ಆಟೋ ಚಾಲಕ ಬೆಳಗ್ಗೆ ಹೇಳಿದ್ದ ಹಲ್ಲೆ ಕಥೆಗೆ ಸಂಜೆಯೊಳಗೆ ಟ್ವಿಸ್ಟ್! ಏನೆಲ್ಲಾ ಆಯ್ತು ಗೊತ್ತಾ?

The story of the assault told by the auto driver in the morning has a twist in the evening! Do you know what happened?

ಆಟೋ ಚಾಲಕ ಬೆಳಗ್ಗೆ ಹೇಳಿದ್ದ   ಹಲ್ಲೆ ಕಥೆಗೆ  ಸಂಜೆಯೊಳಗೆ ಟ್ವಿಸ್ಟ್! ಏನೆಲ್ಲಾ ಆಯ್ತು ಗೊತ್ತಾ?

 KARNATAKA NEWS/ ONLINE / Malenadu today/ May 16, 2023 GOOGLE NEWS / SHIVAMOGGA NEWS 

ಶಿವಮೊಗ್ಗ/ ನಿನ್ನೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್   ಕಚೇರಿ ಬಳಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ , ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಈಶ್ವರಪ್ಪನವರ ಬಳಿ ತನ್ನ ಆಟೋ ಜಖಂ ಮಾಡಿದ್ದು ಹಾಗೂ ತನಗೆ ಹಲ್ಲೆ ಮಾಡಿದ್ದರ ಬಗ್ಗೆ ಅಳಲು ತೋಡಿಕೊಂಡಿದ್ದ. 

ಬಿಜೆಪಿಗೆ ಏಕೆ ವೋಟು ಹಾಕಿದೆ ಎಂದು ಹಲ್ಲೆ ಮಾಡಿದ್ದಾಗಿ ಆತ ತಿಳಿಸಿದ್ದ. ಇನ್ನೂ ಈ ವೇಳೆ ಆಟೋ ಜಖಂ ಆಗಿದ್ಯಲ್ಲಾ ಅದಕ್ಕೆ ಇನ್ಸುರೆನ್ಸ್​ ಬರುತ್ತಾ ಎಂದು ಪ್ರಶ್ನಿಸಿದ ಕೆ.ಎಸ್​.ಈಶ್ವರಪ್ಪ ಆತನಿಗೆ ಸ್ವಲ್ಪ ದುಡ್ಡುಕೊಟ್ಟು ಇದನ್ನ ಇಟ್ಕೊ, ಆಟೋ ರೀಪೇರಿ ಮಾಡಿಸಿಕೋ ಎಂದಿದ್ದರು. 

ಅಲ್ಲದೆ ಘಟನೆ ಬಗ್ಗೆ ಎಸ್​ಪಿ ಮಿಥುನ್ ಕುಮಾರ್​ರವರಿಗೆ ಕರೆ ಮಾಡಿ ತಿಳಿಸಿದ ಈಶ್ವರಪ್ಪ, ಈತನ ಬಗ್ಗೆ ವಿಚಾರಿಸಿ ಎಂದಾಗ, ಎಸ್​ಪಿಯುವರು ತಮ್ಮ ಕಚೇರಿಗೆ ಆತನನ್ನು ಕಳುಹಿಸುವಂತೆ ತಿಳಿಸಿದ್ದರು.  

