ಬಿಟ್ ಕಾಯಿನ್ ತನಿಖೆಗೆ ಬಿಗ್ ಟ್ವಿಸ್ಟ್​! ತನಿಖಾಧಿಕಾರಿಯಾಗಿ ಶಿವಮೊಗ್ಗದ ಡಿವೈಎಸ್​ಪಿ ಬಾಲರಾಜ್​ ನೇಮಕ! ಜೆಪಿ ಎಕ್ಸ್​ಕ್ಲ್ಯೂಸಿವ್

Big twist to bitcoin investigation. police officer of Shivamogga DySP Balaraj has been appointed as the investigating officer to bitcoin investigation. JP Exclusive

ಬಿಟ್ ಕಾಯಿನ್ ತನಿಖೆಗೆ ಬಿಗ್ ಟ್ವಿಸ್ಟ್​! ತನಿಖಾಧಿಕಾರಿಯಾಗಿ ಶಿವಮೊಗ್ಗದ ಡಿವೈಎಸ್​ಪಿ ಬಾಲರಾಜ್​ ನೇಮಕ! ಜೆಪಿ ಎಕ್ಸ್​ಕ್ಲ್ಯೂಸಿವ್
police officer of Shivamogga DySP Balaraj has been appointed as the investigating officer to bitcoin investigation. JP Exclusive

SHIVAMOGGA  |  Jan 23, 2024  |  ಬಿಟ್ ಕಾಯಿನ್ ತನಿಖೆಗೆ ಬಿಗ್ ಟ್ವಿಸ್ಟ್ ಕೊಟ್ಟ ರಾಜ್ಯ ಸರ್ಕಾರ ತನಿಖಾಧಿಕಾರಿಯಾಗಿ ಶಿವಮೊಗ್ಗದ ಖಡಕ್ ಪೊಲೀಸ್ ಅಧಿಕಾರಿ ನೇಮಕ ಯಾರವರು ಗೊತ್ತಾ? ಜೆಪಿ ಬರೆಯುತ್ತಾರೆ

ಬಿಟ್ ಕಾಯಿನ್ ತನಿಖೆ

ರಾಜ್ಯ ಸರ್ಕಾರ ಬಿಟ್ ಕಾಯಿನ್ ಕೇಸ್ ಮತ್ತೆ ಜೀವ ನೀಡಿದೆ. ಬಿಟ್ ಕಾಯಿನ್ ಹಗರಣದಲ್ಲಿ ಬಹಳಷ್ಟು ಮಂದಿ ಪೊಲೀಸ್ ಅಧಿಕಾರಿಗಳ ಪಾತ್ರ ಇರೋ ಕಾರಣಕ್ಕೆ ನಿಷ್ಪಕ್ಷಪಾತ ತನಿಖೆಗೆ ಮುಂದಾಗಿದೆ. ಹೀಗಾಗಿ ಶಿವಮೊಗ್ಗ ನಗರದ ಡಿವೈಎಸ್​ಪಿ ಬಾಲರಾಜ್ ರವರನ್ನು ಸಿಐಡಿಗೆ ವರ್ಗಾಯಿಸಿದ್ದು, ಅವರು ಎಸ್ ಐ ಟಿ ತನಿಖಾಧಿಕಾರಿಯಾಗಿ ವರ್ಗಾವಣೆ ಗೊಂಡಿದ್ದಾರೆ. ಬಾಲರಾಜ್ ಅವರ ವರ್ಗಾವಣಿಯಿಂದ ತೆರವಾದ ಜಾಗಕ್ಕೆ ಇನ್ನು ಯಾವ ಅಧಿಕಾರಿಯನ್ನು ನೇಮಿಸಿಲ್ಲ.

