ಬಸ್​ಸ್ಟ್ಯಾಂಡ್​ನಲ್ಲಿ ರೋಚಕ ಅರೆಸ್ಟ್​ ಸೀನ್​/ ಗೂಂಡಾ ಕಾಯ್ದೆ ಹಾಕಿದ್ರೆ, ಗುಂಡು ಹಾರಿಸಿದ್ರು ಎಂದ ಆರೋಪಿಗಳು/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-4 ಕೋರ್ಟ್​ನಲ್ಲಿ ಆಗಿದ್ದೇನು?

ನಾವು ರಾಮನಗರ ತಲುಪುವ ವೇಳೆಗೆ ಅವರುಗಳು ಬಸ್‌ಗಳನ್ನು ಹತ್ತಿ ಅಲ್ಲಿಂದಲೂ ಸಹ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದುದರಿಂದ ನಾವುಗಳು ಮೇಟಾರೆದೊಡ್ಡಿಯಲ್ಲಿ ಸಮಯ ವ್ಯರ್ಥ ಮಾಡದೇ ಅಲ್ಲಿಂದ ಹೊರೆಟೆವು.

ಬಸ್​ಸ್ಟ್ಯಾಂಡ್​ನಲ್ಲಿ ರೋಚಕ ಅರೆಸ್ಟ್​ ಸೀನ್​/ ಗೂಂಡಾ ಕಾಯ್ದೆ ಹಾಕಿದ್ರೆ, ಗುಂಡು ಹಾರಿಸಿದ್ರು ಎಂದ ಆರೋಪಿಗಳು/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-4 ಕೋರ್ಟ್​ನಲ್ಲಿ ಆಗಿದ್ದೇನು?

ರಾಜ್ಯದ ಪೊಲೀಸ್ ಇಲಾಖೆಗೆ ಎದುರಾಗಿದ್ದ ಚಾಲೆಂಜಿಂಗ್​ ಕ್ರೈಂ ಕೇಸ್​ಗಳ ಪೈಕಿ , ಜ್ಞಾನಭಾರತಿ ರೇಪ್​ ಕೇಸ್​ ಮುಖ್ಯವಾದುದು , ಇಂತಹದ್ದೊಂದು ಪ್ರಕರಣವನ್ನು ಕೈಗೆತ್ತಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮವಹಿಸಿದ್ದ ಬಾಲರಾಜ್​ರವರಿಗೆ ಅರ್ಹವಾದ ಗೌರವವೇ ಲಭಿಸಿದೆ. ಈ ನಿಟ್ಟಿನಲ್ಲಿ ಟುಡೆ, ಜ್ಞಾನಭಾರತಿ ಕೇಸ್​ನ ಸರಣಿಯನ್ನು ಬಾಲರಾಜ್​ರವರೇ ವಿವರಿಸಿದಂತೆ ಓದುಗರ ಮುಂದಿಡುತ್ತಿದೆ. ಇದರ ಭಾಗ ನಾಲ್ಕರ ಸರಣಿ ಇಲ್ಲಿದೆ : 50 ಸಾವಿರ ಡಿಮ್ಯಾಂಡ್, ಇಂಗ್ಲೆಂಡ್​ ಲೆಟರ್​ನಲ್ಲಿ ಬಂದಿತ್ತು ಸುಳಿವು, ಶೋಲೆ ಸಿನಿಮಾ ಮತ್ತು ರೇಪ್​ ಕೇಸ್​? ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-4

ಕೊನೆ ಹಂತ 

ಬೆಟ್ಟದಿಂದ ಮರಳಿ ಬಂದಿದ್ದ ಯುವಕನ ವಿಚಾರಣೆ ಮುಗಿದಾಗ ದಿನಾಂಕ:19.10.2012 ರ ಸುಮಾರು ಬೆಳಗಿನ ಜಾವ 04 ಗಂಟೆಯಾಗಿತ್ತು. ಸದರಿ ಯುವಕನು ಬೆಟ್ಟದಲ್ಲಿ ಅಡಗಿಕೊಂಡಿದ್ದ ಮತ್ತು ಪೊಲೀಸರಿಗೆ ಬೇಕಾಗಿದ್ದ 08 ಜನ ಆರೋಪಿತರು ಪೊಲೀಸರು ಬೆಟ್ಟ ಹತ್ತುತ್ತಿರುವುದನ್ನು ಕಂಡು ಜೊತೆಯಲ್ಲಿದ್ದ ನಾಯಿಗಳು ಬೊಗಳಿದಾಗ ಜಾಗೃತರಾಗಿ ಅಲ್ಲಿಂದ ತಪ್ಪಿಸಿಕೊಂಡು ಇನ್ನೊಂದು ಬದಿಯಿಂದ ಬೆಟ್ಟವನ್ನು ಇಳಿದು ಹೋದರೆಂದು ತಿಳಿಸಿದನು.

ಬೆಟ್ಟದ ಮೇಲೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿ ಕುಳಿತಿದ್ದಾಗ ಅವರೆಲ್ಲರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಯೋಜನೆಯನ್ನು ರೂಪಿಸಿದ್ದಾಗಿಯೂ ಹಾಗೂ ಆ ಯೋಜನೆಯ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದೆಂದು ಅವರು ನನಗೆ ತಾಕಿತು ಮಾಡಿದ್ದರು ಎಂದು ತಿಳಿಸಿದನು.

ಅವರ ಯೋಜನೆಯಂತೆ ಅವರು ಯಾರು ತಮ್ಮಲ್ಲಿದ್ದ ಮೊಬೈಲ್‌ನ್ನು ಬಳಸದೆ ಇರುವುದಕ್ಕೆ ತಿರ್ಮಾನಿಸಿದ್ದರು. ಅಲ್ಲದೆ ಮರು ದಿನ ಅಂದರೆ ದಿನಾಂಕ:19.10.2012 ರಂದು 08 ಜನರು ಬೇರೆ ಬೇರೆಯಾಗಿ ಬಸ್ಸುಗಳ ಮುಖಾಂತರ ತಮ್ಮ ದೂರದ ನೆಂಟರ ಮನೆಗಳಿಗೆ ಹೋಗಿ ಅಲ್ಲಿ ತಲೆಮರಿಸಿಕೊಳ್ಳಲು ತಿರ್ಮಾನಿಸಿದ್ದರು. ಮತ್ತು ಕೆಲವು ತಿಂಗಳ ಕಾಲ ಪೊಲೀಸರು ಹುಡುಕುವುದನ್ನು ನಿಲ್ಲಿಸುವವರೆಗೆ ಯಾರು ........ ಗಾಮಕ್ಕೆ ಬರದಿರಲು ತಿರ್ಮಾನಿಸಿದರು. ನಮ್ಮ ಜೊತೆಯಲ್ಲಿದ್ದ ಇನ್ಸ್‌ಪೆಕ್ಟರ್ ಮಾಲತೇಶ್‌ರವರು ಸದರಿ ಯುವಕನ ಶರ್ಟ್ ಜೇಬಿನಲ್ಲಿದ್ದ ಮೊಬೈಲ್‌ನ್ನು ತೆಗೆದುಕೊಂಡು ನೋಡಿದಾಗ ಅದು ಸ್ವಿಚ್‌ ಆಫ್ ಆಗಿತ್ತು.

ಅದನ್ನು ಆನ್ ಮಾಡಿ ಕಾಲ್‌ಲಾಗ್ ಮತ್ತು ಕಾಂಟ್ಯಾಕ್ಟ್ ಲಿಸ್ಟ್‌ನ್ನು ಪರಿಶೀಲಿಸಿದ್ದು, ಸದರಿ ಯುವಕನ ಮೊಬೈಲ್ ಸ್ವಿಚ್‌ ಆಪ್ ಆಗಿರುವುದು ಕಂಡುಬಂತು. ಮಾಲತೇಶ್‌ರವರು ಸದರಿ ಮೊಬೈಲ್‌ನ್ನು ಆನ್‌ ಮಾಡಿ ಕಾಂಟ್ಯಾಕ್ಟ್ ಲಿಸ್ಟನ್ನು ಓಪನ್ ಮಾಡಿ 08 ಜನ ಆರೋಪಿತರ ಹೆಸರು ಮತ್ತು ಅವರು ಬಳಸುವ ಮೊಬೈಲ್ ನಂಬರ್‌ನ್ನು ಸದರಿ ಯುವಕನ ಸಹಾಯದಿಂದ ಪಡೆದುಕೊಂಡರು. ಮತ್ತು ಆ 08 ಜನ ಆರೋಪಿತರು ಜೊತೆಯಲ್ಲಿದ್ದ ಯುವಕನಿಗೆ ತಾವು ಜ್ಞಾನಭಾರತಿಯಲ್ಲಿ ಎಸಗಿದ ಕೃತ್ಯದ ಬಗ್ಗೆ ತಿಳಿಸಿದ್ದರು.

DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಟಿವಿ ನೋಡಿ ಊರು ಬಿಟ್ಟಿದ್ದ ಆರೋಪಿಗಳು

ಮತ್ತು ಟಿವಿಯ ನ್ಯೂಸ್ ಚಾನಲ್‌ಗಳಲ್ಲಿ ಘಟನೆಯ ಬಗ್ಗೆ ಬರುತ್ತಿದ್ದ ಸುದ್ದಿಗಳಿಂದ ಆರೋಪಿತರಿಗೆ ಪ್ರಕರಣ ದಾಖಲಾಗಿರುವ ವಿಷಯ ಗೊತ್ತಾಗಿತ್ತು ಮತ್ತು ಪೊಲೀಸರು ಹುಡುಕಾಟ ಮಾಡುತ್ತಿರುವ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಆದ್ದರಿಂದ ಅವರು ದಿನಾಂಕ: 15.10.2012 ರಿಂದಲೇ ಊರನ್ನು ಬಿಟ್ಟು ಗುಡ್ಡವನ್ನು ಸೇರಿಕೊಂಡಿದ್ದರು

ಮತ್ತು ಅವರೆಲ್ಲರೂ ಅಂದಿನಿಂದಲೇ ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್ ಮಾಡಿಕೊಂಡಿದ್ದು, ಬೇರೆಯವರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರಿಗೆ ಆಹಾರ ಮತ್ತು ನೀರು ಸರಬರಾಜು ಮಾಡಲು ಸದರಿ ಯುವಕನನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದರು. ಸದರಿ ಯುವಕನಿಗೂ ಕೂಡ ತನ್ನ ಮೊಬೈಲ್‌ನ್ನು ಆಫ್ ಮಾಡಿ ಇಟ್ಟುಕೊಳ್ಳವಂತೆ ತಿಳಿಸಿದ್ದರು.ಅವಶ್ಯಕವಿದ್ದಾಗ ಮಾತ್ರ ಆನ್ ಮಾಡಿಕೊಂಡು ಮಾತನಾಡುವಂತೆ, ಮತ್ತು ಮಾತು ಮುಗಿದ ನಂತರ ಕೂಡಲೇ ಸ್ವಿಚ್‌ ಆಫ್ ಮಾಡುವಂತೆ ಅವನಿಗೆ ಆರೋಪಿತರು ತಾಕಿತು ಮಾಡಿದ್ದರು.