ಮೊದಲು ಆರೋಪ ನಂತರ ಸಂಧಾನ

ಈ ಮಧ್ಯೆ ಈ ಘಟನೆ ರಾಜಕೀಯವಾಗಿ ವಿವಾಧ ಪಡೆದುಕೊಳ್ಳಲು ಆರಂಭಿಸಿತು. ಅತ್ತ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಕಾಂಗ್ರೆಸ್​ ಮುಖಂಡರು ಮುಂದಾದರು. ಇನ್ನೊಂದೆಡೆ  'ಬಿಜೆಪಿಗೆ ಮತ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದಿದ್ದ ಆಟೋ ಚಾಲಕ, ಹಲ್ಲೆ ಮಾಡಿದ ಆರೋಪಿಗಳ ಜೊತೆ ಸಂಧಾನ ಮಾಡಿಕೊಂಡಿದ್ದ 

ಕೋಮುಬಣ್ಣಕ್ಕೆ ರಾಜಕೀಯದ ಸುಣ್ಣ

ಅನ್ಯಧರ್ಮದವರ ನಡುವೆ ನಡೆದ ಗಲಾಟೆಯಾದ್ದರಿಂದ, ಘಟನೆ ಬೇರೆಯದ್ದೆ ಸ್ವರೂಪ ಪಡೆದುಕೊಳ್ಳುವ ಸಾದ್ಯತೆ ಇತ್ತು. ಆದರೆ ದೂರುದಾರನೇ ಕುಡಿದು ಬಂದಿದ್ದರಿಂದ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡಿತ್ತು.  

ಕುಡಿದು ಟೈಟಾಗಿ ಹಲ್ಲೆ

ಅಬ್ರಾರ್ ಮತ್ತು ನಜ್ರುಲ್ಲಾ ಎಂಬಿಬ್ಬರು ತಮ್ಮ ಮೇಲೆ ಹಲ್ಲೆ ಮಾಡಿದ್ರು ಎಂದಿದ್ದ ಆಟೋ ಚಾಲಕ, ಹರೀಶ್​ ಮೂವರು ಸ್ನೇಹಿತರೇ ಆಗಿದ್ದರು. ಮಧ್ಯಾಹ್ನ ಒಟ್ಟಿಗೆ ಎಣ್ಣೆ ಏರಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ ಹೊಡೆದಾಡಿಕೊಂಡಿದ್ಧಾರೆ. ಅಲ್ಲದೆ ಇದೇ ಕಾರಣಕ್ಕೆ ಹರೀಶನ ಆಟೋ ಜಖಂ ಮಾಡಿದ್ದಾರೆ .

ಎಸ್​ಪಿ ಎದುರು ಆರೋಪ, ಸ್ಟೇಷನ್​ನಲ್ಲಿ ರಾಜಿ

ಆನಂತರ ಹರೀಶ್​ ಎಸ್​ಪಿ ಕಚೇರಿ ಮುಂದೆ, ತನ್ನ ಗೋಳು ಹೇಳಿಕೊಂಡಿದ್ದ. ಅದರ ಬೆನ್ನಲ್ಲೆ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಆರೋಪಿಗಳೊಂದಿಗೆ ಸಂಧಾನ ಮಾಡಿಕೊಂಡಿದ್ದ. ಆರೋಪಿಗಳು ಸಹ ಈತನ ಆಟೋ ದುರಸ್ತಿ ಮಾಡಿಕೊಡುವುದಾಗಿ ಹೇಳಿದ್ದರಿಂದ ಪ್ರಕರಣ ರಾಜಿಯಾಗಿತ್ತು.  

 


ಸಾಗರ ಟೌನ್​ನಲ್ಲಿ₹ 17 ಲಕ್ಷ ಮೌಲ್ಯದ ಸಿಗರೇಟ್​ ಕಳ್ಳತನ! ನಡೆದಿದ್ದೇನು?

ಸಾಗರ/ ಶಿವಮೊಗ್ಗ ಜಿಲ್ಲೆ ಸಾಗರ ಟೌನ್​ನಲ್ಲಿ ಬರೋಬ್ಬರಿ 17 ಲಕ್ಷ ರೂಪಾಯಿಯ ಸಿಗರೇಟ್ ಕಳ್ಳತನವಾಗಿದೆ. ಈ ಸಂಬಂಧ ಸಾಗರ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ದೂರು ಕೂಡ ದಾಖಲಾಗಿದೆ 

ನಡೆದಿದ್ದೇನು?

