BREAKING NEWS / ಆಯನೂರಿನಲ್ಲಿ ಬೈಕ್​ - ಆ್ಯಂಬುಲೆನ್ಸ್ ಡಿಕ್ಕಿ , ದಾವಣಗೆರೆ ಮೂಲದ ಓರ್ವ ಸ್ಥಳದಲ್ಲಿಯೇ ಸಾವು!

BREAKING NEWS/ One killed on the spot as ambulance collides with bike in Ayanur / ಶಿವಮೊಗ್ಗ ತಾಲ್ಲೂಕು ಆಯನೂರು ಸಮೀಪ ಭೀಕರ ಅಪಘಾತವೊಂದು ಸಂಭವಿಸಿದೆ. ಪುನೀತ್ ರಾಜಕುಮಾರ್ ರವರ ಭಾವ ಚಿತ್ರವನ್ನು ತನ್ನ ಬೈಕ್​ಗೆ ಹಾಕಿಸಿಕೊಂಡಿದ್ದ ಬೈಕ್ ಸವಾರ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ದಾರೆ

BREAKING NEWS /  ಆಯನೂರಿನಲ್ಲಿ ಬೈಕ್​ - ಆ್ಯಂಬುಲೆನ್ಸ್ ಡಿಕ್ಕಿ , ದಾವಣಗೆರೆ ಮೂಲದ ಓರ್ವ ಸ್ಥಳದಲ್ಲಿಯೇ ಸಾವು!

KARNATAKA NEWS/ ONLINE / Malenadu today/ May 13, 2023 GOOGLE NEWS  

ಶಿವಮೊಗ್ಗ/ ತಾಲ್ಲೂಕಿನ ಆಯನೂರು ಬಳಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಆಯನೂರಿನ ಬಳಿಯಲ್ಲಿ ಆ್ಯಂಬುಲೆನ್ಸ್​ವೊಂದು ಡಿಕ್ಕಿ ಹೊಡೆದ ಪರಿಣಾಮ,ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ಧಾನೆ. ಸಾವನ್ನಪ್ಪಿದ್ದವರನ್ನ ದಾವಣಗೆರೆ  ಜಿಲ್ಲೆಬೆಳಗುತ್ತಿ ಗ್ರಾಮದ ಪುನೀತ್ ಎಂದು ಗುರುತಿಸಲಾಗಿದೆ . 

ಶಿವಮೊಗ್ಗದ ಕಡೆಗೆ ಬರುತ್ತಿದ್ದ ಬೈಕ್​ಗೆ ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸರ್ಕಾರಿ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​​ ಸವಾರ ಪುನೀತ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ದೌಡಾಯಿಸಿದ್ದ ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. 

FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

ಶಿವಮೊಗ್ಗ. ರಾಜ್ಯ ವಿಧಾನಸಭಾ ಚುನಾವಣೆ 2023 ಯ ಫಲಿತಾಂಶ ಬಹುತೇಕ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ. ಜನರ ಚರ್ಚೆ ಸಮಾಲೋಚನೆ ಹಾಗೂ ಊಹೆಗೂ ಮೀರಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲುವನ್ನ ಸಾಧಿಸಿದ್ದಾರೆ. 

ಶಿಕಾರಿಪುರದಲ್ಲಿ ಸೋತು ಗೆದ್ದ ಬಂಡಾಯ

ವಿಶೇಷವಾಗಿ ಇಡೀ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಬಿಜೆಪಿಗೆ ಗೆಲ್ಲಿಸುವ ಪ್ರಯತ್ನದಲ್ಲಿದ್ದ ಬಿ.ವೈ ವಿಜಯೇಂದ್ರ ನಿಜಕ್ಕೂ ಸ್ವತಂತ್ರ ಅಭ್ಯರ್ಥಿ ನಾಗರಾಜ್ ಗೌಡರ ಬಂಡಾಯ ಎದುರು ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಭಾರೀ ಬಹುಮತದ ಗೆಲುವು ನಿರೀಕ್ಷಿಸಿದ್ದ ಬಿಎಸ್​ವೈ ಕುಟುಂಬಕ್ಕೆ ಫಲಿತಾಂಶ ಗೆಲುವು ನೀಡಿದ್ದರು, ಅದರ ಸಂತೋಷವನ್ನು ಕಿತ್ತುಕೊಂಡಂತಿದೆ. ಇನ್ನೂ ನಾಗರಾಜ್​ ಗೌಡ, ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಷ್ಟೆ ಅಲ್ಲದೆ ತಮಗೆ ಟಿಕೆಟ್ ನೀಡದ ಕಾಂಗ್ರೆಸ್​ಗೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅದೇ ರೀತಿಯಲ್ಲಿ ಎದುರಾಳಿ ಬಿಜೆಪಿಗೆ ಫೋಟೋ ಫಿನಿಶ್​ನ ಆತಂಕವನ್ನು ಮೂಡಿಸಿದ್ದರು. 

