50 ಸಾವಿರ ಡಿಮ್ಯಾಂಡ್, ಇನ್​ಲ್ಯಾಂಡ್ ಲೆಟರ್​ನಲ್ಲಿ ಬಂದಿತ್ತು ಸುಳಿವು, ಶೋಲೆ ಸಿನಿಮಾ ಮತ್ತು ರೇಪ್​ ಕೇಸ್​? ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-4

ಸುಮಾರು 20 ರಿಂದ 25 ಗುಡಿಸಲುಗಳು ಇರುವುದಾಗಿ ತಿಳಿದು ಬಂತು. ಅದೇ ದಿನ ರಾತ್ರಿ ಸದರಿ ಗ್ರಾಮವನ್ನು ಸುತ್ತವರೆಯಲು ತಿರ್ಮಾನಿಸಿದೆವು.

50 ಸಾವಿರ ಡಿಮ್ಯಾಂಡ್, ಇನ್​ಲ್ಯಾಂಡ್ ಲೆಟರ್​ನಲ್ಲಿ ಬಂದಿತ್ತು ಸುಳಿವು, ಶೋಲೆ ಸಿನಿಮಾ ಮತ್ತು ರೇಪ್​ ಕೇಸ್​? ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-4

ರಾಜ್ಯದ ಪೊಲೀಸ್ ಇಲಾಖೆಗೆ ಎದುರಾಗಿದ್ದ ಚಾಲೆಂಜಿಂಗ್​ ಕ್ರೈಂ ಕೇಸ್​ಗಳ ಪೈಕಿ , ಜ್ಞಾನಭಾರತಿ ರೇಪ್​ ಕೇಸ್​ ಮುಖ್ಯವಾದುದು , ಇಂತಹದ್ದೊಂದು ಪ್ರಕರಣವನ್ನು ಕೈಗೆತ್ತಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮವಹಿಸಿದ್ದ ಬಾಲರಾಜ್​ರವರಿಗೆ ಅರ್ಹವಾದ ಗೌರವವೇ ಲಭಿಸಿದೆ. ಈ ನಿಟ್ಟಿನಲ್ಲಿ ಟುಡೆ, ಜ್ಞಾನಭಾರತಿ ಕೇಸ್​ನ ಸರಣಿಯನ್ನು ಬಾಲರಾಜ್​ರವರೇ ವಿವರಿಸಿದಂತೆ ಓದುಗರ ಮುಂದಿಡುತ್ತಿದೆ. ಇದರ ಭಾಗ ಮೂರರ ಸರಣಿ ಇಲ್ಲಿದೆ : ರಾಜ್ಯದ ನಂಬರ್​ 01 ಇನ್ವೆಸ್ಟಿಗೇಷನ್​ ಅಧಿಕಾರಿ ಬಾಲರಾಜ್​/ ಜ್ಞಾನ ಭಾರತಿ ಕೇಸ್​ ಬಿಡಿಸಿದ್ದು ಹೇಗೆ ಗೊತ್ತಾ ?DYSP ಬಾಲರಾಜ್​ Investigation part-3

ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ತನಿಖೆಯ ಪ್ರಮುಖ ಘಟ್ಟ ಆರಂಭ

ನಮಗೆ ಯುವತಿಯು ನೇಪಾಳ ದೇಶದವಳು ಎಂಬುದು ಗೊತ್ತಿತ್ತು.  ಯುವತಿಯ ತಂದೆ  ಒಬ್ಬ ಲಾಯ‌ರ್ ಆಗಿದ್ದು, ಅವರು ವಿಶ್ವಮಟ್ಟದ ದೊಡ್ಡ ಸಂಸ್ಥೆಯಲ್ಲಿ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿ  ಈ ವಿಚಾರ ಪ್ರಕರಣದ ಅಘಾದತೆಯನ್ನು ಇನ್ನು ಹೆಚ್ಚಾಗುವಂತೆ ಮಾಡಿತ್ತು ಮತ್ತು ನಮ್ಮ ಮೇಲಿನ ಒತ್ತಡ ಕೂಡ ಹೆಚ್ಚಾಗುವಂತೆ ಮಾಡಿತ್ತು. ಆದ್ದರಿಂದ ಆದಷ್ಟು ಬೇಗನೇ ಆರೋಪಿತರನ್ನು ಪತ್ತೆ ಹಚ್ಚಬೇಕಾಗಿತ್ತು.  ಆರೋಪಿತರಿಗೆ ಶಿಕ್ಷೆ ಆಗದೇ ಇದ್ದಲ್ಲಿ ನಮ್ಮ ದೇಶದ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಲಯಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬರುವ ಸಾದ್ಯತೆಯನ್ನು ನಾನು ಅದೇ ಕ್ಷಣದಲ್ಲಿ ಮನಗೊಂಡೆ.

DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಮುಖ್ಯವಾದ ಕ್ಲೂ ಏನಿತ್ತು ಗೊತ್ತಾ?

ಪ್ರಕರಣದ ಆರೋಪಿರತನ್ನು ಪತ್ತೆ ಹಚ್ಚಲು ನನಗೆ ಇದ್ದ ಮೊದಲು ಕ್ಲೂ ಯುವತಿಯ ಮೊಬೈಲ್ ಸೆಟ್ ಆಗಿತ್ತು ಮತ್ತು ಅದನ್ನು ಆರೋಪಿತರು ತೆಗೆದುಕೊಂಡು ಹೋಗಿದ್ದರು. ಸಿಮ್ ಜೊತೆಯಲ್ಲಿ ಮೊಬೈಲ್ ಅನ್ನು ತೆಗೆದುಕೊಂಡು ಹೋದರೆ ಪೊಲೀಸರು ತಮ್ಮನ್ನು ಪತ್ತೆ ಮಾಡುತ್ತಾರೆ ಎಂಬ ಭಯದಿಂದ ಸಿಮ್ ಅನ್ನು ಯುವತಿಗೆ ವಾಪಾಸು ನೀಡಿ ಮೊಬೈಲ್ ಅನ್ನು ಮಾತ್ರ ತೆಗೆದುಕೊಂಡು ಹೋಗಿದ್ದರು.

ಮೊಬೈಲ್‌ನ ಈಎಂಐಇ ನಂಬರ್ ಅನ್ನು ಯುವತಿಯ ಮೊಬೈಲ್ ನಂಬರ್‌ನ ಸಿ.ಡಿ.ಆರ್ ನಿಂದ ಪಡೆದುಕೊಂಡು ಎಲ್ಲಾ ಸರ್ವೀಸ್ ಪ್ರವೈಡರ್‌ಗಳಿಗೆ ಅದನ್ನು ಕಳಿಸಿ ಸರ್ಚ್‌ಗೆ ಹಾಕಿಕೊಂಡೆ, ತೆಗೆದುಕೊಂಡು ಹೋಗಿದ್ದ ಆರೋಪಿತರಾಗಲೀ ಅಥವಾ ಆರೋಪಿತರು ಅದನ್ನು ಯಾರೀಗಾದರು ಬೇರೆಯವರಿಗೆ ಮಾರಿದ್ದರೆ,

ಅವರೇನಾದರೂ ಸಿಮ್ ಅನ್ನು ಅಳವಡಿಸಿ ಬಳಸಿದರೆ, ಬಳಸಿದವರ ಸಿಮ್ ನಂಬರ್‌ನ ಸಿ.ಡಿ.ಆರ್ ಪಡೆದು ಆರೋಪಿತರನ್ನು ಪತ್ತೆ ಹಚ್ಚುವ ಉದ್ದೇಶ ನನ್ನದಾಗಿತ್ತು. ಇದಲ್ಲದೇ ಆರೋಪಿರತನ್ನು ಪತ್ತೆ ಹಚ್ಚುವ ಯಾವುದೇ ಸುಳಿವು ಈ ಪ್ರಕರಣದಲ್ಲಿ ದೊರೆತಿರಲಿಲ್ಲ. ಯುವತಿಯು ನೀಡಿದ್ದ ವಿವರಣೆಯಿಂದ ಮೇಲ್ನೋಟಕ್ಕೆ ಹಳ್ಳಿಗಾಡಿನಿಂದ ಬಂದಿದ್ದ ಗಂಧದ ಕಳ್ಳರು ಈ ಕೃತ್ಯ ಎಸೆಗಿದಂತೆ ಕಂಡು ಬಂತು.

