ಮಲೆನಾಡಿನ ‘ವೈಶಂಪಾಯನ ತೀರ‘ದ ವಿಶೇಷತೆ ಗೊತ್ತಾ? ನಿಗೂಢತೆಯ ಬಲೆಯಲ್ಲಿರುವ ಸಿನಿಮಾ ರಿಲೀಸ್​ಗೆ ರೆಡಿ

ಈ ಚಿತ್ರ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಸಾಗಿ ವೈಯಕ್ತಿಕ ಬದುಕಿನ ಸಂಬಂಧಗಳ ನಿಗೂಢತೆಯನ್ನು ಬಿಂಬಿಸುವ ಹಾಗೂ ಪ್ರಕೃತಿ ಮತ್ತು ಪುರುಷನ ಸಂಘರ್ಷ ಹೇಳುವ ಕಥೆಯಾಗಿದೆ.

ಮಲೆನಾಡಿನ ‘ವೈಶಂಪಾಯನ ತೀರ‘ದ  ವಿಶೇಷತೆ ಗೊತ್ತಾ? ನಿಗೂಢತೆಯ  ಬಲೆಯಲ್ಲಿರುವ ಸಿನಿಮಾ ರಿಲೀಸ್​ಗೆ ರೆಡಿ

ಶಿವಮೊಗ್ಗ: ಗ್ರಾಮೀಣ ಸೊಗಡಿನ ಜಾನಪದದೊಂದಿಗೆ ಕಮರ್ಷಿಯಲ್ ಟಚ್ ಇರುವ `ವೈಶಂಪಾಯನ ತೀರ' ಸಿನಿಮಾ ಜ.6 ರಂದು ಮಲ್ಟಿಪ್ಲೆಕ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹಾಗೂ ರಂಗಕರ್ಮಿ ರಮೇಶ್ ಬೇಗಾರ್ ಹೇಳಿದರು.

ಗೃಹಸಚಿವರು ಕ್ಷಮೆಯಾಚಿಸುವಂತೆ ರೈತ ಸಂಘದ ಒತ್ತಾಯ, ಇಲ್ಲವಾದರೆ ಪ್ರತಿಭಟನೆಯ ಎಚ್ಚರಿಕೆ! ಕಾರಣವೇನು ? ವಿವರ ಇಲ್ಲಿದೆ

ಪ್ರೆಸ್‌ಟ್ರಸ್ಟ್ನಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕಥೆಯನ್ನು ಆದರಿಸಿದ ಈ ಚಿತ್ರ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಸಾಗಿ ವೈಯಕ್ತಿಕ ಬದುಕಿನ ಸಂಬಂಧಗಳ ನಿಗೂಢತೆಯನ್ನು ಬಿಂಬಿಸುವ ಹಾಗೂ ಪ್ರಕೃತಿ ಮತ್ತು ಪುರುಷನ ಸಂಘರ್ಷ ಹೇಳುವ ಕಥೆಯಾಗಿದೆ.

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

30 ವರ್ಷದ ಹಿಂದೆ ರಚಿತವಾದ ಈ ಕಥೆಗೆ ಇಂದಿನ ಟ್ರೆಂಡ್ ಅಳವಡಿಸಲಾಗಿದೆ. ಮಣ್ಣಿನ ಮೂಲ ಸೊಗಡಾಗಿ ಈ ಚಿತ್ರ ಬಂದಿದೆ. ಪ್ರಮುಖವಾಗಿ ಮಲೆನಾಡಿನ ಶೃಂಗೇರಿ ಭಾಗದ ಜನಜೀವನ, ಭಾಷೆ, ಸಂಸ್ಕೃತಿಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದರು. 

ಚಿತ್ರದಲ್ಲಿ ಕೃಷ್ಣಭಟ್ಟ, ವೆಂಕಪ್ಪ ಹೆಗಡೆ, ಕಲ್ಯಾಣಿ ಪ್ರಮುಖ ಪಾತ್ರಗಳಿವೆ. ಇವುಗಳನ್ನು ಕ್ರಮವಾಗಿ ರವೀಶ್ ಹೆಗ್ಡೆ ಐನ್‌ಬೈಲ್, ಪ್ರಸನ್ನಶೆಟ್ಟಿಗಾರ್, ಮತ್ತು ವೈಜಯಂತಿ ಅಡಿಗ ಕಾಣಿಸಿಕೊಂಡಿದ್ದಾರೆ.

