ಇಂಟರ್​ ಸಿಟಿ ರೈಲಿನಲ್ಲಿ ಬೆಂಗಳೂರಿನಿಂದ-ಶಿವಮೊಗ್ಗಕ್ಕೆ ಬಂತು ಬ್ಯಾಂಕ್ ಮ್ಯಾನೇಜರ್​ ಶವ! ನಡೆದಿದ್ದೇನು? ಸಂಶಯ ಮೂಡಿಸಿತೆ ಪ್ರಕರಣ!

Bank manager's body arrives from Bengaluru to Shimoga in intercity train What happened? The case raised doubts!

ಇಂಟರ್​ ಸಿಟಿ ರೈಲಿನಲ್ಲಿ ಬೆಂಗಳೂರಿನಿಂದ-ಶಿವಮೊಗ್ಗಕ್ಕೆ ಬಂತು ಬ್ಯಾಂಕ್  ಮ್ಯಾನೇಜರ್​ ಶವ! ನಡೆದಿದ್ದೇನು? ಸಂಶಯ ಮೂಡಿಸಿತೆ ಪ್ರಕರಣ!
ಇಂಟರ್​ ಸಿಟಿ ರೈಲಿನಲ್ಲಿ ಬೆಂಗಳೂರಿನಿಂದ-ಶಿವಮೊಗ್ಗಕ್ಕೆ ಬಂತು ಬ್ಯಾಂಕ್ ಮ್ಯಾನೇಜರ್​ ಶವ! ನಡೆದಿದ್ದೇನು? ಸಂಶಯ ಮೂಡಿಸಿತೆ ಪ್ರಕರಣ!

ಶಿವಮೊಗ್ಗ  ಯಶವಂತಪುರ-ಶಿವಮೊಗ್ಗದ ಇಂಟರ್ ಸಿಟಿ ರೈಲಿನ ಏಸಿ ಬೋಗಿಯಲ್ಲಿ (shimoga yeshwanthpur intercity train)ವ್ಯಕ್ತಿಯೋರ್ವನ ಶವ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ. ಸದ್ಯ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು, ಘಟನೆಯ ಬಗ್ಗೆ ವಿವಿಧ ಆಯಾಮಗಳಲ್ಲಿ  ತನಿಖೆ ನಡೆಸಲಾಗುತ್ತಿದೆ. 

ಇಂಟರ್​ ಸಿಟಿ ರೈಲಿನ ಟಾಯ್ಲೆಟ್​​ನಲ್ಲಿ ಶವ ಪತ್ತೆ 

ಭಾನುವಾರ ಶಿವಮೊಗ್ಗಕ್ಕೆ ವಾಪಸ್ಸಾದ ಇಂಟರ್​ ಸಿಟಿ ರೈಲಿನ ಎಸಿ ಬೋಗಿಗಳಿರುವ ಕಂಪಾರ್ಟ್ಮೆಂಟ್​ನ ಟಾಯ್ಲೆಟ್​ನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಶಿವಮೊಗ್ಗಕ್ಕೆ ಬಂದ ಇಂಟರ್​ ಸಿಟಿ ರೈಲನ್ನ ಕ್ಲೀನ್ ಮಾಡುವ ಸಂದರ್ಭದಲ್ಲಿ, ಶೌಚಾಲಯವು ಒಳಗಿನಿಂದ ಲಾಕ್ ಆಗಿರುವುದು ಕಂಡು , ಸ್ವಚ್ಚತಾ ಸಿಬ್ಬಂದಿ ರೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಪೊಲೀಸರಿಗೆ ವಿಷಯ ತಿಳಿಸಿ ಲಾಕ್ ಓಪನ್ ಮಾಡಿದಾಗ , ಶೌಚಾಲಯದಲ್ಲಿ ಮೃತದೇಹ ಪತ್ತೆಯಾಗಿದೆ. 

ಬ್ಯಾಂಕ್ ಅಧಿಕಾರಿಯ ಮೃತದೇಹ 

ಇನ್ನೂ ಸಾವನ್ನಪ್ಪಿದ ವ್ಯಕ್ತಿಯನ್ನು ಶಿವಮೊಗ್ಗದ ಯೂನಿಯನ್ ಬ್ಯಾಂಕ್ ಶಾಖೆಯೊಂದರ ವ್ಯವಸ್ಥಾಪಕ ಅಶೋಕ್‌ ಚೌಧರಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬೆಂಗಳೂರಿಗೆ ತೆರಳಿದ್ದ. ಅಸ್ಸಾಂನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಚೌಧರಿ ಅವರ ಕುಟುಂಬ ಬಂದಿದ್ದರಂತೆ. , ಅವರನ್ನು ರಿಸೀವ್ ಮಾಡಿಕೊಂಡು ಶಿವಮೊಗ್ಗಕ್ಕೆ ಕರೆತರಲು ರೈಲಿನಲ್ಲಿಅಶೋಕ್​ ಬೆಂಗಳೂರಿಗೆ ತೆರಳಿದ್ದರು. 

