ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

Details of ongoing elephant operation in Thirthahalli

ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story
ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವಾಗಿದೆ 5 ಪ್ರಶ್ನೆಗಳು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಯೊಂದನ್ನ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಶತಾಯಗತಾಯ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಇದಕ್ಕಾಗಿ ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಬಾಲಣ್ಣ , ಬಾನುಮತಿ ಮತ್ತು ಸಾಗರ್ ಆನೆಗಳು ತೀರ್ಥಹಳ್ಳಿ ಕಾಡಿನಲ್ಲಿ ಕಾಡಾನೆಯ ಹಂಟಿಂಗ್​ನಲ್ಲಿದೆ. 

ಅಂದಹಾಗೆ ಈ ಕಾರ್ಯಾಚರಣೆಯ ಅಪಾಯದ ಬಗ್ಗೆ ಹಾಗೂ ಕಾರ್ಯಾಚರಣೆಯ ರೀತಿಯ ಬಗ್ಗೆ ಕೆಲವೊಂದು ಪ್ರಶ್ನೆಗಳು ಉದ್ಭವವಾಗಿದೆ. ಮೊದಲನೆಯ ಪ್ರಶ್ನೆ ಅಂದರೆ, ತೀರ್ಥಹಳ್ಳಿ ಕಾಡಿನಲ್ಲಿ ಕಳೆದ ಡಿಸೆಂಬರ್​ ಅಂತ್ಯದ ವೇಳೆಗೇನೆ ಕಾಡಾನೆ ಕಾಣಿಸಿಕೊಂಡಿತ್ತು. ಹಾಗಿದ್ದು ಆ ಕಾಡಾನೆಯನ್ನು ಹಿಡಿಯದೆ ಅಥವಾ ಅದರ ಮೂಲಸ್ಥಾನಕ್ಕೆ ಓಡಿಸದೆ ಬಿಟ್ಟಿದ್ದೇಕೆ? ಎರಡನೇ ಪ್ರಶ್ನೆ ,ಆಗುಂಬೆ ಕಾಡಿನಲ್ಲಿ ಬರೋಬ್ಬರಿ 2 ದಶಕಗಳಿಂದ ಕಾಡಾನೆಯೊಂದು ಕಾಣಿಸಿಕೊಳ್ಳುತ್ತಲೇ ಇದೆ. ಆದಾಗ್ಯು ಆ ಕಾಡಾನೆಯನ್ನು ಹಿಡಿಯಲು ಇದವುರೆಗೂ ಅನುಮತಿ ಸಿಕ್ಕಿಲ್ಲ, ಹಾಗಿದ್ದು ತೀರ್ಥಹಳ್ಳಿಯ ಕಾಡಾನೆಯ ಸೆರೆಗೆ ಅನುಮತಿ ಸಿಕ್ಕಿದ್ದು ಹೇಗೆ?  ಮೂರನೇ ಪ್ರಶ್ನೆ ,ಸದ್ಯ ತೀರ್ಥಹಳ್ಳಿಯ ಸಮೃದ್ಧ ಕಾಡಿನಲ್ಲಿ ಆರಾಮಾಗಿರುವ ಕಾಡಾನೆಯನ್ನು  ಹಿಡಿಯಲು ಕಾರ್ಯಾಚರಣೆ ಆರಂಭಿಸಿ ನಾಲ್ಕು ದಿನವಾಗ್ತಿದೆ ಆದಾಗ್ಯು ಕಾಡಾನೆಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲವೇಕೆ?  ನಾಲ್ಕನೇ ಪ್ರಶ್ನೆ ಕಾಡಾನೆಯನ್ನು ಹಿಡಿಯುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ತನ್ನ ಸಿಬ್ಬಂದಿಯನ್ನೇ ಅಪಾಯಕ್ಕೆ ನೂಕಿದ್ಯಾ?  ಐದನೇ ಪ್ರಶ್ನೆ, ಆಪರೇಷನ್​ ಟಸ್ಕರ್​ ನಲ್ಲಿ ಅರಣ್ಯ ಸಿಬ್ಬಂದಿಯಲ್ಲದೇ ಹೊರಗಿನ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ಅನುಮತಿ ಇದೆಯೇ?

