ಸಿಂಧನೂರು ಮಹಿಳೆ ಶಿವಮೊಗ್ಗದಲ್ಲಿ ಕಾಣೆ! ಜನರ ಕೈಗೆ ಸಿಕ್ಕಿಬಿದ್ದ ಶಂಕಿತ! ಬಾರ್​ನಿಂದ ಬಂದ ವ್ಯಕ್ತಿಗೆ ಶಾಕ್!ನಶೆ ಇಳಿಸಿದ ಪೊಲೀಸ್!?ಬಸ್​ಸ್ಯಾಂಡ್​ನಲ್ಲಿ ಪ್ರಜ್ಞೆ ತಪ್ಪಿದ ಮಹಿಳೆ! TODAY @NEWS

Sindhanur woman missing in Shimoga! ?Suspect caught in bhadravathi people's hands! Bike theft, TODAY @NEWS

ಸಿಂಧನೂರು ಮಹಿಳೆ ಶಿವಮೊಗ್ಗದಲ್ಲಿ ಕಾಣೆ!  ಜನರ ಕೈಗೆ ಸಿಕ್ಕಿಬಿದ್ದ ಶಂಕಿತ! ಬಾರ್​ನಿಂದ ಬಂದ ವ್ಯಕ್ತಿಗೆ ಶಾಕ್!ನಶೆ ಇಳಿಸಿದ ಪೊಲೀಸ್!?ಬಸ್​ಸ್ಯಾಂಡ್​ನಲ್ಲಿ ಪ್ರಜ್ಞೆ ತಪ್ಪಿದ ಮಹಿಳೆ!   TODAY @NEWS

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   

ಸಿಂಧನೂರು ಮಹಿಳೆ ಶಿವಮೊಗ್ಗದಲ್ಲಿ ನಾಪತ್ತೆ

ಕಳೆದ ಒಂಬತ್ತನೇ ತಾರೀಖು ಶಿವಮೊಗ್ಗದ ಮಾನಸ ನರ್ಸಿಂಗ್​ ಹೋಮ್​ಗೆ ಚಿಕಿತ್ಸೆಗೆ ಅಂತಾ ಬಂದಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ. ಈ  ಸಂಬಂಧ ಸಹೋದರ ದೂರು ದಾಖಲಿಸಿದ್ದಾರೆ. ನರ್ಸಿಂಗ್ ಹೋಮ್​ನಲ್ಲಿ ಚೀಟಿ ಬರೆಸುತ್ತಿದ್ದ ಸಂದರ್ಭದಲ್ಲಿ, ಒಬ್ಬರೇ ಇದ್ದ ಮಹಿಳೆ ಅಲ್ಲಿಂದ ಎದ್ದು ಹೋಗಿದ್ದಾರೆ. ಆ ನಂತರ ಅವರಿಗಾಗಿ  ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಎಲ್ಲಾ ಕಡೆ ಹುಡುಕಾಡಿದರೂ ಮಹಿಳೆ ಪತ್ತೆಯಾಗಿಲ್ಲ. ಹೀಗಾಗಿ ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಿಸಿದ್ಧಾರತೆ. ಇವರು ಸಿಂಧನೂರಿನಿಂದ ಶಿವಮೊಗ್ಗಕ್ಕೆ ಚಿಕಿತ್ಸೆಗಾಗಿ ಬಂದಿದ್ದರು. 