15 ದಿನದ ಹಿಂದೆ ನಡೆದಿದ್ದ ಘಟನೆ ಬೆನ್ನಲ್ಲೆ ನಡೆದಿತ್ತು ಭೀಕರ ಘಟನೆ/ ಜ್ಞಾನಭಾರತಿ ಕಾಡಲ್ಲಿ ಅಂದು ನಡೆದಿದ್ದು ಏನು? DYSP ಬಾಲರಾಜ್​ Investigation part-2

ಹಳ್ಳಿಗಳ ಬೆನ್ನೇರಿ/ ಹೆಚ್ಚಿದ ಒತ್ತಡ

ಮರುದಿನ ದಿನಪತ್ರಿಕೆಗಳು ಈ ಪ್ರಕರಣದ ಬಗ್ಗೆ ಅತಿ ಹೆಚ್ಚಿನ ಪ್ರಚಾರವನ್ನು ನೀಡಿದ್ದವು ಮತ್ತು ಜ್ಞಾನಭಾರತಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತು ಬೆಂಗಳೂರು ವಿಶ್ವವಿದ್ಯಾನಿಯಲಯದಲ್ಲಿ ಕೈಗೊಂಡಿರುವ ಭದ್ರತೆಯ ಬಗ್ಗೆ ಅನೇಕ ಲೇಖನಗಳು ಪ್ರಕಟಗೊಂಡಿದ್ದವು. ಟಿ.ವಿ. ಮಾದ್ಯಮದಲ್ಲಿ ಈ ಬಗ್ಗೆ ಸುದ್ದಿ ಬಿತ್ತರಿಸುವುದಲ್ಲದೇ ಚರ್ಚೆಗಳು ನಡೆದಿದ್ದವು.

ಅದೇ ದಿನ ಬೆಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ವಿದ್ಯಾರ್ಥಿಗಳು ಜ್ಞಾನಭಾರತಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪ್ರಕರಣದಲ್ಲಿ ಅನ್ಯಾಯವಾಗಿರುವ ಯುವತಿಗೆ ಅತ್ಯಂತ ವೇಗವಾಗಿ ನ್ಯಾಯ ಒದಗಿಸುವ ಬಗ್ಗೆ ಮತ್ತು ವಿಶ್ವವಿದ್ಯಾನಿಯಲದ ಮಹಿಳೆಯ ಸುರಕ್ಷತೆಯ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಒತ್ತಾಯಪಡಿಸಿದರು.

shivamogga news live : ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಆಗ ಬೆಂಬಲಕ್ಕೆ ನಿಂತಿದ್ದು ಯಾರು? 

ಅಲ್ಲದೇ ಬೆಂಗಳೂರು ನಗರದ ಅನೇಕ ಸಂಘ ಸಂಸ್ಥೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಗಳಿಂದ ಪ್ರಕರಣಕ್ಕೆ ಮತ್ತಷ್ಟು ಪ್ರಚಾರ ಸಿಕ್ಕಿ ನಮ್ಮ ಮೇಲಿನ ಅಧಿಕಾರಿಗಳಿಗೆ ಒತ್ತಡ ಜಾಸ್ತಿಯಾಯಿತು. ಸುದ್ದಿವಾಹಿನಿಯ ವರದಿಗಾರರು ಗೃಹಮಂತ್ರಿಯಾಗಿದ್ದ ಶ್ರೀ.ಅಶೋಕ್ ರವರಿಗೆ ಮತ್ತು ಮುಖ್ಯಮಂತ್ರಿಯಾಗಿದ್ದ ಶ್ರೀ.ಬಿ.ಎಸ್.ಯಡಿಯೂರಪ್ಪ ರವರಿಗೆ ಪ್ರಕರಣದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಗೃಹಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಆದಷ್ಟು ಬೇಗನೇ ಆರೋಪಿತರನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು

ಮತ್ತು ಅವರುಗಳು ನೇರವಾಗಿ ಅಂದಿನ ಕಮೀಷನರ್ ಹುದ್ದೆಯಲ್ಲಿದ್ದ ಶ್ರೀ. ಜ್ಯೋತಿ ಪ್ರಕಾಶ್ ಮಿರ್ಜಿ ಐ.ಪಿ.ಎಸ್. ರವರಿಗೆ ಮಾತನಾಡಿ ಕೂಡಲೇ ಆರೋಪಿತರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದು, ನಮ್ಮ ಮೇಲಿನ ಒತ್ತಡ ಇನ್ನು ಜಾಸ್ತಿಯಾಗಲು ಕಾರಣವಾಯಿತು. ಅಂದಿನ ಅಪರಾಧ ವಿಭಾಗದ ಜಾಯಿಂಟ್ ಕಮೀಷನರ್ ಶ್ರೀ.ಪ್ರಣವ್ ಮೊಹಂತಿ ರವರು ಪ್ರತೀ ಗಂಟೆಗೊಮ್ಮೆ ಆಗಿನ ಡಿ.ಸಿ.ಪಿ. ರವರಿಗೆ ಮತ್ತು ನನಗೆ ದೂರವಾಣಿ ಮುಖಾಂತರ ಕರೆ ಮಾಡಿ ತನಿಖೆಯ ಪ್ರಗತಿಯ ಮಾಹಿತಿಯನ್ನು ಪಡೆಯುತ್ತಿದ್ದರು. ಇದರಿಂದ ನಮ್ಮ ಮೇಲಿನ ಒತ್ತಡ ಬೆಟ್ಟದಷ್ಟಾಯಿತು. ಈ ಒತ್ತಡಗಳ ಮದ್ಯೆಯೂ ಕೂಡ ನಾನು ನನ್ನ ತನಿಖೆಯನ್ನು ಮುಂದುವರೆಸಿದೆ.