ಸೊರಬದಲ್ಲಿ ಸೋದರ ವಿಜಯ

ಸೊರಬ ತಾಲ್ಲೂಕಿನಲ್ಲಿ ಕುಮಾರ ಬಂಗಾರಪ್ಪನವರ ವಿರುದ್ಧ ಅವರ ಸಹೋದರ ಮಧು ಬಂಗಾರಪ್ಪ ಗೆದ್ದಿದ್ದಾರೆ. 44258  ಮತಗಳಿಂದ ಕುಮಾರಬಂಗಾರಪ್ಪನವರನ್ನ ಸೋಲಿಸಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆಗಳಿವೆ. 

ಭದ್ರಾವತಿಯಲ್ಲಿ ಗೆದ್ದ ಸಂಗಮೇಶ್​!

ಇನ್ನೂ ಅತ್ತ ಭದ್ರಾವತಿಯಲ್ಲಿ ಜೆಡಿಎಸ್​ನ ಶಾರದಾ ಅಪ್ಪಾಜಿಗೆ, ಅನುಕಂಪದ ಅಲೆ ಇತ್ತು ಎನ್ನಲಾಗಿತ್ತು. ಆದಾಗ್ಯು ಬಿ.ಕೆ.ಸಂಗಮೇಶ್​ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಮಂಗೋಟೆ ರುದ್ರೆಶ್ ಮೂರನೇ ಸ್ಥಾನದಲ್ಲಿದ್ದು ಉತ್ತಮ ಮತಗಳನ್ನು ಪಡೆಯುವಲ್ಲಷ್ಟೆ ಯಶಸ್ವಿಯಾಗಿದ್ದಾರೆ. 

ತೀರ್ಥಹಳ್ಳಿಯಲ್ಲಿ ಕಡೆ ಆಟದಲ್ಲಿ ಗೆದ್ದ ಆರಗ, ಗೆಲುವಿಗೆ ನಿಲುಕದ ಜೋಡೆತ್ತು!

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ ಒಳಮನೆಯ ಅಪಸ್ವರಗಳೆಲ್ಲಾ ಮುಗಿದು, ಅಂತಿಮವಾಗಿ ಸಂಧಾನ ಆಗಿ, ಜೋಡೆತ್ತುಗಳಾಗಿ ಎಲೆಕ್ಷನ್​ ನಡೆಸಿದ್ರು ಕಿಮ್ಮನೆ ರತ್ನಾಕರ್ ಹಾಗೂ ಆರ್​ಎಂ ಮಂಜುನಾಥ್ ಗೌಡ. ಆದರೆ ಇಬ್ಬರು ಶ್ರಮವಹಿಸಿದ್ದರಾದರೂ ಸಹ ಗೆಲುವಿನ ಹೊಸ್ತಿಲವರೆಗೂ ಬರಲು ಕಿಮ್ಮನೆಯವರಿಗೆ ಸಾಧ್ಯವಾಗಲಿಲ್ಲ. ಕಡೆಯ ಆಟದಲ್ಲಿ ಗೃಹಸಚಿವರಾಗಿದ್ದ ಆರಗ ಜ್ಞಾನೇಂದ್ರರವರು ಗೆಲುವಿನ ನಗೆ ಬೀರಿದ್ದಾರೆ. 

ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ವಿಜಯ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್​ನ ಗೌರವವನ್ನ ಕಾಪಾಡಿದೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿಟ್ಟಿದ್ದ ಪಕ್ಷಕ್ಕೆ ಗ್ರಾಮಾಂತರದಲ್ಲಿ ಮಾತ್ರ ನಿರೀಕ್ಷಿತ ಗೆಲುವು ಸಿಕ್ಕಿದೆ. ಶಾಸಕರಾಗಿದ್ದ ಅಶೋಕ್ ನಾಯ್ಕ್​ರ ವಿರುದ್ಧ  ಅಸಮಾಧಾನ ಹಾಗೂ ಶಾರದಾ ಪೂರ್ಯ ನಾಯ್ಕ್​ರ ಮೇಲಿದ್ದ ಅನುಕಂಪ ಮತ್ತು ಅಭಿಮಾನ ಮತಗಳಾಗಿ ಗೆಲುವು ತಂದುಕೊಟ್ಟಿದೆ. ಇಲ್ಲಿ ಶ್ರೀನಿವಾಸ್ ಕರಿಯಣ್ಣ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಅವರ ರಾಜಕೀಯ ಭವಿಷ್ಯವು ಸಹ ಕಮರಿದಂತಾಗಿದೆ. 

