ಸಚಿವ ಮಧು ಬಂಗಾರಪ್ಪರವರ ಶಿವಮೊಗ್ಗ ಜಿಲ್ಲಾ ಪ್ರವಾಸ ದಿಢೀರ್​ ರದ್ದು! ಕಾರಣ?

Minister Madhu Bangarappa's shivamogga district tour cancelled The reason?

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Minister Madhu Bangarappa's shivamogga district tour cancelled The reason?

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಶಿವಮೊಗ್ಗ/ ಸಚಿವರಾದ ಬಳಿಕ ಇದೇ ಮೊದಲ ಸಲ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಮಧುಬಂಗಾರಪ್ಪರವರ ನಾಳಿನ ಕಾರ್ಯಕ್ರಮ ರದ್ದಾಗಿದೆ.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರ ತುರ್ತು ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ಶಿವಮೊಗ್ಗ ಪ್ರವಾಸ ರದ್ದಾಗಿದೆ. 

ಈ ಹಿನ್ನೆಲೆ ಮೇ 31ರಂದು ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳು, ಸಭೆಗಳನ್ನು  ಬರ್ಖಾಸ್ತುಗೊಂಡಿದೆ. ನಾಳೆ ಅವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಬೇಕಾಗಿತ್ತು. ಅವರ ಸ್ವಾಗತ ಹಾಗೂ ಅವರಿಗೆ ಅಭಿನಂದನೆ ಸಲ್ಲಿಸಲು ಜಿಲ್ಲಾ ಕಾಂಗ್ರೆಸ್ ಸಕಲ ಸಿದ್ಧತೆಯನ್ನು ಮಾಡಿಕೊಂಡಿತ್ತು. ಆದರೆ ಇದೀಗ ಅವರ ಕಾರ್ಯಕ್ರಮ ರದ್ಧಾಗಿದೆ. 

ಶಾಲೆಗಳ ಪುನಾರಂಭ ಹಿನ್ನೆಲೆಯಲ್ಲಿ ಶಾಲೆಯೊಂದಕ್ಕೆ ಮಧು ಬಂಗಾರಪ್ಪರವರು ಭೇಟಿ ನೀಡಬೇಕಿತ್ತು. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿತ್ತು.ಜೂನ್‌ 1ರಂದು ಅಂದರೆ ನಾಡಿದ್ದು ಕಾಂಗ್ರೆಸ್ ಸರ್ಕಾರದ ಭರವಸೆಗಳ ಗ್ಯಾರಂಟಿ ಯೋಜನೆ ಬಗ್ಗೆ ಸಂಪುಟ ಸಭೆ ಕರೆಯಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಯಲ್ಲಿಯು ನಿರಂತರ ಸಭೆ ನಡೆಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪರವರ ಜಿಲ್ಲಾ ಪ್ರವಾಸ ರದ್ದುಗೊಂಡಿದೆ ಎನ್ನಲಾಗುತ್ತಿದೆ. 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor