ಜೈಲಿನಿಂದ ಮಾರ್ಕೆಟ್ ಲೋಕಿ, ಸೈನಾದಿ ಲಕ್ಷ್ಮಣ ರಿಲೀಸ್! ಶಿವಮೊಗ್ಗದಲ್ಲಿ ಮತ್ತೆ ರೌಡಿಸಂಆಕ್ಟೀವ್! ಜಾತ್ರೆಯಲ್ಲಿ ಏನಾಯ್ತು ! ಇನ್ನೂ ಶುರು! JP ಬರೆಯುತ್ತಾರೆ!?

Rowdyism is back in action in Shivamogga! Market Loki, Sainadi Lakshman released from jail! JP writes!?

ಜೈಲಿನಿಂದ ಮಾರ್ಕೆಟ್ ಲೋಕಿ, ಸೈನಾದಿ ಲಕ್ಷ್ಮಣ ರಿಲೀಸ್! ಶಿವಮೊಗ್ಗದಲ್ಲಿ ಮತ್ತೆ ರೌಡಿಸಂಆಕ್ಟೀವ್! ಜಾತ್ರೆಯಲ್ಲಿ ಏನಾಯ್ತು ! ಇನ್ನೂ ಶುರು! JP ಬರೆಯುತ್ತಾರೆ!?
Market Loki, Sainadi Lakshman ,JP writes

shivamogga Mar 22, 2024Shimoga Rowdyism ಶಿವಮೊಗ್ಗದಲ್ಲಿ ರೌಡಿಸಂ ಮತ್ತೆ ಆಕ್ಟೀವ್‌ ಆಗಿದ್ಯಾ?ಚುನಾವಣೆ ಹೊತ್ತಿನಲ್ಲಿ ಪಾತಕಲೋಕದ ಸೇಡಿನ ಟೀಂಗಳಲ್ಲಿ ಚಟುವಟಿಕೆ ಗರಿಗೆದರುತ್ತಿದ್ಯಾ? ಡಿವೈಎಸ್‌ಪಿ ಬಾಲರಾಜ್‌ ಇರುವರೆಗೂ ಮುದುರುಕೊಂಡಿದ್ದವರು, ಈಗ ಹವಾ ತೋರಿಸ್ತಿದ್ದಾರಾ? ಬರೆಯತ್ತಾರೆ ಜೆಪಿ ಓದಿ

ಜೆಪಿ ಬರೆಯುತ್ತಾರೆ.. 

ಶಿವಮೊಗ್ಗದ ಜನ್ರಿಗೆ ರೌಡಿಸಂ ಹೊಸದಲ್ಲ! ಇಲ್ಲಿಯ ಜನ ಅದಕ್ಕೆ ಸೊಪ್ಪು ಹಾಕೋದು ಇಲ್ಲ. ಆದರೆ ಲಾ ಌಂಡ್ ಆರ್ಡರ್​ಗೆ ಈ ರೌಡಿಸಂ ಅನ್ನೋದು ದೊಡ್ಡ ತಲೆನೋವೆ ಅನ್ನೋದ್ರಲ್ಲಿ ಡೌಟೇ ಇಲ್ಲ. ತೀರಾ ಮೊನ್ನೆ ಮೊನ್ನೆವರೆಗೂ ತಣ್ಣಗಿದ್ದ ಶಿವಮೊಗ್ಗದಲ್ಲಿ ಮತ್ತೆ ರೌಡಿಸಂ ಎನ್ನುವ ಕೀ ಆಕ್ಟೀವೇಟ್ ಆಯ್ತಾ? ಇಂತಹದ್ದೊಂದು ಅನುಮಾನ ತೀರಾ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಇದಕ್ಕೆ ಕಾರಣವೂ ಇದೆ.  ಅದೇನು ಅಂದರೆ ಶಿವಮೊಗ್ಗ ಜೈಲಿನಿಂದ ಸೈನಾದಿ ಲಕ್ಷ್ಮಣ ಹಾಗೂ ಆತನ ಗುರು ಮಾರ್ಕೆಟ್ ಲೋಕಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದು ಶಿವಮೊಗ್ಗ ರೌಡಿಸಂನ್ನ ಆಕ್ಟೀವ್ ಆಗಿಸಿದೆ