1ಪ್ರಶ್ನೆ ಒಂದು:  ಅಂದರೆ, ತೀರ್ಥಹಳ್ಳಿ ಕಾಡಿನಲ್ಲಿ ಕಳೆದ ಡಿಸೆಂಬರ್​ ಅಂತ್ಯದ ವೇಳೆಗೇನೆ ಕಾಡಾನೆ ಕಾಣಿಸಿಕೊಂಡಿತ್ತು. ಹಾಗಿದ್ದು ಆ ಕಾಡಾನೆಯನ್ನು ಹಿಡಿಯದೆ ಅಥವಾ ಅದರ ಮೂಲಸ್ಥಾನಕ್ಕೆ ಓಡಿಸದೆ ಬಿಟ್ಟಿದ್ದೇಕೆ?

ಕಾಡಾನೆಯೊಂದು ಕಾಡಂಚಿನ ಪ್ರದೇಶದಲ್ಲಿ ಕಾಣಿಸಿಕೊಂಡು, ಅದು ಅಪಾಯಕಾರಿ ಸನ್ನಿವೇಶ ನಿರ್ಮಾಣ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಲೇ ಅದರ ವಿರುದ್ಧ ಕಾರ್ಯಾಚರಣೆ ಆರಂಭಿಸಬೇಕು. ಆನೆಯೊಂದು ಕಾಣಿಸಿಕೊಂಡು 15 ದಿನಗಳಲ್ಲಿ ನಿರ್ಣಯವೊಂದನ್ನ ಕೈಗೊಂಡು ಅದನ್ನ ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಆರಂಭಿಸಬೇಕು. ಆದರೆ ಮೂರು ತಿಂಗಳಿನಿಂದ ತೀರ್ಥಹಳ್ಳಿ ಪೇಟೆಯಲ್ಲಿ ಘೀಳಿಡ್ತಿರುವ ಕಾಡಾನೆಯನ್ನ ಹಿಮ್ಮೆಟ್ಟಿಸುವ ಪ್ರಯತ್ನವನ್ನು ಏಕೆ ನಡೆಸಲಾಗಿಲ್ಲ ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ತೀರ್ಥಹಳ್ಳಿ ಡಿಸಿಎಫ್​ರವರು ಉತ್ತರಿಸಿದ್ದಾರೆ. ಅವರು ಹೇಳುವ ಪ್ರಕಾರ, ಕಳೆದ ವರ್ಷದ ಡಿಸೆಂಬರ್​ನಲ್ಲಿಯೇ ಆನೆ ಕಾಣಿಸಿಕೊಂಡಿದ್ದು ನಿಜ. ಆ ಸಂದರ್ಭದಲ್ಲಿ ಕಾಡಾನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಲಾಗಿದೆ. ಕಾಡಾನೆಯು ಭದ್ರಾದಿಂದ ಬಂದಿದೆ. ಎನ್​ಆರ್​ ಪುರ ಮಾರ್ಗವಾಗಿ, ಮಂಡಗದ್ದೆಗೆ ಬಂದ ಕಾಡಾನೆಯು ಆನಂತರ ತೀರ್ಥಹಳ್ಳಿ ಪೇಟೆ ಸಮೀಪವೇ ಕಾಣಿಸಿಕೊಂಡಿತ್ತು. ತುಂಗಾ ಹೊಳೆ ಹಾಗೂ ಮೇನ್​ ರೋಡ್​ನ ನಡುವೆ ಕಾಡಾನೆಯು ಸೇರಿಕೊಂಡಿದ್ದು ಯಾವ ಕಡೆಗೂ ಆನೆಯು ಹೋಗುತ್ತಿಲ್ಲ. ಆನೆ ಸೈಟ್ ಆದಾಗಲೇ ನಾವು ಅದನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭಿಸಿದ್ದೇವೆ. ಆನೆಯನ್ನು ಕೊಪ್ಪ, ಎನ್​ಆರ್​ ಪುರ ಮಾರ್ಗವಾಗಿ ಭದ್ರಾ ಅರಣ್ಯಕ್ಕೆ ಕಳುಹಿಸುವುದು, ಅಥವಾ ಮಂಡಗದ್ದೆ ಎನ್​ ಆರ್​ಪು ಮಾರ್ಗವಾಗಿ ಹಿಮ್ಮೆಟ್ಟಿಸುವುದು ನಮ್ಮ ಪ್ಲಾನ್ ಆಗಿತ್ತು. ಆದರೆ ಈ ಎರಡು ಕಾರ್ಯಾಚರಣೆಯು ವಿಫಲವಾಯ್ತು. ಸುಮಾರು ಒಂದುವರೆ ತಿಂಗಳು ಕಾರ್ಯಾಚರಣೆ ನಡೆಸಿದರು, ಆನೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗೆ ಕಾಡಾನೆಯು ಸ್ಥಳೀಯ ವಾತಾವರಣವನ್ನು ಪರಿಚಯ ಮಾಡಿಕೊಂಡು ಇಲ್ಲಿಯೇ ನೆಲಸಲು ಆರಂಭವಾಯ್ತು. ಹೆದ್ದಾರಿಯನ್ನು , ನದಿಯನ್ನು ದಾಟಲಾಗದ ಕಾಡಾನೆಯು, ತೀರ್ಥಹಳ್ಳಿ ಪೇಟೆಗೆ ಹೊಂದಿಕೊಂಡಿರೋ ಕಾಡನ್ನು ತನ್ನ ನೆಲೆಯಾಗಿಸಿಕೊಳ್ಳತೊಡಗಿತು. ಇದು ಕಾರ್ಯಾಚರಣೆಗೆ ಮತ್ತಷ್ಟು ಹಿನ್ನಡೆ ತಂದಿಟ್ಟಿತ್ತು ಎನ್ನುತ್ತಾರೆ ಡಿಸಿಎಫ್​ 

