ಸುಖಾಸುಮ್ಮನೆ ಚೈನ್​ ಎಳೆದು ಟ್ರೈನ್​ ನಿಲ್ಲಿಸ್ತಿರುವ ಪ್ರಯಾಣಿಕರು! ಇಷ್ಟಕ್ಕೂ ರೈಲ್ವೆ ಅಲಾರಾಮ್​ ಚೈನ್ ಎಳೆಯುವುದರಿಂದ ಏನಾಗುತ್ತೆ ಗೊತ್ತಾ!? ಶಿಕ್ಷೆ ಎಷ್ಟು ವರ್ಷ ಗೊತ್ತಾ?

DO NOT MISUSE ALARM CHAINS IN TRAINS After all, do you know what happens when the railway alarm chain is pulled? Do you know how many years the sentence is?

ಸುಖಾಸುಮ್ಮನೆ ಚೈನ್​ ಎಳೆದು ಟ್ರೈನ್​ ನಿಲ್ಲಿಸ್ತಿರುವ ಪ್ರಯಾಣಿಕರು!  ಇಷ್ಟಕ್ಕೂ ರೈಲ್ವೆ ಅಲಾರಾಮ್​ ಚೈನ್ ಎಳೆಯುವುದರಿಂದ ಏನಾಗುತ್ತೆ ಗೊತ್ತಾ!?  ಶಿಕ್ಷೆ ಎಷ್ಟು ವರ್ಷ ಗೊತ್ತಾ?

KARNATAKA NEWS/ ONLINE / Malenadu today/ May 30, 2023 SHIVAMOGGA NEWS

ಶಿವಮೊಗ್ಗ/  ರೈಲಿನಲ್ಲಿ (bangalore to shivamogga train) ತುರ್ತು ಸಂದರ್ಭದಲ್ಲಿ ರೈಲನ್ನು ನಿಲ್ಲಿಸುವ ಸಿಗ್ನಲ್​ ನೀಡುವ ಸಲುವಾಗಿ ಚೈನ್​ ಎಳೆಯುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಆದರೆ ಇದನ್ನ ಸರಿಯಾದ ಸಮಯಕ್ಕೆ ಉಪಯೋಗಿಸಬೇಕು. ಆದರೆ, ರೈಲ್ವೆ ಅಲರಾಮ್ (railway alarm chain)​ ಚೈನ್​ ಬೇಕಾಬಿಟ್ಟಿಯಾಗಿ ಎಳೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. 

ಇಷ್ಟಕ್ಕೂ ಏತ್ತಕಾಗಿ ಎಳೆಯುತ್ತಾರೆ ಚೈನ್​! 

ಇತ್ತೀಚೆಗೆ ತಮ್ಮ ಸಂಬಂಧಿಕರನ್ನ ಬಂಧು ಬಳಗವನ್ನು ಸ್ನೇಹಿತರನ್ನ ಟ್ರೈನ್ ಹತ್ತಿಸಲು ಬರುವವರು ಅವರೊಂದಿಗೆ ಟ್ರೈನ್ ಸ್ಟಾರ್ಟ್ ಆಗುವರೆಗೂ ಇರೋಣ ಎಂದು ತಾವು ಸಹ ಟ್ರೈನ್ ಹತ್ತಿರುತ್ತಾರೆ. ( Shivamogga train schedule,) ಆನಂತರ ಟ್ರೈನ್ ಹೊರಟರು, ಅವರಿಗೆ ಇಳಿಯಲಾಗದೇ ಚೈನ್ ಎಳೆಯುತ್ತಾರೆ. ಹೀಗೆ ವಿನಾಕಾರಣ ತಮ್ಮ ಉದ್ದೇಶಕ್ಕಾಗಿ ಟ್ರೈನ್ ಚೈನ್​ ಎಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. 