ಶಿವಮೊಗ್ಗ ಕೋರ್ಟ್​

ಮಾರ್ಕೆಟ್ ಲೋಕಿ & ಸೈನಾದಿ ಲಕ್ಷ್ಮಣ ರಿಲೀಸ್

ಹೇಳಿಕೇಳಿ ಚುನಾವಣೆ ಟೈಂ! ಚುನಾವಣಾ ಆಯೋಗದ ಅಧಿಕಾರಗಳೇ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಪಾತಕಲೋಕದ ಮೆಂಬರ್​ಗಳ ಬಗ್ಗೆ ಎಚ್ಚರವಹಿಸಿ ಎಂದಿದೆ. ಅದರ ನಡುವೆ ಶಿವಮೊಗ್ಗ ಪೊಲೀಸ್ ಇಲಾಖೆ 1500 ರೌಡಿಶೀಟರ್ಸ್ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಪಟ್ಟಿ ಮಾಡಿದೆ. ಹಾಗಿದ್ರೂ ಶಿವಮೊಗ್ಗ ಮಾರಿಜಾತ್ರೆ ಕುರಿ ಕಡಿಯೋ ಟೇಮ್​ನಲ್ಲಿ ಲಾಂಗ್​ಗಳು ನೆಲಕ್ಕೆ ಬಿದ್ದ ಸೌಂಡ್ ಬಂದಿದೆ. 

ತುಳಸಿರಾಮ ಮತ್ತು ಅಂದಿನ ಎಸ್​ಪಿ

ಸಾಮಾನ್ಯವಾಗಿ ರೌಡಿ ಜಗತ್ತು ಅಲರ್ಟ್ ಆಗುವುದು ಎರಡು ಸರ್ತಿ. ಒಂದೋ ಪಂಟರ್​ ಒಬ್ಬ ಫಿನಿಶ್ ಆಗಬೇಕು. ಇಲ್ಲವೇ ಪಂಟರ್ ಒಬ್ಬ ಜೈಲಿಂದ ರಿಲೀಸ್ ಆಗಬೇಕು. ಸದ್ಯ ಶಿವಮೊಗ್ಗದಲ್ಲಿ ಎರಡನೇಯದ್ದಾಗಿದೆ. ಶಿವಮೊಗ್ಗ ಪಾತಕಲೋಕದ ಮೇನ್‌ ವಿಕೆಟ್‌ ಎನಿಸಿರುವ ಮಾರ್ಕೇಟ್ ಲೋಕಿ ಹಾಗೂ ಈತನ ಬಲಗೈ ಬಂಟ ಸೈನಾದಿ ಲಕ್ಷ್ಮಣ್‌ ರಿಲೀಸ್ ಆಗಿದ್ದಾರೆ. ಮಾರ್ಕೆಟ್ ಲೋಕಿ ವಿರುದ್ಧ ಶಿವಮೊಗ್ಗದಲ್ಲಿ ಹಲವು ಕೇಸ್‌ಗಳಿದ್ದರೇ, ಈತನ ಕೇಸ್‌ಗಳಲ್ಲಿ ಬ್ಯಾಟ್ಸ್ ಮ್ಯಾನ್ ಆಗಿದ್ದವನು ಎಂಬ ಆರೋಪ ಹೊತ್ತ ಸೈನಾದಿ ಲಕ್ಷ್ಮಣ

ಮಾರ್ಕೆಟ್ ಲೋಕಿ

ಮಾರ್ಕೆಟ್‌ ಲೋಕಿ

ಮಾರ್ಕೆಟ್ ಲೋಕಿ 2018 ರಲ್ಲಿ ನಡೆದಿದ್ದ ಮಾರ್ಕೆಟ್ ಗಿರೀ ಕೊಲೆ ಕೇಸ್‌ ಎ-1 ಆರೋಪಿ.ತಮಿಳುನಾಡಲ್ಲಿ ಸೆರೆ ಸಿಕ್ಕಿದ್ದ ಈತ ಪೊಲೀಸ್‌ ಮಹಜರ್‌ ವೇಳೆ ತಪ್ಪಿಸಿಕೊಂಡು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪದಲ್ಲಿ ಪೊಲೀಸರು ಈತನ ಕಾಲಿಗೆ ಗುಂಡೇಟು ನೀಡಿದ್ದರು. ಅಂದು ಎಸ್‌ಪಿಯಾಗಿದ್ದವರು ಶಾಂತರಾಜು. ಡಿವೈಎಸ್‌ಪಿಯಾಗಿದ್ದ ಉಮೇಶ್‌ ನಾಯಕ್‌ ಅಂದು ಲೋಕಿಯ ಕಾಲಿಗೆ ಗುಂಡು ಹಾರಿಸಿದ್ದರು. 