Read/ SSLC EXAM/ ಶಿವಮೊಗ್ಗದಲ್ಲಿ ಎಸ್​​ಎಸ್​ಎಲ್​ಸಿ ಪರೀಕ್ಷೆ ಸಿದ್ದತೆ ಹೇಗಿದೆ! ವಿದ್ಯಾರ್ಥಿಗಳಿಗಾಗಿ ಜಿಲ್ಲಾಡಳಿತ ಏನೇನು ವ್ಯವಸ್ಥೆ ಮಾಡುತ್ತಿದೆ ಓದಿ

2.ಮೂರನೇ ಪ್ರಶ್ನೆ , ಆಗುಂಬೆ ಕಾಡಿನಲ್ಲಿ ಬರೋಬ್ಬರಿ 2 ದಶಕಗಳಿಂದ ಕಾಡಾನೆಯೊಂದು ಕಾಣಿಸಿಕೊಳ್ಳುತ್ತಲೇ ಇದೆ. ಆದಾಗ್ಯು ಆ ಕಾಡಾನೆಯನ್ನು ಹಿಡಿಯಲು ಇದವುರೆಗೂ ಅನುಮತಿ ಸಿಕ್ಕಿಲ್ಲ, ಹಾಗಿದ್ದು ತೀರ್ಥಹಳ್ಳಿಯ ಕಾಡಾನೆಯ ಸೆರೆಗೆ ಅನುಮತಿ ಸಿಕ್ಕಿದ್ದು ಹೇಗೆ? 