ಸಾಗರ ಪಟ್ಟಣದ ಎನ್​ಎನ್​ ಸರ್ಕಲ್​ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ

ಈ ಕಥೆಗೆ ಪೂರಕವಾಗಿ ಮತ್ತೊಂದು ಕಥೆ ಇದ್ದು, ಇದರಲ್ಲಿ ಪ್ರಮೋದ್ ಶೆಟ್ಟಿ ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್ ಬಿ.ಎಲ್. ರವಿಕುಮಾರ್, ನಾಗಶ್ರೀ ಬೇಗಾರ್, ರಮೇಶ್ ಭಟ್, ಗುರುರಾಜ್ ಹೊಸಕೋಟೆ, ಶೃಂಗೇರಿ ರಾಮಣ್ಣನಂತಹ ಹಿರಿಯ ಕಲಾವಿದರು ನಟಿಸಿದ್ದಾರೆ. ಮುಖ್ಯವಾಗಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪ, ಸತೀಶ್ ಪೈ, ಸಂತೋಷ್ ಪೈ, ಸುಬ್ರಹ್ಮಣ್ಯ ಹಂಡಿಗೆ ಬಣ್ಣ ಹಚ್ಚಿದ್ದಾರೆ ಎಂದರು.

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಇದರ ಜೊತೆಗೆ ಶೃಂಗೇರಿ ಸುತ್ತಮುತ್ತಲ ರಂಗಕಲಾವಿದರ ದಂಡೇ ಈ ಚಿತ್ರದಲ್ಲಿದೆ. ವಿನುಮನಸು ಸಂಗೀತ ನೀಡಿದ್ದಾರೆ. ಶ್ರೀನಿಧಿ ಕೊಪ್ಪ ಸಂಯೋಜಿಸಿದ ಮೂರು ಹಾಡುಗಳನ್ನು ಸಾಧ್ವಿನಿ ಕೊಪ್ಪ ಹಾಗೂ ವಿನಯ್ ಶೃಂಗೇರಿ ಹಾಡಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ಶಶೀರ ಹೊತ್ತಿದ್ದಾರೆ.

ಬ್ರೇಕಿಂಗ್​ ನ್ಯೂಸ್​ ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

ಅವಿನಾಶ್ ಶೃಂಗೇರಿ ಸಂಕಲನ, ಅಭಿಷೇಕ್ ಹೆಬ್ಬಾರ್ ಕಲಾನಿರ್ದೇಶನ, ರಾಮಚಂದ್ರ ಅವರ ಸಹ ನಿರ್ದೇಶನ ಹೀಗೆ ಎಲ್ಲ ತಂತ್ರಜ್ಞರು ಮಲೆನಾಡ ನಿವಾಸಿಗಳೇ ಎಂಬುದು ವಿಶೇಷವಾಗಿದೆ. ಮೂರು ದಶಕಗಳ ಹಿಂದೆ ಸ್ವರ ಸಂಗಮ ಎಂಬ ಆಡಿಯೋ ಕ್ಯಾಸೆಟ್ ಉದ್ಮ ಸ್ಥಾಪಿಸಿದ್ದ ಆರ್. ಸುರೇಶ್‌ಬಾಬು ಈ ಚಿತ್ರದ ನಿರ್ಮಾಪಕರಾಗಿದ್ದಾರೆ ಎಂದರು.

ಇದನ್ನು ಓದಿ : Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಕಾಂತಾರ ಚಿತ್ರದ ಯಶಸ್ವಿಯ ನಂತರ ಸಿನಿಮಾ ಉದ್ಯಮ ಇದೇ ಟ್ರೆಂಡ್ ಇರುವ ಚಿತ್ರಗಳನ್ನು ನಿರ್ಮಿಸಲು ಯೋಚಿಸುತ್ತಿದ್ದಾರೆ. ಈ ಚಿತ್ರವೂ ಆ ನೆರಳಿನಲ್ಲಿಯೆ ಸಾಗುತ್ತದೆ. ಗಾಂಧಿನಗರದಿಂದ ಸ್ವಲ್ಪ ವಿಮುಕ್ತಿ ಪಡೆಯುವ ಹಾದಿಯಲ್ಲಿ ಚಿತ್ರರಂಗವಿದೆ. ಇದಕ್ಕೆ ಬಹುಮುಖ್ಯವಾದ ಕಾರಣ ಸಿನಿಮಾ ನಿರ್ಮಿಸಲು ಆಧುನಿಕ ತಂತ್ರಜ್ಞಾನಗಳೇ ಕಾರಣವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಛಾಯಾಗ್ರಾಹಕ ಶಶೀರ ಶೃಂಗೇರಿ ಇದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