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಇನ್​ವೆಸ್ಟಿಗೇಷನ್​ ಟೀಂನಲ್ಲಿ ಯಾರ್ಯಾರು ಇದ್ದರು

ಡಿ.ಸಿ.ಪಿ. ರವರು ಆರೋಪಿತರನ್ನು ಪತ್ತೆ ಮಾಡುವ ಕುರಿತು ನುರಿತ ಅಧಿಕಾರಿಗಳ ತಂಡವನ್ನು ರಚನೆ ಮಾಡಿದರು. ಆ ಸಮಯದಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತು ತುಂಬಾ ಕಠಿಣ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದ ಶ್ರೀ.ಬಾಳೇಗೌಡ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ

ಶ್ರೀಕೋದಂಡರಾಮ, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ.ಸತ್ಯನಾರಾಯಣ, ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ.ಎಂ.ಎನ್.ನಾಗರಾಜು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತು

ಸಿ.ಡಿ.ಆರ್. ಅನಾಲಿಸಿಸ್‌ನಲ್ಲಿ ತಜ್ಞರಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಕೆ. ಮಾಲತೇಶ್, ಬಸವೇಶ್ವರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ.ಗೀತಾ ಕುಲಕರ್ಣಿ ಅಲ್ಲದೇ ನಮ್ಮ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಎಸ್.ಐ ಶ್ರೀ.ದರ್ಮೇಗೌಡ ರವರುಗಳು ಸದರಿ ತಂಡದಲ್ಲಿದ್ದರು. ಅವರಿಗೆ ಅವಶ್ಯಕವಿರುವ ಸಿಬ್ಬಂದಿಗಳನ್ನು ಅವರ ಠಾಣೆಯಿಂದಲೇ ಕರೆದುಕೊಂಡು ಆರೋಪಿತರ ಪತ್ತೆ ಮಾಡುವಂತೆ ಡಿಸಿಪಿ ರವರು ಲಿಖಿತ ಜ್ಞಾಪನವನ್ನು ನೀಡಿದ್ದರು.

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ವಿವಿಯಿಂದಲೇ ತನಿಖೆ ಆರಂಭ

ನಾನು ತನಿಖೆಯನ್ನು ಮುಂದುವರೆಸಿ, ತನಿಖಾ ಕಾಲದಲ್ಲಿ ಸಿಗುವ ಕ್ಯೂ ಗಳನ್ನು ಉಪಯೋಗಿಸಿಕೊಂಡು ಆರೋಪಿತರನ್ನು ಗುರ್ತಿಸುವ ಕೆಲಸದಲ್ಲಿ ತೊಡಗಿಕೊಂಡೆ, ಎಲ್ಲಾ ಅಧಿಕಾರಿಗಳು ತಮ್ಮ ಠಾಣೆಯ ನುರಿತ ಕೈಂ ಸಿಬ್ಬಂದಿಗಳನ್ನು ಬಳಸಿಕೊಂಡು ಆರೋಪಿತರನ್ನು ಪತ್ತೆ ಹಚ್ಚುವ ಕೆಲಸ ಪ್ರಾರಂಭಿಸಿದರು.

ನಾನು ಬೆಂಗಳೂರು ವಿ.ವಿ.ಯ ದೃಶ್ಯಕಲಾ ವಿಭಾಗದಿಂದ ತದ್ರೂಪಿ ಭಾವಚಿತ್ರಗಳನ್ನು ತಯಾರಿಸುವ ಶ್ರೀ. ಪ್ರಶಾಂತ್ ಮತ್ತು ಶ್ರೀ. ಶೈಲೇಶ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಕರೆಯಿಸಿ ಪಂಚರ ಸಮಕ್ಷಮದಲ್ಲಿ ಯುವತಿಯು ನೀಡಿದ ಚಹರೆಯ ವಿವರಗಳ ಆಧಾರದ ಮೇಲೆ ಐದು ಜನ ಸಂಶಯಿತ ಆರೋಪಿತರ ಚಹರೆಯನ್ನು ತಯಾರು ಮಾಡಿಸಿದೆ, ಅದರಲ್ಲಿ ಉಬ್ಬು ಹಲ್ಲುಗಳಿದ್ದ ವ್ಯಕ್ತಿಯ ಚಹರೆಯೂ ಕೂಡ ಇತ್ತು.  

ಪ್ರಕರಣವನ್ನು ಪತ್ತೆ ಹಚ್ಚಲು ನೇಮಕಗೊಂಡಿದ್ದ ಪಿ.ಐ ಮಾಲತೇಶ್ ರವರು ಅಪರಾಧ ಸ್ಥಳದ ಟವರ್ ಡಂಪ್ ಪಡೆದು ವಿಶ್ಲೇಷಣೆ ನಡೆಸಿದ್ದರೂ ಯಾವುದೇ ಉಪಯೋಗ ಆಗಿರಲಿಲ್ಲ ಮತ್ತು ಪ್ರತೀ ದಿನ ಅವರು ಎಲ್ಲಾ ಸರ್ವೀಸ್ ಪ್ರವೈಡರ್‌ಗಳನ್ನು ಸಂಪರ್ಕಿಸಿ ಆರೋಪಿತರು ತೆಗೆದುಕೊಂಡು ಹೋಗಿದ್ದ ಯುವತಿಯ ಮೊಬೈಲ್ ಅನ್ನು ಬಳಕೆ ಮಾಡಿದ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದರು.

ಘಟನೆ ನಡೆದು (ದಿನಾಂಕ 13.10.2012) ಸುಮಾರು ಐದು ದಿನಗಳವರೆಗೆ ನಮಗೆ ಯಾವುದೇ ರೀತಿಯ ಯಶಸ್ಸು ಸಿಗಲಿಲ್ಲ. ಎಲ್ಲಾ ಅಧಿಕಾರಿಗಳು ತಮ್ಮ ತಂಡಗಳೊಂದಿಗೆ ಸತತವಾಗಿ ಪ್ರಯತ್ನ ಮಾಡಿದರೂ ಕೂಡ ಆರೋಪಿತರ ಬಗ್ಗೆ ನಮಗೆ ಯಾವುದೇ ಮಾಹಿತಿ ದೊರೆಯಲಿಲ್ಲ.

ಯಥಾರೀತಿ ಪತ್ರಿಕೆಗಳು ತಮ್ಮ ಕೆಲಸವನ್ನು ಮುಂದುವರೆಸಿದ್ದವು . ದಿನಾಂಕ 18.10.2012 ರಂದು ಆರೋಪಿತರು ತೆಗೆದುಕೊಂಡು ಹೋಗಿದ್ದ ಯುವತಿಗೆ ಸೇರಿದ ಮೊಬೈಲ್ ಕೆಲವು ನಿಮಿಷಗಳ ಮಟ್ಟಿಗೆ ಬಳಕೆಯಾಗಿತ್ತು. ಯುವತಿಗೆ ಸೇರಿದ ಮೊಬೈಲ್ ಅನ್ನು ಬಳಸಲು ಉಪಯೋಗಿಸಿದ್ದ ಸಿಮ್ ನಂಬರ್ ದೊರಕಿಬಿಟ್ಟಿತ್ತು. ಅಲ್ಲಿಂದ ಆರೋಪಿತರನ್ನು ಪತ್ತೆ ಹಚ್ಚುವ ಕೆಲಸ ವೇಗ ಪಡೆದುಕೊಂಡಿತು.