ಶಿವಮೊಗ್ಗದಲ್ಲಿ ರೈಲ್ವೆ ಇಲಾಖೆಯಿಂದಲೇ ಅಭಿಯಾನ

ಇದೇ ಕಾರಣಕ್ಕಾಗಿ    ಶಿವಮೊಗ್ಗ ರೈಲ್ವೆ ಪ್ರೋಟೆಕ್ಷನ್​  ಫೋರ್ಸ್‍ನ ಪೋಸ್ಟ್​ ಕಮಾಂಡರ್ ಬಿ.ಎನ್.ಕುಬೇರಪ್ಪ  ಶಿವಮೊಗ್ಗ ರೈಲ್ವೆ ವ್ಯಾಪ್ತಿಯ ಹಾರ್ನಹಳ್ಳಿ, ಸಿದ್ಲಿಪುರ, ಭದ್ರಾವತಿ, ಕುಂಸಿ, ಆನಂದಪುರ ಮತ್ತು ಸಾಗರ ಇಲ್ಲಿ ರೈಲ್ವೆ ಅಲಾರ್ಮ್ ಚೈನ್ ಎಳೆಯುವ ಘಟನೆಗಳನ್ನು ತಡೆಗಟ್ಟಲು ಅಲಾರ್ಮ್ ಚೈನ್ ಎಳೆಯುವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ಧಾರೆ. ಈ ವೇಳೇ ಪ್ರಯಾಣಿಕರಿಗೆ ರೈಲ್ವೆ ಅಲರಾಮ್ ಬಳಸುವ ಬಗ್ಗೆ ಮಾಹಿತಿ ನೀಡಿದ್ದರಷ್ಟೆ ಅಲ್ಲದೆ, ಅದರಿಂದ ಆಗುವ ತೊಂದರೆಗಳನ್ನ ಸಹ ವಿವರಿಸಿದ್ಧಾರೆ. 

ಇಷ್ಟಕ್ಕೂ ಏನಾಗುತ್ತದೆ ಚೈನ್​ ಎಳೆಯುವುದರಿಂದ!

  1. ಪ್ರತಿ ರೈಲಿನ ಎಲ್ಲಾ ಬೋಗಿಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಗಾಗಿ ಎಚ್ಚರಿಕೆಯ ಸರಪಳಿಗಳನ್ನು ಒದಗಿಸಲಾಗಿದೆ. 
  2. ಪ್ರಯಾಣಿಕರು ಇವುಗಳನ್ನು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಎಚ್ಚರಿಕೆಯ ಸರಪಳಿಯನ್ನು ಎಳೆಯುವುದರಿಂದ ರೈಲು ನಿಲ್ಲುತ್ತಿದೆ. ಇದರಿಂದ ರೈಲಿನ ವೇಗದ ಮೇಲೆ ಪರಿಣಾಮ ಬೀರುತ್ತದೆ. 
  3. ಒಂದು ಟ್ರೈನ್​ ತಾನು ಹೊರಟ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಸಮಯದಲ್ಲಿ ವ್ಯತ್ಯಾಸವಾಗುತ್ತದೆ. ಅಷ್ಟೆಅಲ್ಲದೆ ಕ್ರಾಸಿಂಗ್​ ಗಳಲ್ಲಿ ಇನ್ನೊಂದು ಯಾವುದೋ ಟ್ರೈನ್​ ನ ಪ್ರಯಾಣಕ್ಕೂ ಸಮಸ್ಯೆಯಾಗುವ ಸಾಧ್ಯತೆಗಳಿರುತ್ತದೆ. 
  4. ಬೇಕಾಬಿಟ್ಟಿಯಾಗಿ ಚೈನ್​ ಎಳೆಯುವುದರಿಂದ ರೈಲಿನಲ್ಲಿರುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತದೆ.

ದಂಡ ಬೀಳುತ್ತೆ ಎಚ್ಚರ! 

  • ಚೈನ್​ ಇದೆ ಎಂದು ಬೇಕಾಬಿಟ್ಟಿಯಾಗಿ ಎಳೆದರೆ, ರೈಲ್ವೆ ಇಲಾಖೆ ಹೋಗಿಬನ್ನಿ ಎಂದು ಸುಮ್ಮನೆ ಇರುವುದಿಲ್ಲ. ಬದಲಾಗಿ, ಸಮರ್ಪಕ ಕಾರಣವಿಲ್ಲದೆ ಚೈನ್ ಎಳೆದರೆ,  ರೂ. 1000 ದಂಡ ವಿಧಿಸುತ್ತದೆ. 
  • ಅಥವಾ ಒಂದು ವರ್ಷ ಜೈಲು ಶಿಕ್ಷೆ ಅಥವಾ ರೈಲ್ವೇ ಕಾಯಿದೆ 1989 ರ ಸೆಕ್ಷನ್ 141 ರಡಿ ಎರಡನ್ನೂ ವಿಧಿಸುವ ಅವಕಾಶವಿದೆ