 

ಶಿವಮೊಗ್ಗದಲ್ಲಿ ಡಿವೈಎಸ್​ಪಿ ಬಾಲರಾಜ್  

ತೀರ್ಥಹಳ್ಳಿಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಮಲೆನಾಡಿನ ಕಾಡಿನ ಪರಿಸರದಲ್ಲಿ ಆದ ಅದೆಷ್ಟೋ ಕ್ರೈಂ ಪ್ರಕರಣಗಳಿಗೆ ಜೀವ ನೀಡಿ ಆರೋಪಿಗಳಿಗೆ ಜೈಲು ಶಿಕ್ಷೆಯಾಗುವಂತೆ ಮಾಡಿದ್ದರು. ನಕ್ಸಲರು ಹಳ್ಳಿಗೆ ನುಗ್ಗಿ ಮನೆ ಮನೆಗಳಲ್ಲಿ ಲೂಟಿ ಮಾಡಿದ್ದಾರೆ ಎಂದು ಬಿಂಬಿತವಾಗಿದ್ದ ತಲ್ಲೂರು ಅಂಗಡಿ ದರೋಡೆ ಪ್ರಕರಣಕ್ಕೆ ಬಾಲ್ ರಾಜ್ ಬಿಗ್ ಟ್ವಿಸ್ಟ್ ನೀಡಿದ್ದರು

ಈ ಪ್ರಕರಣ  ರಾಜಕಾರಣಿಗಳಿಗೆ ಆಹಾರವಾಗಿತ್ತು. ನಕ್ಸಲರ ಹೆಸರಿನಲ್ಲಿ ಬೇರೆ ಗುಂಪೊಂದು ದರೋಡೆ ಮಾಡಿದ್ದನ್ನು ಬಾಲರಾಜ್ ಬಯಲಿಗೆ ಎಳೆದಿದ್ದರು. ಇತಂಹ ಹತ್ತು ಹಲವು ಕ್ರೈಂ ಗಳ ನಿಖರ ತನಿಖೆ ನಡೆಸಿ ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದ ಬಾಲರಾಜ್ ನಂತರ ಬಿಜಾಪುರಕ್ಕೆ ವರ್ಗಾವಣೆಯಾಗಿದ್ದರು.

Big twist to bitcoin investigation. DySP Balaraj, the khadak police officer of Shivamogga, has been appointed as the investigating officer. JP Exclusive

ಆರಗ ಜ್ಞಾನೇಂದ್ರ

 

ಆರಗ ಜ್ಞಾನೇಂದ್ರ ಗೃಹ ಸಚಿವರಾದ ಸಂದರ್ಭದಲ್ಲಿ ಬಾಲರಾಜ್ ರವರನ್ನ ಮತ್ತೆ ಶಿವಮೊಗ್ಗ ನಗರದ ಡಿಎಸ್ಪಿ ಯಾಗಿ ವರ್ಗಾವಣೆ ಮಾಡಿದ್ದರು. ಅಲ್ಲಿಯವರೆಗೆ ಶಿವಮೊಗ್ಗ ನಗರದಲ್ಲಿ ಸಣ್ಣ ಪುಟ್ಟ ವಿಚಾರಗಳು ಮತೀಯ ಬಣ್ಣ ಪಡೆದು ವಿಕೋಪಕ್ಕೆ ಹೋಗುತ್ತಿದ್ದ ಸನ್ನಿವೇಶ ಎದುರಾಗಿತ್ತು. ಬಿಜೆಪಿ ನಾಯಕರು..

ಶಿವಮೊಗ್ಗದ ಎಲ್ ಎಂಡ್ ಓ ಬಗ್ಗೆ ತಲೆಕೆಡಿಸಿಕೊಂಡಿದ್ದು, ಶಿವಮೊಗ್ಗ ನಗರಕ್ಕೆ ಖಡಕ್ ಅಧಿಕಾರಿಗಳನ್ನು ನೇಮಿಸುವಂತೆ ಆಗ್ರಹ ಮಾಡಿದ್ದರು. ಆಗ ಶಿವಮೊಗ್ಗ ನಗರಕ್ಕೆ ಡಿಎಸ್ಪಿ ಬಾಲರಾಜ್ ವರ್ಗಾವಣೆಯಾದ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಂಜನ್ ಕುಮಾರ್ ಹಾಗು ತುಂಗಾ ನಗರ ಠಾಣೆಗೆ ಅಂಜನ್ ಕುಮಾರ್ ವರ್ಗಾವಣೆಯಾಗಿ ಬಂದರು.