ಮಾರ್ಕೆಟ್ ಲೋಕಿ Shimoga Rowdyism

ಈತನ ವಿರುದ್ಧ ಮೆಂಟಲ್‌ ಸೀನಾ ಮರ್ಡರ್‌ ಕೇಸ್‌, ಮೋಟಿ ವೆಂಕ ಹಾಗೂ ಮಾರ್ಕೆಟ್‌ ಗಿರಿ ಮರ್ಡರ್‌ ಕೇಸ್‌ ಇದೆ. ತುಳಿಸರಾಮನ ಕೊಲೆ ಪ್ರಕರಣದ ನಂತರ ಸ್ಟ್ರೀಮ್‌ಲೈನ್‌ಗೆ ಬಂದಿದ್ದ ಈತನ ವಿರುದ್ದ ಕೊಲೆ ಬೆದರಿಕೆ, ಹಪ್ತಾವಸೂಲಿ , ದರೋಡೆ ಕೇಸ್‌ಗಳು ಸಹ ಇವೆ. ಬಳ್ಳಾರಿ ಜೈಲಿನಲ್ಲಿದ್ದ ಈತ ನಾಲ್ಕು ದಿನಗಳ ಹಿಂದಷ್ಟೆ ರಿಲೀಸ್‌ ಆಗಿದ್ದಾನೆ

Shimoga Rowdyism

ಸೈನಾದಿ ಲಕ್ಷ್ಮಣ 

ಮಾರ್ಕೆಟ್‌ ಲೋಕಿಯನ್ನ ತಮಿಳುನಾಡಲ್ಲಿ 2020 ಫೆಬ್ರವರಿ 12 ರಂದು ಬಂಧಿಸಿ ಕರೆತಂದಿದ್ದರು. ಪೊಲೀಸ್‌ ಮಹಜರ್‌ ವೇಳೆ ಆತ ಹಲ್ಲೆ ಮಾಡಲು ಮುಂದಾದಾಗ ಪೊಲೀಸರು ಫೈರ್‌ ಮಾಡಿದ್ದರು. ಇದಾದ ಒಂದು ತಿಂಗಳಿಗೆ ಈತನ ಬಂಟ ಸೈನಾದಿ ಲಕ್ಷ್ಮಣ ಬೆಂಗಳೂರಲ್ಲಿ ಅರೆಸ್ಟ್‌ ಆಗಿದ್ದ .

ಮಾರ್ಕೆಟ್ ಗಿರಿ

2020 ಮಾರ್ಚ್‌ 20 ರಂದು ಶಿವಮೊಗ್ಗ ಪೊಲೀಸ್‌ ಇಲಾಖೆಯ ರೌಡಿ ನಿಗ್ರಹ ದಳ ಸೈನಾದಿ ಲಕ್ಷ್ಮಣ ಬೆಂಗಳೂರಲ್ಲಿ ಬಂದಿಸಿದ್ದರು. ಈತನನ್ನ ಶಿವಮೊಗ್ಗಕ್ಕೆ ಕರೆತರುವ ಸಂದರ್ಭದಲ್ಲಿ ಈತನ ಉಚ್ಚೆ ಹೊಯ್ಯಬೇಕು ಎಂದು ಹೇಳಿ ಮಲವಗೊಪ್ಪದ ಬಳಿ ಪೊಲೀಸ್‌ ಜೀಪ್‌ನಿಂದ ಇಳಿದಿದ್ದ

ಸೈನಾದಿ ಲಕ್ಷ್ಮಣ

ಈ ವೇಳೆ ಸೈನಾದಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಷ್ಟೆ ಅಲ್ಲದೆ ಪೊಲೀಸ್‌ ಸಿಬ್ಬಂದಿ ಹರ್ಷರವರ ಮೇಲೆ ತನಗೆ ಹಾಕಿದ್ದ ಚೈನ್‌ನಿಂದಲೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ರೌಡಿ ನಿಗ್ರಹ ದಳದ ಸಿಪಿಐ ಕೆಟಿ ಗುರುರಾಜ್‌ ಏರ್‌ ಫೈರ್‌ ಮಾಡಿ ವಾರ್ನಿಂಗ್‌ ನೀಡಿದ ಬಳಿಕ ಕಾಲಿಗೆ ಗುಂಡೇಟು ನೀಡಿದ್ದರು. 

ಸೈನಾದಿ ಲಕ್ಷ್ಮಣ ಎಸ್​ಪಿ ಶಾಂತರಾಜು

2006 ರಲ್ಲಿ ನಡೆದ ಲವ-ಕುಶ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸೈನಾದಿ  2016 ರಲ್ಲಿ ಹೊಸಮನೆಯಲ್ಲಿ ನಡೆದ ಮೋಟಿ ವೆಂಕನ ಕೊಲೆ ಹಾಗೂ2018ರಲ್ಲಿ ನಡೆದಿದ್ದ ಮಾರ್ಕೆಟ್ ಗಿರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧ  2017ರ ಲ್ಲಿ ಕೋಕಾ ಕೇಸ್ ಸಹ ದಾಖಲಾಗಿದೆ. 

