ಮಹಿಳೆಯಿಂದ ಹಣ ಕಿತ್ತು ಪರಾರಿ!/ ಅತ್ತೆ ಚಿನ್ನ ಕದ್ದ ಸೊಸೆ/ ಅನೈತಿಕ ಪೊಲೀಸ್​ಗಿರಿ ಆರೋಪಿಗಳು ಅರೆಸ್ಟ್​! / ಸಿನಿಮಾ ಸ್ಟೈಲ್​ನಲ್ಲಿ ಯುವಕನಿಗೆ ಇರಿತ! ಹಲ್ಲೆ! Today @ 7 NEWS

Shimoga Today Top News

ಮಹಿಳೆಯಿಂದ ಹಣ ಕಿತ್ತು ಪರಾರಿ!/ ಅತ್ತೆ ಚಿನ್ನ ಕದ್ದ ಸೊಸೆ/  ಅನೈತಿಕ ಪೊಲೀಸ್​ಗಿರಿ ಆರೋಪಿಗಳು ಅರೆಸ್ಟ್​! / ಸಿನಿಮಾ ಸ್ಟೈಲ್​ನಲ್ಲಿ ಯುವಕನಿಗೆ ಇರಿತ! ಹಲ್ಲೆ! Today @ 7 NEWS

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯಲ್ಲಿ ದಿನವಿಡಿ ಸಾಕಷ್ಟು ಘಟನೆಗಳು ಸಂಭವಿಸಿರುತ್ತಿದೆ. ಅವುಗಳಲ್ಲಿ ಪ್ರಮುಖ ಸುದ್ದಿಗಳನ್ನು ಮಲೆನಾಡು ಟುಡೆ ತಂಡ ಟಾಪ್ ಟುಡೆ ನ್ಯೂಸ್​ನಲ್ಲಿ ನೀಡುತ್ತಿದೆ… 

Bhadravati news :   ಡ್ರಾಪ್​ ಕೊಟ್ಟ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದವರ ಬಂಧನ!

ಭದ್ರಾವತಿ ತಾಲ್ಲೂಕು ಖಲಂದರ್ ನಗರದ ಝಂಡಾ ಕಟ್ಟೆಯ, ಅನ್ಯಕೋಮಿನ ವಿದ್ಯಾರ್ಥಿನಿಯನ್ನು ಡ್ರಾಪ್​ ಕೊಟ್ಟಿದ್ದಕ್ಕೆ ಇನ್ನೊಂದು ಕೋಮಿನ ಯುವಕು ಹಲ್ಲೆ ಮಾಡಿದ್ದರು. ಸದ್ಯ ಈ ಪ್ರಕರಣ ಸಂಬಂಧ  ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯ ಪೊಲೀಸರು   7 ಜನರನ್ನ ಬಂಧಿಸಿದ್ದಾರೆ.ಭದ್ರಾವತಿ ದುರ್ಗಿಗುಡಿ ನಿವಾಸಿ ಮೊಹ್ಮದ್ ಜಬೀವುಲ್ಲಾ (37), ಅಮೀರ್ ಜಾನ್ ನಗರದ ಶಾಹೀದ್ (20), ಖಲಂದರ್ ನಗರದ ಮಹ್ಮದ್ ಕಬೀರ್ (19), ಸಯ್ಯದ್ ಮುಸ್ತಾಕೀಮ್ ಯಾನೆ ಬಾಂಡ್ (19), ಶಹಬಾಜ್ (28), ಸುಹೇಬ್ (28) ಜಟಪಾಟ್ ನಗರದ ಮಹ್ಮದ್ ಅರ್ಷಾನ್ (22)ರನ್ನ ಬಂಧಿತ ಆರೋಪಿಗಳು! 

ಇದನ್ನೂ ಸಹ ಓದಿ  : ನಿರುದ್ಯೋಗಿ ಯುವಕರಿಗೆ ಕೆಲವೇ ದಿನಗಳಲ್ಲಿ ನಿರುದ್ಯೋಗಿ ಭತ್ಯೆ ಶೀಘ್ರದಲ್ಲಿಯೇ ಜಾರಿ ಗ್ಯಾರಂಟಿ

Shivamogga news : ಅತ್ತೆ ಮನೆಯಲ್ಲಿ ಕಳ್ಳತನ ಮಾಡಿದ ಸೊಸೆ ಬಂಧನ

ಇನ್ನೊಂದೆಡೆ ಶಿವಮೊಗ್ಗ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ರೇಣಕುಮ್ಮ ಎಂಬವರ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕಳೆದ 13  ರಂದು ಹೊರಗಡೆ ಹೋಗಿದ್ದ ರೇಣಕುಮ್ಮರ ನಿವಾಸದಲ್ಲಿ 4 ಲಕ್ಷದ 53 ಸಾವಿರ ರೂ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ನೆರೆಮನೆಯ ಸತೀಶ್​ ಎಂಬವರಿಗಾಗಿ, ಮನೆಯಲ್ಲಿದ್ದ ಸೊಸೆ ಹೇಮಾವತಿ, ತಮ್ಮ ಅತ್ತೆಯ ಚಿನ್ನಾಭರಣಗಳನ್ನು ಕದ್ದು ಸತೀಶ್​ಗೆ ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನ ಸಹ ಬಂಧಿಸಲಾಗಿದೆ.  