ಹಿಂದೂ ಹರ್ಷ

 

ಹಿಂದು ಹರ್ಷ ಕೊಲೆಯಾದ ಸಂದರ್ಭದಲ್ಲಿ ಸಾವರ್ಕರ್ ಫ್ಲೆಕ್ಸ್ ತೆರವಿನ ವಿಚಾರದಲ್ಲಿ ನಡೆದ ಗಲಾಟೆಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬಾಲರಾಜ್ ಟೀಂ ಸಮರ್ಥವಾಗಿ ಕೆಲಸ ಮಾಡಿದ್ದು, ಸಾರ್ವಜನಿಕ ಪ್ರಶಂಸೆಗೆ ಈಡಾಗಿದೆ. ರಾತ್ರಿಯ ಗಸ್ತಿಗೆ ಹೆಚ್ಚಿನ ಒತ್ತು ನೀಡಿದ್ದರ ಫಲವಾಗಿ ಶಿವಮೊಗ್ಗ ಹೊರವಲಯಗಳಲ್ಲಿ ಸರಗಳ್ಳತನ ಮನೆಗಳ್ಳತನ ಪ್ರಕರಣಗಳು ಕಡಿಮೆಯಾಗಿದ್ದವು.

 

ಶಿವಮೊಗ್ಗದ ಪಾತಕಿಗಳಿಗೆ ಸಿಂಹಸ್ವಪ್ನವಾಗಿದ್ದ ಬಾಲರಾಜ್

ಬಾಲರಾಜ್ ತೀರ್ಥಹಳ್ಳಿಯ ಇನ್ ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಶಿವಮೊಗ್ಗ ನಗರದ ರೌಡಿಗಳು ಅವರನ್ನು ನೋಡಿದೆ ಭಯಪಡುತ್ತಿದ್ದರು.ನಟೋರಿಸ್ ರೌಡಿ ಹೆಬ್ಬೆಟ್ಟು ಮಂಜನಿಗೆ ಹೆಡೆಮುರಿ ಕಟ್ಟಲು ಬಾಲರಾಜ್ ಮುಂದಾಗಿದ್ದರು. ಹೊಸಹಳ್ಳಿ ವೆಂಕಟೇಶ್ ಮರ್ಡರ್ ಕೇಸ್ ನಲ್ಲಿ ಅಂದರ್ ಆಗಬೇಕಿದ್ದ ಹೆಬ್ಬೆಟ್ಟು ಮಂಜ ಸಾಕ್ಷ್ಯಗಳಿಗೆ ಹೆದರಿಸಿ ಕೇಸು ಗೆದ್ದಿದ್ದ

 ಕೋರ್ಟ್ ನಿಂದ ಹೊರಬರುವ ಸಂದರ್ಭದಲ್ಲಿ ಬಾಲರಾಜ್ ನನ್ನ ಬುಲೆಟ್ ನಲ್ಲಿ ನಿನ್ನ ಹೆಸರು ಬರದೇ ಇದೆ..ಜಾಗೃತೆ ಎಂದು ಎಚ್ಚರಿಸಿದ್ದರು. ಅಂದಿನ ಅವರ ಮುಖಭಾವ. ಒಬ್ಬ ಧಕ್ಷ ಪೊಲೀಸ್ ಅಧಿಕಾರಿಗೆ ಸೆಟ್ ಬ್ಯಾಕ್ ಆದಾಗ ಏನಾಗುತ್ತದೆ ಎಂಬುದನ್ನು ಚಿತ್ರಿಸಿತ್ತು. ಅಂದೇ ಶಿವಮೊಗ್ಗದ ರೌಡಿ ಜಗತ್ತು ಬಾಲರಾಜ್ ಗೆ ಹೆದರತೊಡಗಿದ್ರು.

 

ನಟೋರಿಯಸ್ ಪಾತಕಿ ತಮಿಳು ಕುಮಾರ್ ಎನ್ಕೊಂಟರ್ ನಂತರ. ಬಹಳಷ್ಟು ರೌಡಿಗಳು ಶಿವಮೊಗ್ಗದಿಂದ ಕಾಲ್ಕಿತ್ತರು. ಅದರಲ್ಲಿ ಹೆಬ್ಬೆಟ್ಟು ಮಂಜ ಕೂಡ ಒಬ್ಬ. ಬೆಂಗಳೂರು ಮುಲಾಮನ ಬ್ಯಾಚ್ ಸೇರಿಕೊಂಡಿದ್ದ ಮಂಜ, ಯಾವಾಗ ಬಾಲರಾಜ್ ಬೆಂಗಳೂರಿನ ಸಿಸಿಬಿಗೆ ವರ್ಗಾವಣೆಯಾಗಿ ಬರ್ತಾರೋ ಆಗ ಅಲ್ಲಿಂದ ಕೂಡ ಕಾಲ್ಕಿಳುತ್ತಾನೆ.