ಇಲ್ಲಿನ ಸೊರಬ ರಸ್ತೆಯ ಯುನೈಟೆಡ್ ಟ್ರೇಡಿಂಗ್ ಕಂಪೆನಿಯಲ್ಲಿ ಭಾನುವಾರ ರಾತ್ರಿ ₹17 ಲಕ್ಷ ಮೌಲ್ಯದ ಸಿಗರೇಟ್ ಬಂಡಲ್‌ಗಳು ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. 

ಸಾಗರ ತಾಲ್ಲೂಕಿನ ವಿವಿಧ ಅಂಗಡಿಗಳಿಗೆ ಸಿಗರೇಟ್ ಪೂರೈಕೆ ಮಾಡುವ ಕೆಲಸಮಾಡುತ್ತಿರುವ ಈ ಅಂಗಡಿಯಲ್ಲಿ ರೋಲಿಂಗ್​ ಶೆಟ್ಟರ್​ ಒಡೆದು ಕಳ್ಳತನ ಮಾಡಲಾಗಿದೆ. 

ಶೆಟರ್ ಮುರಿದು ಒಳಕ್ಕೆ ಬಂದಿರುವ ಕಳ್ಳರು, ಒಳಗಿದ್ದ ಸಿಗರೇಟ್ ಬಂಡಲ್​ಗಳ ಜೊತೆ 9 ಸಾವಿರ ರೂಪಾಯಿ ಕ್ಯಾಶ್ ಕಳ್ಳತನ ಮಾಡಿದ್ದಾರೆ. ಕೃತ್ಯ ಗೊತ್ತಾಗದಂತೆ, ಸಿಸಿಟಿವಿ ಬಾಕ್ಸ್​ಗಳನ್ನ ಕೂಡ ಕದ್ದೊಯ್ದಿದ್ದಾರೆ. 


ಚುನಾವಣೆಯಲ್ಲಿ ಸೋಲು! ಭದ್ರಾವತಿಯಲ್ಲಿ ಪರಾಜಿತ ಅಭ್ಯರ್ಥಿಗಳು ಹೇಳಿದ್ದೇನು?

ಭದ್ರಾವತಿ/ ಶಿವಮೊಗ್ಗ/ ಭಧ್ರಾವತಿ ವಿಧಾನಸಭಾ ಕ್ಷೇತ್ರ ದಲ್ಲಿ ಸೋಲು ಕಂಡ ಅಭ್ಯರ್ಥಿಗಳು ನಿನ್ನೆ ತಾಲ್ಲೂಕಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ಈ ಪೈಕಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಗೋಟೆ ರುದ್ರೇಶ್​ ,  

 

ಕ್ಷೇತ್ರದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿ 20 ಸಾವಿರಕ್ಕೂ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ಧೇನೆ. ಇದರಿಂದಾಗಿ ಭವಿಷ್ಯದಲ್ಲಿ ನೆಲೆ ಇದೆ ಎಂಬುದನ್ನು ತೋರಿಸಿ ಕೊಡಲಾಗಿದೆ. ಇದು ನನಗೆ ತೃಪ್ತಿ ತಂದಿದೆ ಎಂದರು.

 

ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲೂ ನನಗೆ ಮತ ಚಲಾವಣೆಯಾಗಿದ್ದು, ಇದರಿಂದಾಗಿ ಕ್ಷೇತ್ರದಲ್ಲೆಡೆ ಪಕ್ಷ ಸಂಘಟನೆಗೆ ಮತ್ತಷ್ಟು ಸ್ಪೂರ್ತಿ ನೀಡುತ್ತಿದೆ. ಎಲ್ಲಾ ಧರ್ಮ, ಜಾತಿ, ಜನಾಂಗದವರು ನನಗೆ ಮತ ನೀಡಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇನೆ  ಎಂದರು.

