ಶಿವಮೊಗ್ಗ ಜಿಲ್ಲೆಗೆ ಯಾರು ಮಿನಿಸ್ಟರ್​? ಪೈಪೋಟಿಯಲ್ಲಿ ಯಾರಿದ್ದಾರೆ? ಏನಿದೆ ಕುತೂಹಲ?

Who is the minister for Shimoga district? Who is in the competition? What's the curiosity?

ಶಿವಮೊಗ್ಗ ಜಿಲ್ಲೆಗೆ ಯಾರು ಮಿನಿಸ್ಟರ್​? ಪೈಪೋಟಿಯಲ್ಲಿ ಯಾರಿದ್ದಾರೆ? ಏನಿದೆ ಕುತೂಹಲ?

KARNATAKA NEWS/ ONLINE / Malenadu today/ May 15, 2023 GOOGLE NEWS / SHIVAMOGGA NEWS 

ಶಿವಮೊಗ್ಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ. ಸಿಎಂ ಯಾರು ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಇದರ ನಡುವೆ ಶಿವಮೊಗ್ಗ ಜಿಲ್ಲೆ ಯಲ್ಲಿ ಮೂವರು ಕಾಂಗ್ರೆಸ್​ ಶಾಸಕರು ಆಯ್ಕೆಯಾಗಿದ್ದು, ಆ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. 

.

ಭದ್ರಾವತಿಯಿಂದ ಬಿ.ಕೆ.ಸಂಗಮೇಶ್ವರ್, ಸೊರಬದಿಂದ ಮಧು ಬಂಗಾರಪ್ಪ ಹಾಗೂ ಸಾಗರದಿಂದ ಬೇಳೂರು ಗೋಪಾಲಕೃಷ್ಣ ಸದ್ಯ ಶಿವಮೊಗ್ಗದಿಂದ ಪೈಪೋಟಿಯಲ್ಲಿದ್ದು, ರಾಜ್ಯ ನಾಯಕರ ಆಪ್ತರಿಗೆ ಅವಕಾಶ ಲಭಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಬಿಕೆ ಸಂಗಮೇಶ್ ಒಟ್ಟು ನಾಲ್ಕು ಭಾರಿ ಆಯ್ಕೆಯಾಗಿದ್ದು, ಈ ಪೈಕಿ ಒಂದು ಸಲ ಪಕ್ಷೇತರರಾಗಿ ಆಯ್ಕೆಯಾಗಿದ್ದರು, ಹಾಗಾಗಿ ಸದ್ಯ ಜಿಲ್ಲೆಯಲ್ಲಿ ಸಂಗಮೇಶ್ ಸೀನಿಯರ್ ಶಾಸಕರಾಗಿದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಮಂತ್ರಿಗಿರಿ ಸಿಗಬೇಕು ಎಂಬ ವಾದ ಕಾಂಗ್ರೆಸ್​ ನಲ್ಲಿ ಆರಂಭವಾಗಿದೆ.

ಇನ್ನೂ ಕಾಂಗ್ರೆಸ್​ನ ಪ್ರಮುಖ ಹುದ್ದೆಗಳನ್ನ ಪಡೆದು ಅದನ್ನ ನಿರ್ವಹಿಸಿದ ಮಧು ಬಂಗಾರಪ್ಪ ಕೂಡ ಸಚಿವರಾಗುವ ರೇಸ್​ ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ಧಾರೆ. ಕಾಂಗ್ರೆಸ್​ ಸದಸ್ಯರಾಗಿ ಇದೇ ಮೊದಲ ಸಲ ಶಾಸಕರಾಗಿರುವ ಅವರು ಈ ಹಿಂದೆ ಜೆಡಿಎಸ್​ನಲ್ಲಿ ಶಾಸಕರಾಗಿದ್ದರು. 