ಸದ್ಯ ತೀರ್ಥಹಳ್ಳಿ ತಾಲ್ಲೂಕಿನ ನಾಗರಿಕರಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಪ್ರಶ್ನೆ ಇದು. ಆ ಕಡೆ ಆಗುಂಬೆಯಲ್ಲಿ ಕಾಡಾನೆಯೊಂದು ಅದೇ ಕಾಡಿನಲ್ಲಿ ನೆಲೆಯೂರಿ ಬರೋಬ್ಬರಿ 2 ದಶಕಗಳು ಕಳೆದಿದೆ. ಪ್ರತಿಸಲ ರೋಡಿಗೆ ಬಂದು ಮುಖ ತೋರಿಸಿ, ಸುತ್ತಮುತ್ತಲಿನ ಗ್ರಾಮಸ್ಥರ ಎದುರು ತನ್ನ ಇರುವಿಕೆ ತೋರಿಸ್ತಿರುವ ಕಾಡಾನೆ ಎಷ್ಟೊಂದು ಅಪಾಯಕಾರಿ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದುವರೆಗೂ ಯಾವುದೆ ಅಪಾಯ ಈ ಕಾಡಿನ ರೌಡಿಯಿಂದ ಆಗಿಲ್ಲ ಎಂಬುದೇ ಪುಣ್ಯದ ವಿಚಾರ. ಕಳೆದ ಮೂರು ತಿಂಗಳ ಹಿಂದೆ , ತೀರ್ಥಹಳ್ಳಿ ಪೇಟೆ ಸಮೀಪ ಕಾಣಿಸಿಕೊಂಡ ಆನೆಯನ್ನು ಹಿಡಿಯಲು ಅರಣ ್ಯ ಇಲಾಖೆ ಮುಂದಾಗಿದ್ದು, ಆಗುಂಬೆಯ ಆನೆಯನ್ನು ಹಿಡಿಯಲು ಸಿಗದ ಇದುವರೆಗೂ ಸಿಗದ ಅನುಮತಿ ಕುರುವಳ್ಳಿ, ದೇವಂಗಿ ಸಮೀಪ ಅಡ್ಡಾಡುತ್ತಿರುವ ಕಾಡಾನೆ ಹಿಡಿಯಲು ಸಿಕ್ಕಿದ್ದು ಹೇಗೆ ಎಂಬುದು ಮುಖ್ಯವಾದ ಪ್ರಶ್ನೆಯಾಗಿತ್ತು. ಇದರ ಬಗ್ಗೆ ಮಾಹಿತಿ ಅರಸಿ ಹೋದಾಗ, ಕುತೂಹಲಕಾರಿಯಾದ ಉತ್ತರವೇ ಸಿಕ್ಕಿತ್ತು. 

Read/ ksrtc shivamogga /ಇವತ್ತು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ! ನಗರ, ಸಾಮಾನ್ಯ ವೇಗದೂತ ಬಸ್​ಗಳು ಸಿಗೋದು ಡೌಟು! ಕಾರಣವೇನು?

