ಸಾರ್ವಜನಿಕರಲ್ಲಿ ವಿನಂತಿ | ಶಿವಮೊಗ್ಗ | ಈ ಪ್ರದೇಶದಲ್ಲಿ ಎರಡು ದಿನ ನೀರು ಬರುವುದು ಅನುಮಾನ!? | ಎಲ್ಲೆಲ್ಲಿ? ಕಾರಣ?

Malenadu Today

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS

ಸಹಾಯಕ ಕಾರ್ಯಪಾಲಕ ಅಭಿಯಂತರವರ ಕಾರ್ಯಾಲಯ, ಪಾಲನೆ ಮತ್ತು ನಿರ್ವಹಣಾ ಉಪ ವಿಭಾಗ ಸರ್ವಜ್ಞ ವೃತ್ತ,  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕುಡಿಯುವ ನೀರಿನ ಪೂರೈಕೆ ಸಂಬಂಧ ಪ್ರಕಟಣೆಯೊಂದನ್ನ ಹೊರಡಿಸಲಾಗಿದೆ.  

ಶಿವಮೊಗ್ಗ ನಗರದ ಕೆ.ಆರ್.ವಾಟರ್‌ವರ್ಕ್ಸ್‌ಲ್ಲಿರುವ ಆರ್.ಎಂ.-07 ಕೊಳವೆ ಮಾರ್ಗಕ್ಕೆ 508 ಮಿಮೀ ವ್ಯಾಸದ ಎಂ.ಎಸ್ ಕೊಳವೆಮಾರ್ಗ ಅಳವಡಿಸಲಾಗಿದೆ. ಈ ಕೊಳವೆಮಾರ್ಗವು ದಿನಾಂಕ: 11- 10-2023 ರಂದು ಹಾನಿಯಾಗಿದೆ. ಹಾಗಾಗಿ, ತುರ್ತು ದುರಸ್ಥಿ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 12- 10-2023 ಸ್ಥಗಿತಗೊಳಿಸಬೇಕಾಗಿರುತ್ತದೆ. 

ಆದ್ದರಿಂದ ದಿನಾಂಕ: 12-10-2023 ಮತ್ತು 13-10-2023 ರಂದು ನಗರದ ಮಿಳ್ಳಘಟ್ಟ, ತುಂಗಾನಗರ, ಪಿ.ಡಬ್ಲ್ಯೂಡಿ ಟ್ಯಾಂಕ್ (ಮಾರನವಮಿಬೈಲ್), ಜಿಲ್ಲಾಪಂಚಾಯತ್ ಕಛೇರಿ ಎದುರಿನ, ರವೀಂದ್ರನಗರ, ಸ್ಟೇಡಿಯಂ ಟ್ಯಾಂಕ್, ಶಿವಮೂರ್ತಿ ಸರ್ಕಲ್ ಟ್ಯಾಂಕ್‌ಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವುದಿಂದ ಸದರಿ ಟ್ಯಾಂಕ್‌ಗಳಿಗೆ ಹೊಂದಿಕೊಂಡಿರುವಂತಹ ಬಡಾವಣೆಗಳಲ್ಲಿ ದೈನಂದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಮಂಡಳಿ ಕೋರಿದೆ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article