ಬಿಎಸ್​ವೈ ತೋಟದಲ್ಲಿ ವಿಜಯೇಂದ್ರರ ಸೋಲಿಗೆ ಪುನುಗುಬೆಕ್ಕು ಕೊಂದು ವಾಮಚಾರ! ಪ್ರಭಾವ ತಟ್ಟಿತ್ತು ಎಂದ ಸಂಸದ ರಾಘವೇಂದ್ರ ಹೇಳಿದ್ದೇನು?

Mp BY Raghavendra claimed that civet was killed and sorcery was carried out in a garden belonging to BSY.

ಬಿಎಸ್​ವೈ ತೋಟದಲ್ಲಿ ವಿಜಯೇಂದ್ರರ ಸೋಲಿಗೆ  ಪುನುಗುಬೆಕ್ಕು ಕೊಂದು ವಾಮಚಾರ! ಪ್ರಭಾವ ತಟ್ಟಿತ್ತು ಎಂದ ಸಂಸದ ರಾಘವೇಂದ್ರ ಹೇಳಿದ್ದೇನು?

KARNATAKA NEWS/ ONLINE / Malenadu today/ May 15, 2023 GOOGLE NEWS / SHIVAMOGGA NEWS 

ಶಿಕಾರಿಪುರ/ ಶಿವಮೊಗ್ಗ/ ಶಿಕಾರಿಪುರ ತಾಲೂಕು ಬಂಡಿಬೈರನಹಳ್ಳಿ, ಮಜಿರೆ ಸಿದ್ಧನಪುರ ಗ್ರಾಮದ ಸರ್ವೆ ನಂ 36 ರಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ರವರಿಗೆ ಸೇರಿದ ಅಡಿಕೆ ತೋಟದ ಕಾಪೌಂಡ್ ಬಳಿ  ನಡೆದಿದೆ ಎನ್ನಲಾಗಿರುವ ವಾಮಾಚಾರದ ಪ್ರಕರಣದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ರವರು ಮಾತನಾಡಿದ್ದು, ಅದ್ರ ಪ್ರಭಾವಳಿ ತಮ್ಮ ಕುಟುಂಬದ ಮೇಲೆ ಆಗಿತ್ತು ಎಂದಿದ್ದಾರೆ. 

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೋಲು ! ಹೆಚ್​ಸಿ ಯೋಗೀಶ್​ ಹೇಳಿದ್ದೇನು? 

ಬಿವೈ ವಿರುದ್ಧ ವಾಮಾಚಾರ

ಬಿ ವೈ ವಿಜಯೇಂದ್ರ  ರವರು ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕೃತ್ಯವನ್ನ ಎಸೆಗಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಆಗಿದೆ. ಈ ಸಂಬಂಧ Act & Section: IPC 1860 (U/s-426,447); Karnataka Prevention and Eradication of Inhuman Evil Practices and Black Magic Act, 2017 (U/s-3(2)) ಅಡಿಯಲ್ಲಿ ಕೇಸ್​ ಕೂಡ ದಾಖಲಾಗಿದೆ. 

ಏನಿದೆ ದೂರಿನಲ್ಲಿ?

ಯಡಿಯೂರಪ್ಪನವರ ತೋಟದಲ್ಲಿ ನಡೆದ ಕೃತ್ಯದ ಸಂಬಂಧ ತೋಟದ ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ದಿನಾಂಕ: 11-05-2023 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆ ನಡುವಿನ ಸಮಯದಲ್ಲಿ 3-4 ಜನರು ದುಷ್ಕರ್ಮಿಗಳು ಕಾಡು ಪ್ರಾಣಿಯೊಂದನ್ನ ಕೊಂದು, ತೋಟದಲ್ಲಿ ಹೂತು ಹಾಕಿದ್ದಾರೆ.  ವಿಜಯೇಂದ್ರ ರವರಿಗೆ ಕೇಡನ್ನು ಉಂಟು ಮಾಡುವ ಸಲುವಾಗಿ ತೋಟದ ಕಾಂಪೌಂಡ್​ ಬಳಿ ವಾಮಚಾರ ಮಾಡಿ, ಕೊಂದ ಪ್ರಾಣಿಯನ್ನು ಹೂತು ಹಾಕಲಾಗಿದೆ. ಇದರ  ಹಿಂದಿನ ಉದ್ದೇಶ ಹಾಗೂ ದುಷ್ಕರ್ಮಿಗಳನ್ನು ಹಿಡಿಯಬೇಕು ಎಂದು ದೂರು ನೀಡಲಾಗಿದೆ. 

ಶಿವಮೊಗ್ಗ ಜಿಲ್ಲೆಗೆ ಯಾರು ಮಿನಿಸ್ಟರ್​? ಪೈಪೋಟಿಯಲ್ಲಿ ಯಾರಿದ್ದಾರೆ? ಏನಿದೆ ಕುತೂಹಲ?

ಸಂಸದರು ಹೇಳಿದ್ದೇನು? 