 

ಸವಾಲಾಗಿದ್ದ ಜ್ಞಾನಭಾರತಿ ಕೇಸ್​ ಬೇದಿಸಿದಪ್ರಕರಣವನ್ನು  ಇಂದಿಗೂ ನ್ಯಾಯಾಧೀಶರಾಗುವವರು ಹಾಗು ಐಪಿಎಸ್ ಅಬ್ಯಾಸ ಮಾಡುವವರು ಓದುತ್ತಾರೆ  ಬೆಂಗಳೂರಿನಲ್ಲಿ ಸಿಸಿಬಿಯಲ್ಲಿ ಉತ್ತಮ ಹೆಸರು ಮಾಡಿರುವ ಬಾಲರಾಜ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಆದ ವಿದೇಶಿ ಯುವತಿಯ ಅತ್ಯಾಚಾರ ಪ್ರಕರಣವನ್ನು ಸಮರ್ಥವಾಗಿ ಭೇದಿಸಿದ್ರು. 

ಕ್ಲೂ ಗಳೇ ಸಿಗದ ಸಂದರ್ಭದಲ್ಲಿ ಬೇಸಿಕ್ ಪೊಲೀಸಿಂಗ್ ಮೂಲಕ ಪ್ರಕರಣದ ಆಳಕ್ಕಳಿದ ಬಾಲರಾಜ್ ಆರೋಪಿಗಳೆಲ್ಲರನ್ನು ಬಂಧಿಸಿ ಜೈಲಿಗಟ್ಟಿದ್ರು. ಜ್ಞಾನಭಾರತಿ ಕ್ಯಾಂಪಸ್ ಅತ್ಯಾಚಾರ ಪ್ರಕರಣದ ತನಿಖೆ ಬಗ್ಗೆ ಸುಪ್ರಿಂ ಕೋರ್ಟ್ ಬಾಲರಾಜ್ ರವರನ್ನು ಶ್ಲಾಘಿಸಿದೆ. 

ಈ ಪ್ರಕರಣವನ್ನು ನ್ಯಾಯಾಧೀಶರಾದವರು ತರಬೇತಿಯಲ್ಲಿ ಅಭ್ಯಾಸ ಮಾಡುತ್ತಾರೆ. ಐಪಿಎಸ್ ತರಬೇತಿಯಲ್ಲಿರುವ ಪರಿಕ್ಷಾರ್ಥಿಗಳು ಈ ಪ್ರಕರಣವನ್ನು ಅಭ್ಯಾಸ ಮಾಡುತ್ತಾರೆ. ಬಾಲರಾಜ್ ರವರಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭ್ಯವಾಗಿದೆ 

ಇಂತಹ ಹೆಸರು ಮಾಡಿದ ಅಧಿಕಾರಿ ಶಿವಮೊಗ್ಗ ನಗರದಲ್ಲಿ ಇಷ್ಟು ವರ್ಷ  ಕರ್ತವ್ಯ ನಿರ್ವಹಿಸಿದ್ದು. ಜನತೆಗೆ ಹೆಮ್ಮೆಯಾಗಿದೆ. ಈಗ ರಾಜ್ಯ ಸರ್ಕಾರ ಬಿಟ್ ಕಾಯಿನ್ ಕೇಸ್ ನ ತನಿಖಾಧಿಕಾರಿಯಾಗಿ ಬಾಲರಾಜ್ ರವರನ್ನು ನೇಮಿಸಿರುವುದು ಶ್ಲಾಘನೀಯ..ಬಾಲರಾಜ್ ರವರ ಮುಂದಿನ ಕರ್ತವ್ಯದ ಪಯಣಕ್ಕೆ ಮಲೆನಾಡು ಟುಡೆ ಶುಭಕೋರುತ್ತದೆ.

Big twist to bitcoin investigation. DySP Balaraj, the khadak police officer of Shivamogga, has been appointed as the investigating officer. JP Exclusive