ಇತ್ತ ರಾಜಕೀಯ ವನವಾಸಗಳನ್ನು ಅನುಭವಿಸಿದ ಬೇಳೂರು ಗೋಪಾಲಕೃಷ್ಣರಿಗೆ ಈ ಸಲ ಅದೃಷ್ಟವೂ ಖುಲಾಯಿಸಿದರೇ ಸಚಿವ ಸ್ಥಾನ ಒಲಿದು ಬರುವುದರಲ್ಲಿ ಅನುಮಾನವಿಲ್ಲ.ಈ ಹಿಂದೆ 2 ಸಲ ಶಾಸಕರಾಗಿದ್ದರೂ ಸಹ  ಆಗ ಬಿಜೆಪಿಯಲ್ಲಿದ್ದರು, ಇದೀಗ ಕಾಂಗ್ರೆಸ್​ನಿಂದ ಶಾಸಕರಾಗಿದ್ದಾರೆ. ಲೆಕ್ಕ ಹಾಗೂ ಜಾತಿ ಮತ್ತು ಮುಂಬರುವ ಸಂಸತ್ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಅಳೆದು ತೂಗಿ ಸಂಪುಟ ರಚನೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತೆ ಇನ್ನಷ್ಟೆ ಗೊತ್ತಾಗಬೇಕಿದೆ. 

 


ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೋಲು ! ಹೆಚ್​ಸಿ ಯೋಗೀಶ್​ ಹೇಳಿದ್ದೇನು?

ಶಿವಮೊಗ್ಗ/ ಇವತ್ತು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗಳು 

ಸುದ್ದಿಗೋಷ್ಟಿ ನಡೆಸಿದ್ರು. ಆ ಕಡೆ ತಮ್ಮ ಕಚೇರಿಯಲ್ಲಿ ಆಯನೂರು ಮಂಜುನಾಥ್ ಸುದ್ದಿಗೋಷ್ಟಿ ನಡೆಸಿದರೆ, ಇತ್ತ ಕಾಂಗ್ರೆಸ್ ಕಚೇರಿಯಲ್ಲಿ ಹೆಚ್​ಸಿ ಯೋಗೇಶ್ ಸುದ್ದಿಗೋಷ್ಟಿ ನಡೆಸಿ ಚುನಾವಣೆಯ ಸೋಲು ಹಾಗೂ ಮತದಾರರ ಬಗ್ಗೆ ಮಾತನಾಡಿದರು. 

ನಾನು ಸೋತೆನೆಂದು ಶಿವಮೊಗ್ಗದ ಮತದಾರರು ಧೃತಿಗೆಡುವುದು ಬೇಡ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಎಲ್ಲಾ ಭರವಸೆಗಳನ್ನು ಶಿವಮೊಗ್ಗದ ಜನರಿಗೆ ತಲುಪಿಸುವಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. 

ಸೋಲಿನಿಂದ ವಿಚಲಿತನಾಗುವುದಿಲ್ಲ. 67 ಸಾವಿರ ಮತದಾರರ ಪ್ರೀತಿ ಗಳಿಸಿದ್ದೇನೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ನನ್ನ ಸೋಲಿಗೆ ನಾನೇ ಕಾರಣ. ಯಾರ ಮೇಲೆಯೂ ತಪ್ಪು ಹೊರಿಸಲಾರೆ ಎಂದಿದ್ದಾರೆ. 

ಪಕ್ಷ ಬಿಟ್ಟು ಹೋದ ನಾನುವರ ಬಗ್ಗೆ ನಮಗೆ ಅನುಕಂಪವಿಲ್ಲ. ಕಾಂಗ್ರೆಸ್ ಪಕ್ಷದ ಜೊತೆಗಿದ್ದು, ಇಲ್ಲಿಯ ಅಧಿಕಾರಗಳನ್ನು ಅನುಭವಿಸಿ ಕೊನೆಯ ಸಮಯದಲ್ಲಿ ಕೈಕೊಟ್ಟು ಹೋದವರ ಜೊತೆ ಹೇಗೆ ಒಂದಾಗುವುದು ಎಂದು ಪ್ರಶ್ನಿಸಿದ್ರು. 