 

snake kiran/ ಕೊಳಕ ಮಂಡಲ ಹಾವು ಕಡಿತ/ ಸ್ನೇಕ್​ ಕಿರಣ್​ ಮತ್ತೆ ಆಸ್ಪತ್ರೆಗೆ ದಾಖಲು 

ಶಾರದಾ ಅಪ್ಪಾಜಿ ಹೇಳಿದ್ಧೇನು?

ಇನ್ನೊಂದೆಡೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಚಿರಋಣಿಯಾಗಿದ್ದು, ಮತನೀಡಿ ಸಹಕರಿಸಿದ ಕ್ಷೇತ್ರದ ಸಮಸ್ತ ಮತದಾರ ಬಂಧುಗಳಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು  ಜೆಡಿಎಸ್ ಅಭ್ಯರ್ಥಿ  ಶಾರದ ಅಪ್ಪಾಜಿ ಹೇಳಿದ್ದಾರೆ. 

ಹಣದ ಪ್ರಭಾವದಿಂದ ಸೋಲು

ವಿಜೇತ ಅಭ್ಯರ್ಥಿಯ ಹಣದ ಪ್ರಭಾವದ ಎದುರು ಸೋಲಾಗಿದೆ. ಸೋಲಿನ ಅಂತರ ಆತ್ಮವಿಶ್ವಾಸ  ಹೆಚ್ಚಿಸಿದ್ದು, ಸೋಲನ್ನು ಸವಾಲಾಗಿ ಸ್ವೀಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮಧ್ಯೆಯೇ ಉಳಿಯಲು ಬಯಸುತ್ತೇನೆ ಎಂದರು.  

 

ಚುನಾವಣೆಯಲ್ಲಿಯೇ ಹೆಚ್ಚಿನ ಮತಗಳನ್ನು ಪಡೆದಿರುವುದು ನನಗೆ ತೃಪ್ತಿ ಇದೆ.  ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅಭಿವೃದ್ಧಿಗೊಳ್ಳಬೇಕು. ಈ ನಿಟ್ಟಿನಲ್ಲಿ ನನ್ನ ಹೋರಾಟ ಮುಂದುವರೆಯಲಿದೆ ಎಂದರು. 


ಬಸ್​ನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್! ಸೈ ಎನ್ನುತ್ತಿದೆ ಕರ್ನಾಟಕ

 

ಚಿಕ್ಕಮಗಳೂರು/ ಮಹಿಳಾ ಕಂಡಕ್ಟರ್​ರೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ, ಬಸ್​ನಲ್ಲಿ ಹೆರಿಗೆ ಮಾಡಿಸಿದ ಘಟನೆ ನೆರೆಯ ಚಿಕ್ಕಮಗಳೂರಿನಲ್ಲಿ ನಡೆದಿದೆ.

 

ವಿಜಯೇಂದ್ರರವರ ಗೆಲುವಿಗೆ ಕಾರಣವಾಗಿದ್ದ ಅಂಶಗಳೇನು? ಬಿಜೆಪಿ ಶಿಕಾರಿಗೆ ನೆರವಾಯ್ತಾ ಜೆಡಿಎಸ್​  ಮತಗಳು? 

ನಡೆದಿದ್ದೇನು?

ಚಿಕ್ಕಮಗಳೂರು ಘಟಕಕ್ಕೆ ಸೇರಿದ ಬಸ್​ ಬೆಂಗಳೂರು- ಚಿಕ್ಕಮಗಳೂರು ಮಾರ್ಗ ಮಧ್ಯೆ  ಉದಯಪುರ ಸಮೀಪ  ಹೋಗುತ್ತಿತ್ತು. ಈ ವೇಳೆ  ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಶುರುವಾಗಿದೆ. 

 

ಅವರನ್ನ ಆಸ್ಪತ್ರೆಗೆ ರವಾನಿಸಲು ಅಲ್ಲಿ ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಕಾಣಿಸಲಿಲ್ಲ. ಈ ಕಾರಣಕ್ಕೆ ತಕ್ಷಣ ಬಸ್​ ನಿಲ್ಲಿಸಿದ  ಮಹಿಳಾ ಕಂಡಕ್ಟರ್‌, ಪ್ರಯಾಣಿಕರನ್ನ ಕೆಳಕ್ಕೆ ಇಳಿಸಿದ್ದಾರೆ. ಬಳಿಕ ಗರ್ಭಿಣಿಯನ್ನು ಬಸ್​ ಸೀಟ್​ನ ಮೇಲೆ ಮಲಗಿಸಿ ಹೆರಿಗೆ ಮಾಡಿಸಿದ್ದಾರೆ. 

ದನಸಹಾಯ ಮಾಡಿದ ಪ್ರಯಾಣಿಕರು

ಗರ್ಭಿಣಿಯ ಕುಟುಂಬಸ್ಥರು ಉಳ್ಳವರಾಗಿರಲಿಲ್ಲ. ಈ ಕಾರಣಕ್ಕೆ ಬಸ್​ನಲ್ಲಿಯೇ ಆಸ್ಪತ್ರೆಗೆ ಓಡಾಡುತ್ತಿದ್ದರು. ಇದನ್ನ ಅರಿತ ಬಸ್​ ಕಂಡಕ್ಟರ್ ಹಾಗೂ ಚಾಲಕಿಯು ಆಗಿರುವ ವಸಂತಮ್ಮ, ಪ್ರಯಾಣಿಕರ ಬಳಿ ಆ ಕುಟುಂಬದ ಸ್ಥಿತಿಯನ್ನು ವಿವರಿಸಿದ್ದಾರೆ. ತಕ್ಷಣವೇ ಅಲ್ಲಿದ್ದವರೆಲ್ಲಾ ಸೇರಿ 1500 ರೂಪಾಯಿ ಜೋಡಿಸಿ ಕೊಟ್ಟಿದ್ದಾರೆ. ಬಳಿಕ ಆ್ಯಂಬುಲೆನ್ಸ್​​ವೊಂದನ್ನ ವ್ಯವಸ್ಥೆ ಮಾಡಿ, ಮಹಿಳೆಯನ್ನು ಹಾಗೂ ಮಗುವನ್ನು ಶಾಂತಿಗ್ರಾಮಕ್ಕೆ ಕಳುಹಿಸಿದ್ದಾರೆ. ಕಂಡಕ್ಟರ್​ ಒಬ್ಬಳ ನೆರವಿನಿಂದ, ಮಹಿಳೆಗೆ ಸಸೂತ್ರ ಹೆರಿಗೆಯಾದ್ದಷ್ಟೆ ಅಲ್ಲದೆ, ಅದೃಷ್ಟ ಲಕ್ಷ್ಮೀಯಂತಹ ಹೆಣ್ಣುಮಗಳು ಜನಿಸಿದ್ದಾಳೆ. ಮಹಿಳಾ ಕಂಡಕ್ಟರ್‌ ಅವರ ಕಾರ್ಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿ ಕಂಡಕ್ಟರ್ ಫೋಟೋ ಹಾಗೂ ಮಹಿಳೆ ಮಗುವಿನ ಭಾವಚಿತ್ರವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ಧಾರೆ. 

 

ಹಣಕ್ಕಾಗಿ ಶಿವಮೊಗ್ಗ ನಗರದಲ್ಲಿ ಯುವತಿಯ ಕಿಡ್ನ್ಯಾಪ್​

 


ಸೊರಬ ಪೊಲೀಸರ ಕೈಗೆ ಸಿಕ್ಕಿಬಿದ್ದ ಹಾವೇರಿ ಬೈಕ್ ಕಳ್ಳರು! ನಡೆದಿದ್ದೇನು?