ಶಿಕಾರಿಪುರದ ತಾಲೂಕು‌ ಬಿಜೆಪಿ ಕಚೇರಿಯಲ್ಲಿ ಮಾತನಾಡಿ ಸಂಸದ ರಾಘವೇಂದ್ರ  ತೋಟದಲ್ಲಿ ಪುನುಗು‌ ಬೆಕ್ಕನ್ನು ಮಣ್ಣಿನಲ್ಲಿ ಹೂತಿಟ್ಟು ಅದಕ್ಕೆ ಪೂಜೆ ಮಾಡಿ, ವಾಮಚಾರ ನಡೆಸಲಾಗಿತ್ತು. ಮತದಾನ ನಡೆದ ಮರುದಿನ ಈ ಘಟನೆ ನಡೆದಿದೆ. 11 ನೇ ತಾರೀಖು  ರಾತ್ರಿ 10 ಗಂಟೆಗೆ ನನಗೆ ಒಂದು ಪೋನ್ ಕರೆ ಬಂದಿದೆ. ಅದರಲ್ಲಿ ಒಬ್ಬರು ಯಾರೋ ತಿಮ್ಮ ತೋಟದ ಕಾಂಪೌಂಡ್​ನಲ್ಲಿ ಹೂವನ್ನ ಕೀಳುತ್ತಿದ್ದಾರೆ ಎಂದಿದ್ದರು. ತಕ್ಷಣವೇ ತೋಟದಲ್ಲಿದ್ದ ಸಿಬ್ಬಂದಿಗೆ ಕರೆ ಮಾಡಿ ಸ್ಥಳಕ್ಕೆ ಕಳುಹಿಸಿದೆ. ಅಲ್ಲಿಗವರು ಹೋಗಿ ನೋಡಿದಾಗ 

 ಪುನುಗು ಬೆಕ್ಕು ಸಿಕ್ಕಿದೆ. ಇದು ಆಂಧ್ರಪ್ರದೇಶ ಹಾಗೂ ಕೊಳ್ಳೇಗಾಲದಲ್ಲಿ ಸಿಗುತ್ತದೆ. ನಮ್ಮಲ್ಲಿ ಇರುವ ಎಲ್ಲಾ ಶಕ್ತಿಗಳನ್ನು ಆಕರ್ಷಣೆ ಮಾಡಲು ಕೃತ್ರಿಮ ಮಾಡಲಾಗುತ್ತದೆ. 

ಬಿಜೆಪಿಗೆ ವೋಟು ಹಾಕಿದ್ದಕ್ಕೆ ಆಟೋ ಜಖಂ ಮಾಡಿ, ಹಲ್ಲೆ ಮಾಡಿದ್ರು ಎಂದು ಈಶ್ವರಪ್ಪನವರ ಬಳಿ ದೂರು ಹೇಳಿಕೊಂಡ ಚಾಲಕ 

ಅದೇರೀತಿಯಲ್ಲಿ  ‌ಬಿ ವೈ ವಿಜಯೇಂದ್ರ ಗೆಲ್ಲದಂತೆ ತೋಟದ ಮನೆಯಲ್ಲಿ ವಾಮಚಾರ ನಡೆಸಲಾಗಿತ್ತು:  ಹೊನ್ನಾಳಿ ಕಡೆಯಿಂದ ಬಂದು ವಾಮಾಚಾರ ನಡೆಸಿರುವ ಅನುಮಾನವಿದೆ.  ಈ ಪ್ರಾಣಿ ಹಿಡಿಯಲು 8-10 ದಿನ ಬೇಕು, ಆನಂತರ ಅದನ್ನ 8-10 ದಿನ ಜೀವಂತವಾಗಿ ಪೂಜೆ ಮಾಡಿ, ನಂತರ ಜೀವ ತೆಗೆದು ನಮ್ಮ ಮನೆ‌ ಹತ್ತಿರ ಹೂತು ಹಾಕಿದ್ದಾರೆ ಎಂದು ವಿಚಾರಿಸಿದ ವೇಳೇಯಲ್ಲಿ ಗೊತ್ತಾಗಿದೆ. 

ಇದರ ಪ್ರಭಾವ ನಮಗೆ ಆಗಿತ್ತು

ಇನ್ನೂ ಇದೇ ವೇಳೆ ವಾಮಾಚಾರದ ಪ್ರಭಾವ ತಮ್ಮ ಕುಟುಂಬದ ಮೇಲೆ ಆಗಿತ್ತು ಎಂಬುದನ್ನ ತಿಳಿಸಿದ ಸಂಸದ ರಾಘವೇಂದ್ರ,  ನಾವು ಪೂಜೆಗೆಂದು ಪೂಜಾರಿಯವರನ್ನ  ಕರೆ ತರುವ ಸಂದರ್ಭದಲ್ಲಿ ದುರ್ಘಟಣೆಯೊಂದು ಸಂಭವಿಸಿತ್ತು ಎಂದಿದ್ದಾರೆ. ಅಲ್ಲದೆ ಘಟನೆ ಸಂಬಂಧ ದೂರು ನೀಡಲಾಗಿದ್ದು  ಪೊಲೀಸ್ ಇಒಲಾಖೆ ಇದರ ಬಗ್ಗೆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. 

 FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

Malenadutoday.com Social media