ಮುಂಬರುವ ಗಣಪತಿ ಹಬ್ಬದ  ವಿಚಾರ ಪ್ರಸ್ತಾಪಿಸಿದ ಆಯನೂರು ಮಂಜುನಾಥ್! 

ಶಿವಮೊಗ್ಗ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಆಯನೂರು ಮಂಜುನಾಥ್​ ಸುದ್ದಿಗೋಷ್ಟಿ ನಡೆಸಿ, ಹಾಲಿ ಶಾಸಕರು,  ಭಾವನಾತ್ಮಕ ಸಂಘರ್ಷಗಳಿಗೆ ಎಡೆಮಾಡಿಕೊಡದೆ ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ. 

ನನ್ನ ಸೋಲಿನ ಬಗ್ಗೆ ಬೇಸರ ವಿಲ್ಲ. ಆದರೆ ಮತದಾರರ ಮುಂದಿಟ್ಟ ವಿಚಾರವನ್ನ ಮತದಾರರು ಬೆಂಬಲಿಸದಿರುವುದು ಬೇಸರ ತಂದಿದೆ. ನನ್ನ ನಿರೀಕ್ಷೆಯ ವಿರುದ್ಧವಾಗಿ ಫಲಿತಾಂಶ ಬಂದಿದೆ. ಅದನ್ನು ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದರು.

ಶಿವಮೊಗ್ಗ ನಗರದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಲು, ಸರ್ಕಾರಿ ನೌಕರರ ಸಮಸ್ಯೆ ಬಗೆಹರಿಸಲು, ಜಾತಿ ಹಾಗೂ ಧರ್ಮ ಆಶ್ರಯಿಸದೆ ಸ್ಪರ್ಧೆ ಮಾಡಿದ್ದೆ. ಬಿಜೆಪಿಯವರು ಮತಗಟ್ಟೆಗಳಲ್ಲಿ ಬಜರಂಗಿ ಫೋಟೋ ಪ್ರದರ್ಶಿಸಿದರು. ಕೇರಳ ಸ್ಟೋರಿ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿ ಹಿಂದುಗಳ ಭಾವನೆಗಳನ್ನು ಕೆರಳುವಂತೆ ಮಾಡಿದರು. 

ಕಾಂಗ್ರೆಸ್ ಅಭ್ಯರ್ಥಿ ಕೂಡ ಜಾತಿ ಮತ್ತು ಒಳಜಾತಿಗೆ ಸೀಮಿತವಾಗಿ ಮತ ಕೇಳಿದರು. ಈ ಎಲ್ಲಾ ಕಾರಣಗಳಿಂದ ನನಗೆ ಸೋಲಾಗಿದೆ. ಆದರೆ ಈ ಸೋಲಿ ನಿಂದ ನಾನು ವಿಚಲಿತನಾಗುವುದಿಲ್ಲ. ಶಾಂತಿ ಕಾಪಾಡುವ ಪ್ರಯತ್ನದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿಯವರು ಬಡತನವನ್ನೇ ಖರೀದಿ ಮಾಡಿದ್ದಾರೆ. ಸಾಕಷ್ಟು ಹಣ ಹಂಚಿದ್ದಾರೆ. ಜಾತಿ ಧರ್ಮ ಗಳನ್ನು ಮಧ್ಯೆ ತಂದಿದ್ದಾರೆ. ಶಿವಮೊಗ್ಗದಲ್ಲಿ ಮನಸ್ಸುಗಳು ಮತ್ತೆ ಮುದುಡುತ್ತವೆ ಎಂಬ ಭೀತಿ ಜನರಲ್ಲಿದೆ. 