ಇದನ್ನು ಸಹ ಓದಿ : ಸಾರ್ವಜನಿಕರಲ್ಲಿ ವಿನಂತಿ/ ಇವತ್ತು ಶಿವಮೊಗ್ಗದ ಈ ಬಹುತೇಕ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ/ ಎಲ್ಲೆಲ್ಲಿ ಓದಿ

ತನಿಖೆಯ ನಡುವೆ ಬಂತು ವಿಚಿತ್ರ ಕಾಲ್

ಈ ಪ್ರಕರಣಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪ್ರಿಂಟ್ ಮಾಧ್ಯಮದವರು ಹೆಚ್ಚಿನ ಪ್ರಚಾರ ಕೊಟ್ಟಿದ್ದರಿಂದ ಸುದ್ದಿ ಕರ್ನಾಟಕ ರಾಜ್ಯದ ಗಡಿಯನ್ನು ದಾಟಿ ಅನೇಕ ರಾಜ್ಯಗಳಿಗೆ ತಲುಪಿತ್ತು. ಅಲ್ಲದೇ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಪ್ರಪಂಚದ ಬೇರೆ ಬೇರೆ ದೇಶಗಳಿಗೂ ಕೂಡ ತಲುಪಿತ್ತು, ಈ ಕುರಿತಂತೆ ವಿದೇಶಗಳಿಂದ ನನ್ನ ಸ್ನೇಹಿತರು ಮತ್ತು ಇತರರು ನನಗೆ ಕರೆ ಮಾಡಿ ಪ್ರಕರಣದ ಬಗ್ಗೆ ಮಾಹಿತಿಯನ್ನು ಪಡೆದರು.

ನಾನು ಇದ್ದ ಸಂದಿಗ್ಧ ಪರಿಸ್ಥಿತಿಯ ದುರುಪಯೋಗ ಪಡೆಯಲು ಒಂದು ಪ್ರಯತ್ನ ಕೂಡ ನಡೆಯಿತು. ಪ್ರಕರಣ ವರದಿಯಾಗಿ ಮೂರಾಲ್ಕು ದಿನ ಕಳೆದ ನಂತರ ಅಪರಿಚಿತ ಲ್ಯಾಂಡ್‌ಲೈನ್‌ನಿಂದ ಒಬ್ಬ ವ್ಯಕ್ತಿ ನನ್ನ ಮೊಬೈಲ್ ನಂಬರ್‌ಗೆ ಕರೆ ಮಾಡಿ ಈ ಕೇಸಿನ ಆರೋಪಿತರು ಯಾರು ಮತ್ತು ಎಲ್ಲಿರುವರು ಎಂಬ ವಿಷಯ ತನಗೆ ಗೊತ್ತಿರುವುದಾಗಿ ಈ ಕುರಿತಂತೆ ಮರುದಿನ ಮತ್ತೆ ಕರೆ ಮಾಡಿ ತಿಳಿಸುವುದಾಗಿ ಹೇಳಿ ಕರೆಯನ್ನು ಕಟ್ ಮಾಡಿದ್ದನು.

ಕರೆ ಮಾಡಿದ ವ್ಯಕ್ತಿ ತಾನು ಯಾರೆಂದು ಮತ್ತು ಎಲ್ಲಿಂದ ಮಾತನಾಡುತ್ತಿರುವೆ ಎಂಬ ವಿವರಗಳನ್ನು ನೀಡಿರಲಿಲ್ಲ. ನನಗೆ ಇದು ಯಾರೋ ತನಿಖೆಯ ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿರಬಹುದೆಂದು ಅನಿಸಿತ್ತು. ಈ ಹಿಂದೆ ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನ ವೃತ್ತ ನಿರೀಕ್ಷಕನಾಗಿ ಕೆಲಸ ಮಾಡುತ್ತಿದ್ದಾಗ ಅಪರಾಧ ಎಸಗಿದ ವ್ಯಕ್ತಿಗಳೇ ಪೊಲೀಸ್ ಠಾಣೆಗೆ ಪತ್ರ ಬರೆದು ಬೇರೆ ಯಾರೋದೊ ಹೆಸರನ್ನು ಅಪರಾಧಕ್ಕೆ ತಳುಕು ಹಾಕುವ ಕೆಲಸ ಮಾಡುತ್ತಿದ್ದರು.

ಇದು ಆ ಭಾಗದ ಜನರ ಮೋಡಸ್ ಅಪರಂಡಿ ಆಗಿಬಿಟ್ಟಿತ್ತು, ಈ ಬಗ್ಗೆ ಅರಿವಿದ್ದ ನನಗೆ ಈ ದೂರವಾಣಿ ಕರೆ ತನಿಖೆಯ ದಾರಿ ತಪ್ಪಿಸಲು ಆರೋಪಿತರು ನಡೆಸುತ್ತಿರುವ ಪ್ರಯತ್ನ ಇರಬಹುದೆಂಬ ಸಣ್ಣ ಅನುಮಾನ ಬಂತು. ನಾನು ಕರೆ ಮಾಡಿದ ನಂಬರ್‌ ವಿಳಾಸ ಪರಿಶೀಲಿಸಿದಾಗ ಅದು ಮುಂಬೈ ನಗರದ ಒಂದು ಕಾಯಿನ್‌ ಬೂತ್‌ನಿಂದ ಮಾಡಿದ ಕರೆ ಎಂಬುವುದು ಪತ್ತೆಯಾಯಿತು, ಮುಂಬೈ ನಗರದಿಂದ ಇಲ್ಲಿಗೆ ಬಂದು ಈ ಕೃತ್ಯ ಎಸಗಿರುವ ಸಾಧ್ಯತೆ ತುಂಬಾ ಕಡಿಮೆ ಇದ್ದುರಿಂದ ನಾನು ಈ ದಿಕ್ಕಿನಲ್ಲಿ ತನಿಖೆಯನ್ನು ಮುಂದುವರೆಸದೆ ಇರಲು ನಿರ್ಧರಿಸಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

50 ಸಾವಿರಕ್ಕೆ ಡಿಮ್ಯಾಂಡ್​

ಮೇಲಿನ ವಿಷಯವನ್ನು ನಾನು ಕೈಬಿಟ್ಟರು ಕರೆ ಮಾಡಿದವ ನನ್ನನ್ನು ಹಾಗೆಯೇ ಬಿಡಲು ಸಿದ್ಧನಿರಲಿಲ್ಲ. ಮರುದಿನ ಆ ವ್ಯಕ್ತಿ ಮತ್ತೆ ನನ್ನ ಮೊಬೈಲ್‌ಗೆ ಕರೆ ಮಾಡಿದ ಮತ್ತು ಈ ಬಾರಿ ಸಿದಾ ಸಿದಾ ವ್ಯವಹಾರಕ್ಕೆ ನಿಂತುಬಿಟ್ಟ. ರೂ 50.000/- ಹಣ ನೀಡಿದರೆ ತಾನು ರೇಪ್ ಕೇಸ್‌ನ ಆರೋಪಿತರನ್ನು ಹಿಡಿದುಕೊಡುವುದಾಗಿ ಸ್ವಚ್ಚ ಮಂಗಳೂರಿನ ಕನ್ನಡದಲ್ಲಿ ಮಾತನಾಡಿದ.

ನಾನು ಆತನಿಗೆ ಸ್ವಲ್ಪ ಯೋಚನೆ ಮಾಡಿ ತಿಳಿಸುವುದಾಗಿ ಅರ್ಧದಿನದ ಸಮಯಾವಕಾಶವನ್ನು ಪಡೆದುಕೊಂಡೆ. ನಂತರ ನಮ್ಮ ತಂಡದ ಇತರೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದು, ಎಲ್ಲರೂ ಆತನಿಗೆ ಇರುವ ಕೆಟ್ಟ ಧೈರ್ಯವನ್ನು ಒಪ್ಪಿಕೊಂಡರು ಮತ್ತು ಇನ್ಸ್ಪೆಕ್ಟರ್ ದರ್ಜೆಯ ಪೊಲೀಸ್ ಅಧಿಕಾರಿಗೆ ಮೋಸ ಮಾಡುವ ಆತನ ಧೈರ್ಯವನ್ನು ಮೆಚ್ಚಬೇಕೆಂದರು.