ಸದರಿ ಯುವಕನು ನೀಡಿದ ಮಾಹಿತಿಯಿಂದ ಆರೋಪಿತರು ಹಳ್ಳಿಯವರಾದರು ಕೂಡ ಸ್ವಲ್ಪ ಮಟ್ಟಿಗೆ ಬುದ್ಧಿವಂತರು ಮತ್ತು ವ್ಯವಸ್ಥಿತವಾಗಿ ಸಂಘಟಿತರಾಗಿ ಅಪರಾಧ ಎಸಗುವ ತಂಡದಂತೆ ಕಂಡುಬಂದರು ಮತ್ತು ಅಪರಾಧ ಎಸಗಿದ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ತಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಅವರಿಗೆ ಗೊತ್ತಿತ್ತು. ಈ ಎಲ್ಲಾ ಅಂಶಗಳಿಂದ ಆರೋಪಿತರುಗಳು ರೂಢಿಗತ ಅಪರಾಧಿಗಳು ಎಂಬುವುದು ನಮಗೆ ಖಚಿತವಾಯಿತು.

ಹಾಗೂ ಈ ಅಪರಾಧಕ್ಕೆ ಮೊದಲು ಇದೇ ತಂಡ ಇನ್ನೂ ಅನೇಕ ಅಪರಾಧಗಳನ್ನು ಮಾಡಿರುವುದು ಖಚಿತವಾಯಿತು. ನಾನು ನನ್ನ ಜೊತೆಯಲ್ಲಿ ಬಂದಿದ್ದ ಎಲ್ಲಾ ಪೊಲೀಸ್ ಇನ್ಸ್ ಪೆಕ್ಟರ್‌ಗಳೊಂದಿಗೆ ಚರ್ಚೆ ಮಾಡಿದ್ದು, ಎಲ್ಲಾರು ಕೂಡಿ ರಾಮನಗರ ಪಟ್ಟಣದಲ್ಲಿ ಇರುವ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್, ಖಾಸಗಿ ವಾಹನಗಳ ಬಸ್ ಸ್ಟಾಂಡ್ ಹಾಗೂ ರಾಮನಗರ ಪಟ್ಟಣದಲ್ಲಿ ಎಲ್ಲೆಲ್ಲಿ ಬಸ್ ನಿಲುಗಡೆಯಾಗುತ್ತದೆಯೋ ಅವುಗಳ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಎಲ್ಲಾ ಬಸ್‌ನಿಲ್ದಾಣಗಳಲ್ಲಿ ನಿರಂತರವಾಗಿ ನಿಗಾವಹಿಸಬೇಕೆಂದು ಹಾಗೂ ಪ್ರತಿ ತಂಡದೊಂದಿಗೆ ಮೇಟಾರೆದೊಡ್ಡಿ ಗ್ರಾಮದ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಬೇಕೆಂದು ತಿರ್ಮಾನಿಸಿದೆವು.

15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ಬಸ್​ ನಿಲ್ದಾಣದಲ್ಲಿ ಆರೋಪಿಗಳಿಗಾಗಿ ಸ್ಕೆಚ್​

ನಾವುಗಳು ಮೇಟಾರೆದೊಡ್ಡಿ ಕಡೆಯಿಂದ ಬೆಟ್ಟ ಹತ್ತುವಾಗ ಬೆಟ್ಟದ ಮೇಲಿದ್ದ ಆರೋಪಿತರು ಬೆಟ್ಟದ ಇನ್ನೊಂದು ಬದಿಯಿಂದ ಇಳಿದು ತಪ್ಪಿಸಿಕೊಂಡಿದ್ದರು. ಅದೇ ದಿಕ್ಕಿನಲ್ಲಿ ಅವರು ನಡೆದುಕೊಂಡು ಹೋಗಿದ್ದರೆ ಅವರು ರಾಮನಗರ ಪಟ್ಟಣವನ್ನು ತಲುಪಬಹುದಿತ್ತು.

ನಾವು ಜೊತೆಯಲ್ಲಿದ್ದ ಆ ಯುವಕನನ್ನು ಪ್ರಶ್ನಿಸಿದಾಗ ಸಾಮಾನ್ಯವಾಗಿ ಮೇಟಾರೆದೊಡ್ಡಿಯ ಜನರು ಬೇರೆ ಊರುಗಳಿಗೆ ಪ್ರಯಾಣ ಬೆಳೆಸುವುದಿದ್ದರೆ ಅವರು ಊರಿನಿಂದ ನಡೆದುಕೊಂಡು ಹೋಗಿ ರಾಮನಗರ ಪಟ್ಟಣದಲ್ಲಿರುವ ಜಿಲ್ಲಾಧಿಕಾರಿಗಳ ಕಛೇರಿಯ ಹತ್ತಿರ ರಾಮನಗರ ಪಟ್ಟಣವನ್ನು ಸೇರುತ್ತಿದ್ದರು.

ಏಕೆಂದರೆ ಆ ಸ್ಥಳವು ಅವರಿಗೆ ಹತ್ತಿರದ ದಾರಿಯಾದ್ದಾಗಿತ್ತು. ಮತ್ತು ಅಲ್ಲಿ ಸರ್ಕಾರಿ ಮತ್ತು ಖಾಸಗಿ ವಾಹನಗಳು ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದವು. ಹಾಗೂ ಅಲ್ಲಿ ಬಸ್‌ಗಳಿಗಾಗಿ ಕಾಯಲು ಸಣ್ಣ ಬಸ್ ನಿಲ್ದಾಣ ಕೂಡ ಇತ್ತು. ಆದ್ದರಿಂದ ನಾವು ಹೆಚ್ಚಾಗಿ ಸದರಿ ಜಿಲ್ಲಾಧಿಕಾರಿಗಳ ಕಛೇರಿ ಹತ್ತಿರ ಇರುವ ಬಸ್‌ ನಿಲ್ದಾಣದ ಸುತ್ತ ಹೆಚ್ಚಿನ ನಿಗಾವಹಿಸಲು ನಿರ್ಧರಿಸಿದೆವು.

ಮತ್ತು ನಮ್ಮ ಜೊತೆಯಲ್ಲಿದ್ದ ಯುವಕನ್ನು ಅದೇ ತಂಡಕ್ಕೆ ನಿಯೋಜಿಸಿದೆವು ಮತ್ತು ಬಸ್ ನಿಲ್ದಾಣಗಳಲ್ಲಿ ಮಪ್ತಿಯಲ್ಲಿ ಹೋಗಿ ಕುಳಿತುಕೊಂಡಲ್ಲಿ ಯಾರಿಗೂ ಅನುಮಾನ ಬರುತ್ತಿರಲಿಲ್ಲ.  ಕೂಡಲೇ ನಾವುಗಳು ತಂಡಗಳನ್ನು ರಚಿಸಿಕೊಂಡು ಮೇಟಾರೆದೊಡ್ಡಿಯ ಕೆಲವು ಯುವಕರನ್ನು ಜೊತೆಯಲ್ಲಿಟ್ಟುಕೊಂಡು ರಾಮನಗರ ಪಟ್ಟಣದ ಕಡೆಗೆ ದಾವಿಸಿದೆವು.

ಅದಾಗಲೇ ಅವರು ಬೆಟ್ಟದಿಂದ ತಪ್ಪಿಸಿಕೊಂಡು ಬಹಳ ಸಮಯವಾಗಿತ್ತು. ಮತ್ತು ನಾವು ರಾಮನಗರ ತಲುಪುವ ವೇಳೆಗೆ ಅವರುಗಳು ಬಸ್‌ಗಳನ್ನು ಹತ್ತಿ ಅಲ್ಲಿಂದಲೂ ಸಹ ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದುದರಿಂದ ನಾವುಗಳು ಮೇಟಾರೆದೊಡ್ಡಿಯಲ್ಲಿ ಸಮಯ ವ್ಯರ್ಥ ಮಾಡದೇ ಅಲ್ಲಿಂದ ಹೊರೆಟೆವು.

shivamogga news live : ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಸಿಕ್ಕಿಬಿದ್ರು

ನಮಗೆ ಈಗ ಅಪರಾಧ ಎಸಗಿದ 08 ಜನರ ಹೆಸರುಗಳು ತಿಳಿದಿದ್ದವು ಮತ್ತು ಅವರನ್ನು ಗುರುತಿಸಲು ನಮ್ಮ ಜೊತೆಯಲ್ಲಿ ಮೇಟಾರೆದೊಡ್ಡಿಯ ಜನರು ಇದ್ದರು. ಆ ಯುವಕನು ಹೇಳಿದ ಪ್ರಕಾರ ನಮಗೆ ಬೇಕಾಗಿದ್ದ ಆರೋಪಿತರ ಹೆಸರುಗಳು 1. -----, 2. ರಾಮು ಬಿನ್ ರತ್ನಗಿರಿಯ್ಯ, 3. ರಾಜ ಬಿನ್ ಮುತ್ತುರಾಜ, 4. ದೊಡ್ಡ ಹೀರಯ್ಯ ಬಿನ್ ಹೀರಯ್ಯ, 5. ಶಿವಣ್ಣ ಬಿನ್ ಮೊಟಪ್ಪ, 6. ಮದ್ದೂರಾ ಬಿನ್ ಮರಿಯಪ್ಪ, 7. ಎಳೆಯಯ್ಯ ಬಿನ್ ಮರಿಯಪ್ಪ ಹಾಗೂ 8, ಈರಯ್ಯ ಬಿನ್ ಮುನಿಯಪ್ಪ ಎಲ್ಲರೂ 19 ರಿಂದ 25 ವಯಸ್ಸಿನ ಯುವಕರಾಗಿದ್ದರು ಮತ್ತು ಎಲ್ಲಾರೂ ಪ್ಯಾಂಟ್ ಶರ್ಟ್ ಧರಿಸಿದ್ದರು.

