ಸರ್ವಜ್ಞ ಜಯಂತಿ ಆಚರಣೆ ಹಿನ್ನೆಲೆ ರಾಜ್ಯಮಟ್ಟದ ಪೂರ್ವಭಾವಿ ಸಭೆ

State-level preparatory meeting on Sarvajna Jayanti celebrations

ಸರ್ವಜ್ಞ ಜಯಂತಿ ಆಚರಣೆ ಹಿನ್ನೆಲೆ ರಾಜ್ಯಮಟ್ಟದ ಪೂರ್ವಭಾವಿ ಸಭೆ
State-level preparatory meeting on Sarvajna Jayanti celebrations

SHIVAMOGGA  |  Jan 6, 2024  |    ಸರ್ವಜ್ಞ ಜಯಂತಿಯನ್ನು ವಿಶೇಷವಾಗಿ  ಸರ್ವಜ್ಞ ಜನ್ಮ ಸ್ಥಳವಾದ ಮಾಸೂರು ಅಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.  ಶ್ರೀ ಕುಂಬಾರ ಬಸವ ಗುಂಡಯ್ಯ ಶ್ರೀ ದುರ್ಗಾ ಮಹಾ ಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲ, ಬಂಟ್ವಾಳ ಹಾಗೂ ಶ್ರೀ ಚಿತ್ರದುರ್ಗ ಕುಂಬಾರ ಸ್ವಾಮೀಜಿ ಪೂಜ್ಯರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿರುವ ಆಚರಣೆ ಸಂಬಂಧ  ಮೊದಲನೇ ಪೂರ್ವ ಭಾವಿ ಸಭೆಯನ್ನು ದಿನಾಂಕ 07-01-2024 ರಂದು ಬೆಳಿಗ್ಗೆ 11-00 ಗಂಟೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶ್ರೀ ಹಿರೇಕಲ್ಮಠದಲ್ಲಿ ನಡೆಸಲು ನಿರ್ಧರಿಸಲಾಗಿದೆ. 

READ : ರಾಜ್ಯ ಮಟ್ಟದ ಜೂನಿಯರ್ ವಿಭಾಗದ Tennis tournament Republic cup - 2024 ಕ್ರೀಡಾಕೂಟಕ್ಕೆ ಚಾಲನೆ

ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಎಲ್ಲಾ ಸಂಘಟನೆ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಹಾಗೂ ಸಮಾಜದ ಹಿರಿಯರು ಭಾಗವಹಿಸಿ ಜಯಂತಿಯನ್ನು ಹೇಗೆ ಯಾವ ರೀತಿಯಲ್ಲಿ ಯಶಸ್ವಿಯಾಗಿ ಮಾಡಲು ಚರ್ಚೆ ಮಾಡೋಣ ಹಾಗೆ ಸರಕಾರದ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಹಿರಿಯ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರನ್ನು ಕರೆಯಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಯಾವ ರೀತಿಯಲ್ಲಿ ಪ್ರಯತ್ನಿಸಬಹುದು ಎಂಬುದರ ಜೊತೆಗೆ ಇನ್ನು ಹಲವಾರು ಪ್ರಮುಖ ವಿಷಯಗಳ ಬಗ್ಗೆ ಎಲ್ಲರೂ ಸೇರಿ ಚರ್ಚೆ ಮಾಡುವ ಸಲುವಾಗಿ ಸಮುದಾಯದ ಮುಖಂಡರು ಪೂರ್ವಭಾವಿ ಸಭೆಗೆ ಹಾಜರಾಗುವಂತೆ  ಕಾರ್ಯಧ್ಯಕ್ಷರು ಅಮರೇಶ ಕುಂಬಾರವರು ಕರೆ ನೀಡಿದ್ದಾರೆ.

07-01-2024 ಸಮಯ ಬೆಳಿಗ್ಗೆ 11-00 ಗಂಟೆಗೆ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವೀಗೊಳಿಸಬೇಕು .ಹೊನ್ನಾಳಿಯಲ್ಲಿ ನಡೆಯಲಿರುವ ಭಾನುವಾರದ ಕಾರ್ಯಕ್ರಮಕ್ಕೆ ಬರುವಂತಹ ಸಮಾಜ ಬಾಂದವರು ನನಗೆ ನಾವು ಬರುತ್ತೇವೆ ಎಂದು ಮೆಸೇಜು ಕಳುಹಿಸುವುದು ಅಥವಾ ಕರೆ ಮಾಡಿ ತಿಳಿಸುವುದು.  ಬನ್ನಿ ಭಾಗವಹಿಸೋಣ, ಒಗ್ಗಟ್ಟನ್ನು, ಸಹಬಾಳ್ವೆಯನ್ನು ಪ್ರದರ್ಶಿಸೋಣ ಎಂದು ಕರ್ನಾಟಕ ಪ್ರದೇಶ ಕುಂಬಾರ ಯುವ ಘಟಕ, ಜಿಲ್ಲಾಧ್ಯಕ್ಷರು ಚಂದ್ರಶೇಖರ ಎಂ.ಕರೆಕೊಟ್ಟಿದ್ದಾರೆ