SHIVAMOGGA | Dec 27, 2023 | ಶಿವಮೊಗ್ಗ ನಗರದಲ್ಲಿ ನಾಯಿಯೊಂದರ ಮೇಲೆ ಏರ್ ಗನ್ನಿಂದ ಬುಲೆಟ್ ಫೈರ್ ಮಾಡಿದ ಆರೋಪ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್/ Shivamogga Rural Police Station
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಅಮೀರ್ ಅಹಮದ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಇಲ್ಲಿನ ನಿವಾಸಿ ಮಹಿಳೆಯೊಬ್ಬರು ಹೆಣ್ಣು ನಾಯಿಯೊಂದನ್ನ ಸಾಕಿದ್ದರು. ಆ ನಾಯಿ ಇತ್ತೀಚೆಗೆ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತೊಬ್ಬ ವ್ಯಕ್ತಿಯೊಬ್ಬರ ಸಾಕು ನಾಯಿಯನ್ನು ಕಚ್ಚಿತ್ತು ಎನ್ನಲಾಗಿದೆ.
ಇದೇ ಕಾರಣಕ್ಕೆ ದ್ವೇಷ ಸಾದಿಸ್ತಿದ್ದ ಆ ವ್ಯಕ್ತಿಯು ಮಹಿಳೆಯ ಮನೆಯ ನಾಯಿಗೆ ಕಲ್ಲು ದೊಣ್ಣೆಯಿಂದ ಹೊಡೆಯುವುದು ಬಡಿಯುವುದು ಮಾಡುತ್ತಿದ್ದರಂತೆ. ಈ ಮಧ್ಯೆ ಸಾಯಿಸುವುದಾಗಿಯು ಬೆದರಿಕೆ ಹಾಕಿದ್ದರಂತೆ. ಇದರ ನಡುವೆ ಡಿಸೆಂಬರ್ 24 ರಂದು ಆರೋಪಿತ ವ್ಯಕ್ತಿಯು ಮಹಿಳೆಯ ಮನೆಯ ಬಳಿ ಬಂದು ಏರ್ಗನ್ನಿಂದ ನಾಯಿಗೆ ಗುಂಡು ಹೊಡೆದಿದ್ದಾರೆ. ಪರಿಣಾಮ ನಾಯಿಯ ಸೊಂಟದ ಭಾಗದಲ್ಲಿ ಗಾಯವಾಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಹಿಳೆಯು ಪೊಲೀಸರ ಮೊರೆಹೋಗಿದ್ದಾರೆ.
ಇನ್ನೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 11ರ ಅಡಿ ಪ್ರಕರಣ ದಾಖಲಿಸಿದ್ಧಾರೆ.
