BREAKING NEWS / ಜೈಲಿನಿಂದಲೇ ಮಾರ್ಕೆಟ್ ಲೋಕಿಯಿಂದ ಜೀವ ಬೆದರಿಕೆಯ ಕರೆ! ಹುಡುಗರನ್ನ ಬಿಟ್ಟು ಹೆದರಿಸಿ, ವಾಟ್ಸ್ಯಾಪ್​ ಕಾಲ್​ನಲ್ಲಿ ಆವಾಜ್! ಏನಿದು ಕೇಸ್

An FIR has been registered at Tunga Nagar Police Station regarding the jailed Market Loki calling and threatening a person in Shimoga.ಜೈಲಿನಲ್ಲಿರುವ ಮಾರ್ಕೆಟ್ ಲೋಕಿ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ತುಂಗಾ ನಗರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ

BREAKING NEWS / ಜೈಲಿನಿಂದಲೇ ಮಾರ್ಕೆಟ್ ಲೋಕಿಯಿಂದ ಜೀವ ಬೆದರಿಕೆಯ ಕರೆ! ಹುಡುಗರನ್ನ ಬಿಟ್ಟು ಹೆದರಿಸಿ,  ವಾಟ್ಸ್ಯಾಪ್​ ಕಾಲ್​ನಲ್ಲಿ ಆವಾಜ್! ಏನಿದು ಕೇಸ್

KARNATAKA NEWS/ ONLINE / Malenadu today/ Sep 16, 2023 SHIVAMOGGA NEWS  

ಬಳ್ಳಾರಿ ಜೈಲಿನಲ್ಲಿರುವ ಹಲವು ಪ್ರಕರಣಗಳ ಆರೋಪಿ ಮಾರ್ಕೆಟ್​ ಲೋಕಿ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಸಂಬಂಧ ತುಂಗಾ ನಗರ ಪೊಲೀಸ್ ಸ್ಟೇಷನ್​ನಲ್ಲಿ  FIR  ದಾಖಲಾಗಿದೆ. 

ಜೈಲಿನಲ್ಲಿದ್ದುಕೊಂಡೇ, ಲೋಕಿ, ವಾಟ್ಸ್ಯಾಪ್ ಕಾಲ್ ಮೂಲಕ ಬೆದರಿಕೆ ಹಾಕಿದ್ದಾನೆ. ಅಲ್ಲದೆ ತನ್ನ ಕುಟುಂಬಸ್ಥರೊಬ್ಬರ ವಿರುದ್ಧ ಹಾಕಿರುವ ಜಾಗದ ಕೇಸ್​ವೊಂದನ್ನ ವಾಪಸ್ ಪಡೆಯುವಂತೆ ಜೀವ ಬೆದರಿಕೆ ಹಾಕಿದ್ದಾನೆ. ಶಿವಮೊಗ್ಗ ರಿಯಲ್​ ಎಸ್ಟೇಸ್ಟ್​ ನಲ್ಲಿ ಕೆಲವು ರೌಡಿಗಳು ಕೈಯಾಡಿಸುತ್ತಿರುವುದು ಗೊತ್ತೆಯಿದೆ.ಇದಕ್ಕೀಗ ಮಾರ್ಕೆಟ್ ಲೋಕಿಯ ಹೆಸರು ಸೇರಿಕೊಂಡಿದೆ. 

ಶಿವಮೊಗ್ಗ ನಗರದ ಬಿಹೆಚ್​ ರೋಡ್​ನಲ್ಲಿ ಇರುವ ಬಾರ್​ವೊಂದರ ಸಮೀಪ ಇರುವ ಜಾಗವೊಂದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಕೋರ್ಟ್​ನಲ್ಲಿ ದೂರು ನೀಡಿರುವ ದೂರುದಾರರಿಗೆ   ದಿನಾಂಕ: 09/09/2023 ರಂದು ಮಾರ್ಕೆಟ್ ಲೋಕಿ ಬೆದರಿಕೆ ಹಾಕಿದ್ದಾನೆ.  ನಿಮ್ಮ ಆಸ್ತಿಯನ್ನು ತನ್ನ ಕುಟುಂಬಸ್ಥರು ತಗೊಂಂಡಿದ್ದಾರೆ. ಕೇಸ್​  ವಾಪಾಸ್ ತಗೋ ಕೇಸಿನಿಂದ ಡ್ರಾಪ್ ಆಗಿ ಸೆಟಲ್ ಮೆಂಟ್ ಮಾಡ್ಕೊ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಒಪ್ಪದಿದ್ದಾಗ ತಲೆಗಳು ಹೋಗುತ್ತವೆ ಎಂದು ಲೋಕಿ ಬೆದರಿಸಿದ್ದಾನೆ ಎನ್ನಲಾಗಿದೆ. 