ಮತ್ತು ಅವರೆಲ್ಲರ ಹತ್ತಿರ ಅವಶ್ಯಕವಿದ್ದ ಬಟ್ಟೆಗಳನ್ನು ಇಟ್ಟು ಕೊಳ್ಳಲು ಬ್ಯಾಗ್ ಇರುವ ವಿಚಾರ ನಮಗೆ ಯುವಕನಿಂದ ತಿಳಿಯಿತು. ನಮಗೆ ಸಿಕ್ಕ ಮಾಹಿತಿಯನ್ನು ಸಿಬ್ಬಂದಿಗಳಿಗೆ ವಿವರಿಸಿ ಬಸ್ ಸ್ಟಾಪ್‌ಗಳಲ್ಲಿ ಸತತವಾಗಿ ನಿಗವಹಿಸುವಂತೆ ಹಾಗೂ ಪಾಳಿಯ ಮೇಲೆ ಊಟಕ್ಕೆ ಮತ್ತು ಇತರೆ ಕೆಲಸಗಳಿಗೆ ತೆರಳುವ ವ್ಯವಸ್ಥೆ ಮಾಡಿ ಕನಿಷ್ಟ ಪಕ್ಷ ಇಬ್ಬರು ಬಸ್ ನಿಲ್ದಾಣಗಳಲ್ಲಿ ಸತತವಾಗಿ ನಿಗಾವಹಿಸುವಂತೆ ಸೂಚನೆ ನೀಡಿ ಪ್ರತಿ ತಂಡಕ್ಕೂ ಒಬ್ಬರೂ ಇನ್ಸ್‌ಪೆಕ್ಟರ್‌ಗಳನ್ನು ನೇಮಕ ಮಾಡಿ ರಾಮನಗರ ಪಟ್ಟಣದಲ್ಲಿರುವ ಎಲ್ಲಾ ಬಸ್‌ಸ್ಟಾಪ್‌ಗಳಿಗೆ ಕಳುಹಿಸಿಕೊಟ್ಟೆನು.

ನಾನು ಜಿಲ್ಲಾಧಿಕಾರಿಗಳ ಕಛೇರಿ ಹತ್ತಿರವಿರುವ ಬಸ್‌ ಸ್ಟಾಪ್‌ನ ಸುತ್ತಮುತ್ತ 04 ಜನ ಸಿಬ್ಬಂದಿಯವರನ್ನು ನೇಮಕ ಮಾಡಿ ಬಸ್‌ ಸ್ಟಾಪ್‌ನಿಂದ ದೂರದಲ್ಲಿ ಮೇಟಾರದೊಡ್ಡಿಯ ಆ ಯುವಕನೊಂದಿಗೆ ದೂರದಲ್ಲಿ ಕುಳಿತು ನಿಗಾವಹಿಸತೊಡಗಿದೆವು. ನಮ್ಮ ಜೊತೆಯಲ್ಲಿ ಮಹಿಳಾ ಇನ್ಸ್ಪೆಕ್ಟರ್ ಶ್ರೀಮತಿ ಗೀತಾ ಕುಲಕರ್ಣಿರವರು ಇದ್ದರು.  ಅವರು ಮಹಿಳೆಯಾಗಿದ್ದರಿಂದ ನಮ್ಮಲ್ಲರನ್ನು ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರೆಂದು ಸಾರ್ವಜನಿಕರು ತಿಳಿಯಲಿ ಎಂಬುವುದು ನಮ್ಮ ಯೋಜನೆಯಾಗಿತ್ತು.

ಅದೇ ರೀತಿ ಎಲ್ಲಾ ತಂಡಗಳೊಂದಿಗೆ ಒಬ್ಬೊಬ್ಬರು ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ನಾವೆಲ್ಲರೂ ವಿರಾಮ ತಗೆದುಕೊಳ್ಳದೆ ಆರೋಪಿತರನ್ನು ಹಿಡಿಯಲು ನಿರ್ಧರಿಸಿದೆವು. ಮತ್ತು ಎಲ್ಲಾ ಅಧಿಕಾರಿಗಳು ನನ್ನೊಂದಿಗೆ ಸಂಪರ್ಕದಲ್ಲಿರುವಂತೆ ತಿಳಿಸಿ ಯಾವುದೇ ತಂಡಕ್ಕೆ ಆರೋಪಿತರ ಬಗ್ಗೆ ತಿಳಿದುಬಂದಲ್ಲಿ ಅದನ್ನು ಕೂಡಲೇ ನನಗೆ ತಿಳಿಸಬೇಕೆಂದು ತಿಳಿಸಿದೆನು ಮತ್ತು ಇನ್ಸ್‌ಪೆಕ್ಟರ್‌ಗಳ ಜೊತೆಯಲ್ಲಿದ್ದ ಸಿಬ್ಬಂದಿರವರು ಸತತವಾಗಿ ಆಯಾ ಇನ್ಸ್ಪೆಕ್ಟರ್‌ಗಳ ಸಂಪರ್ಕದಲ್ಲಿರುವಂತೆ ತಿಳಿಸಿದೆನು. ನಾವು ನಮ್ಮ ನಿಗಾವಹಿಸುವ ಕೆಲಸವನ್ನು ಪ್ರಾರಂಭಿಸಿದಾಗ ಬೆಳಗಿನ 6.00 ಗಂಟೆಯಾಗಿತ್ತು. ನಮ್ಮ ನಿತ್ಯ ಕರ್ಮಗಳನ್ನು ಒಬ್ಬೊಬ್ಬರೆ ಪಾಳಿಯಲ್ಲಿ ಹೋಗಿ ಮುಖ್ಯ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯದಲ್ಲಿ ತೀರಿಸಿಕೊಂಡಿದ್ದು, ಊಟ ತಿಂಡಿಯನ್ನು ಕೂಡ ಪಾಳಿಯಲ್ಲಿಯೇ ಮಾಡಿಕೊಂಡೆವು. 

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಕ್ಲೈಮ್ಯಾಕ್ಸ್​ ಬಂತು

ನಾವು ಹೀಗೆ ವಿವಿಧ ಬಸ್‌ ನಿಲ್ದಾಣಗಳಲ್ಲಿ ಕಾಯುತ್ತ ನಿಂತಿದ್ದಾಗ ಅದೇ ದಿನ ಸಂಜೆ 5.00 ಗಂಟೆಯ ಸುಮಾರಿಗೆ 04 ಜನ ಯುವಕರು ಕೈಗಳಲ್ಲಿ ಬ್ಯಾಗ್‌ಗಳನ್ನು ಹಿಡಿದುಕೊಂಡು ಕಾಡಿನ ಕಡೆಯಿಂದ ಸ್ವಲ್ಪ ದೂರದಲ್ಲಿ ಬರುತ್ತಿರುವುದು ಕಂಡು ಬಂತು, ಕೂಡಲೇ ಪಕ್ಕದಲ್ಲಿದ್ದ ಆ ಯುವಕನು “ಅವರೇ” ಎಂದು ಸನ್ನೆ ಮಾಡಿ ಕೂಡಲೇ ಡಿಸಿ ಕಛೇರಿಯ ಕಾಂಪೌಂಡ್‌ ಹಿಂಬದಿಯಲ್ಲಿ ಅಡಿಗಿಕೊಂಡನು. ಆ 04 ಜನರು ಸುತ್ತಮುತ್ತ ಯಾರಾದರೂ ಅನುಮಾನಸ್ಪದವಾಗಿ ಇರುವರೇ ಎಂದು ನೋಡಿಕೊಂಡು ಯಾರು ಆ ರೀತಿ ಇಲ್ಲವೆಂದು ಖಾತ್ರಿಯಾದ ನಂತರ ಒಬ್ಬೊಬರೆ ಬೇರೆ ಬೇರೆಯಾಗಿ ನಿಲ್ದಾಣದ ಒಳಗೆ ಸಿಮೆಂಟ್ ಬೆಂಚಿನ ಮೇಲೆ ಬಂದು ಕುಳಿತುಕೊಂಡರು.

ನಾನು ಕೂಡಲೇ ದೂರದಲ್ಲಿ ವಾಚ್ ಮಾಡುತ್ತಿದ್ದ ಸಿಬ್ಬಂದಿಗೆ ನಿಲ್ದಾಣದ ಹತ್ತಿರ ಬರುವಂತೆ ಕೈ ಸನ್ನೆ ಮಾಡಿದೆ ಮತ್ತು ಈ ಹಿಂದೆಯೇ ತಿರ್ಮಾನಿಸಿದಂತೆ ನಾವೆಲ್ಲರೂ ನಿಧಾನವಾಗಿ ಒಬ್ಬೊಬರೆ ಪ್ರಯಾಣಿಕರಂತೆ ಬಸ್ ನಿಲ್ದಾಣವನ್ನು ಸುತ್ತುವರೆದುವು. ಹಾಗೂ ಮೊದಲೇ ನಿರ್ಧರಿಸಿದಂತೆ ಒಬ್ಬೊಬ್ಬ ಸಿಬ್ಬಂದಿಯವರು ಒಬ್ಬೊಬ್ಬ ಆರೋಪಿತರನ್ನು ಹಿಡಿದುಕೊಂಡರು. ಯಾರಾದರೂ ತಪ್ಪಿಸಿಕೊಂಡಲ್ಲಿ ಅವರನ್ನು ಬೆನ್ನು ಹತ್ತಲು ನನ್ನ ಜೀಪಿನ ಡ್ರೈವರ್‌ಗೆ ಒಂದು ಮೋಟಾರ್ ಸೈಕಲ್‌ನ ವ್ಯವಸ್ಥೆಯನ್ನು ಮಾಡಿಕೊಂಡು ರೆಡಿಯಾಗಿ ಇರಲು ತಿಳಿಸಿದ್ದೆ. ಆದರೆ ಅವರು ಯಾರು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.