Shimoga Rowdyism

ಲೋಕಿಗೋಸ್ಕರ

ದಾಯಾದಿ ಕಲಹದಲ್ಲಿ  ನೆಲಕ್ಕುರುಳಿದ ವಿಕೇಟ್ ಗಳಿಗೆ ಮಾರ್ಕೆಟ್ ಲೋಕಿ ಜೊತೆಗೆ ಸೈನಾದಿ ಪ್ರಂಟ್ ಲೈನ್ ನಲ್ಲಿ ನಿಂತವನು ಸೈನಾದಿ ಲಕ್ಷ್ಮಣ. ಮಾರ್ಕೇಟ್ ಗಿರಿ ಕೊಲೆ ಕೇಸಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದ ಸೈನಾದಿ ಲಕ್ಷ್ಮಣ ಈಗ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್ ಆಗಿದ್ದಾನೆ. ಪೊಲೀಸ್‌ ಫೈರ್‌ ನಿಂದ ಗುಂಡೇಟು ತಿಂದ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆ ತಂದಾಗ ಲೋಕಿಗೋಸ್ಕರ ನಾನು ಏನು ಬೇಕಾದ್ರೂ ಮಾಡುತ್ತೇನೆ ಎಂದು ಈತ ಬಹಿರಂಗವಾಗಿಯೇ ಹೇಳಿದ್ದ. 

ಮಾರ್ಕೆಟ್ ಲೋಕಿ ಮತ್ತು ಸೈನಾದಿ ಲಕ್ಷ್ಮಣ

ಸದ್ಯ ಇವರಿಬ್ಬರ ರಿಲೀಸ್​ ರೌಡಿ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಆಫೋಸಿಟ್ ಟೀಂ, ಸಪೋರ್ಟ್ ಟೀಂ, ನ್ಯೂಟ್ರಲ್​ ಟೀಂ ಹೀಗೆ ಸೈನಾದಿ ಎಂಟ್ರಿ ಜೊತೆಗೆ ಹಲವು ಟೀಂಗಳು ಅಲರ್ಟ್ ಆಗಿದೆ. ಇವರ ಜೊತೆಗೆ ಲೋಕಿಯ ಶತ್ರುಗಳು, ಬಂಕ್ ಬಾಲು ಕೊಲೆ ಮಾಡಿದ ವಿರೋಧಿಗಳು, ಹಂದಿ ಅಣ್ಣಿ ಮುಗಿಸಿದ ಗ್ಯಾಂಗ್ ಜೊತೆಗೆ ಮತ್ತಿನಲ್ಲಿರುವ ರೌಡಿಶೀಟರ್ಸ್​ ಕೂಡ ಸದ್ಯ ಆಕ್ಟೀವ್ ಆಗಿದ್ದಾರೆ.  ಸದ್ಯಕ್ಕೆ ಇಬ್ಬರು ಸಹ ಆಗಿದ್ದಾರೆ. ಆದರೆ ರೌಡಿಸಂ ಆಕ್ಟೀವ್ ಆಗಿದೆ.  ಇದಕ್ಕೆ ಸಾಕ್ಷಿ ಎಂಬಂತೆ  ಅಲ್ಲಲ್ಲಿ ಸಣ್ಣಪುಟ್ಟದಾಗಿ ಹೊಡೆದಾಡಿಕೊಂಡ ಘಟನೆಗಳು ನಡೆದಿದೆ.

ಹಂದಿ ಅಣ್ಣಿ

ಡಿವೈಎಸ್‌ಪಿ ರೌಡಿ ಮೀಟಿಂಗ್‌

ಈ ಎಲ್ಲಾ ಬೆಳವಣಿಗೆಗಳ ನಡುವೆ ಶಿವಮೊಗ್ಗ ಪೊಲೀಸ್‌ ಇಲಾಖೆ ಸಹ ಅಲರ್ಟ್‌ ಆದಂತಿದೆ. ಇವತ್ತು ಶಿವಮೊಗ್ಗ ಉಪವಿಭಾಗ ಎ ವ್ಯಾಪ್ತಿಯಲ್ಲಿ ಬರುವ ರೌಡಿಶೀಟರ್ಸ್‌ಗಳನ್ನ ಕರೆಸಿದ್ದ ಡಿವೈಎಸ್‌ಪಿ ಪ್ರತಿಯೊಬ್ಬರಿಗೂ ವಾರ್ನಿಂಗ್‌ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ರೌಡಿ ಜಗತ್ತಿನ ಬೆಳವಣಿಗೆಗಳನ್ನು ವಿಚಾರಣೆ ಮೂಲಕ ಆಲಿಸಲಾಗಿದೆ ಎಂಬ ಮಾಹಿತಿಯು ಇದೆ. ಹಿಂದಿನ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರಿಂದ ಹಿಡಿದು ಹಲವರು ಈ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗ್ತಿದೆ. 