ಶಿವಮೊಗ್ಗ/ ದಿನಾಂಕಃ 07-05-2023 ರಂದು ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ  ಹುನುವಳ್ಳಿ ಗ್ರಾಮದ ವಾಸಿ  ಅಲ್ಬಿನ್  ವರ್ಗೀಸ್ ರವರ ಬೈಕ್ ಕಳ್ಳತನವಾಗಿತ್ತು. ಮನೆಯ ಮುಂದೆ ನಿಲ್ಲಿಸಿದ್ದ ಸುಜುಕಿ ಜಿಕ್ಸರ್ ಬೈಕ್ ಅನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ  ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದರು. 

ಇಬ್ಬರ ಬಂಧನ

ಸದ್ಯ ಪ್ರಕರಣ ಸಂಬಂಧ  15-05-2023  ರಂದು ಪ್ರಕರಣದ ಆರೋಪಿತರಾದ 

1) ಜುಂಜಪ್ಪ, 24 ವರ್ಷ, ಮಿಳಗಟ್ಟಿ ಗ್ರಾಮ, ಸವಣೂರು ತಾಲ್ಲೂಕು, ಹಾವೇರಿ ಜಿಲ್ಲೆ 

2) ಗದಿಗೆಪ್ಪ, 27 ವರ್ಷ, ಹುಲಗೂರು ಗ್ರಾಮ ಶಿಗ್ಗಾವಿ ತಾಲ್ಲೂಕು ಹಾವೇರಿ ಜಿಲ್ಲೆರನ್ನು ಬಂಧಿಸಿದೆ 

ನಾಲ್ಕು ಬೈಕ್ ಜಪ್ತಿ

ಆರೋಪಿತರಿಂದ ಸೊರಬ ಪೊಲೀಸ್ ಠಾಣೆಯ 02, ಆನವಟ್ಟಿ ಪೊಲೀಸ್ ಠಾಣೆಯ 01 ಮತ್ತು ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ 01 ಪ್ರಕರಣ ಸೇರಿ ಒಟ್ಟು 04  ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು ಮೌಲ್ಯ 3,70,000/-  ರೂ ಗಳ ಒಟ್ಟು 04  ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

 


ಬಿಎಸ್​ವೈ ತೋಟದಲ್ಲಿ ವಿಜಯೇಂದ್ರರ ಸೋಲಿಗೆ ಪುನುಗುಬೆಕ್ಕು ಕೊಂದು ವಾಮಚಾರ! ಪ್ರಭಾವ ತಟ್ಟಿತ್ತು ಎಂದ ಸಂಸದ ರಾಘವೇಂದ್ರ ಹೇಳಿದ್ದೇನು?

ಶಿಕಾರಿಪುರ/ ಶಿವಮೊಗ್ಗ/ ಶಿಕಾರಿಪುರ ತಾಲೂಕು ಬಂಡಿಬೈರನಹಳ್ಳಿ, ಮಜಿರೆ ಸಿದ್ಧನಪುರ ಗ್ರಾಮದ ಸರ್ವೆ ನಂ 36 ರಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ರವರಿಗೆ ಸೇರಿದ ಅಡಿಕೆ ತೋಟದ ಕಾಪೌಂಡ್ ಬಳಿ  ನಡೆದಿದೆ ಎನ್ನಲಾಗಿರುವ ವಾಮಾಚಾರದ ಪ್ರಕರಣದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ರವರು ಮಾತನಾಡಿದ್ದು, ಅದ್ರ ಪ್ರಭಾವಳಿ ತಮ್ಮ ಕುಟುಂಬದ ಮೇಲೆ ಆಗಿತ್ತು ಎಂದಿದ್ದಾರೆ. 

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೋಲು ! ಹೆಚ್​ಸಿ ಯೋಗೀಶ್​ ಹೇಳಿದ್ದೇನು? 

