ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ?

ರಹಸ್ಯ ಕಾರ್ಯಾಚರಣೆ ಎಂಬ ಹೆಸರಿನಡಿಯಲ್ಲಿ ಅನಾಮಿಕ ಕರೆಗಳನ್ನು ಮಾಡುತ್ತಿರುವಂತಹ ಪ್ರವೃತ್ತಿಗಳು ಸರ್ಕಾರಿ ಕಚೇರಿಗಳಲ್ಲಿ ಒಂದು ರೀತಿಯ ಆತಂಕ ಮೂಡಿಸುತ್ತಿದೆ

ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
Beware of government officials | Are there people who threaten in the name of secret operations?

ಶಿವಮೊಗ್ಗದಲ್ಲಿರುವ ಪ್ರಮುಖ ಕಚೇರಿಯೊಂದಕ್ಕೆ ಅನಾಮಿಕ ಕರೆಯೊಂದು ಬರುತ್ತಿದ್ದು, ಇಲ್ಲಸಲ್ಲದ ವಿಚಾರ ಹೇಳಿ, ಅಧಿಕಾರಿಗಳ ಫೋನ್ ನಂಬರ್​ ಕೇಳುತ್ತಿರುವ ಬಗ್ಗೆ ಮಲೆನಾಡು ಟುಡೆಗೆ ಮಾಹಿತಿ ಲಭ್ಯವಾಗಿದೆ. ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಗಳು ಈ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಇತ್ತೀಚೆಗೆ ವರದಿಯಾಗ್ತಿರುವ ರಹಸ್ಯ ಕಾರ್ಯಾಚರಣೆಯನ್ನೆ ಬಂಡವಾಳ ಮಾಡಿಕೊಳ್ತಿರುವ ಕೆಲವು ಅನಾಮಿಕ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಪತ್ರಕರ್ತರ ಹೆಸರಿನಲ್ಲಿ ಕರೆ ಮಾಡುವಂತಹ ಕೆಲಸ ಮಾಡುತ್ತಿದ್ದಾರಂತೆ. ಡ್ಯೂಟಿ ಅಧಿಕಾರಿಗಳ ವಿವರ ಪಡೆದು ಅವರ ನಂಬರ್​ ಪಡೆದು, ಅವರಿಗೆ ಕರೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಗುಟ್ಟಾಗಿ ಟ್ರ್ಯಾಪ್​ ಮಾಡಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡುವಂತಹ ಕುಕೃತ್ಯ ಇದಾಗಿರಬಹುದು ಎಂಬ ಅನುಮಾನ ಸರ್ಕಾರಿ ನೌಕರರದ್ದು.  

ಅನಾಮಿಕ ಕರೆ ಬಂದರೆ ಏನು ಮಾಡಬೇಕು?

 ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಲ್ಲಿ ಭಯ ಪಡುವ ಅವಶ್ಯಕತೆಯೇ ಇರುವುದಿಲ್ಲ. ಇನ್ನೊಂದೆಡೆ ಪತ್ರಕರ್ತರ ಸೋಗಿನಲ್ಲಿ ಯಾರೇ ತೊಂದರೆ ನೀಡಿದರೂ ಅದು ಅಕ್ಷಮ್ಯ ಅಪರಾಧವೇ ಆಗುತ್ತದೆ. ಈ ಸಂಬಂಧ ತಕ್ಷಣವೇ ಪೊಲೀಸ್ ಸಹಾಯವಾಣಿಗಳನ್ನ ಸಂಪರ್ಕಿಸಿ ಸಲಹೆಯನ್ನು ಸಹ ಪಡೆಯಬಹುದು ಹಾಗೆಯೇ ತಮಗೆ ಆಗುತ್ತಿರುವ ತೊಂದರೆ ವಿವರಿಸಿ ರಕ್ಷಣೆ ಪಡೆಯಬಹುದು. 

ಇನ್ನೂ ರಾಜ್ಯ ಸರ್ಕಾರಿ ನೌಕರರ ಸಂಘದ ಮೊರೆ ಹೋಗಿ ಅಲ್ಲಿಯ ಮುಖ್ಯಸ್ಥರ ಸಹಾಯ ಪಡೆದು, ತಮಗೆ ತೊಂದರೆ ಕೊಡುತ್ತಿರುವವರ  ಬಗ್ಗೆ ದೂರಬಹುದು. 

ಅಸಲಿಗೆ ಪತ್ರಕರ್ತರಾದವರು, ಅಕ್ರಮದ ಬಗ್ಗೆ ಮಾಹಿತಿ ಸಿಕ್ಕರೆ ನೇರವಾಗಿ ವರದಿ ಮಾಡುತ್ತಾರೆಯೇ ಹೊರತು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವುದಿಲ್ಲ. ಹಾಗಾಗಿ ತೊಂದರೆ ಕೊಡುತ್ತಿರುವರರು ಅಸಲಿಯೋ ನಕಲಿಯೋ ಎಂಬುದು ತಿಳಿದು ಅವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ಸಲ್ಲಿಸಬಹುದು.