ರಾಜ್ಯ ಮಟ್ಟದ ಜೂನಿಯರ್ ವಿಭಾಗದ Tennis tournament Republic cup - 2024 ಕ್ರೀಡಾಕೂಟಕ್ಕೆ ಚಾಲನೆ

State-level junior category Tennis tournament Republic Cup - 2024 begins

ರಾಜ್ಯ ಮಟ್ಟದ ಜೂನಿಯರ್ ವಿಭಾಗದ Tennis tournament Republic cup - 2024  ಕ್ರೀಡಾಕೂಟಕ್ಕೆ ಚಾಲನೆ
Tennis tournament Republic Cup - 2024

SHIVAMOGGA  |  Jan 6, 2024  |    ಶಿವಮೊಗ್ಗ ಟೆನಿಸ್ ಕ್ಲಬ್ ವತಿಯಿಂದ,  ಜಿಲ್ಲಾಡಳಿತ ಶಿವಮೊಗ್ಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ. ಹಾಗೂ ಶಿವಮೊಗ್ಗ ನಾಗರೀಕರ ಸಹಕಾರದೊಂದಿಗ, ಶಿವಮೊಗ್ಗ ನಗರದ ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ರಾಜ್ಯ ಮಟ್ಟದ ಜೂನಿಯರ್ ವಿಭಾಗದ Tennis tournament Republic cup - 2024  ಹಮ್ಮಿಕೊಳ್ಳಲಾಗಿತ್ತು. 

ಈ ಕ್ರೀಡಾಕೂಟವನ್ನು ಶಾಸಕರು ( ವಿಧಾನ ಪರಿಷತ್ ) ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ  ಡಿ ಎಸ್ ಅರುಣ್* ಅವರು ಉದ್ಘಾಟಿಸಿ, ಮಾತನಾಡಿದರು. ಶಿವಮೊಗ್ಗದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಟೆನಿಸ್ ಟೂರ್ನಮೆಂಟ್ ನಡೆಯುತ್ತಿರುವುದು ತುಂಬಾ ಸಂತೋಷ ಹಾಗೂ ಇಂತಹ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು  ತಿಳಿಸಿದರು.

READ : ಶಿವಮೊಗ್ಗ ತಿರುಪತಿ ವಿಮಾನ ಹಾರಾಟ ರದ್ದು! ಕಾರಣವೇನು?

ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾದ  ಜಿಲ್ಲಾಧಿಕಾರಿಗಳಾದ ಡಾ. ಆರ್. ಸೆಲ್ವಮಣಿ ಅವರು ಸರ್ಕಾರವು ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾವುಗಳೆಲ್ಲ ನಮ್ಮ ದೇಶಕ್ಕೆ ಹೆಸರು ತರಬೇಕೆಂದು ಕ್ರೀಡಾರ್ಥಿಗಳಿಗೆ ಆಶೀಸಿದರು. ಅಧ್ಯಕ್ಷತೆಯನ್ನು ಶಿವಮೊಗ್ಗ ಟೆನಿಸ್ ಕ್ಲಬ್ ಅಧ್ಯಕ್ಷರು ಹಾಗೂ ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಗಳಾದ G. U ಶಂಕರ್ ಅವರು ವಹಿಸಿದ್ದರು. 

ಮುಖ್ಯ ಟೆನಿಸ್ ತರಬೇತುದಾರರಾದ  ವೆಂಕಟಾಚಲ ಶಾಸ್ತ್ರಿ ಅವರು, ಮಹಾಂತೇಶ್, ಟೆನಿಸ್ ಕ್ಲಬ್ ನ ಸದಸ್ಯರಾದ ಪಶುವೈದ್ಯಾಧಿಕಾರಿಗಳಾದ ಡಾ. ರವಿ. ಎಂ ಅವರು, ಡಿ ಕೆ ಸೌರಭ್, ಅಭಿಷೇಕ್ ವಿಶೇಷ್, ವಿನಾಯಕ್, ಸಂತೋಷ್, ಮಂಜುನಾಥ್, ಕುಮಾರ್, Dr. ಅಭಿಷೇಕ್, ಮಂಜುನಾಥ್, ಕಾರ್ತಿಕ್, ಅಂಕಿತ್, ಚಿರಾಯುಶ್, ಅರ್ಜುನ್ ಕಾಮತ್,  ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು Dr. ರವಿ. ಎಂ ರವರು ನಿರ್ವಹಿಸಿದರೆ, ವಂದನಾರ್ಪಣೆಯನ್ನು ಅಭಿಷೇಕ್ ನಿರ್ವಹಿಸಿದರು.

ಒಟ್ಟು 78 ಮಕ್ಕಳು,  8 ವರ್ಷ ಒಳಗಿನ, 10 ವರ್ಷ ಒಳಗಿನ, 12 ವರ್ಷ ಒಳಗಿನ, 14 ವರ್ಷ ಒಳಗಿನ ಹಾಗೂ 16 ವರ್ಷ ಒಳಗಿನವರ ವಿಭಾಗಗಳಲ್ಲಿ ಭಾಗವಸಿದ್ದರು.