ಮೂರು ದಿನ ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಇರೋದಿಲ್ಲ! ಎಲ್ಲೆಲ್ಲಿ? ಯಾವಾಗ? ಎನ್ನುವ ವಿವರ ಇಲ್ಲಿದೆ

There is no electricity in different areas of Shimoga for three days! Where? when Here is the detail, ಮೂರು ದಿನ ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಇರೋದಿಲ್ಲ! ಎಲ್ಲೆಲ್ಲಿ? ಯಾವಾಗ? ಎನ್ನುವ ವಿವರ ಇಲ್ಲಿದೆ

ಮೂರು ದಿನ ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಇರೋದಿಲ್ಲ! ಎಲ್ಲೆಲ್ಲಿ? ಯಾವಾಗ? ಎನ್ನುವ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’



ಇದೇ ಸೆಪ್ಟೆಂಬರ್​ 23,24, 25 ರಂದು ಶಿವಮೊಗ್ಗದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅದರ ಪೂರ್ಣ ವಿವರ ಇಲ್ಲಿದೆ 

ಸೆ.23 ರಂದು ವಿದ್ಯುತ್ ವ್ಯತ್ಯಯ

ನಗರ ಉಪವಿಭಾಗ-2 ರ ಘಟಕ-4 ರ ಕೆಆರ್ ಪುರಂ ಮತ್ತು ಘಟಕ 6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಸೆ.23 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗಾಂಧಿ ಬಜಾರ್, ಭರಮಪ್ಪನಗರ, ಉಪ್ಪಾರ ಕೇರಿ, ಕೆ.ಆರ್.ಪುರಂ, ಎಂಕೆಕೆ ರಸ್ತೆ, ಅಜಾದ್‍ನಗರ, ನೂರಾನಿ ಮಸೀದಿ, ಸಿದ್ದಯ್ಯ ರಸ್ತೆ, ಕಲ್ಲಪ್ಪನ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.



ಸೆ.24 ರಂದು ವಿದ್ಯುತ್ ವ್ಯತ್ಯಯ

ನಗರ ಉಪವಿಭಾಗ-2 ರ ಘಟಕ-4 ರ ಕೆಆರ್ ಪುರಂ ಮತ್ತು ಘಟಕ 6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಸೆ.24 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗೋಪಿಶೆಟ್ಟಿಕೊಪ್ಪ, ಜಿ.ಎಸ್ ಕ್ಯಾಸ್ಟಿಂಗ್ ಫ್ಯಾಕ್ಟರಿ, ಸಲೀಂ ಫ್ಯಾಕ್ಟರಿ, ಸಿದ್ದೇಶ್ವರ ಸರ್ಕಲ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹಚ್‍ಬಿ ಕಾಲೋನಿ, ಹಳೇ ಗೋಪಿಶೆಟ್ಟಿಕೊಪ್ಪ, ಮಲ್ಲಿಕಾರ್ಜುನ ಬಡಾವಣೆ, ಅನುಪಿನಕಟ್ಟೆ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸೆ.25 ರಂದು ವಿದ್ಯುತ್ ವ್ಯತ್ಯಯ

ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-2 ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಸೆ.25 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಗೂರು ಕಾಂಪ್ಲೆಕ್ಸ್, ದುರ್ಗಿಗುಡಿ 1ನೇ ಮತ್ತು 2ನೇ ಪ್ಯಾರಲಲ್ ರಸ್ತೆ, ಎಲ್.ಎಲ್.ಆರ್ ರಸ್ತೆಯಿಂದ ಶಿವಮೊಗ್ಗ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.  


ಇನ್ನಷ್ಟು ಸುದ್ದಿಗಳು