15 ದಿನದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು! ತುಂಗಾ ಠಾಣೆ ಪೊಲೀಸರಿಂದ ಕಳ್ಳ-ಕಳ್ಳಿ ಬಂಧನ!

Police crack a case of house burglary in 15 days Two arrested by Tunga police

15 ದಿನದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು! ತುಂಗಾ ಠಾಣೆ ಪೊಲೀಸರಿಂದ  ಕಳ್ಳ-ಕಳ್ಳಿ ಬಂಧನ!

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಶಿವಮೊಗ್ಗ/  ನಗರದ ತುಂಗಾನಗರ ಪೊಲೀಸ್ ಸ್ಟೇಷನ್  ಪೊಲೀಸರು ಪ್ರಕರಣವೊಂದರಲ್ಲಿ, 15 ದಿನಗಳ ಅಂತರದಲ್ಲಿ, ಮಹಿಳೆಯು ಸೇರಿದಂತೆ ಇಬ್ಬರು ಕಳ್ಳರನ್ನ ಬಂಧಿಸಿದ್ಧಾರೆ. ಅಲ್ಲದೆ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ಧಾರೆ. 

ಪ್ರಕರಣವೇನು?

ದಿನಾಂಕಃ 13-05-2023  ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಕೊಪ್ಪ ಗ್ರಾಮದ ವಾಸಿಯಾದ ರೇಣುಕಮ್ಮ ತಮ್ಮ ಮನೆಯ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಕಳುವಾಗಿದೆ ಎಂದು ಸ್ಟೇಷನ್​ ನಲ್ಲಿ ಕಂಪ್ಲೆಂಟ್ ಕೊಟ್ಟಿದ್ದರು. ಈ ಸಂಬಂಧ ಐಪಿಸಿ 380 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. 

ಮಹಿಳೆ ಸೇರಿ  ಇಬ್ಬರು ಆರೋಪಿಗಳ ಬಂಧನ (,shivamogga news kannada)

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬೆನ್ನಲ್ಲೆ ತುಂಗಾ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ಧಾರೆ. 

ಬಂಧಿತ ಆರೋಪಿಗಳು 

1) ಹೇಮಾವತಿ ಆರ್, 23 ವರ್ಷ, ಮಳಲಕೊಪ್ಪ ಗ್ರಾಮ ಶಿವಮೊಗ್ಗ 

2) ಸತೀಶ್, 22 ವರ್ಷ, ಮಳಲಕೊಪ್ಪ ಗ್ರಾಮ

ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯ ಚಿನ್ನ ವಶ

30-05-2023  ರಂದು ಪ್ರಕರಣದ ಆರೋಪಿಗಳನ್ನ ಬಂಧಿಸಿದ್ದು, ಅವರಿಂದ  ಅಂದಾಜು ಮೌಲ್ಯ ರೂ 4,30,000/- ಗಳ 90 ಗ್ರಾಂ ಬಂಗಾರದ ಆಭರಣಗಳು ಮತ್ತು ರೂ 2050/- ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿದ್ಧಾರೆ.  

ಸಚಿವ ಮಧು ಬಂಗಾರಪ್ಪರವರ ಶಿವಮೊಗ್ಗ ಜಿಲ್ಲಾ ಪ್ರವಾಸ ದಿಢೀರ್​ ರದ್ದು! ಕಾರಣ?

ಶಿವಮೊಗ್ಗ/ ಸಚಿವರಾದ ಬಳಿಕ ಇದೇ ಮೊದಲ ಸಲ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಮಧುಬಂಗಾರಪ್ಪರವರ ನಾಳಿನ ಕಾರ್ಯಕ್ರಮ ರದ್ದಾಗಿದೆ.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರ ತುರ್ತು ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ಶಿವಮೊಗ್ಗ ಪ್ರವಾಸ ರದ್ದಾಗಿದೆ. 

ಈ ಹಿನ್ನೆಲೆ ಮೇ 31ರಂದು ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳು, ಸಭೆಗಳನ್ನು  ಬರ್ಖಾಸ್ತುಗೊಂಡಿದೆ. ನಾಳೆ ಅವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಬೇಕಾಗಿತ್ತು. ಅವರ ಸ್ವಾಗತ ಹಾಗೂ ಅವರಿಗೆ ಅಭಿನಂದನೆ ಸಲ್ಲಿಸಲು ಜಿಲ್ಲಾ ಕಾಂಗ್ರೆಸ್ ಸಕಲ ಸಿದ್ಧತೆಯನ್ನು ಮಾಡಿಕೊಂಡಿತ್ತು. ಆದರೆ ಇದೀಗ ಅವರ ಕಾರ್ಯಕ್ರಮ ರದ್ಧಾಗಿದೆ. ಶಾಲೆಗಳ ಪುನಾರಂಭ ಹಿನ್ನೆಲೆಯಲ್ಲಿ ಶಾಲೆಯೊಂದಕ್ಕೆ ಮಧು ಬಂಗಾರಪ್ಪರವರು ಭೇಟಿ ನೀಡಬೇಕಿತ್ತು. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿತ್ತು. 

ಜೂನ್‌ 1ರಂದು ಅಂದರೆ ನಾಡಿದ್ದು ಕಾಂಗ್ರೆಸ್ ಸರ್ಕಾರದ ಭರವಸೆಗಳ ಗ್ಯಾರಂಟಿ ಯೋಜನೆ ಬಗ್ಗೆ ಸಂಪುಟ ಸಭೆ ಕರೆಯಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಯಲ್ಲಿಯು ನಿರಂತರ ಸಭೆ ನಡೆಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪರವರ ಜಿಲ್ಲಾ ಪ್ರವಾಸ ರದ್ದುಗೊಂಡಿದೆ ಎನ್ನಲಾಗುತ್ತಿದೆ.