ಆದರೂ ಸದರಿ ವ್ಯಕ್ತಿಯ ಬಗ್ಗೆ ವಿವರಗಳನ್ನು ತಿಳಿಯುವ ಉದ್ದೇಶದಿಂದ ಅರ್ಧದಿನ ಬಿಟ್ಟು ಅವನು ಕರೆ ಮಾಡಿದಾಗ ನಾನು 25,000/- ಹಣವನ್ನು ಅಡ್ವಾನ್ಸ್ ಕೊಡುವುದಾಗಿಯೂ ಉಳಿದ ಹಣವನ್ನು ಆರೋಪಿತರು ಸಿಕ್ಕ ನಂತರ ಕೊಡುವುದಾಗಿಯೂ ಒಪ್ಪಿಕೊಂಡೆ, ಆ ವ್ಯಕ್ತಿಯೂ ನನಗೆ ಒಂದು ಅಕೌಂಟ್ ನಂಬರ್ ನೀಡಿ ರೂ 25,000/- ಹಣವನ್ನು ಹಾಕಬೇಕೆಂದು ಹೇಳಿದನು.

ಸದರಿ ಬ್ಯಾಂಕ್ ಖಾತೆಯ ವಿವರಗಳನ್ನು ಬ್ಯಾಂಕಿನಿಂದ ಪಡೆದು ಪರಿಶೀಲಿಸಿದ್ದು, ಅದು ಎಸ್‌ಬಿಐ ಬ್ಯಾಂಕಿನ ಖಾತೆಯಿದ್ದು, ಉತ್ತರ ಪ್ರದೇಶದ ಗ್ರಾಮವೊಂದರ ಬ್ರಾಂಚ್‌ನ ಖಾತೆಯಾಗಿತ್ತು ಮತ್ತು ಅದು ರಾಕೇಶ್ ಸಿಂಗ್ ಎಂಬ ವ್ಯಕ್ತಿಯ ಹೆಸರಿನಲ್ಲಿತ್ತು. ನಾನು ಪ್ರಕರಣದ ತನಿಖೆಯನ್ನು ಬಿಟ್ಟು ಮೋಸ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಹಿಂದೆ ಬೀಳಲು ಸಿದ್ಧನಿರಲಿಲ್ಲ.

ಅದು ನನಗೆ ಸಮಯವನ್ನು ಹಾಳು ಮಾಡಿದಂತೆ ಎಂದು ಅನಿಸಿದ್ದರಿಂದ ನಾನು ಆ ದಿಕ್ಕಿನಲ್ಲಿ ಮುಂದುವರೆಯದಿರಲು ನಿರ್ಧರಿಸಿದೆ. ಮರುದಿನ ಅದೇ ವ್ಯಕ್ತಿ ಪೋನ್ ಮಾಡಿದಾಗ ಈ ಮೊದಲೇ ನಿರ್ಧರಿಸಿದಂತೆ ತನ್ನ ಪೋನ್‌ನ್ನು ಇನ್ಸ್‌ಪೆಕ್ಟರ್ ಶ್ರೀ ಬಾಳೇಗೌಡರಿಗೆ ನೀಡಿದ್ದು, ಅವರು ಸೂಕ್ತವಾದ ಪೊಲೀಸ್ ಭಾಷೆಯಲ್ಲಿ ಉತ್ತರ ನೀಡಿದ್ದರಿಂದ ಆ ವ್ಯಕ್ತಿ ತನಗೆ ಕರೆ ಮಾಡುವುದನ್ನು ನಿಲ್ಲಿಸಿದನು.

ಹೀಗೆ ಕನ್ನಡದ ಭಾಷೆಯಲ್ಲಿರುವ ಗಾದೆ ಮಾತಿನಂತೆ ಬೆಂಕಿ ಹತ್ತಿ ಊರಿಯುತ್ತಿರುವ ಮನೆಯಿಂದ ಗಳ ಹಿರಿಯಲು ಮಾಡಿದ ಪ್ರಯತ್ನವೊಂದು ವಿಫಲವಾಯಿತು. ಆದರೂ ಕೂಡ ಪೊಲೀಸರಿಂದಲೇ ಹಣ ಕೀಳಲು ಪ್ರಯತ್ನಿಸಿದ ಆ ವ್ಯಕ್ತಿಯ ಧೈರ್ಯವನ್ನು ಎಲ್ಲರೂ ಮೆಚ್ಚಿದರು.

ಆಕ್ಸಿಡೆಂಟ್ ನ್ಯೂಸ್​ : ಕೊಲ್ಲೂರಿನಿಂದ ವಾಪಸ್​ ಆಗ್ತಿದ್ದ ವೇಳೆ, ಗವಟೂರು ಬಳಿ ರಸ್ತೆ ಬದಿಗೆ ಉರುಳಿದ ದಾವಣೆಗೆರೆ ಮೂಲದವರ ಕಾರು

ಇನ್​ಲ್ಯಾಂಡ್ ಲೆಟರ್ ನಲ್ಲಿ ಬಂದಿತ್ತು ಸುಳಿವು

ಪ್ರಕರಣದ ಆರೋಪಿತರು ತೆಗೆದುಕೊಂಡು ಹೋಗಿದ್ದ ಯುವತಿಯ ಮೊಬೈಲ್ ರಾಮನಗರ ತಾಲ್ಲೂಕಿನ ಒಂದು ಗ್ರಾಮದಲ್ಲಿರುವ ಟವರ್‌ನಲ್ಲಿ ಕೆಲ ನಿಮಿಷಗಳ ಕಾಲ ಬಳಕೆಯಾಗಿತ್ತು. ಕೂಡಲೇ ನಮ್ಮ ತಂಡದಲ್ಲಿದ್ದ ಇನ್ಸ್‌ಪೆಕ್ಟರ್ ಶ್ರೀ ಸತ್ಯನಾರಾಯಣರವರಿಗೆ ಸುಮಾರು ಆರು ತಿಂಗಳ ಹಿಂದೆ ಕೆಂಗೇರಿ ಪೊಲೀಸ್ ಠಾಣೆಯ ವಿಳಾಸಕ್ಕೆ ಬಂದಿದ್ದ ಒಂದು ಇನ್‌ಲ್ಯಾಂಡ್ ಲೆಟರ್‌ನ ಬಗ್ಗೆ ನೆನಪು ಬಂತು.

ಅದರಲ್ಲಿ ರಾಮನಗರದ ಹತ್ತಿರವಿರುವ ಕಾಡಿನಲ್ಲಿ ವಾಸಿಸುವ ಇರುಳಿಗರು ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕರ ಗುಂಪೊಂದು ಆಗಾಗ ಬೆಂಗಳೂರಿಗೆ ಬರುತ್ತಿರುವುದಾಗಿ ಮತ್ತು ಸದರಿ ಹುಡುಗರ ಕೈಯಲ್ಲಿ ದೊಡ್ಡ ದೊಡ್ಡ ಸ್ಮಾರ್ಟ್ ಪೋನ್‌ಗಳು ಇರುವುದಾಗಿಯೂ ಯಾರೊ ಅನಾಮಿಕರು ಮಾಹಿತಿಯನ್ನು ಕೊಟ್ಟಿದ್ದಾಗಿ ನೆನಪಿಸಿಕೊಂಡರು.

