KARNATAKA NEWS/ ONLINE / Malenadu today/ May 13, 2023 GOOGLE NEWS / SHIVAMOGGA NEWS
ಶಿವಮೊಗ್ಗ ದ ಸ್ನೇಕ್ ಕಿರಣ್ ಮತ್ತೆ ಹಾವಿನ ಕಡಿತದಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಸದ್ಯ ಅವರು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಎಂಐಸಿಯು ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಚ್ಚಿದ ಕೊಳಕಮಂಡಲ ಹಾವು
ಶಿವಮೊಗ್ಗ ಪೇಸ್ ಕಾಲೇಜಿನ ಬಳಿಯಲ್ಲಿ ಕೊಳಕಮಂಡಲ ಹಾವನ್ನು ಹಿಡಿಯಲು ಇಂದು ಮಧ್ಯಾಹ್ನ ಸ್ನೇಕ್ ಕಿರಣ್ ತೆರಳಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕೊಳಕ ಮಂಡಲ ಹಾವು ಕಚ್ಚಿದೆ. ಇದರಿಂದಾಗಿ ತಕ್ಷಣವೇ ಅವರನ್ನ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.
ಆಗಿದ್ದೇನು?
ಇವತ್ತು ಮಧ್ಯಾಹ್ನ ಸ್ನೇಕ್ ಕಿರಣ್ಗೆ ಚಟ್ನಳ್ಳಿಯಿಂದ ಹಾವೊಂದು ಬಂದಿದ್ದು, ಅದನ್ನ ಹಿಡಿಯುವಂತೆ ಕರೆಯೊಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಸ್ನೇಕ್ ಕಿರಣ್ ತೆರಳಿದ್ರು. ಹಾವನ್ನು ಹಿಡಿಯಲು ಅವರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸುಮಾರು ಮೂರುವಡಿ ಉದ್ದದ ಹಾವನ್ನ ಹಿಡಿಯಲು, ಬೇಲಿ ಬದಿಯಲ್ಲಿ ಹೋಗುವಾಗ ಸ್ನೇಕ್ ಕಿರಣ್ರ ಕಾಲಿಗೆ ಕೊಳಕಮಂಡಲ ಹಾವು ಕಚ್ಚಿದೆ.
ಈ ಹಿಂದೆಯು ಹಾವು ಕಡಿದಿತ್ತು
ಈ ಹಿಂದೆ ಮಿಡಿನಾಗರ ಹಾವಿನ ಕಡಿತದಿಂದಾಗಿ ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ಹಲವು ದಿನಗಳ ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದೀಗ ಕೊಳಕಮಂಡಳ ಹಾವಿನ ಕಡಿತದಿಂದಾಗಿ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಸ್ನೇಕ್ ಕಿರಣ್ ರವರ ಆರೋಗ್ಯ ಸ್ಥಿರವಾಗಿದ್ದು, ಎಂಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಕಿರಣ್ರವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
BREAKING NEWS / ಆಯನೂರಿನಲ್ಲಿ ಬೈಕ್ – ಆ್ಯಂಬುಲೆನ್ಸ್ ಡಿಕ್ಕಿ , ದಾವಣಗೆರೆ ಮೂಲದ ಓರ್ವ ಸ್ಥಳದಲ್ಲಿಯೇ ಸಾವು!
ಶಿವಮೊಗ್ಗ/ ತಾಲ್ಲೂಕಿನ ಆಯನೂರು ಬಳಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಆಯನೂರಿನ ಬಳಿಯಲ್ಲಿ ಆ್ಯಂಬುಲೆನ್ಸ್ವೊಂದು ಡಿಕ್ಕಿ ಹೊಡೆದ ಪರಿಣಾಮ,ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ಧಾನೆ. ಸಾವನ್ನಪ್ಪಿದ್ದವರನ್ನ ದಾವಣಗೆರೆ ಜಿಲ್ಲೆಬೆಳಗುತ್ತಿ ಗ್ರಾಮದ ಪುನೀತ್ ಎಂದು ಗುರುತಿಸಲಾಗಿದೆ . ಶಿವಮೊಗ್ಗದ ಕಡೆಗೆ ಬರುತ್ತಿದ್ದ ಬೈಕ್ಗೆ ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸರ್ಕಾರಿ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಪುನೀತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ದೌಡಾಯಿಸಿದ್ದ ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
Malenadutoday.com Social media