ತಕ್ಷಣವೇ ನಾನು ಅವರುಗಳ ಹೆಸರನ್ನು ಕೆಳಲಾಗಿ ಅವರುಗಳು ತಮ್ಮ ಹೆಸರುಗಳನ್ನು  ..... @ ಎಸಿ, ದೊಡ್ಡಹೀರಾ, ಶಿವಣ್ಣ ಹಾಗೂ ಮದ್ದೂರಾ ಎಂದು ತಿಳಿಸಿದರು. ಕೂಡಲೇ ನಾನು ವಿಷಯವನ್ನು ನಿಗಾ ವಹಿಸಿದ್ದ ಇತರೆ ಇನ್ಸ್‌ಪೆಕ್ಟರ್‌ಗಳಿಗೆ ಮೊಬೈಲ್ ಮುಖಾಂತರ ತಿಳಿಸಿದೆ ಮತ್ತು ನಮ್ಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮನಗರಕ್ಕೆ ಸೇರಿದ ಸಿಬ್ಬಂದಿಯವರ ಸಹಾಯದಿಂದ ನಾನು ಇಬ್ಬರು ಪಂಚರನ್ನು ಬರಮಾಡಿಕೊಂಡೆ. ಅವರ ಸಮಕ್ಷಮದಲ್ಲಿ ಆರೋಪಿತರನ್ನು ಮತ್ತು ಅವರ ಹತ್ತಿರವಿದ್ದ ಬ್ಯಾಗುಗಳನ್ನು ಸರ್ಚ್ ಮಾಡಿದ್ದು, ಒಟ್ಟು 06 ಮೊಬೈಲ್‌ಗಳನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡೆನು.

ಇದನ್ನು ಸಹ ಓದಿ : ಸಾರ್ವಜನಿಕರಲ್ಲಿ ವಿನಂತಿ/ ಇವತ್ತು ಶಿವಮೊಗ್ಗದ ಈ ಬಹುತೇಕ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ/ ಎಲ್ಲೆಲ್ಲಿ ಓದಿ

ಆರೋಪಿಯ ಬಳಿಯಲ್ಲಿಯೇ ಇತ್ತು ಮೊಬೈಲ್

ಆರೋಪಿತನಾದ ಮಲ್ಲೇಶ @ ಎಸಿ ಈತನ ಪ್ಯಾಂಟ್ ಜೇಬಿನಿಂದ ಒಂದು ನೋಕಿಯಾ ಕಂಪನಿಯ ಮೊಬೈಲ್‌ನ್ನು ವಶ ಪಡಿಸಿಕೊಂಡಿದ್ದು, ಪ್ರಕರಣದ ದೂರುದಾರ ಯುವತಿಯಿಂದ ಆರೋಪಿತರು ತಗೆದುಕೊಂಡು ಹೋಗಿದ್ದ ಮೊಬೈಲ್ ಕೂಡ ನೋಕಿಯಾ ಕಂಪನಿಯಾದ್ದರಿಂದ ಮತ್ತು ಅದು ದೂರುದಾರರ ಮೊಬೈಲ್‌ಗೆ ಹೋಲಿಕೆಯಾಗುತ್ತಿದ್ದರಿಂದ ಕೂಡಲೇ ಅದರ ಐ.ಎಂ.ಇ.ಐ ನಂಬರ್‌ನ್ನು ಇನ್ಸ್‌ಪೆಕ್ಟ‌ ಮಾಲತೇಶ್‌ರವರಿಗೆ ತಿಳಿಸಿ ಪರಿಶೀಲಿಸಲು ತಿಳಿಸಿದೆ. ಅವರು ತಮ್ಮಲ್ಲಿದ್ದ ಆ ಯುವತಿಯ ಮೊಬೈಲ್ ನಂಬರ್‌ ಸಿಡಿಆರ್‌ನ್ನು ಪರಿಶೀಲಿಸಿ ಅದು ಆ ಯುವತಿಯ ಮೊಬೈಲ್ ಎಂಬುವುದನ್ನು ಖಚಿತ ಪಡಿಸಿದರು. ನಮಗೆ ಈಗ ಸಿಕ್ಕ ಆರೋಪಿತರು ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಅನುಮಾನ ಉಳಿಯಲಿಲ್ಲ ಮತ್ತು ಅವರನ್ನು ವಿಚಾರಣೆಗೆ ಒಳಪಡಿಸಿ ಅವರಿಂದ ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆಯುವುದು ಮಾತ್ರ ಬಾಕಿ ಉಳಿಯಿತು. ಮುಂದೆ ನ್ಯಾಯಾಲಯದ ವಿಚಾರಣೆಯ ಕಾಲಕ್ಕೆ ಸದರಿ ಮೊಬೈಲ್ ಆರೋಪಿತರಿಗೆ ಶಿಕ್ಷೆಯಾಗಲು ಬಹಳ ಬಲವಾದ ಸಾಕ್ಷ್ಯವಾಯಿತು.

ಸ್ವಲ್ಪ ಹೊತ್ತಿಗೆ ಡಿಸಿಪಿರವರು ನನ್ನ ಮೊಬೈಲ್‌ಗೆ ಕರೆ ಮಾಡಿ ಆರೋಪಿತರನ್ನು ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ಹೊಸಕೆರೆಹಳ್ಳಿ ಹತ್ತಿರದ ನೈಸ್‌ ಸಂಸ್ಥೆಗೆ ಸೇರಿದ ನೈಸ್ ರೋಡಿನ ಟೋಲ್ ಪ್ಲಾಜಾದ ಹತ್ತಿರವಿರುವ ಗೆಸ್ಟ್‌ಹೌಸ್‌ಗೆ ಕರೆದುಕೊಂಡು ಬರುವಂತೆ ತಿಳಿಸಿದರು ಮತ್ತು ತಂಡದಲ್ಲಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಸೂಚನೆ ನೀಡಿ ಯಾವುದೇ ಕಾರಣಕ್ಕೂ ಮಾಹಿತಿಯನ್ನು ಸೋರಿಕೆ ಮಾಡಬಾರದೆಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದರು. ಪ್ರಕರಣದ ತನಿಖೆಯಲ್ಲಿ ಖೇಣಿಯವರಿಗೆ ಸೇರಿದ ನೈಸ್ ಕಂಪನಿಯ ಗೆಸ್ಟ್‌ಹೌಸ್ ತನ್ನದೇ ಆದ ಪಾತ್ರವನ್ನು ವಹಿಸಿತ್ತು.

15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ಇನ್ನೂ ವಿಚಾರಣೆ ಆರಂಭ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಘನ ನ್ಯಾಯಾಲಯದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ತಲೆ ಮರಿಸಿಕೊಂಡಿದ್ದ ರಾಜ ಸೇರಿದಂತೆ 08 ಜನರ ವಿರುದ್ಧ ವಿಸ್ತ್ರತವಾದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸದ್ದರಿಂದ ಒಂದು ಹಂತಕ್ಕೆ ಪೊಲೀಸ್ ಇಲಾಖೆಯ ಮೇಲೆ ಇದ್ದ ಜವಾಬ್ದಾರಿ ಮುಗಿದಿತ್ತು.

ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ನಡೆದಾಗ ಅದಕ್ಕೆ ಸಂಬಂಧಿಸಿದ ಆರೋಪಿತರನ್ನು ಪತ್ತೆ ಮಾಡುವುದು ಮತ್ತು ದಸ್ತಗಿರಿ ಮಾಡುವುದು ಬಹಳ ಪ್ರಮುಖವಾದ ಘಟ್ಟವಾಗಿರುತ್ತದೆ. ಸಾಮಾನ್ಯವಾಗಿ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಮಾಧ್ಯಮದವರು ಮತ್ತು ಸರ್ಕಾರದಲ್ಲಿ ಇರುವ ರಾಜಕಾರಣಿಗಳು ದಸ್ತಗಿರಿಯಾದ ನಂತರ ನಡೆಯುವ ತನಿಖೆ ಪ್ರಕ್ರಿಯೆಯಲ್ಲಾಗಲಿ ನ್ಯಾಯಾಲಯದಲ್ಲಿ ಆರೋಪಿತರ ವಿರುದ್ಧ ಸಲ್ಲಿಸಲಾಗುವ ದೋಷಾರೋಪಣಾ ಪಟ್ಟಿಯ ಬಗ್ಗೆಯಾಗಲಿ ಹೆಚ್ಚಿನ ಗಮನ ನೀಡುವುದಿಲ್ಲ.

ರಾಜ್ಯದ ನಂಬರ್​ 01 ಇನ್ವೆಸ್ಟಿಗೇಷನ್​ ಅಧಿಕಾರಿ ಬಾಲರಾಜ್​/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-3

ಅದಕ್ಕೆ ಒಂದು ಪ್ರಕರಣ ವರದಿಯಾದ ಕೆಲವೇ ದಿನಗಳಲ್ಲಿ ಮತ್ತೊಂದು ಪ್ರಕರಣ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದರಿಂದ ಆ ಪ್ರಕರಣದ ಕಡೆ ಹೋಗುವುದರಿಂದ ಈ ರೀತಿಯಾಗುತ್ತದೆ. ಪ್ರಕರಣದ ತನಿಖಾಧಿಕಾರಿಯೇ ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ಖುದ್ದಾಗಿ ನಿರ್ವಹಿಸಬೇಕಾಗುತ್ತದೆ. ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಇರುವ ಕೆಲಸದ ಒತ್ತಡದಲ್ಲಿ ಒಂದೇ ಪ್ರಕರಣದಲ್ಲಿ ಗಮನ ಹರಿಸುವುದು ಕೂಡ ಕಷ್ಟ ಸಾಧ್ಯವಾಗಿದ್ದು,

ಸಾಮಾನ್ಯವಾಗಿ ಠಾಣೆಯ ಬರಹಗಾರರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಲ್ಲಿ 60 ದಿನಗಳ ಒಳಗಾಗಿ ಅಥವಾ 90 ದಿನಗಳ ಒಳಾಗಾಗಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿ ಠಾಣೆಯ ಇತರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಕೆಲವೇ ಪೊಲೀಸ್ ಅಧಿಕಾರಿಗಳು ಚಾರ್ಜ್‌ ಶೀಟ್ ನಂತರ ನಡೆಯುವ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಕರಣವು ಶಿಕ್ಷೆಯಲ್ಲಿ ಕೊನೆಗೊಳ್ಳುವಂತೆ ನೋಡಿಕೊಳ್ಳುತ್ತಾರೆ.

ಪ್ರಸ್ತುತ ಪ್ರಕರಣ ಒಂದು ವಿಶೇಷ ಪ್ರಕರಣವಾದ್ದರಿಂದ ನ್ಯಾಯಾಯಲದ ಕಲಾಪಗಳನ್ನು ಕೂಡ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕೆಂದು ನಾನು ತಿರ್ಮಾನಿಸಿದೆ.

DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಆರೋಪಿತರು ನ್ಯಾಯಾಲಯದಲ್ಲಿ ಜಾಮೀನು ಪಡೆಯುವ ಸಾಧ್ಯತೆ ಇತ್ತು ಅದನ್ನು ತಪ್ಪಿಸಲು ಮತ್ತು ಅವರನ್ನು ನ್ಯಾಯಾಲಯದ ವಿಚಾರಣೆ ಮುಗಿಯುವರೆಗೂ ನ್ಯಾಯಾಂಗ ಬಂಧನದಲ್ಲಿ ಇರುವಂತೆ ಮಾಡಲು ಅವರ ಮೇಲೆ ಹೆಚ್ಚಿನ ಪ್ರಕರಣಗಳನ್ನು ದಾಖಲು ಮಾಡಲು ತಿರ್ಮಾನಿಸಿದೆ.

ಆರೋಪಿತರಿಂದ ಅಮಾನತ್ತು ಪಡಿಸಿಕೊಂಡಿದ್ದ ಮೊಬೈಲ್‌ಗಳು ಯಾರಿಗೆ ಸೇರಿದ್ದವು ಎಂಬುದರ ಬಗ್ಗೆ ತಿಳಿಯಲು ಮೊಬೈಲ್‌ನಲ್ಲಿದ್ದ ಸಿಮ್‌ಗಳ ಸಿಡಿಆರ್ ಸಹಾಯದಿಂದ ಐ.ಎಂ.ಇ ನಂಬರ್‌ನ್ನು ಪಡೆದು ಅವುಗಳ ಸಹಾಯದಿಂದ ಇಬ್ಬರು ಯುವತಿಯರನ್ನು ಪತ್ತೆ ಮಾಡಿದೆ. ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ಜ್ಞಾನಭಾರತಿಯ ಕಾಡಿನಲ್ಲಿ ತನ್ನ ಬಾಯ್‌ ಫ್ರೆಂಡ್ ಜೊತೆಯಲ್ಲಿರುವಾಗ ಅಪರಿಚಿತರು ತಮಗೆ ಹೆದರಿಸಿ ಮೊಬೈಲ್‌ಗಳನ್ನು ಕಿತ್ತುಕೊಂಡು ಹೋಗಿದ್ದಾಗಿ ತಿಳಿಸಿ ತಮ್ಮ ಮೊಬೈಲ್‌ಗಳನ್ನು ಗುರುತಿಸಿದರು.

15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ

ಅವರಿಗೆ ಆರೋಪಿತರ ಬಗ್ಗೆ ತಿಳಿಸಿ ಅವರಿಂದ ದೂರನ್ನು ಪಡೆದು ಮತ್ತೆರಡು ಕ್ರಿಮಿನಲ್ ಮೊಕದ್ದಮೆಗಳನ್ನು ಅದೇ ತಂಡದ ಮೇಲೆ ದಾಖಲಿಸಿ ತನಿಖೆಯನ್ನು ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ಈಗ ಎಲ್ಲಾ ಆರೋಪಿತರ ಮೇಲೆ ನ್ಯಾಯಾಯಲದಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣಗಳು ಇದ್ದವು. ಮತ್ತೆ ಡಿ.ಸಿ.ಪಿ ಶ್ರೀ. ಡಿ.ಸಿ ರಾಜಪ್ಪರವರನ್ನು ಭೇಟಿಯಾಗಿ ಗ್ಯಾಂಗ್‌ರೇಪ್ ಕೇಸಿನ ಆರೋಪಿತರ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಅನುಮತಿ ನೀಡಲು ಕೇಳಿಕೊಂಡೆ.

ಅವರು ಸಂತೋಷದಿಂದ ಒಪ್ಪಿ ಕಮೀಷನರ್‌ರವರನ್ನ ಭೇಟಿಯಾಗಿ ಅನುಮತಿ ಪಡೆದುಕೊಂಡರು. ನಾನು ಗೂಂಡಾ ಕಾಯ್ದೆಯನ್ನು ಆರೋಪಿತರ ಮೇಲೆ ಜಾರಿ ಮಾಡಲು ಬೇಕಾದ ದಾಖಲೆಗಳನ್ನು ಸಂಗ್ರಹಿಸಿ ವರದಿಯನ್ನು ತಯಾರಿಸಿ ಕಮೀಷನರ್‌ರವರಿಗೆ ಸಲ್ಲಿಸಿ ಗೂಂಡಾ ಕಾಯ್ದೆಯ ವಾರೆಂಟ್ ಮಾಡಿಸಿದೆ ಮತ್ತು ಅದನ್ನು ಪರಪ್ಪನ ಅಗ್ರಹಾರ ಜೈಲಿಗೆ ತಲುಪಿಸಿದೆ. ಈಗ ಆರೋಪಿತರು ಒಂದು ವರ್ಷದವರೆಗೆ ನ್ಯಾಯಾಲಯದ ಜೈಲಿನಲ್ಲಿ ಉಳಿಯುವುದು ಖಾತ್ರಿಯಾಗಿತ್ತು. ಅಷ್ಟರೊಳಗೆ ನ್ಯಾಯಾಲಯದ ವಿಚಾರಣೆಯನ್ನು ಮುಗಿಸುವುದು ನನ್ನ ಉದ್ದೇಶವಾಗಿತ್ತು.

ಗೂಂಡಾ ಕಾಯ್ದೆಯಡಿ ಆರೋಪಿತರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿದ ನಂತರ ಆರೋಪಿತರಿಗೆ ತಮ್ಮ ಅವಹಾಲುನ್ನು ನಿವೇದಿಸಿಕೊಳ್ಳಲು ಹೈಕೋರ್ಟ್‌ನ ಮೂರು ಜನ ಕರ್ತವ್ಯ ನಿರತ ನ್ಯಾಯಮೂರ್ತಿಗಳ ಮುಂದೆ ಹಾಜರು ಪಡಿಸಲಾಗುತ್ತದೆ. ಅದೇ ರೀತಿ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿದ ಕೆಲವು ದಿನಗಳ ನಂತರ ಉಚ್ಚನ್ಯಾಯಾಲಯದ ಕಮಿಟಿಯ ಮುಂದೆ 06 ಜನ ಆರೋಪಿಗಳನ್ನು ಹಾಜರುಪಡಿಸಲಾಯಿತು.

ಕೋರ್ಟ್​ನಲ್ಲಿ ಶಾಕ್​ ಕೊಟ್ಟಿದ್ದ ಆರೋಪಿಗಳು

ಆ ದಿನ ತನಿಖಾಧಿಕಾರಿಯಾಗಿದ್ದ ನಾನು ಮತ್ತು ಡಿಸಿಪಿ ರವರಾಗಿದ್ದ ಶ್ರೀ ಡಿ.ಸಿ ರಾಜಪ್ಪರವರು ಉಚ್ಚ ನ್ಯಾಯಾಲಯದಲ್ಲಿ ಹಾಜರಿದ್ದೆವು. ಅಂದಿನ ನ್ಯಾಯಮೂರ್ತಿಗಳಾಗಿದ್ದ ಹಾಗೂ ಕಮಿಟಿಯಲ್ಲಿದ್ದ ಹಾಗೂ ಸುಪ್ರಿಂ ಕೋರ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೆನ್ನೀಸ್ ನಜೀರ್ ಸಾಬ್‌ರವರು ಹಾಜರು ಪಡಿಸಿದ ಆರೋಪಿತರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಹೇಳಿದಾಗ ಪ್ರಕರಣದ ಮುಖ್ಯ ಆರೋಪಿಯಾದ ರಾಮ ಈತನು ತನಗೆ ಪೊಲೀಸರು ಮನೆಯಿಂದ ಕರೆದುಕೊಂಡು ಬಂದು ಕಣ್ಣಿಗೆ ಬಟ್ಟೆ ಕಟ್ಟಿ ಪಿಸ್ತೂಲ್‌ ನಿಂದ ತನ್ನ ಎರಡು ಕಾಲುಗಳಿಗೆ ಗುಂಡು ಹಾರಿಸಿ ಗಾಯಗೊಳಿಸಿದರು ಎಂದು ಮೂರು ಜನ ಉಚ್ಚನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹೇಳಿದ ಸುಮಾರು ಐದು ನಿಮಿಷಗಳವರೆಗೆ ಕೊಠಡಿಯಲ್ಲಿ ಯಾರು ಮಾತನಾಡಲಿಲ್ಲ.

shivamogga news live : ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ನನಗೆ ಆ ಕ್ಷಣದಲ್ಲಿ ನ್ಯಾಯಾಧೀಶರು ಈ ಬಗ್ಗೆ ಏನಾದರೂ ಕ್ರಮ ಜರುಗಿಸುವ ತಿರ್ಮಾನ ಕೊಳ್ಳಬಹುದೇ ಎಂಬ ಆಲೋಚನೆ ಬಂದುಹೋಯಿತು. ಐದು ನಿಮಿಷಗಳ ನಂತರ ಜೆನ್ಸಸ್ ನಜೀರ್ ಸಾಬ್ ರವರು ವಿಷಯವನ್ನು ಇದ್ದಕಿದ್ದಂತೆ ಬದಲಿಸಿ ಬೇರೆ ವಿಷಯದ ಬಗ್ಗೆ ಮಾತನಾಡಿದರು ಮತ್ತು ಆರೋಪಿತ ರಾಮ ನೀಡಿದ ಹೇಳಿಕೆಯನ್ನು ದಾಖಲಿಸಲಿಲ್ಲ ಆಗ ನಮಗೆ ಸ್ವಲ್ಪ ಸಮಾಧಾನವಾಯಿತು. ಈ ಘಟನೆಯನ್ನು ನಾನು ಮತ್ತು ಡಿಸಿಪಿ ಶ್ರೀ ಡಿ.ಸಿ ರಾಜಪ್ಪರವರು ಭೇಟಿಯಾದ ಸಮಯದಲ್ಲಿ ಈಗಲು ನೆನಪು ಮಾಡಿಕೊಳ್ಳುತ್ತಿರುತ್ತೇವೆ. 

