ಲೆಗಳಿಂದ ವರ್ಷಕ್ಕೆ ಸಾವಿರಾರು ವನ್ಯಪ್ರಾಣಿಗಳನ್ನು ಬೇಟೆ ಮಾಡಲಾಗುತ್ತಿದೆ ಎಂದರೇ ನೀವು ನಂಬುತ್ತಿರಾ…ನಂಬಲೇ ಬೇಕಾದ ಸಂಗತಿ ಇಲ್ಲಿದೆ.

800 ಕೆಜಿಯಿಂದ 1500 ಕೆಜಿ ತೂಕವಿರುವ ಒಂದು ಕಾಡುಕೋಣವನ್ನು ಹತ್ಯೆ ಮಾಡಿದರೆ ಅದರಿಂದ ದಂಧೆಕೋರರು ಆಜುಮಾಸು 15 ಲಕ್ಷದವರೆಗೆ ದುಡಿಮೆ ಮಾಡಿಕೊಳ್ಳುತ್ತಾರೆ.

ಒಂದು ಕೆಜಿ ಕಾಡುಕೋಣದ ಮಾಂಸದ ಬೆಲೆ ಅಕ್ರಮದ ಮಾರುಕಟ್ಟೆಯಲ್ಲಿ ಕನಿಷ್ಠವೆಂದರೂ ಒಂದು ಸಾವಿರ ಇದೆ. 1500 ಕೆಜಿಗೆ ಒಂದು ಸಾವಿರದಂತೆ ಲೆಕ್ಕ ಹಿಡಿದರೂ 15 ಲಕ್ಷವಾಗುತ್ತದೆ.

ವಾರ್ಷಿಕ ಐದು ಜಿಲ್ಲೆಗಳಿಂದ ಅಂದಾಜಿನ ಪ್ರಕಾರ, 300 ರಿಂದ 500 ಕೋಣಗಳ ಹತ್ಯೆಯಾಗುತ್ತಿದೆ. ಅಂದರೆ ಎಷ್ಟು ವ್ಯವಹಾರ ಆಗುತ್ತಿದೆ ಎಂಬುದನ್ನ ನೀವೆ ಯೋಚಿಸಿ.

ಕೋಟಿ...ಕೋಟಿ...ಕೋಟಿ

ಇನ್ನು 200 ರಿಂದ 300 ಕೆಜಿ ತೂಗುವ ಕಡವೆ ಹಾಗು ಜಿಂಕೆ ಮಾಂಸಕ್ಕೆ ಅಕ್ರಮ ಕೂಟದಲ್ಲಿ ಕೆಜಿಗೆ 800 ರಿಂದ ಸಾವಿರ ರೂಪಾಯಿ ಇದೆ. ಐದು ಜಿಲ್ಲೆಗಳಿಂದ ಅಂದಾಜಿನ ಲೆಕ್ಕದ ಪ್ರಕಾರ, ವಾರ್ಷಿಕ 500 ರಿಂದ 1000 ಈ ಜೀವಿಗಳು ಹತ್ಯೆಯಾಗುತ್ತಿದೆ.

ನೂರಲ್ಲಿ ಹೆಚ್ಚಂದರೆ ಐದು!

ಇಷ್ಟೆಲ್ಲಾ ವನ್ಯಪ್ರಾಣಿಗಳನ್ನು ಭೇಟೆಯಾಡುವ ದಂಧೆಕೋರರು ಕಾಡಿನಲ್ಲಿ ಎಲ್ಲೂ ಒಂದು ಸಣ್ಣ ಕುರುಹನ್ನು ಕೂಡ ಬಿಟ್ಟಿರುವುದಿಲ್ಲ. ಅರಣ್ಯ ಇಲಾಖೆಯಲ್ಲಿ ದಾಖಲಾಗುವ 100 ಪ್ರಕರಣಗಳಲ್ಲಿ ಅಬ್ಬಬ್ಬಾ ಎಂದರೆ ಐದು ಹತ್ತು ಪ್ರಕರಣಗಳಲ್ಲಿ ಜಿಂಕೆ ಮಾಂಸ ಸಿಕ್ಕರೆ, ವಿರಳಾತಿ ವಿರಳ ಪ್ರಕರಣಗಳಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಈ ಐದು ಜಿಲ್ಲೆಗಳಲ್ಲಿ ವನ್ಯಜೀವಿ ಬೇಟೆ ಪ್ರಕರಣಗಳಲ್ಲಿ ದಾಖಲಾಗಿರುವ ಎಫ್.ಐ.ಆರ್ ಗಮನಿಸಿದರೆ ಎಂತಹವರಿಗಾದರೂ ಬೇಟೆ ಹೇಗೆ ಆಗುತ್ತಿದೆ ಎಂಬುದು ಅರ್ಥವಾಗುತ್ತದೆ.