ಕೂಡಲೇ ನಾನು ಸತ್ಯನಾರಾಯಣರವರನ್ನು ಕರೆದುಕೊಂಡು ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ಹುಡುಕಾಡಿದ್ದು ಆ ಕಾಲಕ್ಕೆ ಸದರಿ ಮಾಹಿತಿ ಪತ್ರ ನಮಗೆ ದೊರೆಯಲಿಲ್ಲ. ಪ್ರಕರಣ ಪತ್ತೆಯಾದ ನಂತರ ಒಂದು ದಿನ ಇನ್ಸ್‌ಪೆಕ್ಟರ್ ಸತ್ಯನಾರಾಯಣರವರು ಆ ಪತ್ರವನ್ನು ಹುಡುಕಿ ತಗೆದಿದ್ದು, ಆ ಪತ್ರದಲ್ಲಿ ನಾವು ಹಿಡಿದಿದ್ದ ಅಷ್ಟು ಜನ ಆರೋಪಿತರ ಹೆಸರು ಮತ್ತು ವಿಳಾಸ ಅದರಲ್ಲಿ ಇತ್ತು.

ನಮಗೆ ಆರೋಪಿತರು ರಾಮನಗರ ತಾಲ್ಲೂಕಿನವರು ಮತ್ತು ಅವರು ಇರುಳಿಗರು ಎಂಬ ಮಾಹಿತಿ ಅಷ್ಟೆ ಇತ್ತು. ನಾವುಗಳು ರಾಮನಗರಕ್ಕೆ ಹೋಗಿ ಇರುಳಿಗರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದು, ಅವರು ಬೆಟ್ಟಗಳ ಬುಡದಲ್ಲಿ ಇರುವ ಕಾಡುಗಳಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಿರುವುದಾಗಿಯೂ ಹಾಗೂ ಕಾಡಿನಲ್ಲಿ ಸಿಗುವ ಉತ್ಪನ್ನಗಳನ್ನು ಕಳ್ಳತನದಿಂದ ಮಾರಾಟ ಮಾಡಿ ಜೀವಿಸುತ್ತಾರೆಂದು ಮತ್ತು ಅವರು ರಾತ್ರಿಯಲ್ಲಿ ಕಾಡಿನಲ್ಲಿ ಸುತ್ತಾಡುವುದರಿಂದ ಇರುಳಿಗರೆಂಬ ಹೆಸರು ಬಂದಿರುವುದಾಗಿಯೂ ತಿಳಿದುಬಂತು.

ರಾಮನಗರ ಬೆಟ್ಟದ ಸುತ್ತಮುತ್ತ ಅನೇಕ ಇರುಳಿಗರ ಕಾಲೋನಿಗಳು ಇರುವುದು ತಿಳಿದು ಬಂತು. ನಾನು ಕೂಡಲೇ ರಾಮನಗರದ ತಹಸೀಲ್ದಾರ್‌ರವರನ್ನು ಭೇಟಿಯಾಗಿ ಇರುಳಿಗರ ಬಗ್ಗೆ ಮಾತನಾಡಿ ಅವರುಗಳು ಮತದಾರರ ಪಟ್ಟಿಯಲ್ಲಿ ಸೇರಿದ್ದರ ಬಗ್ಗೆ ಮಾಹಿತಿ ಕೇಳಿದಾಗ ಸುಮಾರು 06 ಇರುಳಿಗರ ಕಾಲೋನಿಗಳ ಮತದಾರರ ಪಟ್ಟಿ ಇರುವುದಾಗಿ ತಿಳಿಸಿದರು. ನಾನು ಕೂಡಲೇ ಅವರಿಗೆ ನನ್ನ ಕೋರಿಕೆ ಪತ್ರವನ್ನು ಸಲ್ಲಿಸಿದ್ದು, ಅವರು 06 ಇರುಳಿಗರ ಕಾಲೋನಿಗಳ ಮತದಾರರ ಭಾವಚಿತ್ರವಿರುವ ಪಟ್ಟಿಯನ್ನು ನನಗೆ ನೀಡಿದ್ದರು. ಅವುಗಳಲ್ಲಿ ನೂರಾರು ಭಾವಚಿತ್ರಗಳು ಮತ್ತು ಅವರುಗಳ ವಿಳಾಸಗಳ ಮಾಹಿತಿ ಇತ್ತು.

ಇದನ್ನು ಸಹ ಓದಿ : ಅಧಿಕಾರಿಗಳ ಜೊತೆ ಸಂಸದ ರಾಘವೇಂದ್ರರ ಮಿಟಿಂಗ್​/ ಶಿವಮೊಗ್ಗದ ರೈಲ್ವೆ ಓವರ್​​ ಬ್ರಿಡ್ಜ್​ ಕಾಮಗಾರಿ ಸೇರಿ ಮೂರು ಮುಖ್ಯ ವಿಚಾರಕ್ಕೆ ಕೊಟ್ಟರು ಸೂಚನೆ/ ವಿವರ ಇಲ್ಲಿದೆ

ಮತದಾರರ ಪಟ್ಟಿಯಲ್ಲಿ ಸಿಕ್ಕಿತ್ತುಆರೋಪಿಗಳ ಲಿಂಕ್

ಮರಳಿ ಠಾಣೆಗೆ ಬಂದು ಯುವತಿಯನ್ನು ಬರಮಾಡಿಕೊಂಡು ಮತ್ತು ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಅವರ ಸಮಕ್ಷಮದಲ್ಲಿ ಸದರಿ ಮತದಾರರ ಪಟ್ಟಿಯನ್ನು ಯುವತಿಗೆ ತೊರಿಸಿದೆ. ಬಹಳಷ್ಟು ಸಮಯ ಮತದಾರರ ಭಾವಚಿತ್ರಗಳನ್ನು ನೋಡಿದ ಆ ಯುವತಿಯು ........... ಗ್ರಾಮದ 1. ಶಿವಣ್ಣ 2. ರಾಮಯ್ಯ @ ರಾಮ 3. ಈರಯ್ಯ 4. ರಾಜ @ ರಾಜ್ ಎಂಬ ನಾಲ್ಕು ಜನರನ್ನು ಗುರುತಿಸಿದ್ದು,

ಬಹುಪಾಲು ಈ ಯುವಕರಂತೆ ಆ ವ್ಯಕ್ತಿಗಳು ಇದ್ದರೂ ಎಂದು ಗುರುತು ಹಿಡಿದರು. ಈ ಕುರಿತು ನಾನು ಪಂಚನಾಮೆಯನ್ನು ಮಾಡಿ ಆ ಎಲ್ಲಾ ಮತದಾರರ ಪಟ್ಟಿಗಳನ್ನು ಅಮಾನತ್ತು ಪಡಿಸಿಕೊಂಡೆ. ನಮಗೆ ಈಗ 08ಜನ ಆರೋಪಿತರಲ್ಲಿ ನಾಲ್ಕು ಜನರ ಮಾಹಿತಿ ದೊರೆತಿತ್ತು ಮತ್ತು ಆರೋಪಿತರು ರಾಮನಗರ ತಾಲ್ಲೂಕಿನ .......ಎಂಬ ಗ್ರಾಮದವರಾಗಿದ್ದರು.