ಮಾರಿ ಹಬ್ಬದಲ್ಲಿ ಆಕ್ಟಿವ್ ಆಗಿತ್ತಾ ರೌಡಿಪಡೆ

ಹಂದಿ ಅಣ್ಣಿ ಕಾಡಾ ಕಾರ್ತಿ Shimoga Rowdyism

ಶಿವಮೊಗ್ಗದಲ್ಲಿ ಈ ಬಾರಿ ನಡೆದ ಮಾರಿ ಹಬ್ಬದಲ್ಲಿ ಕೆಲವು ಪುಡಿ ರೌಡಿಗಳಿಂದ ಹಿಡಿದು ನಟೋರಿಯಸ್ ರೌಡಿಗಳು ಜಾತ್ರೆಯಲ್ಲಿ ಭಾಗವಹಿಸಿದ್ದರು. ಇದನ್ನ ಶಿವಮೊಗ್ಗದ ಅನುಭವಸ್ಥ ಪೊಲೀಸರು ಅಬ್ಸರ್ ಮಾಡಿದ್ದಾರೆ. ಮೇಲಾಗಿ ಜಾತ್ರೆಯ ಸಂದರ್ಭದಲ್ಲಿ ಸಣ್ಣಪುಟ್ಟ ಕಿರಿಕ್ ಗಳು ನಡೆದಿವೆ. ಪರಸ್ಪರ ಗುರಾಯಿಸುವ ಸನ್ನಿವೇಶಗಳು ನಡೆದು ಹೋಗಿದೆ. ಆ ಸಂದರ್ಭ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಪೊಲೀಸರು ತಕ್ಷಣ ಕ್ರಮಕೈಗೊಂಡಿದ್ದಾರೆ. 

ಹೊಸಮನೆಯಲ್ಲಿ  ನಡೆದಿದ್ದೇನು?

ಇನ್ನೂ ನಿನ್ನೆ ನಡೆದ ಹೊಸಮನೆಯ ಲ್ಲಿ ಲಾಂಗು ಮಚ್ಚು ಹಿಡಿದು ಓಡಾಡಿದ ಪ್ರಕರಣವೊಂದು ನಡೆದಿದೆ. ಅದರಲ್ಲಿಯು ಕೆಲವು ರೌಡಿಶೀಟರ್ಸ್​ ಹೆಸರುಗಳು ಕೇಳಿಬರುತ್ತಿದೆ. ಪ್ರಕರಣ ತನಿಖೆಯ ಹಂತದಲ್ಲಿದೆ. ಆದರೆ ಬೈಕ್, ಕಾರುಗಳನ್ನ ಜಖಂಗೊಳಿಸಿದವರು ಮಾರಿಹಬ್ಬಕ್ಕೆ ಬರುವ ನಂಟರಂತೂ ಅಲ್ಲ ಎಂಬುದು ನಿಕ್ಕಿ 

ಒಟ್ಟಾರೆ, ಶಿವಮೊಗ್ಗದಲ್ಲಿ ತೆರೆಮರೆಯಲ್ಲಿ ರೌಡಿಸಂ ಮತ್ತೆ ಆಕ್ಟಿವ್ ಆಗಿದ್ದಾರೆ. ಇವನ ವಿರೋಧಿ ಅವನು , ಅವನ ಬಂಟ ಆತನು, ಆತನಿಗೂ ಇವನಿಗೂ ಮಗದೊಬ್ಬನ ವೈಷಮ್ಯ.. ಶಿಷ್ಯರಾಗಿದ್ದವರಿಗೆ ಪಂಟನಾಗುವ ಆಸೆ, ಪಂಟನಾದವನಿಗೆ ಡಾನ್ ಆಗುವ ಆಸೆ..ಇದಕ್ಕಾಗಿಯೇ ಪಾತಕಲೋಕದಲ್ಲಿ ಹರಿದ ರಕ್ತವೂ ತುಂಗಾನದಿಯಲ್ಲಿ ಬಹಳ ಸಹ ತೊಳೆದುಹೋಗಿದೆ…