ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಇಲ್ಲಿನ ವನಜಾಕ್ಷಮ್ಮ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ದುಷ್ಕರ್ಮಿಗಳ ದಾಂಧಲೆಯಲ್ಲಿ ಕಾರು ಪೂರ್ತಿ ಸುಟ್ಟುಹೋಗಿದೆ.

ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಕೊಟ್ಟಿರುವ ಕೇಸ್​ ವಾಪಸ್ ತೆಗೆದುಕೊಂಡಿಲ್ಲ ಎಂಬ ಸಿಟ್ಟಿಗೆ ಮನೆ ಎದುರು ಹೋಗಿ ಬೆದರಿಕೆ ಹಾಕಿ, ಕಾರ್​ಗೆ ಬೆಂಕಿ ಹಚ್ಚಿದ ಘಟನೆ ಶಿವಮೊಗ್ಗ ನಗರದ ಜೈಲ್​ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ವನಜಾಕ್ಷಮ್ಮ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ದುಷ್ಕರ್ಮಿಗಳ ದಾಂಧಲೆಯಲ್ಲಿ ಕಾರು ಪೂರ್ತಿ ಸುಟ್ಟುಹೋಗಿದೆ. 

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಕಳೆದ ಸೆಪ್ಟಂಬರ್​ನಲ್ಲಿ ಜೈಲ್​ ರೋಡ್ನ ಮಾರುತಿ ಟೀಸ್ಟಾಲ್​ ಬಳಿಯಲ್ಲಿ ನಾಲ್ವರು ಯುವಕರು ಬಂದು ಅಂಗಡಿಯಲ್ಲಿದ್ದ ವನಜಾಕ್ಷಮ್ಮರವರನ್ನ ಬೈದು ನಿಂದಿಸಿ ಹಲ್ಲೆಗೆ ಮುಂದಾಗಿದ್ದರಂತೆ. ಆ ಸಂಬಂಧ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ (Jayanagar police station) ಕೇಸ್​ ಕೂಡ ದಾಖಲಾಗಿತ್ತು. 

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

ಈ ಕೇಸ್​ನ್ನ ವಾಪಸ್​ ತೆಗೆದುಕೊಳ್ಳಬೇಕು ಎಂದು ಆರೋಪಿಗಳು ಪದೇ ಪದೇ ಬೆದರಿಸುತ್ತಿದ್ದರಂತೆ. ಇದರ ನಡುವೆ ಶಿವಮೊಗ್ಗದ ಜೈಲ್​ ರಸ್ತೆಯಲ್ಲಿರುವ ವನಜಾಕ್ಷಮರವರ ನಿವಾಸಕ್ಕೆ ನಿನ್ನೆ ರಾತ್ರಿ ತೆರಳಿದ ನಾಲ್ವರು, ಅವರನ್ನು ನಿಂದಿಸಿ ಮನೆಯಿಂದ ಹೊರಕ್ಕೆ ಬರುವಂತೆ ಬೆದರಿಕೆ ಹಾಕಿದ್ದಾರೆ. ಹೆದರಿಕೊಂಡು ಮನೆಯವರು ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ್ದಾರೆ. 

ಈ ರೀತಿ ಹೆದರಿಸಿ ಬೆದರಿಸುವುದಾದರೇ ನಾವು ಬದುಕುವುದು ಹೇಗೆ? ನಮಗೆ ರಕ್ಷಣೆ ಸಿಗುತ್ತಿಲ್ಲ ಎಂದು ಮಹಿಳೆ ಅಲವತ್ತುಕೊಂಡಿದ್ದು, ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ಧಾರೆ. 

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link