Shivamogga crime :  ತನಗಾಗದವನನ್ನ ಪರ ವಹಿಸಿದ್ದಕ್ಕೆ ಹಲ್ಲೆ

ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ  ಬಸವನಗಂಗೂರು ಕಲ್ಲು ಕ್ವಾರೆ ಬಳಿಯಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲಾಗಿದೆ. ಪ್ರಜ್ವಲ್ ಹಾಗೂ ಭುವನ್​ ಎಂಬಿಬ್ಬರ ನಡುವಿನ ಜಗಳದಲ್ಲಿ ಸುನೀಲ್​ ಎಂಬಾತ ಬಂದು ಜಗಳ ಬಿಡಿಸಿದ್ದನ್ನಂತೆ . ಇಡಗುಂಜಿ ದೇವಾಲಯದಲ್ಲಿ ನಡೆದಿದ್ದ ಗಲಾಟೆ ಬಿಡಿಸಿದ್ದಕ್ಕೆ ಸಿಟ್ಟಾಗಿದ್ದ ಭುವನ್​, ಸುನೀಲ್​ ನನ್ನ ಸಿನಿಮಾ ಸ್ಟೈಲ್​ನಲ್ಲಿ ತನ್ನ ಕಾರಿಗೆ ಹತ್ತಿಸಿಕೊಂಡು,  ಕಲ್ಲು ಕ್ವಾರೆ ಬಳಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ. ಈ ವೇಳೇ ತಡೆಯಲು ಬಂದ ಸಂತೋಷ್ ಎಂಬವನಿಗೆ ಚಾಕುವನಿಂದ ಇರಿಯಲಾಗಿದೆ. ಸದ್ಯ ಘಟನೆ ಸಂಬಂಧ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.  

ಇದನ್ನು ಸಹ ಓದಿ : ಸುಖಾಸುಮ್ಮನೆ ಚೈನ್​ ಎಳೆದು ಟ್ರೈನ್​ ನಿಲ್ಲಿಸ್ತಿರುವ ಪ್ರಯಾಣಿಕರು! ಇಷ್ಟಕ್ಕೂ ರೈಲ್ವೆ ಅಲಾರಾಮ್​ ಚೈನ್ ಎಳೆಯುವುದರಿಂದ ಏನಾಗುತ್ತೆ ಗೊತ್ತಾ!? ಶಿಕ್ಷೆ ಎಷ್ಟು ವರ್ಷ ಗೊತ್ತಾ?

shivamogga MlA channabasappa : ಸಿಡಿಲಿಗೆ ಬಲಿಯಾದ ಮಹಿಳೆ ಕುಟುಂಬಕ್ಕೆ ಏಳು ಲಕ್ಷ ಪರಿಹಾರ

ಸಿಡಿಲು ಬಡಿದು ಸಾವನಪ್ಪಿದ ಮಹಿಳೆಯ ನಿವಾಸಕ್ಕೆ ತೆರಳಿದ ಶಾಸಕ ಚನ್ನಬಸಪ್ಪರವರು, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ಧಾರೆ. ಮೃತ ಲಕ್ಷ್ಮಿಯವರ ನಿವಾಸದಲ್ಲಿ ಕುಟುಂಬಸ್ಥರನ್ನ ಮಾತನಾಡಿಸಿದ ಶಾಸಕರು ತಾಲೂಕು ಆಡಳಿತದಿಂದ 5 ಲಕ್ಷ ರೂ. ಮತ್ತು ಮಹಾನಗರ ಪಾಲಿಕೆಯಿಂದ ಎರಡು ಲಕ್ಷ ರೂಪಾಯಿ ಸೇರಿದಂತೆ ಒಟ್ಟು ಏಳು ಲಕ್ಷ ರೂಪಾಯಿ ಪರಿಹಾರವನ್ನ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ನಗರದಲ್ಲಿ ಗಾಳಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕರು  ಭೇಟಿ ನೀಡಿದ್ದಾರೆ. ಈ ವೇಳೆ ಮಳೆಯಿಂದ ಉಂಟಾಗಬಹುದಾದ ತೊಂದರೆಗಳ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಚನೆ ನೀಡಿದರು. 

ಇದನ್ನು ಸಹ ಓದಿ : 15 ದಿನದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು! ತುಂಗಾ ಠಾಣೆ ಪೊಲೀಸರಿಂದ ಕಳ್ಳ-ಕಳ್ಳಿ ಬಂಧನ!