ಸಾಗರ ಬೇಳೂರು ಗೆಲುವು ಹಾಲಪ್ಪ ಸೋಲು

ಮಾಜೆ ಗೆಳಯರ ಫೈಟ್​ನಲ್ಲಿ ಕೊನೆಗೆ ಬೇಳೂರು ಗೋಪಾಲಕೃಷ್ಣರಿಗೆ ಗೆಲುವು ಸಿಕ್ಕಿದೆ. ಪಕ್ಷಾಂತರ ಪರ್ವಗಳ ನಡುವೆ ಕಾಗೋಡು ತಿಮ್ಮಪ್ಪರ ಮಾರ್ಗದರ್ಶನದಲ್ಲಿಯೇ ಚುನಾವಣೆ ನಡೆಸಿದ ಬೇಳೂರು ಗೋಪಾಲಕೃಷ್ಣರಿಗೆ ಹಿರಿಯರ ಆಶೀರ್ವಾದ ಹಾಗೂ ಮಗಳು ಮೇಘರ ಪ್ರಚಾರ ಗೆಲುವು ತಂದುಕೊಟ್ಟಿದೆ. ಜನಪ್ರತಿನಿಧಿಯಾಗಲು ಕಾದಿದ್ದ ವನವಾಸ ಬೇಳೂರು ಗೋಪಾಲಕೃಷ್ಣರಿಗೆ ಅಂತ್ಯ ಕಂಡಿದ್ದು, ಗೆಲುವಿನ ಜೊತೆ ಜೊತೆಗೆ ಸರ್ಕಾರ ಸಹ  ಅಸ್ತಿತ್ವಕ್ಕೆ ಬರುತ್ತಿರುವುದು ಸಚಿವಗಿರಿಯ ನಿರೀಕ್ಷೆ ಹುಟ್ಟಿಸಿದೆ. 

ಶಿವಮೊಗ್ಗ ನಗರದಲ್ಲಿ ಗೆದ್ದ ಕಾರ್ಯಕರ್ತ 

ಇನ್ನೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಶಿವಮೊಗ್ಗ ನಗರದಲ್ಲಿ ಮಾತಿನ ಚುನಾವಣೆ ನಡೆಯಲಿಲ್ಲ. ಆಯನೂರು ಮಂಜುನಾಥ್​ ಹೈಲೈಟ್​ ಆಗಿದ್ದು ಬಿಟ್ಟರೇ, ಅವರ ಇಮೇಜ್​ ಹಾಗೂ ಕೆಬಿ ಪ್ರಸನ್ನಕುಮಾರ್​ರವರ ಕೆಲಸ ಯಾವುದು ಸಹ ಮತ ಹಾಕಿಸುವಲ್ಲಿ ಯಶಸ್ವಿಯಾಗಿಲ್ಲ. ನಿರೀಕ್ಷಿತ ಮತಗಳನ್ನು ಸಹ ಅವರು ಪಡೆಯದಿರುವುದು ಅಚ್ಚರಿ ಮೂಡಿಸಿದೆ. 

ವಿಶೇಷವಾಗಿ ಚೆನ್ನಬಸಪ್ಪ ತೆಗೆದುಕೊಂಡ ಲೀಡ್​ ಇನ್ನಷ್ಟು ಅಚ್ಚರಿ ಹುಟ್ಟಿಸುತ್ತಿದ್ದು, ಟ್ರೆಂಡ್​ ಸೆಟ್ ಮಾಡಿದೆ. ಪಕ್ಷದಲ್ಲಿ ಯಾರೆ ನಿಂತರೂ ದಿಗ್ವಿಜಯ ಸಾಧಿಸುತ್ತೇವೆ ಎಂಬುದನ್ನ  ಬಿಜೆಪಿಯ ಕಾರ್ಯಕರ್ತರು ಯಶಸ್ವಿಯಾಗಿ  ತೋರಿಸಿದ್ದಾರೆ. 

ವಿಶೇಷ ಅಂದರೆ,ಶಿವಮೊಗ್ಗ ನಗರದಲ್ಲಿ ಉತ್ತಮ ಪ್ರಜಾಕೀಯ ಪಕ್ಷ ನಾಲ್ಕು ಅಂಕಿಯ ಮತಗಳನ್ನ ಪಡೆದಿದೆ. 2ಸಾವಿಕ್ಕೂ ಹೆಚ್ಚು ಮತ ಪಡೆದ ಇವರು ಶಿವಮೊಗ್ಗದಲ್ಲಿ ಆಮ್ ಆದ್ಮಿ ಪಕ್ಷವನ್ನು ಹಿಂದಿಕ್ಕಿದ್ದಾರೆ. ಇನ್ನೂ ಸಾವಿರಕ್ಕೂ ಅಧಿಕ ನೋಟಾ ಮತಗಳು ಜಾರಿಯಾಗಿದ್ದು ಕೂಡ ಗಮನಾರ್ಹವಾಗಿದೆ. 

ಚೋರಡಿಯಲ್ಲಿ ಅಪಘಾತ/ ಮೆಗ್ಗಾನ್​ ಆಸ್ಪತ್ರೆಗೆ ಬಿವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ದೌಡು/ಸಾವು ನೋವಿನ ಬಗ್ಗೆ ಎಸ್​ಪಿ ಮಿಥುನ್ ಕುಮಾರ್  ಕೊಟ್ಟ ನಿಖರ ಮಾಹಿತಿ ಇಲ್ಲಿದೆ 

Malenadutoday.com Social media