ಇಷ್ಟಕ್ಕೂ ಎಲ್ಲಿಗೆ ಸಪ್ಲೆ ಆಗುತ್ತೆ?

ಇನ್ನೂ ವನ್ಯಜೀವಿ ಪದಾರ್ಥ ಮಾಡುವುದು ಅಪ್ಪಟ್ಟ ಅಪರಾಧ. ಗೊತ್ತಾದರೆ ಮನೆಗೆ ನುಗ್ಗುವ ಅರಣ್ಯ ಸಿಬ್ಬಂದಿ ಒಲೆ ಮೇಲೆ ಬೇಯುತ್ತಿರುವ ಸಾರಿನ ಪಾತ್ರ ಸಮೇತ ಕರ್ಕೊಂಡು ಹೋಗಿ ಒಳಗೆ ಹಾಕುತ್ತಾರೆ. ಹಾಗಾದರೆ, ಇಷ್ಟೊಂದು ಪ್ರಮಾಣ ಕಾಡು ಬಾಡು ಎಲ್ಲಿಗೆ ಹೋಗುತ್ತದೆ. ಈ ಪ್ರಶ್ನೆಯನ್ನು ನಾವು ಸಹ ಕೇಳಿದೆವು. ಅದಕ್ಕೆ ಸಿಕ್ಕ ಉತ್ತರ ಹೈಫೈ ಪಾರ್ಟಿಗಳು, ಕಾಡಿನ ಪರಿಸರದಲ್ಲಿ ಆಯೋಜಿಸುವ ವೀಕೆಂಡ್ ಪಾರ್ಟಿಗಳು, ಬಿಗ್​ ಶಾಟ್ ಪಾರ್ಟಿಗಳು, ಶ್ರೀಮಂತರ ಔತಣಕೂಟಗಳು, ಆಯ್ದ ಮದುವೆಗಳು, ರೆಸಾರ್ಟ್ ಹೋಮ್​ ಸ್ಟೇ ಪ್ರತಿಷ್ಟಿತ ಪ್ರಭಾವಿ ಕ್ಲಬ್​ಗಳು ಹೀಗೆ ಹಲವು ಕಡೆಗಳಲ್ಲಿ ಕಾಡಿನದ್ದೆ ಸಪ್ಲೆಯಾಗುತ್ತದೆ. ಸಪ್ಲೆಯಾಗಿದ್ದು ಸದ್ದೆ ಆಗುವುದಿಲ್ಲ. ಅದರಲ್ಲೂ ಮಂಗಳೂರು, ಬೆಂಗಳೂರಿನಂತಹ ಮಹಾನಗರಗಳು ಇವುಗಳಿಗಿರುವ ದೊಡ್ಡ ಮಾರುಕಟ್ಟೆ, ಇದಕ್ಕಿಂತ ಹೆಚ್ಚಾಗಿ ಕೇರಳ ಈ ಮಲೆನಾಡ ಕಾಡಿನ ಮಾಂಸಕ್ಕೆ ಅತಿದೊಡ್ಡ ಮಾರ್ಕೆಟ್​..

ಕೇರಳಕ್ಕೆ ಹೋಗುತ್ತಿದೆ ಕಾಡುಕೋಣದ ಮಾಂಸ

ನಂಬಿದ್ರೆ ನಂಬಿ,, ಬಿಟ್ಟರೆ ಬಿಡಿ, ಕೇರಳದಲ್ಲಿ ಕಾಡುಕೋಣಗಳ ಮಾಂಸ ವಿಪರೀತ ಎಂಬಷ್ಟು ಡಿಮ್ಯಾಂಡ್ ಇದೆಯಂತೆ.

ಅಡ್ಡದಾರಿಯ ದಂಧೆಕೋರರು ಇದನ್ನೆ ಬಂಡವಾಳ ಮಾಡಿಕೊಂಡು ಮಲೆನಾಡ ವನ್ಯಜೀವಿಗಳನ್ನು ಕೊಂದು ಅಲ್ಲಿಗೆ ಸಾಗಿಸಿ ಮಾರುತ್ತಿದ್ದಾರೆ.

ಅರಣ್ಯ ಒತ್ತುವರಿಗೆ ಗಮನ ಕೊಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮಾಂಸ ದಂಧೆಯ ಸಿಂಡಿಕೇಟ್​ನ್ನ ಭೇದಿಸಬೇಕಿದೆ.