Shivamogga today crime :  ಮಹಿಳೆಯಿಂದ ಹಣ ಕಸಿದು ಪರಾರಿ

ಬಸವನಗುಡಿಯ ವಿನಾಯಕ ಪಾರ್ಕ್ ಬಳಿ ಇಬ್ಬರು ಬೈಕ್‌ನಲ್ಲಿ ಬಂದು ಮಹಿಳೆಯೊಬ್ಬರಿಂದ ಹಣ ಕಸಿದುಕೊಂಡು ಹೋದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಬಸವನಗುಡಿ ನಿವಾಸಿ ರಾಧಾ ಎಂಬುವವರು ಹಣ ಕಳೆದು ಕೊಂಡವರು, ಸಮೀಪದ ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡುವುದಕ್ಕೆಂದು  ಬ್ಯಾಂಕ್​ಗೆ  ಹೋಗಿದ್ದ ಮಹಿಳೆ ಅಲ್ಲಿ ಜನ ಜಾಸ್ತಿ ಇದ್ದುದ್ದರಿಂದ ವಾಪಸ್ ಬರುತ್ತಿದ್ದರು. ಆಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕವರ್‌ನಲ್ಲಿದ್ದ 10 ಸಾವಿರ ರೂಪಾಯಿ ಹಣ ಹಾಗೂ ಎಟಿಎಂ ಕಾರ್ಡ್​​ನ್ನ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ 

ಇದನ್ನು ಸಹ ಓದಿ : ಪಿಯುಸಿ ಅಡ್ಮಿಶನ್​ಗೆ ತಂದೆ ಜೊತೆ ಹೋಗುತ್ತಿದ್ದಾಗ ಲಾರಿ ಡಿಕ್ಕಿ! ಬಾಲಕಿ ಸಾವು! 

child labour rescue : ಬಾಲ ಕಾರ್ಮಿಕನ ರಕ್ಷಣೆ

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಕೈಗೊಂಡ ತಪಾಸಣೆ ವೇಳೆ  ಒಬ್ಬ ಕಿಶೋರ ಕಾರ್ಮಿಕಪತ್ತೆಯಾಗಿದ್ದಾನೆ. ಈ ಸಂಬಂಧ ಆತನನ್ನ ಕೆಲಸಕ್ಕೆ ಬಳಸಿಕೊಂಡಿರುವ ಮಾಲೀಕನ ವಿರುದ್ಧ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆಯಡಿ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಪತ್ತೆಯಾದ ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ.  

Mla beluru gopala krishna :ಸಾರ್ವಜನಿಕರಿಗೆ ಕಚೇರಿ ಅಲೆದಾಟ ತಪ್ಪಿಸಿ

ಸಾಗರ ಸಾರ್ವಜನಿಕರು ತಮ್ಮ ಕೆಲಸಕ್ಕೆ ನಗರ ಸಭೆಗೆ ಬಂದಾಗ ನಿರ್ಲಕ್ಷ್ಯದಿಂದ ವರ್ತಿಸುವ ಮತ್ತು ಮಧ್ಯವರ್ತಿಗಳ  ಮೂಲಕ ಬಂದಿರುವ ಕೆಲಸ ಮಾತ್ರ ಮಾಡುವ ಮನೋ ಭಾವ ಬದಲಾಗಬೇಕು. ಇಂದಿನಿಂದ ಪ್ರಾಮಾಣಿಕವಾಗಿ ಜನರ ಕೆಲಸವನ್ನು ಮಾಡುವ ಮನಸ್ಸು ಇದ್ದರೆ ಇಲ್ಲಿ ಇರಿ. ಇಲ್ಲವಾದರೆ ಹೊರಡಿ, ನಾನೇ ವರ್ಗಾವಣೆ ಮಾಡಿಸಿ ಕೊಡುತ್ತೇನೆ ಎಂದು ನಗರಸಭೆ ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.  ಅಧಿಕಾರಿಗಳ ಸಭೆಯಲ್ಲಿ ಖಾತೆ ಬದಲಾವಣೆಗೆ ಜನರನ್ನು ಅಲೆದಾಡಿಸುತ್ತಿರುವ ಬಗ್ಗೆ ಸಿಟ್ಟಿನಿಂದಲೇ ಮಾತನಾಡಿದ ಅವರು, ಜನ ಪದೇಪದೆ ಏಕೆ ಕಚೇರಿಗೆ ಅಲೆದಾಡಬೇಕು. ಉದ್ದೇಶಪೂರ್ವಕವಾಗಿ ಅವರನ್ನು ಅಲೆದಾಡಿಸುವ ನೀವು ಇಲ್ಲಿ ಕೆಲಸ ಮಾಡುವುದಕ್ಕೆ ಲಾಯಕ್ಕಲ್ಲ ಎಂದು ಆಕ್ರೋಶ ಹೊರಹಾಕಿದ್ರು.