ಈ ಮುಂಚೆ ಯುವತಿಯ ಸಹಾಯದಿಂದ ರಚಿಸಿದ್ದ ಆರೋಪಿತರ ತದ್ರೂಪಿ ಭಾವಚಿತ್ರಗಳನ್ನು ಮತದಾರರ ಪಟ್ಟಿಯಲ್ಲಿ ಇದ್ದ ಯುವತಿ ಗುರುತಿಸಿದ್ದ ಭಾವಚಿತ್ರಗಳಿಗೆ ಹೋಲಿಕೆ ಮಾಡಿದಾಗ ಇಬ್ಬರು ವ್ಯಕ್ತಿಗಳ ಭಾವಚಿತ್ರಗಳು ಬಹುತೇಕ ಹೋಲಿಕೆ ಆಗುತ್ತಿತ್ತು. ಹಾಗಾಗೀ ಅವರೇ ಆರೋಪಿತರು ಎಂಬುದು ನನಗೆ ಖಾತ್ರಿಯಾಗಿತ್ತು. ಅಲ್ಲದೇ ಯುವತಿಯ ಮೊಬೈಲ್ ಬಳಕೆಯಾಗಿದ್ದ ಟವರ್‌ನ ವ್ಯಾಪ್ತಿಯಲ್ಲಿ .......................ಗ್ರಾಮ ಬರುವುದನ್ನು ಖಾತ್ರಿಪಡಿಸಿಕೊಂಡೆ.

ಸಾಗರ ಮಾರಿಕಾಂಬೆ ಜಾತ್ರೆಗೆ ಮರ ಕಡಿಯುವ ಶಾಸ್ತ್ರ / ವಾಡಿಕೆ, ಸಂಪ್ರದಾಯ,ಆವಾಹನೆ , ಹಲಸಿನ ಮರ/ ಎಷ್ಟೆಲ್ಲಾ ವಿಧಿವಿಧಾನ? ಪೂರ್ತಿ ವರದಿ ಇಲ್ಲಿದೆ ಓದಿ

ಶೋಲೆ ಸಿನಿಮಾದ ರಾಮನಗರದ ಗುಡ್ಡದ ಕೆಳಗೆ

ಬೆಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುವ ಬಹಳಷ್ಟು ಜನ ಸಿಬ್ಬಂದಿರವರು ರಾಮನಗರಕ್ಕೆ ಸೇರಿದವರು ಇದ್ದು. ಅಲ್ಲಿಂದಲೇ ದಿನನಿತ್ಯ ಕೆಲಸಕ್ಕೆ ಬಂದು ಹೋಗುತ್ತಾರೆ ಎಂಬ ವಿಷಯ ತಿಳಿದ್ದರಿಂದ ನಾವು ರಾಮನಗರದ ಸಿಬ್ಬಂದಿಯನ್ನು ಗುರುತಿಸಿ .......................ಗ್ರಾಮದ ಬಗ್ಗೆ ವಿಷಯವನ್ನು ಸಂಗ್ರಹಿಸಿದ್ದು, “ಶೋಲೆ” ಹಿಂದೆ ಚಿತ್ರದ ಖ್ಯಾತಿಯ ರಾಮ ನಗರ ಗುಡ್ಡದ ಕೆಳಗೆ ಆ ಗ್ರಾಮ ಇದ್ದು, ಸುಮಾರು 20 ರಿಂದ 25 ಗುಡಿಸಲುಗಳು ಇರುವುದಾಗಿ ತಿಳಿದು ಬಂತು. ಅದೇ ದಿನ ರಾತ್ರಿ ಸದರಿ ಗ್ರಾಮವನ್ನು ಸುತ್ತವರೆಯಲು ತಿರ್ಮಾನಿಸಿದೆವು.

ತಂಡದಲ್ಲಿದ್ದ ಎಲ್ಲಾ ಇನ್ಸ್‌ಪೆಕ್ಟರ್‌ರವರು ತಮ್ಮ ಜೊತೆಯಲ್ಲಿದ್ದ ನುರಿತ ಕ್ರೈಂ ಸಿಬ್ಬಂದಿಗಳೊಂದಿಗೆ ಮತ್ತು ಮಹಿಳಾ ಸಿಬ್ಬಂದಿಗಳೊಂದಿಗೆ ಹೊರಟಿದ್ದು, ಎಲ್ಲರೂ ಸೇರಿ ಸುಮಾರು 50 ಜನರ ತಂಡ ರಾತ್ರಿ ಒಂದು ಗಂಟೆಯ ಸುಮಾರಿಗೆ .......................ಗ್ರಾಮವನ್ನು ಸುತ್ತುವರೆದು ಅಷ್ಟು ಗುಡಿಸಲುಗಳಲ್ಲಿದ್ದ ಗಂಡಸರನ್ನು ವಶಕ್ಕೆ ಪಡೆದು ಗುಡಿಸಲುಗಳನ್ನು ಸರ್ಚ್ ಮಾಡಿದ್ದು,

ಸುಮಾರು 20 ಜನ ಪುರುಷರು ಸಿಕ್ಕಿ ಬಿದ್ದಿದ್ದರು ಮತ್ತು ನೂರಕ್ಕಿಂತಲೂ ಹೆಚ್ಚು ಮೊಬೈಲ್ ಸೆಟ್‌ಗಳು ದೊರಕಿದ್ದವು ಆದರೇ ಆ 20 ಜನ ಪುರುಷರಲ್ಲಿ ನಮಗೆ ಬೇಕಾಗಿದ್ದ 08 ಜನ ಇರಲಿಲ್ಲ. ವಿವರಗಳು ಗೊತ್ತಿದ್ದ ನಾಲ್ಕು ಜನರ ಬಗ್ಗೆ ವಿಚಾರ ಮಾಡಲಾಗಿ ಅವರುಗಳು ತಲೆತಪ್ಪಿಸಿಕೊಂಡಿರುವುದಾಗಿ ಮತ್ತು ಗುಡ್ಡದ ಮೇಲೆ ಇರುವುದಾಗಿ ತಿಳಿದು ಬಂತು.

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತುಹೇಗಾಯ್ತುವಿವರ ಓದಿ

ಗುಡ್ಡದ ಮೇಲಿದ್ದರು ಆರೋಪಿಗಳು

ಗುಡ್ಡದ ಮೇಲಿರುವ ಆರೋಪಿತರನ್ನು ಹಿಡಿಯುವುದು ಅಷ್ಟು ಸುಲಭದ ಮಾತಗಿರಲಿಲ್ಲ. ನಾವು ಗುಡ್ಡ ಹತ್ತುವ ಸಮಯದಲ್ಲಿ ನಮ್ಮ ಬರುವಿಕೆಯ ಬಗ್ಗೆ ಅವರಿಗೆ ಗೊತ್ತಾಗಿಬಿಡಿತ್ತಿತ್ತು. ಆದ್ದರಿಂದ ನಾವುಗಳು ಯಾವುದೇ ಟಾರ್ಚನ್ನು ಬಳಸದೇ ಮತ್ತು ಬಿಳಿ ಬಟ್ಟೆಯನ್ನು ಧರಿಸದೇ ಇರುವರನ್ನು ಮಾತ್ರ ಕರೆದುಕೊಂಡು ನಮ್ಮ ಕಾರ್ಯಚರಣೆಯನ್ನು ಮುಂದುವರೆಸಲು ನಿರ್ಧರಿಸಿದೆವು.

