MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗದ ಬೊಮ್ಮನ ಕಟ್ಟೆಯಲ್ಲಿ 75 ನೇ ಶ್ರೀ ರಾಘವೇಂದ್ರ ಸ್ವಾಮಿ ಮಠ ಸ್ಥಾಪನೆ ವಿದ್ಯುಕ್ತವಾಗಿ ಆರಂಭವಾಗಲಿದೆ. ಈ ಸಂಬಂಧ ನಿನ್ನೆ ಮಂತ್ರಾಲಯದ ಸುಬುಧೇಂದ್ರ ತೀರ್ಥರವರ ಮೆರವಣಿಗೆ ನಡೆಯಿತು. ವಿನೋಬನಗರದ ಡಿವಿಎಸ್ ಸಂಸ್ಥೆಯಂದ ಬೊಮ್ಮನಕಟ್ಟೆಯವರೆಗೂ ಶ್ರೀಗಳ ಮೆರವಣಿಗೆ ಸಾಗಿ ಬಂತು. ಶಾಸಕ ಕೆಎಸ್.ಈಶ್ವರಪ್ಪರವರು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇನ್ನೂ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬುದೇಂಧ್ರ ತೀರ್ಥರವರು ಕಾಮಧೇನು ಎಂದರೆ ಬೇಡಿಕೆಯನ್ನ ಈಡೇರಿಸುವ ಸೂಚಕ. ಮಂತ್ರಾಲಯದಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿರುವ ರಾಘವೇಂದ್ರ ಸ್ವಾಮಿಗಳು ಸಹ ಕಾಮಧೇನು ಎನಿಸಿಕೊಂಡಿದ್ದಾರೆ. ಭಕ್ತರು ಇಷ್ಟಾರ್ಥವನ್ನು ಶ್ರೀಗಳು ಈಡೇರಿಸುತ್ತಿದ್ದಾರೆ. ಇಲ್ಲಿನ ರಾಘವೇಂದ್ರ ಮಠ ಸ್ಥಾಪನೆ ನಾಳೆ ಉದ್ಘಾಟನೆಗೊಳ್ಳಲಿದ್ದು, ಮಂತ್ರಾಲಯದಿಂದ ತಂದಿರುವ ಬೃಂಧಾವನ ಮೃತ್ತಿಕೆಯನ್ನ ಇಲ್ಲಿ 48 ಗಂಟೆಗಳ ಕಾಲ ಇರಿಸಿ ರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆ ಮಾಡಲಿದ್ದೇವೆ ಎಂದರು.
ವಿಡಿಯೋ ನೋಡಿ : lINK
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