ಕಾಡಾನೆಯೊಂದು ಕಾಡಂಚಿನಲ್ಲಿ ಕಾಣಿಸಿಕೊಂಡ ತಕ್ಷಣ ಅದನ್ನು ಹಿಡಿಯುಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. ಅದಕ್ಕೆ ವೈಲ್ಡ್​ ಲೈಫ್ ಆ್ಯಕ್ಟ್ ಪರ್ಮಿಟ್ ನೀಡುವುದಿಲ್ಲ . ವೈಲ್ಡ್ ಲೈಫ್​ ಕನ್ಜರ್​ವೇಷನ್ ಪ್ರಿನ್ಸಿಫಲ್​ಗೆ ವಿರುದ್ಧವಾಗಿಯು ತೀರ್ಥಹಳ್ಳಿಯ ಕಾಡಾನೆಯನ್ನು ಹಿಡಿಯಲು ಸಾಧ್ಯವಿರಲಿಲ್ಲ. ಏಕೆಂದರೆ ಆರಂಭದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯು ಬೆಳೆಹಾನಿ ಮಾಡಿರಲಿಲ್ಲ. ಅಲ್ಲದೆ ಯಾವುದೇ ಪ್ರಾಣಹಾನಿ ಮಾಡಿರಲಿಲ್ಲ. ಹೀಗಾಗಿ ವೈಲ್ಡ್​ ಲೈಫ್​ ಆಕ್ಟ್​ ನ ಅನ್ವಯ ಕಾಡಾನೆಯೊಂದು ತೊಂದರೆ ಕೊಡುತ್ತಿದ್ದ ಸಂದರ್ಭದಲ್ಲಿ ಮಾತ್ರ ಚೀಫ್​ ವೈಲ್ಡ್​ ಲೈಫ್​ ವಾರ್ಡನ್​ ಕಾಡಾನೆಯನ್ನು ಹಿಡಿಯಲು ಪರ್ಮಿಶನ್​ ನೀಡುತ್ತಾರೆ ಎನ್ನುತ್ತದೆ ಅರಣ್ಯ ಇಲಾಖೆಯ ಮಾಹಿತಿ.ಇನ್ನೂ ಸಂರಕ್ಷಿತ ಅರಣ್ಯದಲ್ಲಿರುವ ಕಾಡಾನೆಯನ್ನು ಹಿಡಿಯುವುದಕ್ಕೆ ಅರಣ್ಯ ಇಲಾಖೆಯಲ್ಲಿ ಅನುಮತಿ ಸಿಗುವುದಿಲ್ಲ. ಆಗುಂಬೆಯಲ್ಲಿರುವ ಕಾಡಾನೆಯು ಅಲ್ಲಿನ ಜನರಿಗೆ ಯಾವುದೆ ಅಪಾಯ ಉಂಟು ಮಾಡಿಲ್ಲ. ಮೇಲಾಗಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿಯೇ ಇರುವುದರಿಂದ ಅದರ ಕ್ಯಾಪ್ಟರ್​ಗೆ ಇದುವರೆಗು ಅನುಮತಿ ನಿರಾಕರಿಸಲಾಗ್ತಿದೆ. ಹಾಗಾದರೆ, ಪೇಟೆ ಹತ್ರ ಕಾಣಿಸಿಕೊಂಡ ಕಾಡಾನೆಯು ಯಾವುದೇ ಪ್ರಾಣಹಾನಿ ಮಾಡದಿದ್ದರು ಅದನ್ನ ಹಿಡಿಯಲು ಈಗ ಹೇಗೆ ಪರ್ಮಿಶನ್​ ನೀಡಲಾಯ್ತು? ಈ ಪ್ರಶ್ನೆಗೂ ಅರಣ್ಯ ಇಲಾಖೆಯಿಂದ ಸ್ಪಷ್ಟ ಉತ್ತರ ಲಭ್ಯವಾಗಿದೆ. ಕಾಡಾನೆ ಕಾಣಿಸಿಕೊಂಡು ಒಂದುವರೆ ತಿಂಗಳಿನಲ್ಲಿ ತೀರ್ಥಹಳ್ಳಿಯ ಅರಣ್ಯ ಸಿಬ್ಬಂದಿ ಅದನ್ನು ಓಡಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಈ ಪ್ರಯತ್ನ ಕೈಗೂಡದ ಹೊತ್ತಿಗೆ, ಆನೆ ತಾನಿದ್ದ ನೆಲವನ್ನ ತನ್ನ  ನೆಲೆಯನ್ನಾಗಿ ಪರಿವರ್ತಿಸಿಕೊಂಡಿತ್ತು. ಇದು ವೈಲ್ಡ್​ ಲೈಫ್​ನಲ್ಲಿ ಸಾಕಷ್ಟು ಅಪಾಯಕಾರಿ ಎನ್ನಲಾಗುತ್ತದೆ. ಏಕೆಂದರೆ ಸುಮಾರು 600 ಎಕೆರೆ ಕಾಡಿನಲ್ಲಿ ಆನೆಗೆ ಬೇಕಾದ ಬೊಂಬುಗಳಿವೆ. ಐರು ಕೆರೆಗಳಿವೆ, ಹಾಗೂ ಸಮೃದ್ಧವಾದ ಆಹಾರ ಸಿಗುತ್ತದೆ! ಇದು ಕಾಡಾನೆಯು ನೆಲೆನಿಲ್ಲಲು ಅನುಕೂಲಕರ ವಾತಾವರಣವಾಗಿದೆ. ಇಲ್ಲಿಯೇ ನೆಲಿಸಿದರೆ ಕಾಡಾನೆ ರೈತರ ಹೊಲಗಳಿಗೆ ನುಗ್ಗಲು ಆರಂಭಿಸುತ್ತದೆ. ಅಲ್ಲದೆ, ತನಗೆ ಎದುರಾದರವರ ಮೇಲೆ ದಾಳಿಗೆ ಮುಂದಾಗುತ್ತದೆ. ಮುಂಬರುವ ಅಪಾಯದ ಮುನ್ಸೂಚನೆಯೇ ಕಾಡಾನೆಯೊಂದರ ಅಡಾಪ್ಟೇಷನ್​. ಇದೇ ವಿಚಾರವನ್ನು ಮುಂದಿಟ್ಟು ಸ್ಥಳೀಯ ಅರಣ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ  ಕಾಡಾನೆಯನ್ನು ಹಿಡಿಯಲು ಅನುಮತಿ ಪಡೆದುಕೊಂಡಿದೆ.