ಇದ ರೀತಿಯಲ್ಲಿ ದಿ: 10/09/2023 ರಂದು ಕೂಡ ಜೈಲಿನಿಂದ ಕರೆ ಬಂದಿದೆ. ಪೋನ್​ ರಿಸೀವ್ ಮಾಡದೇ ಇದ್ದಾಗ ಪದೇ ಪದೇ ಕರೆ ಮಾಡಿ ನಾನು ಲೋಕಿ ಎಂದು ಹೇಳಿ ಫೋನ್ ಎತ್ತುತ್ತಾ ಇಲ್ವಾ..  ಕೇಸ್ ವಾಪಾಸ್ ತಗೋಳ್ಳಲಾ ಅಂದರೆ ನಮ್ಮ ಹತ್ತಿರ ನಡೆಯಲ್ಲಾ  ಜಾಸ್ತಿ ಮಾತು ಬೇಡ ಎಂದು ಆವಾಜ್ ಹಾಕಿದ್ದಾನೆಎಂದು ಎಫ್​ಐಆರ್​ ನಲ್ಲಿ ದೂರಲಾಗಿದೆ.  

ಇದಿಷ್ಟೆ ಅಲ್ಲದೆ ಮಾರ್ಕೆಟ್ ಲೋಕಿ ದೂರುದಾರರನ್ನು ಹೆದರಿಸಲು ವಯಸ್ಸಿನ ಹುಡುಗರನ್ನ ಬಳಸಿಕೊಂಡಿರುವ ಆರೋಪ ಕೂಡ ಕೇಳಿಬಂದಿದೆ. ತನ್ನ ಬೆದರಿಕೆಗೆ ಸೊಪ್ಪು ಹಾಕದ ಕಾರಣ ಹದಿನೈದಿಪ್ಪತ್ತು ಹುಡುಗರನ್ನ ಕಳಿಸಿದ ಲೋಕಿ ಅವರ ಮೂಲಕ  ಬೆದರಿಕೆ ಹಾಕಿ ಅಲ್ಲಿಯೇ ಮತ್ತೆ ಫೋನ್ ಮಾಡಿ ಹೆದರಿಸಿದ್ದಾನೆ.  

 

ಸದ್ಯ ಈ ಆರೋಪ  ಸಂಬಂಧ ತುಂಗಾ  ನಗರ ಪೊಲೀಸ್ ಸ್ಟೆಷನ್​ Act & Section: IPC 1860 (U/s-109,506,143,341,149) ಅಡಿಯಲ್ಲಿ ಕೇಸ್ ದಾಖಲಾಗಿದೆ. ಇನ್ನೂ ಶಿವಮೊಗ್ಗ ಪೊಲೀಸ್ ಇಲಾಖೆ ಪಾತಕಲೋಕದ ಅಕ್ರಮ ದಂಧೆ ಮೇಲೆ ಕಣ್ಣಿಡದೇ ಹೋದರೆ ಸಾಮಾನ್ಯರು ಇಂತಹ ಥ್ರಟ್​ ಕಾಲ್​ಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ. ಅಲ್ಲದೆ ಕೇವಲ ಎಫ್​ಐಆರ್​ನಿಂದ ಇಂತಹ ಬೆದರಿಕೆಗಳಿಗೆ ಪರಿಹಾರವೂ ಸಿಗಲಾರದು…


ಇನ್ನಷ್ಟು ಸುದ್ದಿಗಳು