ಆರೋಪಿತರು ಬಚ್ಚಿಟ್ಟುಕೊಂಡಿರುವ ಸ್ಥಳದ ಮಾಹಿತಿಯಿದ್ದ ಅದೇ ಗ್ರಾಮದ ಒಬ್ಬ ವ್ಯಕ್ತಿಯನ್ನು ಜೊತೆಯಲ್ಲಿ ಕರೆದುಕೊಂಡು ನಾವು ಕತ್ತಲೆಯಲ್ಲಿ ಮುಂದುವರೆದುವು. ಕತ್ತಲಿನಲ್ಲಿ ಬೆಟ್ಟ ಹತ್ತುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅನೇಕ ಜನರು ಬಂಡೆಗಳ ಮೇಲೆ ಬ್ಯಾಲೇನ್ಸ್ ತಪ್ಪಿ ಬಿದ್ದು ಗಾಯ ಮಾಡಿಕೊಂಡರು.

ಇನ್ಸ್ಪೆಕ್ಟ‌ ಬಾಳೇಗೌಡರಂತು ನೀರಿನ ಸಣ್ಣ ಹೊಂಡದಲ್ಲಿ ಬಿದ್ದುಬಿಟ್ಟರು, ಎಲ್ಲರೂ ಸೇರಿ ಅವರನ್ನು ಹೊರಗೆ ಎತ್ತಬೇಕಾಯಿತು. ನಾನು ರಾಯಚೂರಿನಲ್ಲಿ ಮತ್ತು ತಿರ್ಥಹಳ್ಳಿಯಲ್ಲಿ ನಕ್ಸಲ್ ಬಾಧಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದು. ಆಂಟಿ ನಕ್ಸಲ್ ಸ್ಟ್ಯಾಡ್‌ಗಳೊಂದಿಗೆ ಕೂಬಿಂಗ್ ವಿಷಯವಾಗಿರಲಿಲ್ಲ. ಮಾಡಿ ಅಭ್ಯಾಸ ಇದ್ದುರಿಂದ ನನಗೆ ಇದು ಹೊಸ ವಿಷಯವಾಗಿರಲಿಲ್ಲ.

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ನಾಯಿ ಬೊಗಳಿ ಕೆಲಸ ಕೆಟ್ಟಿತ್ತು

ಸುಮಾರು ಒಂದು ಗಂಟೆಯ ನಡಿಗೆಯ ನಂತರ ಬೆಟ್ಟದ ಮೇಲೆ ಸ್ವಲ್ಪ ದೂರದಲ್ಲಿ ನಾಯಿಗಳು ಬೊಗಳುವುದು ಕೇಳಿಬಂತು. ನಮ್ಮ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯು ಆರೋಪಿತರು ಜೊತೆಯಲ್ಲಿ ನಾಯಿಗಳನ್ನು ಕರೆದುಕೊಂಡು ಹೋಗಿರುವುದಾಗಿಯೂ ಮತ್ತು ಅವುಗಳಿಗೆ ನಾವು ಬರುತ್ತಿರುವ ವಾಸನೆ ಸಿಕ್ಕಿದೆ ಎಂದು, ಅದಕ್ಕೆ ಅವುಗಳು ಬೊಗಳುತ್ತಿರುವುದಾಗಿ ತಿಳಿಸಿದ.

ಆದಾಗ್ಯೂ ನಾವು ಮುಂದುವರೆದವು ಮತ್ತೆ ಸ್ವಲ್ಪ ಸಮಯದ ನಂತರ ಬಂಡೆಗಳ ನಡುವೆ ಸ್ವಲ್ಪ ಸಮತಟ್ಟದ ಜಾಗ ಸಿಕ್ಕಿದ್ದು, ಅಲ್ಲಿ ಆಹಾರವನ್ನು ಪಾರ್ಸಲ್ ಮಾಡಿದ ಖಾಲಿ ಪೇಪರ್, ಖಾಲಿ ನೀರಿನ ಬಾಟಲಿಗಳು ಕಂಡುಬಂದಿದ್ದು, ಆರೋಪಿತರು ಅಲ್ಲಿಂದಲೂ ತಪ್ಪಿಸಿಕೊಂಡಿದ್ದರು. ನಮಗೆ ಬಹಳ ನಿರಾಶೆಯಾಯಿತು.

ನಾವು ಕರೆದುಕೊಂಡು ಬಂದ ವ್ಯಕ್ತಿಯೊಂದಿಗೆ .......................ಗ್ರಾಮಕ್ಕೆ ಮರಳಿ ಬಂದೆವು. ಮುಂದೇನು ಮಾಡಬೇಕೆಂದು ಅಲ್ಲಿಯೆ ಕುಳಿತು ಯೋಚಿಸುತ್ತಿದ್ದಾಗ ಆರೋಪಿಗಳೊಂದಿಗೆ ಬೆಟ್ಟದಲ್ಲಿ ತಪ್ಪಿಸಿಕೊಂಡಿದ್ದ ಯುವಕನೊಬ್ಬ ಮತ್ತೆ ಗ್ರಾಮಕ್ಕೆ ಮರಳಿರುವುದಾಗಿ ಸುದ್ದಿ ಬಂತು. ನಾವು ಹೋಗಿ ಮನೆಯಲ್ಲಿದ್ದ ಯುವಕನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವನು ಕೂಡ ನಮಗೆ ಬೇಕಾಗಿದ್ದ ಆರೋಪಿಯಾಗಿರಲಿಲ್ಲ. ಆದರೆ 08 ಜನ ನಮಗೆ ಬೇಕಾಗಿದ್ದ ಆರೋಪಿತರ ಬಗ್ಗೆ ಹಾಗೂ ಅವರನ್ನು ಹಿಡಿಯಲು ಬೇಕಾಗಿದ್ದ ಮಾಹಿತಿಯನ್ನು ಆ ಯುವಕನೇ ನೀಡಿಬಿಟ್ಟನು.  

ಇನ್ನೂ ಇದೆ : ವೀಕ್ಷಕರೇ ರಾಜ್ಯದ ನಂಬರ್​ 1 ಇನ್ವೆಸ್ಟಿಗೇಷನ್ ಆಫಿಸರ್ ಎಂದೇ ಪೊಲೀಸ್ ಇಲಾಖೆಯಲ್ಲಿ ಖ್ಯಾತರಾಗಿರುವ ಬಾಲರಾಜ್​ರವರು ನಡೆಸಿದ್ದ ಜ್ಞಾನಭಾರತಿ ಕೇಸ್​ನ ಸರಣಿಯ ಕೊನೆಯ ಭಾಗವನ್ನ ಓದಲು ನಮ್ಮ ವಾಟ್ಸ್ಯಾಪ್​ಗೆ ಗ್ರೂಪ್​ನಲ್ಲಿ ಜಾಯಿನ್​ ಆಗಿ, ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್​ನಲ್ಲಿ ತಿಳಿಸಿ, ಮತ್ತು ನಮ್ಮ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಸೇರ್ಪಡೆಗೊಳ್ಳಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