ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೋಲು ! ಹೆಚ್​ಸಿ ಯೋಗೀಶ್​ ಹೇಳಿದ್ದೇನು?

Defeat in Shimoga city constituency! What did HC Yogesh say?

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೋಲು ! ಹೆಚ್​ಸಿ ಯೋಗೀಶ್​ ಹೇಳಿದ್ದೇನು?

KARNATAKA NEWS/ ONLINE / Malenadu today/ May 15, 2023 GOOGLE NEWS / SHIVAMOGGA NEWS 

ಶಿವಮೊಗ್ಗ/ ಇವತ್ತು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗಳು ಸುದ್ದಿಗೋಷ್ಟಿ ನಡೆಸಿದ್ರು. ಆ ಕಡೆ ತಮ್ಮ ಕಚೇರಿಯಲ್ಲಿ ಆಯನೂರು ಮಂಜುನಾಥ್ ಸುದ್ದಿಗೋಷ್ಟಿ ನಡೆಸಿದರೆ, ಇತ್ತ ಕಾಂಗ್ರೆಸ್ ಕಚೇರಿಯಲ್ಲಿ ಹೆಚ್​ಸಿ ಯೋಗೇಶ್ ಸುದ್ದಿಗೋಷ್ಟಿ ನಡೆಸಿ ಚುನಾವಣೆಯ ಸೋಲು ಹಾಗೂ ಮತದಾರರ ಬಗ್ಗೆ ಮಾತನಾಡಿದರು. 

ನಾನು ಸೋತೆನೆಂದು ಶಿವಮೊಗ್ಗದ ಮತದಾರರು ಧೃತಿಗೆಡುವುದು ಬೇಡ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಎಲ್ಲಾ ಭರವಸೆಗಳನ್ನು ಶಿವಮೊಗ್ಗದ ಜನರಿಗೆ ತಲುಪಿಸುವಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. 

ಸೋಲಿನಿಂದ ವಿಚಲಿತನಾಗುವುದಿಲ್ಲ. 67 ಸಾವಿರ ಮತದಾರರ ಪ್ರೀತಿ ಗಳಿಸಿದ್ದೇನೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ನನ್ನ ಸೋಲಿಗೆ ನಾನೇ ಕಾರಣ. ಯಾರ ಮೇಲೆಯೂ ತಪ್ಪು ಹೊರಿಸಲಾರೆ ಎಂದಿದ್ದಾರೆ. 

ಪಕ್ಷ ಬಿಟ್ಟು ಹೋದ ನಾನುವರ ಬಗ್ಗೆ ನಮಗೆ ಅನುಕಂಪವಿಲ್ಲ. ಕಾಂಗ್ರೆಸ್ ಪಕ್ಷದ ಜೊತೆಗಿದ್ದು, ಇಲ್ಲಿಯ ಅಧಿಕಾರಗಳನ್ನು ಅನುಭವಿಸಿ ಕೊನೆಯ ಸಮಯದಲ್ಲಿ ಕೈಕೊಟ್ಟು ಹೋದವರ ಜೊತೆ ಹೇಗೆ ಒಂದಾಗುವುದು ಎಂದು ಪ್ರಶ್ನಿಸಿದ್ರು. 


ಮುಂಬರುವ ಗಣಪತಿ ಹಬ್ಬದ  ವಿಚಾರ ಪ್ರಸ್ತಾಪಿಸಿದ ಆಯನೂರು ಮಂಜುನಾಥ್! 

ಶಿವಮೊಗ್ಗ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಆಯನೂರು ಮಂಜುನಾಥ್​ ಸುದ್ದಿಗೋಷ್ಟಿ ನಡೆಸಿ, ಹಾಲಿ ಶಾಸಕರು,  ಭಾವನಾತ್ಮಕ ಸಂಘರ್ಷಗಳಿಗೆ ಎಡೆಮಾಡಿಕೊಡದೆ ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ. 

ನನ್ನ ಸೋಲಿನ ಬಗ್ಗೆ ಬೇಸರ ವಿಲ್ಲ. ಆದರೆ ಮತದಾರರ ಮುಂದಿಟ್ಟ ವಿಚಾರವನ್ನ ಮತದಾರರು ಬೆಂಬಲಿಸದಿರುವುದು ಬೇಸರ ತಂದಿದೆ. ನನ್ನ ನಿರೀಕ್ಷೆಯ ವಿರುದ್ಧವಾಗಿ ಫಲಿತಾಂಶ ಬಂದಿದೆ. ಅದನ್ನು ವಿನಯಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದರು.