ಇಲ್ಲವಾದರೆ ಮುಂದೊಂದು ದಿನ ಇದು ಯಾರನ್ನು ಬೇಕಾದರೂ ಮುಗಿಸಬಲ್ಲ ಮಾಫಿಯಾವಾಗಿ ಬೆಳೆಯುವುದರಲ್ಲಿ ಅಚ್ಚರಿಯಿಲ್ಲ

ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಬೇಕಿದೆ ಸರ್ಕಾರ

ಪಶ್ಚಿಮಘಟ್ಟ ಪ್ರದೇಶದಲ್ಲಿ ದುರ್ಗಮ ಕಾಡಿನ ಪ್ರದೇಶದಲ್ಲಿ ರಾತ್ರಿ ಗಸ್ತುತಿರುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸ. ಫುಲ್ ವೆಪನ್ಡ್ ಆಗಿ ಬರುವ ದಂಧೆಕೋರರು ಎದುರಾದರೇ ಅರಣ್ಯ ಸಿಬ್ಬಂದಿಗಳನ್ನು ಕೊಲ್ಲುವುದಕ್ಕೂ ಹೇಸುವುದಿಲ್ಲ.

ಹೀಗಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿ ವನ್ಯಪ್ರಾಣಿ ಬೇಟೆ ಮತ್ತು ಮಾಂಸ ಸಾಗಾಣಿಕೆ ಜಾಲವನ್ನು ತಡೆಗಟ್ಟಬೇಕೆಂದರೆ, ಸರ್ಕಾರ ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಬೇಕು. ವನ್ಯಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು.

ಈಗಿರುವ ವೃತ್ತಿಪರ ಕಳ್ಳರನ್ನೇ ಕೇಂದ್ರೀಕರಿಸಿದರೂ, ಸಿಂಡಿಕೇಟ್ ಜಾಲದ ಮೂಲಕ್ಕೆ ಕೈಹಾಕೋದಕ್ಕೆ ಸಾಧ್ಯವಾಗುತ್ತೆ.

ಇದು ಮಲೆನಾಡಿನ ರಾತ್ರಿ ರಹಸ್ಯವನ್ನು ತನಿಖಾ ವರದಿ ಮೂಲಕ ಭೇದಿಸಿ, ಸರ್ಕಾರದ ಮುಂದಿಟ್ಟಿದ್ದೇವೆ. ಇನ್ನು ನಿರ್ಧಾರ ಸರ್ಕಾರದ್ದು,

ಲಾಸ್ಟ್ ಬೈಟ್!

ಮಲೆನಾಡಿನ ಆಹಾರ ಪದ್ಧತಿಯನ್ನು ಯಾರು ಪ್ರಶ್ನಿಸಲಾರರು. ಆದರೆ ಮಲೆನಾಡಲ್ಲಿ ನಿಸರ್ಗದ್ದೆ ಒಂದು ಅಘೋಷಿತ ಕಾನೂನು ಇದೆ.

ಮಲೆನಾಡ ಮಕ್ಕಳು ಆ ಕಾನೂನನ್ನ ಉಲ್ಲಂಘಿಸುವುದಿಲ್ಲ.

ಇದರಾಚೆಗೆ ಕಾಡುಗಳಲ್ಲಿ ನಡೆಯುತ್ತಿರುವ ಶಿಕಾರಿ ಮಲೆನಾಡಿಗರನ್ನೂ ಆತಂಕಕ್ಕೆ ದೂಡುತ್ತಿದೆ,

ಪರಿಸರ ವೈವಿದ್ಯತೆಯನ್ನು ಏರುಪೇರು ಮಾಡುತ್ತಿರುವ ಇಂತಹ ಸಿಂಡಿಕೇಟ್​ನ ದುಡ್ಡು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಪ್ರಯತ್ನಗಳಿಗೆ ಬಳಕೆಯಾಗುವ ಆತಂಕವೂ ಇದೆ.

ಈ ನಿಟ್ಟಿನಲ್ಲಿ ಕಾಡಿನ ಸುಂದರ ಜೀವಿಗಳ, ಫೋಟೋ ತೆಗೆದು ಪ್ರದರ್ಶನಕ್ಕೆ ಇಡುವಂತಹ ಸೋ ಕಾಲ್ಡ್​ ವೈಲ್ಡ್​ ಲೈಫ್​ ಜೀವನದಿಂದ ಆಚೆಗೆ ಬಂದು, ಅರಣ್ಯ ಉಳಿಸುವ ಕೆಲಸ ಆಗಬೇಕಿದೆ. ಅಭಯಾರಣ್ಯ ಎಂದರೆ, ವಾರಾಂತ್ಯದಲ್ಲಿ ಟೆಂಟ್ ಹಾಕಿಕೊಂಡು ಮೋಜು ಮಸ್ತಿ ಮಾಡುವ ಸ್ಥಳವಲ್ಲ. ಅದನ್ನು ಕಣ್ಣಲ್ಲಿ ಕಟ್ಟಿಟ್ಟು ಕಾಯುವ ಕೆಲಸ ಆಗಬೇಕಿದೆ.