Read/ ksrtc shivamogga /ಇವತ್ತು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ! ನಗರ, ಸಾಮಾನ್ಯ ವೇಗದೂತ ಬಸ್​ಗಳು ಸಿಗೋದು ಡೌಟು! ಕಾರಣವೇನು?

3.ಎರಡನೇ ಪ್ರಶ್ನೆ , ಸದ್ಯ ತೀರ್ಥಹಳ್ಳಿಯ ಸಮೃದ್ಧ ಕಾಡಿನಲ್ಲಿ ಆರಾಮಾಗಿರುವ ಕಾಡಾನೆಯನ್ನು  ಹಿಡಿಯಲು ಕಾರ್ಯಾಚರಣೆ ಆರಂಭಿಸಿ ನಾಲ್ಕು ದಿನವಾಗ್ತಿದೆ ಆದಾಗ್ಯು ಕಾಡಾನೆಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲವೇಕೆ? 

ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯೇ ರೋಚಕವಾಗಿರುತ್ತದೆ. ಅದರಲ್ಲಿಯು ತೀರ್ಥಹಳ್ಳಿ ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆ ಅಲ್ಲಿನ ಜೀವ ವೈವಿದ್ಯವನ್ನು ಈ ಮೂರು ನಾಲ್ಕು ತಿಂಗಳಿನಿಂದ ಅರಗಿಸಿಕೊಂಡಿದೆ. ಎಲ್ಲಿ ಅಪಾಯವಿದೆ. ಎಲ್ಲಿ ಆಹಾರವಿದೆ ಎಲ್ಲಿ ದಾರಿ? ಎಲ್ಲಿ ದಟ್ಟ ಕಾಡಿದೆ ಎಂಬುದುನ್ನ ಅರಿತಿರುವ ಕಾಡಾನೆಯು ತನ್ನಿರುವಿಕೆಯನ್ನು ತೋರುತ್ತಿಲ್ಲ. ಮೇಲಾಗಿ 600 ಎಕೆರೆಯ ಕಾಡಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಅನುಕೂಲಕರವಾದ ಸನ್ನಿವೇಶವಿಲ್ಲ.  ಹಾದಿಯುದ್ದಕ್ಕೂ ಸಿಗುತ್ತಿರುವ ಮುಳ್ಳು, ಕುರುಚಲು ಕಾಡು, ಹಳಗಳು ಇಲಾಖೆಯ ಸಿಬ್ಬಂದಿಯ ಕಾರ್ಯಾಚರಣೆಗೆ ವಿಪರೀತ ಅಡ್ಡಿಯಾಗುತ್ತಿದೆ. ಆನೆಯ ಮೇಲೆ ಕುಳಿತು ಕಾಡಾನೆಯನ್ನು ಡಾರ್ಟ್ ಮಾಡಬೇಕಾದ ಸಿಬ್ಬಂದಿ ನೆಲದ ಮೇಲೆ ಓಡಾಡುತ್ತಾ ಕಾಡಾನೆಯನ್ನು ಹುಡುಕುತ್ತಿದ್ದಾರೆ. ಇದೇ ಕಾರಣಕ್ಕೆ ಕಾಡಾನೆಯನ್ನು ಹಿಡಿಯುವುದು ವಿಳಂಬವಾಗುತ್ತಿದೆ

4 ನಾಲ್ಕನೇ ಪ್ರಶ್ನೆ ಕಾಡಾನೆಯನ್ನು ಹಿಡಿಯುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ತನ್ನ ಸಿಬ್ಬಂದಿಯನ್ನೇ ಅಪಾಯಕ್ಕೆ ನೂಕಿದ್ಯಾ?  

ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆ ಇವತ್ತಿಗೆ ನಾಲ್ಕನೆ ದಿನ ತಲುಪಿದೆ. ಕಾಡಾನೆಯು ಒಂದು ಸಲ ಅರಣ್ಯಸಿಬ್ಬಂದಿಗೆ  ಸೈಟ್​ ಆಗಿದ್ದು, ಸಿಬ್ಬಂದಿಯನ್ನು ನೋಡುತ್ತಲೇ ಕಾಡಾನೆಯು ಅಲ್ಲಿಂದ ಎಸ್ಕೇಪ್ ಆಗಿದೆ. 5-6 ವರ್ಷದ ಕಾಡಾನೆಯು ಸಿಕ್ಕಾಪಟ್ಟೆ ಚುರಕಾಗಿದ್ದು ಕಾಡಿನಲ್ಲಿ ಕಾಣಿಸಿಕೊಂಡಷ್ಟೆ ವೇಗವಾಗಿ ಓಡಿ ಹೋಗುತ್ತಿದೆ. ಇದರಿಂದಾಗಿ ಕಾಡಾನೆಯನ್ನು ಹಿಡಿಯುವುದು ಸುಲಭ ತುತ್ತಾಗಿ ಕಾಣಿಸುತ್ತಿಲ್ಲ. ಚಾಮರಾಜನಗರದಿಂದ ಬಂದಿರುವ ವೈದ್ಯರು ಸೇರಿ ಇಬ್ಬರು ವೈದ್ಯರು , ಸಕ್ರೆಬೈಲ್ ಬಿಡಾರದ ನಾಲ್ಕು ಆನೆಗಳು ಹಾಗೂ ಅರಣ್ಯ ಸಿಬ್ಬಂದಿಗಳು ಕಾಡಿನಲ್ಲಿ ಕಾಡಾನೆಯ ಹೆಜ್ಜೆಯನ್ನು ಅರಸುತ್ತಿದ್ದಾರೆ. ಆದರೆ ಬೇಸಿಗೆಯ ಬಿಸಿಲು ಮತ್ತು ಕಾಡಿನ ಬೆಂಕಿಯ ಆತಂಕ ಹಾಗೂ ಮುಳ್ಳು, ಕುರುಚಲು ಹಳಗಳು ಸಿಬ್ಬಂದಿಯ ಜೊತೆಗೆ ಕಾರ್ಯಾಚರಣೆಯನ್ನು ಸಹ ಅಪಾಯಕಾರಿಯನ್ನಾಗಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಇನ್ನಷ್ಟು ಗಮನ ವಹಿಸಿ ಅತ್ಯಾದುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. 

 5.ಐದನೇ ಪ್ರಶ್ನೆ, ಆಪರೇಷನ್​ ಟಸ್ಕರ್​ ನಲ್ಲಿ ಅರಣ್ಯ ಸಿಬ್ಬಂದಿಯಲ್ಲದೇ ಹೊರಗಿನ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ಅನುಮತಿ ಇದೆಯೇ

ಅರಣ್ಯ ಇಲಾಖೆಯ ಈ ಆಪರೇಷನ್​ ಟಸ್ಕರ್​ನಲ್ಲಿ ಹೊರಗಿನ ವ್ಯಕ್ತಿಗಳು ಸಹ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಬಂದಿದೆ. ತೀರ್ಥಹಳ್ಳಿಯ ಸ್ಥಳೀಯ ಮೂಲಗಳ ಪ್ರಕಾರ, ಈ ವ್ಯಕ್ತಿಗಳ ಬಾಗವಹಿಸುವಿಕೆಗೆ ಅರಣ್ಯ ಇಲಾಖೆಯ ಅನುಮತಿಯಿದೆಯೆ? ಅಥವಾ ಇಲ್ಲವೇ ಎಂಬುದು ಗೊತ್ತಿಲ್ಲ. ಆದಾಗ್ಯು ಹೊರಗಿನ ವ್ಯಕ್ತಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ ಎಂಬುದು ಪರಿಗಣಿಸಲಿ ಎಂಬ ಅಭಿಪ್ರಾಯ ಕೇಳಿಬಂದಿದೆ. 

Read/ SSLC EXAM/ ಶಿವಮೊಗ್ಗದಲ್ಲಿ ಎಸ್​​ಎಸ್​ಎಲ್​ಸಿ ಪರೀಕ್ಷೆ ಸಿದ್ದತೆ ಹೇಗಿದೆ! ವಿದ್ಯಾರ್ಥಿಗಳಿಗಾಗಿ ಜಿಲ್ಲಾಡಳಿತ ಏನೇನು ವ್ಯವಸ್ಥೆ ಮಾಡುತ್ತಿದೆ ಓದಿ

Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS/ 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news today