ಡಿಸಿಪಿ ಶ್ರೀ ಡಿ.ಸಿ ರಾಜಪ್ಪರವರು ಆರೋಪಿತರ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಮತ್ತು ಈ ಕುರಿತಂತೆ ಅಂದಿನ ಗೃಹಮಂತ್ರಿಗಳಾಗಿದ್ದ ಶ್ರೀ ಅಶೋಕರವರಿಗೆ ವಿವರಿಸಿದ್ದರು. ಅನೇಕ ಬಾರಿ ಶ್ರೀ ಅಶೋಕರವರು ಮತ್ತು ಅಂದಿನ ಮುಖ್ಯಮಂತ್ರಿಯಾಗಿದ್ದ ಶ್ರೀ. ಬಿ.ಎಸ್ ಯಡಿಯೂರಪ್ಪ ನವರು ಇಡೀ ಭಾರತದಲ್ಲಿ ಪ್ರಥಮಬಾರಿಗೆ ಗ್ಯಾಂಗ್ ರೇಪ್‌ ಆರೋಪಿತರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ಈಗಲೂ ಕೂಡ ಗ್ಯಾಂಗ್ ರೇಪ್ ಪ್ರಕರಣಗಳು ವರದಿಯಾದಾಗ ಶ್ರೀ ಆಶೋಕರವರು ಈ ವಿಷಯವನ್ನು ಪ್ರಸ್ತಾಪಿಸಿರುತ್ತಾರೆ.

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಆ ಸಮಯಕ್ಕೆ ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ಶ್ರೀ ಸಿದ್ದರಾಮಪ್ಪ ವರ್ಗಾವಣೆಯಾಗಿ ಶ್ರೀ ಡಾ. ಡಿ.ಸಿ ರಾಜಪ್ಪ ಐ.ಪಿ.ಎಸ್ ರವರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಾನು ಖುದ್ದಾಗಿ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಮತ್ತು ಪ್ರಕರಣವನ್ನು ನ್ಯಾಯಾಲಯದಲ್ಲಿ ನಡೆಸಲು ಪ್ರತ್ಯೇಕವಾದ ಪಬ್ಲಿಕ್ ಪ್ರಾಸಿಕ್ಯೂಟರ್‌ನ್ನು ನೇಮಕ ಮಾಡುವ ಅವಶ್ಯಕತೆ ಇದ್ದು,

ಈ ಕುರಿತಂತೆ ಗೃಹ ಇಲಾಖೆಗೆ ಪತ್ರ ಬರೆದು ವಿಶೇಷ ಅಭಿಯೋಜಕರನ್ನು ನೇಮಕ ಮಾಡಲು ಕ್ರಮಕೈಗೊಳ್ಳಲು ವಿನಂತಿಸಿಕೊಂಡೆ. ಡಿ.ಸಿ.ಪಿ.ರವರು ಪ್ರಕರಣದ ಗಂಭೀರತೆಯನ್ನು ಗ್ರಹಿಸಿದರು ಮತ್ತು ಈ ಕುರಿತಂತೆ ಅಂದಿನ ಗೃಹಮಂತ್ರಿಯಾಗಿದ್ದ ಅಶೋಕರವರೊಂದಿಗೆ ಖುದ್ದಾಗಿ ಮಾತನಾಡಿ ಬೆಂಗಳೂರು ನಗರ ಸೆಸ್‌ನ್ಸ್ ನ್ಯಾಯಾಲಯದಲ್ಲಿ ಅಭಿಯೋಜಕರಾಗಿ ಕೆಲಸಮಾಡುತ್ತಿದ್ದ ಎಸ್‌.ಎ ಭಟ್ಟರವರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡಿಸಿದರು. ಅಲ್ಲದೇ ಪ್ರಕರಣದ ನ್ಯಾಯಾಲಯದ

ವಿಚಾರಣೆಯನ್ನು ಅದಷ್ಟು ಬೇಗನೆ ಪ್ರಾರಂಭಿಸಲು ಡಿಸಿಪಿರವರು ಮತ್ತು ನಾವು ತಿರ್ಮಾನಿಸಿದೆವು. ಈ ಕುರಿತಂತೆ ನಾನು ಎಸ್.ವಿ ಭಟ್ ರವರನ್ನು ಭೇಟಿಯಾಗಿ ಚರ್ಚಿಸಿದೆ ಅವರ ಸಲಹೆಯಂತೆ ಘಟನೆಯ ಸಂತ್ರಸ್ಥೆ ಯುವತಿಯಿಂದ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲು ನಿರ್ಧರಿಸಿದೆವು.

ಅಲ್ಲದೇ ಮತ್ತೊಮ್ಮೆ ನ್ಯಾಷನಲ್ ಲಾ ಸ್ಕೂಲ್ ಗೆ ಭೇಟಿನೀಡಿ ಸದರಿ ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ. ಬ್ಯಾಥ ಜಗದೀಶ್ ಎಂಬ ನುರಿತ ವಕೀಲರನ್ನು ಸಂಪರ್ಕಿಸಿ ಸಂತ್ರಸ್ಥೆಯ ಪರವಾಗಿ ನ್ಯಾಯಾಲಯಾದಲ್ಲಿ ಹಾಜರಾಗಿ ಶೀಘ್ರ ವಿಚಾರಣೆಗೆ ಅರ್ಜಿಯನ್ನು ಸಲ್ಲಿಸುವಂತೆ ಮಾಡಿದೆ. ಶ್ರೀ.ಬ್ಯಾಥ ಜಗದೀಶ್‌ರವರು ಅರ್ಜಿಸಲ್ಲಿಸುವ ಜೊತೆಗೆ ಸಂತ್ರಸ್ಥೆಯು ನ್ಯಾಯಾಲಯದಲ್ಲಿ ತುಂಬಾ ಉತ್ತಮವಾಗಿ ಸಾಕ್ಷ್ಯ ನುಡಿಯುಂತೆ ಮಾಡಲು ಯಶಸ್ವಿಯಾದರು.

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಈ ಮಧ್ಯೆ ಆರೋಪಿತರು ನ್ಯಾಯಾಲಯದಲ್ಲಿ ಹಾಜರಾದಾಗ ಎ-1 ಆರೋಪಿತನಾದ ........... ಈತನು ತಾನು ಅಪ್ತಾಪ್ತ ವಯಸ್ಕನೆಂದು ಶಾಲಾ ದಾಖಲಾತಿಗಳನ್ನು ಹಾಜರು ಪಡಿಸಿದ್ದರಿಂದ ಜ್ಯೂವೆನಲ್ ನ್ಯಾಯಾಲಯಾದಲ್ಲಿ ಪ್ರತ್ಯೇಕವಾಗಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಯಿತು. ಮುಂದಿನ ನ್ಯಾಯಾಲಯದ ಕಲಾಪದಲ್ಲಿ ಶ್ರೀ, ಬ್ಯಾಥ ಜಗದೀಶ್ ರವರು ಹಾಜರಾಗಿ ಪ್ರಕರಣದ ಸಂತ್ರಸ್ಥೆಯು ವಿದೇಶಿಳುಯಾಗಿದ್ದರಿಂದ ಮತ್ತು ಆಕೆಯೂ ಯಾವುದೇ ಸಮಯದಲ್ಲಿ ತನ್ನ ಸ್ವಂತ ದೇಶಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ನ್ಯಾಯಾಲಯಾದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಮನವಿ ಸಲ್ಲಿಸಿದರು

ಮತ್ತು ಅದೇ ಸಮಯದಲ್ಲಿ ಪ್ರಕರಣದಲ್ಲಿ ವಿಶೇಷ ಅಭಿಯೋಜಕರಾಗಿ ನೇಮಕಗೊಂಡಿದ್ದ ಎಸ್.ಎ ಭಟ್‌ರವರು ತನಿಖಾಧಿಕಾರಿಯಾದ ನಾನು ಕೂಡ ನ್ಯಾಯಾಲಯಾದಲ್ಲಿ ಹಾಜರಿದ್ದು, ವಿಚಾರಣೆಯೂ ತ್ವರಿತವಾಗಿ ನಡೆಸಲು ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದ್ದರಿಂದ ನ್ಯಾಯಾಲಯವು ಮುಂದಿನ ದಿನಾಂಕದಿಂದಲೇ ಪ್ರತಿ ದಿನ ಕಲಾಪ ನಡೆಯುವಂತೆ ದಿನಾಂಕವನ್ನು ನಿಗದಿ ಮಾಡಿ ಆದೇಶ ಮಾಡಿತು. ಮತ್ತು ಶೀಘ್ರದಲ್ಲಿ ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಾಕ್ಷಿ ವಿಚಾರಣೆಗೆ ಸಾಕ್ಷಿದಾರರಿಗೆ ಸಮನ್ಸ್ ನೀಡಿತು.

ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಲು ನಾನು ಪಿ.ಎಸ್.ಐ ಇಮ್ಮಿಯಾಜ್ ಪಟೇಲ್‌ರವರನ್ನು ನೇಮಕ ಮಾಡಿದೆ. ಮತ್ತು ವಿಶೇಷ ಅಭಿಯೋಜಕರಾದ ಎಸ್. ಭಟ್ಟಿರವರನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಅವರಿಗೆ ಮನವರಿಕೆ ಮಾಡಿಸಿದೆ ಮತ್ತು ತನಿಖೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅವರಿಗೆ ನೀಡಿದೆ.

ಹಾಗೂ ನ್ಯಾಷನಲ್ ಲಾ ಸ್ಕೂಲ್‌ಗೆ ಎಸ್.ಪಿ ಭಟ್ಸ್ ಮತ್ತು ಶ್ರೀ ಬ್ಯಾಥ ಜಗದೀಶ್ ರವರೊಂದಿಗೆ ಭೇಟಿ ನೀಡಿ ಘಟನೆಯ ಸಂತ್ರಸ್ಥೆಗೆ ನ್ಯಾಯಾಲಯದಲ್ಲಿ ಯಾವ ರೀತಿಯಲ್ಲಿ ಸಾಕ್ಷಿ ಹೇಳಬೇಕು ಮತ್ತು ಆರೋಪಿತರ ಪರ ವಕೀಲರು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಮತ್ತು ಅದಕ್ಕೆ ಯಾವ ರೀತಿಯ ಉತ್ತರ ನೀಡಬೇಕೆಂದು ತಿಳುವಳಿಕೆ ನೀಡಿದೆವು.