ಶಿವಮೊಗ್ಗ ನಗರದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಲು, ಸರ್ಕಾರಿ ನೌಕರರ ಸಮಸ್ಯೆ ಬಗೆಹರಿಸಲು, ಜಾತಿ ಹಾಗೂ ಧರ್ಮ ಆಶ್ರಯಿಸದೆ ಸ್ಪರ್ಧೆ ಮಾಡಿದ್ದೆ. ಬಿಜೆಪಿಯವರು ಮತಗಟ್ಟೆಗಳಲ್ಲಿ ಬಜರಂಗಿ ಫೋಟೋ ಪ್ರದರ್ಶಿಸಿದರು. ಕೇರಳ ಸ್ಟೋರಿ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿ ಹಿಂದುಗಳ ಭಾವನೆಗಳನ್ನು ಕೆರಳುವಂತೆ ಮಾಡಿದರು. 

ಕಾಂಗ್ರೆಸ್ ಅಭ್ಯರ್ಥಿ ಕೂಡ ಜಾತಿ ಮತ್ತು ಒಳಜಾತಿಗೆ ಸೀಮಿತವಾಗಿ ಮತ ಕೇಳಿದರು. ಈ ಎಲ್ಲಾ ಕಾರಣಗಳಿಂದ ನನಗೆ ಸೋಲಾಗಿದೆ. ಆದರೆ ಈ ಸೋಲಿ ನಿಂದ ನಾನು ವಿಚಲಿತನಾಗುವುದಿಲ್ಲ. ಶಾಂತಿ ಕಾಪಾಡುವ ಪ್ರಯತ್ನದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿಯವರು ಬಡತನವನ್ನೇ ಖರೀದಿ ಮಾಡಿದ್ದಾರೆ. ಸಾಕಷ್ಟು ಹಣ ಹಂಚಿದ್ದಾರೆ. ಜಾತಿ ಧರ್ಮ ಗಳನ್ನು ಮಧ್ಯೆ ತಂದಿದ್ದಾರೆ. ಶಿವಮೊಗ್ಗದಲ್ಲಿ ಮನಸ್ಸುಗಳು ಮತ್ತೆ ಮುದುಡುತ್ತವೆ ಎಂಬ ಭೀತಿ ಜನರಲ್ಲಿದೆ. 

ಮುಂದೆ ಗಣಪತಿ ಹಬ್ಬ ಬರುತ್ತದೆ. ಗಣಪತಿ ಹಬ್ಬವನ್ನು ಶಾಂತಿಯುತವಾಗಿ ನಡೆಸಬೇಕಾಗಿದೆ. ಆದರೆ ಹಿಂದೂ ಮಹಾಸಭಾದ ನಾಯಕರೇ ಈಗ ಶಾಸಕರಾಗಿದ್ದಾರೆ. ಗಣಪತಿಹಬ್ಬವನ್ನು ಶಾಂತಿಯಿಂದ ಆಚರಿಸಲು ಹೇಗೆ ಸಾಧ್ಯ ಎಂಬುದನ್ನು ಕಾದುನೋಡಬೇಕಾಗಿದೆ




ಹಣಕ್ಕಾಗಿ ಶಿವಮೊಗ್ಗ ನಗರದಲ್ಲಿ ಯುವತಿಯ ಕಿಡ್ನ್ಯಾಪ್​

ಶಿವಮೊಗ್ಗ/ ಇಲ್ಲಿನ ಜಯನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಯುವತಿಯೊಬ್ಬಳನ್ನ ಕಿಡ್ನ್ಯಾಪ್ ಮಾಡಿರುವ ಬಗ್ಗೆ ವರದಿಯಾಗಿದೆ. 

ರಂಜಿತಾ. ಬಿ, 22 ವರ್ಷ ಎಂಬಾಕೆಯನ್ನು  ಶಿವಮೊಗ್ಗದಿಂದ ಮೇ 14 ರಂದು ಸಂಜೆ 05 ಗಂಟೆಯಿಂದ ರಾತ್ರಿ 09:30 ರ ಮಧ್ಯಾವಧಿಯಲ್ಲಿ ಹಣಕ್ಕಾಗಿ ಯಾರೋ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. 