ಮುಂದೆ ಗಣಪತಿ ಹಬ್ಬ ಬರುತ್ತದೆ. ಗಣಪತಿ ಹಬ್ಬವನ್ನು ಶಾಂತಿಯುತವಾಗಿ ನಡೆಸಬೇಕಾಗಿದೆ. ಆದರೆ ಹಿಂದೂ ಮಹಾಸಭಾದ ನಾಯಕರೇ ಈಗ ಶಾಸಕರಾಗಿದ್ದಾರೆ. ಗಣಪತಿಹಬ್ಬವನ್ನು ಶಾಂತಿಯಿಂದ ಆಚರಿಸಲು ಹೇಗೆ ಸಾಧ್ಯ ಎಂಬುದನ್ನು ಕಾದುನೋಡಬೇಕಾಗಿದೆ




ಬಿ.ವೈ ವಿಜಯೇಂದ್ರರನ್ನ ಸೋಲಿಸುವ ಉದ್ದೇಶಕ್ಕೆ ಬಿಎಸ್​ವೈ ತೋಟದ ಬಳಿ ವಾಮಚಾರ ನಡೆಸಿದ್ರಾ ದುಷ್ಕರ್ಮಿಗಳು?



ಶಿಕಾರಿಪುರ/ ಶಿವಮೊಗ್ಗ/ ಶಿಕಾರಿಪುರ ತಾಲೂಕು ಬಂಡಿಬೈರನಹಳ್ಳಿ, ಮಜಿರೆ ಸಿದ್ಧನಪುರ ಗ್ರಾಮದ ಸರ್ವೆ ನಂ 36 ರಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ರವರಿಗೆ ಸೇರಿದ ಅಡಿಕೆ ತೋಟದ ಕಾಪೌಂಡ್ ಬಳಿ ವಾಮಚಾರ ನಡೆದಿತ್ತಾ?  ಬಿ ವೈ ವಿಜಯೇಂದ್ರ  ರವರು ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕೃತ್ಯವನ್ನ ಎಸೆಗಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಆಗಿದೆ. ಈ ಸಂಬಂಧ Act & Section: IPC 1860 (U/s-426,447); Karnataka Prevention and Eradication of Inhuman Evil Practices and Black Magic Act, 2017 (U/s-3(2)) ಅಡಿಯಲ್ಲಿ ಕೇಸ್​ ಕೂಡ ದಾಖಲಾಗಿದೆ. 

ಏನಿದೆ ದೂರಿನಲ್ಲಿ?

ಯಡಿಯೂರಪ್ಪನವರ ತೋಟದಲ್ಲಿ ನಡೆದ ಕೃತ್ಯದ ಸಂಬಂಧ ತೋಟದ ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ದಿನಾಂಕ: 11-05-2023 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆ ನಡುವಿನ ಸಮಯದಲ್ಲಿ 3-4 ಜನರು ದುಷ್ಕರ್ಮಿಗಳು ಕಾಡು ಪ್ರಾಣಿಯೊಂದನ್ನ ಕೊಂದು, ತೋಟದಲ್ಲಿ ಹೂತು ಹಾಕಿದ್ದಾರೆ.  ವಿಜಯೇಂದ್ರ ರವರಿಗೆ ಕೇಡನ್ನು ಉಂಟು ಮಾಡುವ ಸಲುವಾಗಿ ತೋಟದ ಕಾಂಪೌಂಡ್​ ಬಳಿ ವಾಮಚಾರ ಮಾಡಿ, ಕೊಂದ ಪ್ರಾಣಿಯನ್ನು ಹೂತು ಹಾಕಲಾಗಿದೆ. ಇದರ  ಹಿಂದಿನ ಉದ್ದೇಶ ಹಾಗೂ ದುಷ್ಕರ್ಮಿಗಳನ್ನು ಹಿಡಿಯಬೇಕು ಎಂದು ದೂರು ನೀಡಲಾಗಿದೆ. 

 

FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 



Malenadutoday.com Social media