ಕೆಎಸ್​​ಆರ್​ಟಿಸಿ ಬಸ್​ ಸ್ಟ್ಯಾಂಡ್​ನಲ್ಲಿ ಪ್ರಜ್ಪೆತಪ್ಪಿದ ಮಹಿಳೆ

ಶಿವಮೊಗ್ಗ KSRTC ಬಸ್ ಸ್ಟ್ಯಾಂಡ್ ನಲ್ಲಿ ಮಹಿಳೆಯೊಬ್ಬರು ಸ್ವಾದೀನ ತಪ್ಪಿ ಬಿದ್ದ ಘಟನೆ ಬಗ್ಗೆ ವರದಿಯಾಗಿದೆ. ಈ ಸಂಬಂಧ ತಕ್ಷಣವೇ ಅಲ್ಲಿದ್ದ ಪ್ರಯಾಣಿಕರು 112 ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಮಹಿಳೆಗೆ ಪ್ರಜ್ಞೆ ಬಂದಿತ್ತು. ಅಲ್ಲಿದ್ದ ಪ್ರಯಾಣಿಕರು ಆಕೆಗೆ ಆರೈಕೆ ಮಾಡುತ್ತಿದ್ದರು. ಆನಂತರ ಪೊಲೀಸರು ಮಹಿಳೆಯನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ. 

ಅನುಮಾನಸ್ಪದ ವ್ಯಕ್ತಿಯನ್ನು ಕಟ್ಟಿಹಾಕಿದ ಜನ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ  ಹೊಸಮನೆ ಠಾಣಾ ವ್ಯಾಪ್ತಿಯಯಲ್ಲಿ ಅನುಮಾನಸ್ಪದವಾಗಿ ಹಲ್ಲೆ ಮಾಡಲು ಮುಂದಾದ ವ್ಯಕ್ತಿಯನ್ನ ಸ್ಥಳೀಯರೇ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆಗೆಒಳಪಡಿಸಿದ್ದಾರೆ. 

ಬಾರ್​ನಲ್ಲಿ ಗಲಾಟೆ ಪೊಲೀಸರ ಎಂಟ್ರಿ

ಕುಡಿದ ನಶೆಯಲ್ಲಿ ಬಾರ್​ ನಲ್ಲಿ ಗಲಾಟೆ ಮಾಡುತ್ತಿದ್ದವರಿಗೆ ಪೊಲೀಸರು ಬುದ್ದಿವಾದ ಹೇಳಿದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂಟೌನ್​ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಜೆಡಿ ಕಟ್ಟೆಯಲ್ಲಿರುವ ಬಾರ್​ವೊಂದರಲ್ಲಿ ಯುವಕರು ಕುಡಿದು ಜೋರಾಗಿ ಗಲಾಟೆ ಮಾಡುತ್ತಿರುವ ಬಗ್ಗೆ ಬೀಟ್ ಪೊಲೀಸರಿಗೆ ದೂರು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಯವಕರಿಗೆ ವಾರ್ನಿಂಗ್ ಕೊಟ್ಟ ನಶೆ ಇಳಿಸಿದ್ದಾರೆ. 

ಬಾರ್​ಗೆ ಹೋಗಿ ಬರುವಷ್ಟರಲ್ಲಿ ಕಾದಿತ್ತು ಶಾಕ್

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ಬಿಹೆಚ್​ ರಸ್ತೆಯ ಶ್ರೀನಿಧಿ ಬಾರ್  & ರೆಸ್ಟೋರೆಂಟ್​ಗೆ ಹೋಗಿ ಬರುವಷ್ಟರಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಬಗ್ಗೆ ಎಫ್​ಐಆರ್ ದಾಖಲಾಗಿದೆ. ಈ ಸಂಬಂಧ ತಡವಾಗಿ ದೂರು ದಾಖಲಾಗಿದ್ದು, ಬಜಾಜ್ ಪಲ್ಸರ್​ ಬೈಕ್​ನ್ನ ಬಾರ್ ಎದುರಿನ ಪುಟ್​ಪಾತ್​ ಮೇಲೆ ನಿಲ್ಲಿಸಿ ದೂರುದಾರರು ಬಾರ್​ಗೆ ತೆರಳಿದ್ದರು. ಅಲ್ಲಿಂದ ಹೊರಕ್ಕೆ ಬರುವಷ್ಟರಲ್ಲಿ ಬೈಕ್ ಕಳ್ಳತನವಾಗಿತ್ತು.