ಅಪಹರಣಕ್ಕೊಳಗಾದ ರಂಜಿತಾ.ಬಿ  ಸುಮಾರು 5.1 ಅಡಿ ಎತ್ತರ, ಬಿಳಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ನೇವಿ ಬ್ಲೂ ಬಣ್ಣದ ಚೂಡಿದಾರ್  ಧರಿಸಿದ್ದಾಳೆ. 

ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಜಯನಗರ ಪೊಲೀಸ್​ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೊಲೀಸ್​ ಕಂಟ್ರೋಲ್ ರೂಂ ದೂ.ಸಂ: 08182-261400/261413/261416 ನ್ನು ಸಂಪರ್ಕಿಸಬಹುದೆಂದು ಜಯನಗರ ಪೆÇಲೀಸ್  ಠಾಣೆ  ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದೆ.


ಬಿ.ವೈ ವಿಜಯೇಂದ್ರರನ್ನ ಸೋಲಿಸುವ ಉದ್ದೇಶಕ್ಕೆ ಬಿಎಸ್​ವೈ ತೋಟದ ಬಳಿ ವಾಮಚಾರ ನಡೆಸಿದ್ರಾ ದುಷ್ಕರ್ಮಿಗಳು?



ಶಿಕಾರಿಪುರ/ ಶಿವಮೊಗ್ಗ/ ಶಿಕಾರಿಪುರ ತಾಲೂಕು ಬಂಡಿಬೈರನಹಳ್ಳಿ, ಮಜಿರೆ ಸಿದ್ಧನಪುರ ಗ್ರಾಮದ ಸರ್ವೆ ನಂ 36 ರಲ್ಲಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ರವರಿಗೆ ಸೇರಿದ ಅಡಿಕೆ ತೋಟದ ಕಾಪೌಂಡ್ ಬಳಿ ವಾಮಚಾರ ನಡೆದಿತ್ತಾ?  ಬಿ ವೈ ವಿಜಯೇಂದ್ರ  ರವರು ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕೃತ್ಯವನ್ನ ಎಸೆಗಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಆಗಿದೆ. ಈ ಸಂಬಂಧ Act & Section: IPC 1860 (U/s-426,447); Karnataka Prevention and Eradication of Inhuman Evil Practices and Black Magic Act, 2017 (U/s-3(2)) ಅಡಿಯಲ್ಲಿ ಕೇಸ್​ ಕೂಡ ದಾಖಲಾಗಿದೆ. 

ಏನಿದೆ ದೂರಿನಲ್ಲಿ?

ಯಡಿಯೂರಪ್ಪನವರ ತೋಟದಲ್ಲಿ ನಡೆದ ಕೃತ್ಯದ ಸಂಬಂಧ ತೋಟದ ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ದಿನಾಂಕ: 11-05-2023 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆ ನಡುವಿನ ಸಮಯದಲ್ಲಿ 3-4 ಜನರು ದುಷ್ಕರ್ಮಿಗಳು ಕಾಡು ಪ್ರಾಣಿಯೊಂದನ್ನ ಕೊಂದು, ತೋಟದಲ್ಲಿ ಹೂತು ಹಾಕಿದ್ದಾರೆ.  ವಿಜಯೇಂದ್ರ ರವರಿಗೆ ಕೇಡನ್ನು ಉಂಟು ಮಾಡುವ ಸಲುವಾಗಿ ತೋಟದ ಕಾಂಪೌಂಡ್​ ಬಳಿ ವಾಮಚಾರ ಮಾಡಿ, ಕೊಂದ ಪ್ರಾಣಿಯನ್ನು ಹೂತು ಹಾಕಲಾಗಿದೆ. ಇದರ  ಹಿಂದಿನ ಉದ್ದೇಶ ಹಾಗೂ ದುಷ್ಕರ್ಮಿಗಳನ್ನು ಹಿಡಿಯಬೇಕು ಎಂದು ದೂರು ನೀಡಲಾಗಿದೆ. 

 

FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 



Malenadutoday.com Social media