ಹಾವೇರಿ ದುರಂತ ಬೆನ್ನಲ್ಲೆ ಮತ್ತೊಂದು ಘಟನೆ | ಆಂಬುಲೆನ್ಸ್‌ ಬೈಕ್‌ ಡಿಕ್ಕಿ | ಮೂವರ ಸಾವು?

fatal accident in Shikaripura taluk, Shivamogga district. An ambulance collided with a motorcycle, resulting in the deaths of three bike riders. The accident occurred near Taralaghatta at midnight.

ಹಾವೇರಿ ದುರಂತ ಬೆನ್ನಲ್ಲೆ ಮತ್ತೊಂದು ಘಟನೆ | ಆಂಬುಲೆನ್ಸ್‌ ಬೈಕ್‌ ಡಿಕ್ಕಿ | ಮೂವರ ಸಾವು?
Taralaghatta village , Shikaripura taluk

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಶಿವಮೊಗ್ಗಕ್ಕೆ ಮತ್ತೊಂದು ಕೆಟ್ಟ ಸುದ್ದಿಯೊಂದು ಬಂದಿದೆ. ನಿನ್ನೆಯಷ್ಟೆ ಹಾವೇರಿಯಲ್ಲಿ ಭದ್ರಾವತಿಯ ಎಮ್ಮೆಹಟ್ಟಿಯ ನಿವಾಸಿಗಳು ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಆಘಾತಕಾರಿಯಾಗಿ ಎದುರಾಗಿತ್ತು. ಇದೀಗ ಆಂಬುಲೆನ್ಸ್‌ ಬೈಕ್‌ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಬಗ್ಗೆ ಶಿಕಾರಿಪುರ ತಾಲ್ಲೂಕು ನಲ್ಲಿ ವರದಿಯಾಗಿದೆ. ಆಂಬುಲೆನ್ಸ್‌ ಡಿಕ್ಕಿಯಾದ ಪರಿಣಾಮ ಮೂವರು ಬೈಕ್‌ ಸವಾರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.  

ತರಲಘಟ್ಟ ಹಾರೋಗೊಪ್ಪ ನಡುವೆ ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಶಿವಮೊಗ್ಗದಿಂದ ಹಾವೇರಿ ಕಡೆ ತೆರಳುತ್ತಿದ್ದ ಆಂಬುಲೆನ್ಸ್‌ ಹಾಗೂ ಶಿಕಾರಿಪುರದ ಕಡೆಯಿಂದ ಹೊಸ ಜೋಗದ ಕಡೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನ ಹೊಸಜೋಗದ ನಿವಾಸಿಗಳು ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

fatal accident in Shikaripura taluk, Shivamogga district. An ambulance collided with a motorcycle, resulting in the deaths of three bike riders. The accident occurred near Taralaghatta at midnight. The ambulance was traveling from Shivamogga to Haveri, while the bike was coming from Shikaripura towards Hosa Joga. The deceased are said to be residents of Hosa Joga. The Shikaripura Rural Police have registered a case and are investigating the incident