ಬಿವೈ ವಿರುದ್ಧ ವಾಮಾಚಾರ

ಬಿ ವೈ ವಿಜಯೇಂದ್ರ  ರವರು ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕೃತ್ಯವನ್ನ ಎಸೆಗಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಆಗಿದೆ. ಈ ಸಂಬಂಧ Act & Section: IPC 1860 (U/s-426,447); Karnataka Prevention and Eradication of Inhuman Evil Practices and Black Magic Act, 2017 (U/s-3(2)) ಅಡಿಯಲ್ಲಿ ಕೇಸ್​ ಕೂಡ ದಾಖಲಾಗಿದೆ. 

ಏನಿದೆ ದೂರಿನಲ್ಲಿ?

ಯಡಿಯೂರಪ್ಪನವರ ತೋಟದಲ್ಲಿ ನಡೆದ ಕೃತ್ಯದ ಸಂಬಂಧ ತೋಟದ ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ದಿನಾಂಕ: 11-05-2023 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆ ನಡುವಿನ ಸಮಯದಲ್ಲಿ 3-4 ಜನರು ದುಷ್ಕರ್ಮಿಗಳು ಕಾಡು ಪ್ರಾಣಿಯೊಂದನ್ನ ಕೊಂದು, ತೋಟದಲ್ಲಿ ಹೂತು ಹಾಕಿದ್ದಾರೆ.  ವಿಜಯೇಂದ್ರ ರವರಿಗೆ ಕೇಡನ್ನು ಉಂಟು ಮಾಡುವ ಸಲುವಾಗಿ ತೋಟದ ಕಾಂಪೌಂಡ್​ ಬಳಿ ವಾಮಚಾರ ಮಾಡಿ, ಕೊಂದ ಪ್ರಾಣಿಯನ್ನು ಹೂತು ಹಾಕಲಾಗಿದೆ. ಇದರ  ಹಿಂದಿನ ಉದ್ದೇಶ ಹಾಗೂ ದುಷ್ಕರ್ಮಿಗಳನ್ನು ಹಿಡಿಯಬೇಕು ಎಂದು ದೂರು ನೀಡಲಾಗಿದೆ. 

ಶಿವಮೊಗ್ಗ ಜಿಲ್ಲೆಗೆ ಯಾರು ಮಿನಿಸ್ಟರ್​? ಪೈಪೋಟಿಯಲ್ಲಿ ಯಾರಿದ್ದಾರೆ? ಏನಿದೆ ಕುತೂಹಲ?

ಸಂಸದರು ಹೇಳಿದ್ದೇನು? 

ಶಿಕಾರಿಪುರದ ತಾಲೂಕು‌ ಬಿಜೆಪಿ ಕಚೇರಿಯಲ್ಲಿ ಮಾತನಾಡಿ ಸಂಸದ ರಾಘವೇಂದ್ರ  ತೋಟದಲ್ಲಿ ಪುನುಗು‌ ಬೆಕ್ಕನ್ನು ಮಣ್ಣಿನಲ್ಲಿ ಹೂತಿಟ್ಟು ಅದಕ್ಕೆ ಪೂಜೆ ಮಾಡಿ, ವಾಮಚಾರ ನಡೆಸಲಾಗಿತ್ತು. ಮತದಾನ ನಡೆದ ಮರುದಿನ ಈ ಘಟನೆ ನಡೆದಿದೆ. 11 ನೇ ತಾರೀಖು  ರಾತ್ರಿ 10 ಗಂಟೆಗೆ ನನಗೆ ಒಂದು ಪೋನ್ ಕರೆ ಬಂದಿದೆ. ಅದರಲ್ಲಿ ಒಬ್ಬರು ಯಾರೋ ತಿಮ್ಮ ತೋಟದ ಕಾಂಪೌಂಡ್​ನಲ್ಲಿ ಹೂವನ್ನ ಕೀಳುತ್ತಿದ್ದಾರೆ ಎಂದಿದ್ದರು. ತಕ್ಷಣವೇ ತೋಟದಲ್ಲಿದ್ದ ಸಿಬ್ಬಂದಿಗೆ ಕರೆ ಮಾಡಿ ಸ್ಥಳಕ್ಕೆ ಕಳುಹಿಸಿದೆ. ಅಲ್ಲಿಗವರು ಹೋಗಿ ನೋಡಿದಾಗ 

 ಪುನುಗು ಬೆಕ್ಕು ಸಿಕ್ಕಿದೆ. ಇದು ಆಂಧ್ರಪ್ರದೇಶ ಹಾಗೂ ಕೊಳ್ಳೇಗಾಲದಲ್ಲಿ ಸಿಗುತ್ತದೆ. ನಮ್ಮಲ್ಲಿ ಇರುವ ಎಲ್ಲಾ ಶಕ್ತಿಗಳನ್ನು ಆಕರ್ಷಣೆ ಮಾಡಲು ಕೃತ್ರಿಮ ಮಾಡಲಾಗುತ್ತದೆ. 

ಬಿಜೆಪಿಗೆ ವೋಟು ಹಾಕಿದ್ದಕ್ಕೆ ಆಟೋ ಜಖಂ ಮಾಡಿ, ಹಲ್ಲೆ ಮಾಡಿದ್ರು ಎಂದು ಈಶ್ವರಪ್ಪನವರ ಬಳಿ ದೂರು ಹೇಳಿಕೊಂಡ ಚಾಲಕ 

 

ಅದೇರೀತಿಯಲ್ಲಿ  ‌ಬಿ ವೈ ವಿಜಯೇಂದ್ರ ಗೆಲ್ಲದಂತೆ ತೋಟದ ಮನೆಯಲ್ಲಿ ವಾಮಚಾರ ನಡೆಸಲಾಗಿತ್ತು:  ಹೊನ್ನಾಳಿ ಕಡೆಯಿಂದ ಬಂದು ವಾಮಾಚಾರ ನಡೆಸಿರುವ ಅನುಮಾನವಿದೆ.  ಈ ಪ್ರಾಣಿ ಹಿಡಿಯಲು 8-10 ದಿನ ಬೇಕು, ಆನಂತರ ಅದನ್ನ 8-10 ದಿನ ಜೀವಂತವಾಗಿ ಪೂಜೆ ಮಾಡಿ, ನಂತರ ಜೀವ ತೆಗೆದು ನಮ್ಮ ಮನೆ‌ ಹತ್ತಿರ ಹೂತು ಹಾಕಿದ್ದಾರೆ ಎಂದು ವಿಚಾರಿಸಿದ ವೇಳೇಯಲ್ಲಿ ಗೊತ್ತಾಗಿದೆ. 

ಇದರ ಪ್ರಭಾವ ನಮಗೆ ಆಗಿತ್ತು

ಇನ್ನೂ ಇದೇ ವೇಳೆ ವಾಮಾಚಾರದ ಪ್ರಭಾವ ತಮ್ಮ ಕುಟುಂಬದ ಮೇಲೆ ಆಗಿತ್ತು ಎಂಬುದನ್ನ ತಿಳಿಸಿದ ಸಂಸದ ರಾಘವೇಂದ್ರ,  ನಾವು ಪೂಜೆಗೆಂದು ಪೂಜಾರಿಯವರನ್ನ  ಕರೆ ತರುವ ಸಂದರ್ಭದಲ್ಲಿ ದುರ್ಘಟಣೆಯೊಂದು ಸಂಭವಿಸಿತ್ತು ಎಂದಿದ್ದಾರೆ. ಅಲ್ಲದೆ ಘಟನೆ ಸಂಬಂಧ ದೂರು ನೀಡಲಾಗಿದ್ದು  ಪೊಲೀಸ್ ಇಒಲಾಖೆ ಇದರ ಬಗ್ಗೆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. 

FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

Malenadutoday.com Social media