ಡಿವೈಎಸ್​ಪಿ ಬಾಲರಾಜ್​ ಪ್ಲೇಸ್​ಗೆ ಬಂದ್ರು DYSP ಜೆ.ಜೆ.ತಿರುಮಲೇಶ್! ಇವರ ಬಗ್ಗೆ ತಿಳಿದುಕೊಳ್ಳಲೇಬೇಕು!

Dysp JJ Thirumalesh arrives at DySP Balaraj Place You need to know about them!

ಡಿವೈಎಸ್​ಪಿ ಬಾಲರಾಜ್​ ಪ್ಲೇಸ್​ಗೆ ಬಂದ್ರು DYSP ಜೆ.ಜೆ.ತಿರುಮಲೇಶ್!  ಇವರ ಬಗ್ಗೆ ತಿಳಿದುಕೊಳ್ಳಲೇಬೇಕು!
Dysp JJ Thirumalesh arrives at DySP Balaraj Place You need to know about them!

Shivamogga |  Jan 30, 2024 |   Dysp JJ Thirumalesh  ಶಿವಮೊಗ್ಗ ನಗರ ಉಪವಿಭಾಗ 1ರ ಡಿವೈಎಸ್​ಪಿಯಾಗಿ ಜೆ.ಜೆ.ತಿರುಮಲೇಶ್ ವರ್ಗಾವಣೆಗೊಂಡಿದ್ದಾರೆ. ಇತ್ತೀಚೆಗಷ್ಟೆ ಬಿಟ್ ಕಾಯಿನ್ ತನಿಖೆಯ ಭಾಗವಾಗಿ ಶಿವಮೊಗ್ಗದ ಡಿವೈಎಸ್​ಪಿಯಾಗಿದ್ದ ಬಾಲರಾಜ್​ ರವರನ್ನು ಎಸ್​ಐಟಿಗೆ ವರ್ಗಾವಣೆ ಮಾಡಲಾಗಿತ್ತು. ಆ ಸುದ್ದಿಯನ್ನು ಮಲೆನಾಡು ಟುಡೆ  ಎಕ್ಸ್​ ಕ್ಲ್ಯೂಸಿವ್ ಆಗಿ ನೀಡಿತ್ತು. ಅದರ ಲಿಂಕ್ ಇಲ್ಲಿದೆ  ಬಿಟ್ ಕಾಯಿನ್ ತನಿಖೆಗೆ ಬಿಗ್ ಟ್ವಿಸ್ಟ್​! ತನಿಖಾಧಿಕಾರಿಯಾಗಿ ಶಿವಮೊಗ್ಗದ ಡಿವೈಎಸ್​ಪಿ ಬಾಲರಾಜ್​ ನೇಮಕ! ಜೆಪಿ ಎಕ್ಸ್​ಕ್ಲ್ಯೂಸಿವ್

ಸದ್ಯ ಇವರಿಂದ ಖಾಲಿಯಾಗಿರುವ ಪ್ಲೇಸ್​ಗೆ ಲೋಕಾಯುಕ್ತದಲ್ಲಿ ಡಿವೈಎಸ್​ಪಿಯಾಗಿರುವ ಜೆ.ಜೆ.ತಿರುಮಲೇಶ್​ ರವರು ಆಗಮಿಸಿದ್ದಾರೆ. ಈ ಸಲುವಾಗಿ ರಾಜ್ಯ ಸರ್ಕಾರ ವರ್ಗಾವಣೆ ಆದೇಶವನ್ನು ಹೊರಡಿಸಿದೆ. ಡೈರೆಕ್ಟರ್ ಜನರಲ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್‌ರವಾ ಕಾರ್ಯಾಲಯ, ಕರ್ನಾಟಕ ರಾಜ್ಯ ನಂ. 2. ನೃಪತುಂಗ ರಸ್ತೆ, ಬೆಂಗಳೂರು ರವರಿಂದ ಆದೇಶ ಹೊರಬಿದ್ದಿದ್ದು, 33 ಡಿವೈಎಸ್​ಪಿಗಳ ವರ್ಗಾವಣೆಯನ್ನು ಆದೇಶಿಸಲಾಗಿದೆ. ಈ ಪೈಕಿ ಶಿವಮೊಗ್ಗ ಉಪವಿಭಾಗಕ್ಕೆ ಜೆಜೆ ತಿರುಮಲೇಶ್​ರವರನ್ನು ವರ್ಗಾವಣೆ ಮಾಡಲಾಗಿದೆ. 

ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಿದ್ದ ತಿರುಮಲೇಶ್

ಈ ಹಿಂದೆ ಶಿವಮೊಗ್ಗದಲ್ಲಿಯೇ ಕಾರ್ಯ ನಿರ್ವಹಿಸಿದ್ದ ತಿರುಮಲೇಶ್ ಶಿವಮೊಗ್ಗ ರೌಡಿಸಂ ಜಗತ್ತಿನ ಹಲವು ಆಪರೇಷನ್​ಗಳಲ್ಲಿ ಪಾಲ್ಗೊಂಡಿದ್ದರು. ಎರಡನೇ ಹಂತದ ರೌಡಿ ಚಟುವಟಿಕೆಗಳ ಬಗ್ಗೆ ಶಿವಮೊಗ್ಗದಲ್ಲಿಯೇ ಅನುಭವ ಪಡೆದಿರುವ ತಿರುಮಲೇಶ್​ ಅದಕ್ಕೆ ಬೇಕಾದ ಟ್ರೀಟ್ಮೆಂಟ್​ ಕೊಡುವ ಸಾಧ್ಯತೆಗಳಿವೆ. ಇವರಿಗೂ ಮೊದಲು ಶಿವಮೊಗ್ಗದ ಕೋಮು ಸೂಕ್ಷತೆಯನ್ನ ತಿಳಿಗೊಳಿಸುವ ನಿಟ್ಟಿನಲ್ಲಿ  ಬಾಲರಾಜ್​ರವರನ್ನ  ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕರೆಸಿಕೊಳ್ಳಲಾಗಿತ್ತು. 

ಡಿವೈಎಸ್​ಪಿ ಬಾಲರಾಜ್​ /DySP Balaraj

ಸರ್ವಿಸ್​ನಲ್ಲಿ ಡ್ಯೂಟಿ ಮಾಡಿದ ಏರಿಯಾಕ್ಕೆ ವಾಪಸ್ ಬಂದಿದ್ದ ಬಾಲರಾಜ್​ ಶಿಸ್ತುಬದ್ಧವಾಗಿ ರೌಡಿಸಂ ಚಟುವಟಿಕೆಗೆ ಪಾಠ ಕಳಿಸಿದ್ದರು. ರೌಡಿಸಂ ಭಾಷೆಯಲ್ಲಿ ಮೆಸೆಜ್ ರವಾನೆ ಮಾಡುತ್ತಿದ್ದ ಅವರು, ಪುಂಡಾಟಿಕೆ ಮೆರೆದವರನ್ನ ಸೈಲೆಂಟ್ ಆಗುವಂತೆ ಮಾಡಿದ್ದರು. ಇನ್ನೂ ತಿರುಮಲೇಶ್​ರವರ ವರ್ಗಾವಣೆ ಈ ಹಿಂದೆಯೇ ಆಗುವುದರಲ್ಲಿತ್ತು. ಆ ಸಂದರ್ಭದಲ್ಲಿ  ಬಾಲರಾಜ್​ರವರನ್ನು ಶಿವಮೊಗ್ಗದ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಮೂಲಕ ಮನವರಿಕೆ ಮಾಡಿ ಅವರನ್ನು ಇಲ್ಲಿಯೇ ಇರಿಸಿಕೊಂಡಿದ್ದರು. ಕೋಮು ಸೂಕ್ಷ್ಮತೆಯ ವಿಚಾರದಲ್ಲಿ ಬಾಲರಾಜ್​ ರವರು ತೋರಿದ ಚಾಣಾಕ್ಯತೆ ಹಾಗೂ ಜೀರೋ ಟಾಲರೆನ್ಸ್​  ಶಿವಮೊಗ್ಗ ಸಿಟಿಯಲ್ಲಿ ಸಾಕಷ್ಟು ಕೆಲಸ ಮಾಡಿದೆ. 

ರವಿ ಚನ್ನಣ್ಣವರ್, ಅಭಿನವ್ ಖರೆ

ಇದೀಗ ಅವರ ಸ್ಥಾನಕ್ಕೆ ಜೆ.ಜೆ. ತಿರುಮಲೇಶ್​ ರವರು ವರ್ಗಾವಣೆಗೊಂಡಿದ್ದಾರೆ. ಪಾತಕ ಲೋಕದ ವಿಚಾರವಾಗಿ ಇನ್ಫಾರ್ಮಿಂಗ್​ ನೆಟ್​ವರ್ಕ್​ ಹೊಂದಿರುವ ತಿರುಮಲೇಶ್​ ರೌಡಿಗಳಿಗೆ ಬಾಲರಾಜ್​ರಷ್ಟೆ ವಾರ್ನಿಂಗ್​ ಬಾಡಿಯಾಗಿ ನಿಲ್ಲುತ್ತಾರೆ. ಮೇಲಾಗಿ ಶಿವಮೊಗ್ಗದ ಈ ಹಿಂದಿನ ಎಸ್​ಪಿಗಳು ಭೇದಿಸಿದ ನಿಗೂಢ ಹಾಗೂ ಕ್ಲೂಲೆಸ್​ ಕೇಸ್​ಗಳಲ್ಲಿ ತಿರುಮಲೇಶ್ ತನಿಖೆಯ ಭಾಗವಾಗಿ ಕೆಲಸ ಮಾಡಿದವರು. ಮಾರ್ಕೆಟ್ ಲೋಕಿ ಬಂಧನ, ಎಸ್​ಪಿ ರವಿಚನ್ನಣ್ಣವರ್ ಭೇದಿಸಿದ ಗೋಲ್ಡ್​ ಕೇಸ್​ ಸೇರಿದಂತೆ ಎಸ್​ಪಿ ಅಭಿನವ್​ ಖರೆ ಯವರ ಜೊತೆಯಲ್ಲಿ ಕೆಲಸ ನಿರ್ವಹಿಸಿದ್ದರು. 

ಭದ್ರಾವತಿ ಕ್ರೈಂ

ಇನ್ನೂ ಭದ್ರಾವತಿಯ ಅಕ್ರಮ ದಂಧೆಯನ್ನ ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿದ್ದ ತಿರುಮಲೇಶ್​ ಕಳ್ಳರೆ ಖೆಡ್ಡಾ ತೋಡಿದ್ರು. ಕಳ್ಳನೊಬ್ಬ ತಾನು ಕದ್ದಿದ್ದು ಇಷ್ಟು , ಆದರೆ ತನಿಖಾಧಿಕಾರಿ ಕಡಿಮೆ ತೋರಿಸಿದ್ದಾರೆ ಎಂದು ಠಾಣೆಗೆ ದೂರು ಕೊಟ್ಟಿದ್ದ. ಆ ಸಂದರ್ಭದಲ್ಲಿ  ತಿರುಮಲೇಶ್ ಸಸ್ಪೆಂಡ್ ಸಹ ಆಗಿದ್ದರು, ಆನಂತರ ನ್ಯಾಯಾಲಯ ಇವರನ್ನ ಖುಲಾಸೆಗೊಳಿಸಿತ್ತು. ಭದ್ರಾವತಿಯ ಪಾತಕ ಜಗತ್ತು ತಿರುಮಲೇಶ್​ರನ್ನ ಹಣಿಯಲೆಂದೆ ಹಲವು ಕುತಂತ್ರಗಳನ್ನ ನಡೆಸಿ ಅವರನ್ನ ವರ್ಗಾವಣೆಗೊಳಿಸುವಲ್ಲಿ ಯಶಸ್ಸಾಗಿತ್ತು. 

ಲೋಕಾಯುಕ್ತ ಡಿವೈಎಸ್​ಪಿ

ಆನಂತರ ಎಲ್​ ಆ್ಯಂಡ್ ಒ ದಿಂದ ದೂರವಾಗಿದ್ದ  ತಿರುಮಲೇಶ್​ ಬಳಿಕ ಡಿವೈಎಸ್​ಪಿಯಾಗಿ ತರಿಕೆರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿಂದ ಲೋಕಾಯುಕ್ತ ಚಿಕ್ಕಮಗಳೂರು ಡಿವೈಎಸ್​ಪಿ ಯಾಗಿ ಆಯ್ಕೆಯಾಗಿದ್ದರು. ಇದೀಗ ಶಿವಮೊಗ್ಗ ನಗರ ಉಪವಿಭಾಗದ ಡಿವೈಎಸ್​ಪಿಯಾಗಿ ಬರುತ್ತಿದ್ದಾರೆ. ಅವರ ಅನುಭವ ಹಾಗೂ ಚಾಕಚಕ್ಯತೆ ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ಪೊಲೀಸ್ ಇಲಾಖೆಗೆ ಉಪಯುಕ್ತವಾಗಲಿ ಎಂದು ಮಲೆನಾಡು ಟುಡೆ ಹಾರೈಸುತ್ತದೆ.