ಟಾಯ್ಲೆಟ್​ನಲ್ಲಿ ಸಾವು

ಅಶೋಕ್​ ಚೌದರಿಯು ಟಾಯ್ಲೆಟ್​ಗೆ ಹೋಗಿದ್ದಾಗ ಹೃದಯಾಘಾತದಿಂದ ಅವರ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಟ್ರೈನ್ ಬೆಂಗಳೂರಿಗೆ ತೆರಳಿದಾಗ ಈ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ. ಬಳಿಕ ಟ್ರೈನ್​  ಯಶವಂತ ಪುರದಿಂದ ಶಿವಮೊಗ್ಗಕ್ಕೆ ಬೋಗಿಯ ಶೌಚಾಲಯದಲ್ಲಿಯೇ ಬಂದಿದೆ. ಮಧ್ಯಾಹ್ನ 2-20 ರ ವೇಳೆಗೆ ರೈಲಿನ ಸ್ವಚ್ಛಗೊಳಿಸಲು ಸಿಬ್ಬಂದಿಗಳು ಮುಂದಾದಾಗ ಟಾಯ್ಲೆಟ್​ನಲ್ಲಿ ಶವ ಇರುವುದು ಗೊತ್ತಾಗಿದೆ. 

ಸ್ಚಚ್ಚತೆಯ ಬಗ್ಗೆ ಅನುಮಾನ

ಬ್ಯಾಂಕ್ ಮ್ಯಾನೇಜರ್​ ಅಶೋಕ್​ ಚೌದರಿ ಶನಿವಾರ ಬೆಂಗಳೂರಿಗೆ ಹೋಗಿ ಬೆಂಗಳೂರಿನಿಂದ ಶವವಾಗಿ ಶಿವನಮೊಗ್ಗಕ್ಕೆ ಬಂದಿದ್ದಾರೆ.ಇದರ ಅವರ ಕಾಣೆಯಾದ ಬಗ್ಗೆ ನಾಪತ್ತೆ ಕಂಪ್ಲೆಂಟ್ ಸಹ ದಾಖಲಾಗಿದೆ. ಬೆಂಗಳೂರಿಗೆ ತಮ್ಮ ಕುಟುಂಬವನ್ನು ರಿಸೀವ್ ಮಾಡಲು ಬರುತ್ತಿದ್ದವರು ಕಾಣೆಯಾದ ಬಗ್ಗೆ ಬ್ಯಾಂಕ್ ಸಿಬ್ಬಂದಿ ಸಹ ಆತಂಕಗೊಂಡು ಬೆಂಗಳೂರಿನವರೆಗೂ ಎಲ್ಲಾ ಸ್ಟೇಷನ್​ನಗಳಲ್ಲಿಯು ಹುಡುಕಾಡಿದ್ದಾರೆ. ಇನ್ನೂ ಬೆಂಗಳೂರಿಗೆ ಹೋಗಿ ಹಾಲ್ಟ್​ ಆದ ಟ್ರೈನ್​ನನ್ನ ಅಲ್ಲಿ ಸ್ಚಚ್ಚಗೊಳಿಸಿಲ್ಲವೇ? ಕ್ಲೀನ್ ಮಾಡಲಾಗಿದ್ದಾರೆ, ಅಲ್ಲಿಯೇ ಮೃತದೇಹ ಪತ್ತೆಯಾಗಬೇಕಿತ್ತಲ್ಲವೇ? ಇದರ ವ್ಯಕ್ತಿಯೊಬ್ಬರು ಮೃತಪಟ್ಟು , ಅವರ ಶವ ಬೆಂಗಳೂರಿನಿಂದ-ಶಿವಮೊಗ್ಗದವರೆಗೂ ಟ್ರಾವೆಲ್​ ಆಗಿದೆ ಎಂಬುದು ಹಲವು ಪ್ರಶ್ನೆ  ಹಾಗೂ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ಮೆಗ್ಗಾನ್​ ನಲ್ಲಿ ಮೃತದೇಹ

ಸದ್ಯ ಅಶೋಕ್​ ಚೌದರಿಯವರ ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರು ಸ್ಥಳಕ್ಕೆ ಬಂದ ಬಳಿಕ, ಮರಣೋತ್ತರ ಪರೀಕ್ಷೆ ನಡೆಯಲಿದೆ. ಇನ್ನೂ ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.  

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News ,Shivamogga Crime News   , ಶಿವಮೊಗ್ಗ ಕ್ರೈಂ ರಿಪೋರ್ಟ್, ಶಿವಮೊಗ್ಗ ಪೊಲೀಸ್, ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್, ಶಿವಮೊಗ್ಗ ಕುಂಸಿ ಪೊಲೀಸರು