ಸಂತಸ್ಥೆಯು ಖುದ್ದು ಕಾನೂನು ವಿದ್ಯಾರ್ಥಿಯಾಗಿದ್ದರಿಂದ ಸದರಿ ವಿಚಾರಗಳನ್ನು ಚೆನ್ನಾಗಿ ಗ್ರಹಿಸಿದರು. ಅದೇ ರೀತಿ ಪ್ರಕರಣದ ಪ್ರತಿಯೊಬ್ಬ ಸಾಕ್ಷಿದಾರರನ್ನು ಎಸ್.ಎ ಭಟ್ಟಿರವರಿಗೆ ಭೇಟಿ ಮಾಡಿಸಿ ಸೂಕ್ತವಾಗಿ ಸಾಕ್ಷಿ ನೀಡುವಂತೆ ನೋಡಿಕೊಂಡೆವು. ಪ್ರಕರಣದಲ್ಲಿ ಸಾಕ್ಷಿ ವಿಚಾರಣೆ ಪ್ರಾರಂಭವಾಗಿ ವಿಚಾರಣೆ ಮುಗಿಯುವರೆಗೆ ಯಾವುದೇ ಸಾಕ್ಷಿದಾರರು ನ್ಯಾಯಾಲಯದಲ್ಲಿ ಅವರಿಗೆ ನಿಗದಿ ಮಾಡಿದ ದಿನದಂದೆ ಹಾಜರಾಗಿ ಸಾಕ್ಷಿ ನುಡಿಯುವ ವ್ಯವಸ್ಥೆ ಮಾಡಿದೆ.

ಇದನ್ನು ಸಹ ಓದಿ : ಸಾರ್ವಜನಿಕರಲ್ಲಿ ವಿನಂತಿ/ ಇವತ್ತು ಶಿವಮೊಗ್ಗದ ಈ ಬಹುತೇಕ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ/ ಎಲ್ಲೆಲ್ಲಿ ಓದಿ

ಕೊನೆಯದಾಗಿ

ಬೆಂಗಳೂರು ನಗರದ ಸೆಸನ್ಸ್‌ ನ್ಯಾಯಾಲಯವು ಪ್ರಕರಣದ ಎಲ್ಲಾ ಹಂತದ ಕಲಾಪಗಳನ್ನು ಮುಗಿಸಿ ದಿನಾಂಕ:09.09.2013 ರಂದು ಅಂದರೆ ಪ್ರಕರಣ ವರದಿಯಾದ 11 ತಿಂಗಳ ಒಳಗೆ ವಿಚಾರಣೆಯನ್ನು ಮುಗಿಸಿ ಎಲ್ಲಾ 06 ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಅಂದು ನಗರ ಸೆಶನ್ಸ್ ನ್ಯಾಯಾಲಯದ ಪಕ್ಕದಲ್ಲಿರುವ ಕಾಲೇಜಿನ ಮೈದಾನದ ತುಂಬಾ ಭಾರತಾಂತವಿರುವ ವಿವಿಧ ಟಿವಿ ಚಾನಲ್‌ಗಳ ಓ.ಬಿ ವ್ಯಾನ್‌ಗಳು ತುಂಬಿಹೋಗಿದ್ದು,

ಪ್ರಕರಣದ ಬಗ್ಗೆ ವಿಶೇಷ ಅಭಿಯೋಜಕರು ನೀಡಿದ ಮಾಹಿತಿಯ ಬಗ್ಗೆ ನೇರಪ್ರಸಾರವನ್ನು ಮಾಡಿದೆವು ಇದರಿಂದಲೇ ಈ ಪ್ರಕರಣವು ದೇಶದ್ಯಾಂತ ಎಷ್ಟು ಸುದ್ದಿಯಾಗಿತ್ತು ಎಂಬುದರ ಬಗ್ಗೆ ತಿಳಿದು ಬರುತ್ತದೆ. ಮತ್ತು 06 ತಿಂಗಳ ನಂತರ ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ನಡೆದಾಗ ಇಡೀ ದೇಶವೇ ಆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ರೀತಿಗೆ ಈ ಪ್ರಕರಣ ಮುನ್ನುಡಿಯಾಗಿತ್ತು.

ನ್ಯಾಯಾಧೀಶರು ತಾವು ನೀಡಿದ ತೀರ್ಪಿನಲ್ಲಿ ಇದೊಂದು ಅತ್ಯಂತ ಹೀನ ಕೃತ್ಯವಾಗಿದ್ದು, ಕಾನೂನಿನಲ್ಲಿ ಅವಕಾಶವಿದ್ದರೆ ಆರೋಪಿತರಿಗೆ ನಾನು ಮರಣದಂಡನೆಯನ್ನು ನೀಡುತ್ತಿದ್ದೆ. ಅವಕಾಶವಿಲ್ಲದೇ ಇರುವುದರಿಂದ ಕಾನೂನಿನಲ್ಲಿ ಅತ್ಯಂತ ಹೆಚ್ಚಿನ ಶಿಕ್ಷೆಯನ್ನು ವಿಧಿಸಿರಿವುದಾಗಿ ನಮೂದಿಸಿದ್ದರು.

shivamogga news live : ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಸಿಕ್ಕಿಬಿದ್ದ ಮತ್ತೊಬ್ಬ ಆರೋಪಿ

ಕಾಕತಾಳಿಯವೆಂಬತೆ ಪ್ರಕರಣದ ತೀರ್ಪು ಹೊರಬಿದ್ದ ದಿನವೇ ನಮಗೆ 08ನೇ ಆರೋಪಿತನಾದ ರಾಜನ ಬಗ್ಗೆ ಮಾಹಿತಿ ದೊರೆಯಿತು. ಅವನು ಕೋಲಾರ ಜಿಲ್ಲೆಯ ಒಂದು ಹಳ್ಳಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ಮಾಹಿತಿ ಬಂತು. ಕೂಡಲೇ ನಾನು ಪಿ.ಎಸ್.ಐ ಇಮ್ಮಿಯಾಜ್ ಪಟೇಲ್ ಮತ್ತು ಕ್ರೈಂ ಸಿಬ್ಬಂದಿಯವರನ್ನು ರಾಜನ್ನು ಹಿಡಿದುಕೊಂಡು ಬರಲು ಕಳುಹಿಸಿದೆ ಅದೃಷ್ಟವಶಾತ್ ಅಂದು ರಾಜ ಸಿಕ್ಕಿಬಿದ್ದಿದ್ದ ಮರು ದಿನ ದಿನಾಂಕ:10.09.2013 ರಂದು ಅವನನ್ನು ದಸ್ತಗಿರಿ ಮಾಡಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡೆ

ಮತ್ತು ಅವನನ್ನು...... ಗ್ರಾಮಕ್ಕೆ ಕರೆದುಕೊಂಡು ಹೋಗಿ ಸಂತ್ರಸ್ಥೆಯ ಶ್ವೆಟರ್‌ನ್ನು ಆತನ ಮನೆಯಿಂದ ಅಮಾನತ್ತು ಪಡಿಸಿಕೊಂಡೆ. ಇದೇ ಶೆಟರನ್ನು ನೆಲದ ಮೇಲೆ ಹಾಸಿ ಸಂತ್ರಸ್ಥೆಯ ಮೇಲೆ ಅತ್ಯಾಚಾರ ವೆಸಗಲಾಗಿತ್ತು. ಘಟನೆಯ ನಂತರ ಆರೋಪಿತನಾದ ರಾಜ ಅದನ್ನು ತಗೆದುಕೊಂಡು ಮನೆಯಲ್ಲಿಟ್ಟು ತಲೆ ಮರಿಸಿಕೊಂಡಿದ್ದರಿಂದ ಬಹು ಮುಖ್ಯವಾದ ಸಾಕ್ಷಿಯೊಂದು ನಮಗೆ ದೊರಕಿತು

ಮತ್ತು ಅದರಲ್ಲಿ ಮಣ್ಣಿನ ಕಲೆ ಮತ್ತು ಸ್ಥಳದಲ್ಲಿ ಬಿದ್ದಿದ್ದ ಹುಲ್ಲು ಮತ್ತು ಎಲೆಗಳ ತುಣುಕುಗಳು ಇದ್ದುದರಿಂದ ಶೆಟರ್‌ನ್ನು ಎಫ್.ಎಸ್.ಎಲ್‌ಗೆ ಕಳುಹಿಸಿ ಪರೀಕ್ಷಾ ವರದಿಯನ್ನು ಪಡೆದು ಕೊಂಡೆ ಘಟನಾ ಸ್ಥಳದಲ್ಲಿ ಸಂಗ್ರಹಿಸಿದ್ದ ಮತ್ತು ಶ್ವಟರ್‌ನಲ್ಲಿದ್ದ ಮಣ್ಣಿನ ಕಲೆ ಹೋಲಿಕೆ ಯಾಗುತ್ತದೆ ಎಂದು ವರದಿ ತಿಳಿಸಿತ್ತು

ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ. ನಂತರ ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ಬದಲಾಗಿದ್ದು, ಬದಲಾದ ಸರ್ಕಾರದಲ್ಲಿ ನನ್ನನ್ನು ಜ್ಞಾನಭಾರತಿ ಪೊಲೀಸ್ ಠಾಣೆಯಿಂದ ಬದಲಾಯಿಸಿ ಬೆಂಗಳೂರು ನಗರದ ಸಿಸಿಬಿಗೆ ವರ್ಗಾಯಿಸಿದ್ದರು ಕೂಡ ನಾನೂ ಪ್ರಕರಣದ ನ್ಯಾಯಾಲಯದ ಪ್ರಗತಿಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಉಳಿದಿದ್ದ ಸಿಬ್ಬಂದಿಯವರಾದ ಶ್ರೀ ಅರವಿಂದ್‌ರವರಿಂದ ಮಾಹಿತಿಯನ್ನು ಪಡೆಯುತ್ತಿದ್ದೆ.

ಈ ಮಧ್ಯೆ ಸಂಸ್ತ್ರಸ್ಥೆ ಯುವತಿ ಭಾರತವನ್ನು ಬಿಟ್ಟು ಅಮೇರಿಕಾದಲ್ಲಿರುವ ತನ್ನ ತಂದೆಯ ಜೊತೆಯಲ್ಲಿ ಸೇರಿಕೊಂಡಿದ್ದರು ಮತ್ತು ಅವರು ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು. ನಾನು ಸಿಸಿಬಿಯಲ್ಲಿಯೇ ಕರ್ತವ್ಯ ನಿರ್ವಹಿಸುವಾಗ ಆರೋಪಿತನಾದ ರಾಜ ಇವನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಯಿತು. ನಮ್ಮ ನ್ಯಾಯಾಲಯದ ವ್ಯವಸ್ಥೆಯಲ್ಲಿ ಮತ್ತೊಮ್ಮೆ ಪ್ರಕರಣದ ಎಲ್ಲಾ ಸಾಕ್ಷಿದಾರರನ್ನ ನ್ಯಾಯಾಲಯದಮುಂದೆ ಹಾಜರುಪಡಿಸಿ ಅವರ ಹೇಳಿಕೆಯನ್ನು ದಾಖಲಿಸಬೇಕಾಗಿತ್ತು.

ಪ್ರಕರಣದ ಸಂಸಸ್ಥೆಯು ತನ್ನ ಮೊಬೈಲ್ ನಂಬರ್‌ನ್ನು ಸಿಬ್ಬಂದಿಯವರಾದ ಅರವಿಂದ್‌ರವರಿಗೆ ನೀಡಿದ್ದರಿಂದ ಮೊತ್ತೊಮ್ಮೆ ಅವರನ್ನು ಸಂಪರ್ಕಿಸಿ ನ್ಯಾಯಾಲಯದ ವಿಚಾರಣೆಯ ಬಗ್ಗೆ ಮಾಹಿತಿಯನ್ನು ನೀಡಿ ಭಾರತಕ್ಕೆ ಬರುವಂತೆ ಹೇಳಿಕೊಂಡೆ ಆಶ್ಚರ್ಯವೆಂಬತೆ ಅವರು ಬರುವುದಾಗಿ ತಿಳಿಸಿ ನಿಗದಿ ಪಡಿಸಿದ ದಿನಾಂಕದಂದು ಅಮೆರಿಕಾ ದೇಶದಿಂದ ತನ್ನ ಸ್ವಂತ ಖರ್ಚಿನಲ್ಲಿ ಹಾಜರಾಗಿ ಸುಮಾರು 15 ದಿನ ಗಳ ಕಾಲ ಬೆಂಗಳೂರಿನಲ್ಲಿಯೇ ಉಳಿದುಕೊಂಡು ತಮ್ಮ ಸಾಕ್ಷಿಯನ್ನು ನ್ಯಾಯಾಲಯಕ್ಕೆ ನೀಡಿದರು.

ಇದಕ್ಕೆ ಅನೇಕ ಲಕ್ಷ ರೂಪಾಯಿಗಳನ್ನು ಅವರು ಖರ್ಚು ಮಾಡಿದ್ದರು. ಇದರಿಂದ ಘಟನೆಯಿಂದ ಅವರ ಮನಸ್ಸಿಗೆ ಆದ ನೋವು ಮತ್ತು ಈ ಕುರಿತಂತೆ ಆರೋಪಿತರಿಗೆ ಶಿಕ್ಷೆ ಮಾಡಲೇಬೇಕೆಂಬ ತೀವ್ರತರವಾದ ಮನೋಭಾವ ಅವರಿಗೆ ಇರುವುದು ಕಂಡುಬಂತು.

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಮತ್ತೊಮ್ಮೆ ನನ್ನನ್ನು ಸೇರಿದಂತೆ ಎಲ್ಲರೂ ನ್ಯಾಯಾಲಯದಲ್ಲಿ ಸಾಕ್ಷಿಯನ್ನು ನೀಡಿದೆವು. ಆರೋಪಿತನಾದ ರಾಜ ಇವನಿಂದ ಅಮಾನತ್ತು ಪಡಿಸಿಕೊಂಡಿದ್ದ ಸಂತಸ್ಥೆಯ ಶೆಟರ್ ಮತ್ತು ಅದಕ್ಕೆ ಸಂಬಂಧಿಸಿದಂತೆ ಇದ್ದ ಎಫ್.ಎಸ್.ಎಲ್ ವರದಿಯ ಆಧಾರದ ಮೇಲೆ ರಾಜನಿಗೂ ಕೂಡ ದಿನಾಂಕ:22.05.2017 ರಂದು ಜೀವಾವಧಿ ಶಿಕ್ಷೆಯನ್ನು ಮಾನ್ಯ ಘನ ನ್ಯಾಯಾಲಯವು ನೀಡಿತು.

2013ರಲ್ಲಿಯೇ ಜ್ಯೂವನೆಲ್ ನ್ಯಾಯಾಲಯವು ಅಪ್ತಾಪ್ತನಿಗೆ 02ವರ್ಷಗಳ ಶಿಕ್ಷೆಯನ್ನು ವಿಧಿಸಿ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿತ್ತು. 2 ವರ್ಷಗಳ ನಂತರ ಆತ ರಿಮ್ಯಾಂಡ್ ಹೋಮ್‌ನಿಂದ ಹೊರ ಬಂದವನು ಈವರೆಗೆ ನಾಪತ್ತೆಯಾಗಿದ್ದಾನೆ.

ಉಳಿದ 07 ಜನ ಪ್ರಕರಣದ ಆರೋಪಿತರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಮುಂದುವರೆದಿದ್ದಾರೆ. ಹೀಗೆ ಪ್ರಕರಣದಲ್ಲಿನ 07 ಜನ ಗ್ಯಾಂಗ್ ರೇಪ್ ಆರೋಪಿತರಿಗೆ ನಮ್ಮ ವ್ಯವಸ್ಥೆಯಲ್ಲಿ ಶಿಕ್ಷೆಯಾಗಿದ್ದು, ಪ್ರಕರಣದ ಸಂತ್ರಸ್ಥ ಯುವತಿಗೆ ಒಂದು ರೀತಿಯ ಮಾನಸಿಕ ತೃಪ್ತಿಯನ್ನು ನೀಡಿರಬಹುದೆಂದು ನನಗೆ ಅನಿಸುತ್ತದೆ. 

ತನಿಖಾಧಿಕಾರಿಯಾಗಿ ಬಾಲರಾಜ್​ ಮಾತು

ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ರೀತಿ ಸ್ತ್ರೀಯರ ಮೇಲೆ ನಡೆಯುವ ಅತ್ಯಾಚಾರದಂತಹ ಹೀನ ಘಟನೆಗಳು ನಡೆದಾಗ ಎಷ್ಟು ಕಠಿಣವಾಗಿ ಸ್ಪಂದಿಸಬಹುದಾಗಿತ್ತೊ ಅಷ್ಟು ಕಠಿಣದಿಂದ ನಾನು ಕರ್ತವ್ಯ ನಿರ್ವಹಿಸಿ ಪ್ರಕರಣದ ಸಂಸ್ಕಸ್ಥ ಯುವತಿಗೆ ನ್ಯಾಯ ಒದಗಿಸಿದ ಸಂತೃಪ್ತಿ ನನಲ್ಲಿದೆ.

ಇಂದು ಕೂಡ ಈ ಬರವಣಿಗೆಯನ್ನು ಮಾಡುವಾಗ ಮೈಸೂರು ನಗರದಲ್ಲಿ ಇದೇ ತರಹದ ಪ್ರಕರಣವರದಿಯಾಗಿದ್ದು ಅನೇಕ ಮಾಧ್ಯಮದವರು 2012ರಲ್ಲಿ ಜ್ಞಾನಭಾರತಿಯಲ್ಲಿ ನಡೆದಿದ್ದ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಈ ತಹರದ ಪ್ರಕರಣಗಳು ನಡೆದಾಗ ಪೊಲೀಸ್ ಅಧಿಕಾರಿ ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎಂಬುವುದರ ಬಗ್ಗೆ ರಾಜ್ಯದಲ್ಲಿಯೇ ಒಂದು ಮಾದರಿ ಪ್ರಕರಣವಾಗಿ ಚರಿತ್ರೆಯಲ್ಲಿ ಸೇರಿಹೋಗಿದೆ.

ಸೆಷನ್ಸ್ ನ್ಯಾಯಾಲಯವು ನೀಡಿದ್ದ ಶಿಕ್ಷೆಯ ವಿರುದ್ಧವಾಗಿ ಎಲ್ಲಾ ಆರೋಪಿತರು 2014ರಲ್ಲಿ ಘನ ಉಚ್ಚ ನ್ಯಾಯಾಲಯದ ಮುಂದೆ ಅಪೀಲನ್ನು ಸಲ್ಲಿಸಿದ್ದು, ಈ ಕುರಿತಂತೆ ದಿನಾಂಕ:21.10.2020 ರಂದು ತಿರ್ಪ ನೀಡಿದ ಘನ ಉಚ್ಚನ್ಯಾಯಾಲಯವು ಪ್ರಕರಣದ ಎಲ್ಲಾ ಆರೋಪಿತರಿಗೆ ಸೆಷನ್ಸ್ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿಯಿತು.

ಮತ್ತು ಈ ಕುರಿತಂತೆ 160 ಪುಟಗಳ ಸುದೀರ್ಘ ಆದೇಶವನ್ನು ನೀಡಿದ್ದು, ಪ್ರಸ್ತುತ ಪ್ರಕರಣದ ತನಿಖೆ, ಅಭಿಯೋಜನೆ, ನ್ಯಾಯಾಲಯದ ವಿಚಾರಣೆಯ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಅಲ್ಲದೇ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿತರಿಗೆ ಮೃತ್ಯು ದಂಡನೆಯ ಶಿಕ್ಷೆ ವಿಧಿಸಲು ಇಂಡಿಯನ್ ಪಿನಲ್ ಕೋಡ್‌ನ 376 ಕಲಂನ್ನು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮತ್ತು ತನ್ನ ಆದೇಶದ ಪ್ರತಿಯನ್ನು ಜ್ಯೂಡಿಷಿಯಲ್ ಅಕಾಡೆಮಿಗೆ ಕಳುಹಿಸಿ ಅಲ್ಲಿಗೆ ತರಬೇತಿಗೆ ಬರುವ ನ್ಯಾಯಧೀಶರುಗಳಿಗೆ ತರಬೇತಿಯ ವಿಷಯವಾಗಿ ಸೇರಿಸುವಂತೆ ನಿರ್ದೇಶನ ನೀಡಿದೆ.

15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ಇನ್ನೂ ಇದೆ : ವೀಕ್ಷಕರೇ ರಾಜ್ಯದ ನಂಬರ್​ 1 ಇನ್ವೆಸ್ಟಿಗೇಷನ್ ಆಫಿಸರ್ ಎಂದೇ ಪೊಲೀಸ್ ಇಲಾಖೆಯಲ್ಲಿ ಖ್ಯಾತರಾಗಿರುವ ಬಾಲರಾಜ್​ರವರು ನಡೆಸಿದ್ದ ಜ್ಞಾನಭಾರತಿ ಕೇಸ್​ನ ಸರಣಿಯ ಕೊನೆಯ ಭಾಗ ಇದಾಗಿದೆ. ಮಲೆನಾಡು ಟುಡೆಯ ಈ ಸರಣಿ ವರದಿಯ ಪ್ರಯತ್ನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್​ನಲ್ಲಿ ತಿಳಿಸಿ, ಮತ್ತು ನಮ್ಮ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಸೇರ್ಪಡೆಗೊಳ್ಳಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