ಶಿವಮೊಗ್ಗದಲ್ಲಿ ಮತ್ತೊಂದು ವಿದ್ಯುತ್ ದುರಂತ/ಟ್ರಾನ್ಸ್​ಫಾರಮ್​ ಹತ್ತಿದ್ದ ಲೈನ್​ ಮ್ಯಾನ್ ಸಾವು

ಟ್ರಾನ್ಸಪಾರಮ್​ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಲೈನ್ ಮ್ಯಾನ್​ ಒಬ್ಬರು ಸಾವನ್ನಪ್ಪಿದ್ದಾರೆ. ಹೈಟೆನ್ಸನ್​ ವಿದ್ಯುತ್ ಪ್ರವಹಿಸಿ ಶ್ರೀಶೈಲ ಎಂಬವರು ಸಾವನ್ನಪ್ಪಿದ್ಧಾರೆ.

ಶಿವಮೊಗ್ಗದಲ್ಲಿ ಮತ್ತೊಂದು ವಿದ್ಯುತ್ ದುರಂತ/ಟ್ರಾನ್ಸ್​ಫಾರಮ್​ ಹತ್ತಿದ್ದ ಲೈನ್​ ಮ್ಯಾನ್ ಸಾವು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹೆದ್ದೂರಿನಲ್ಲಿ ಇತ್ತೀಚೆಗೆಷ್ಟೆ ಲೈನ್ ಮ್ಯಾನ್ ಒಬ್ಬ ಕಂಬದಿಂದ ಬಿದ್ದು ಸಾವನ್ನಪ್ಪಿದ್ದ. ರವಿನಾಯಕ್  ಎಂಬ 37 ವರ್ಷದ ಯುವಕ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೆ ಇದೀಗ ಮತ್ತೊಂದು ವಿದ್ಯುತ್ ದುರಂತ ಸಂಭವಿಸಿದೆ. 

ಇದನ್ನು ಓದಿ :  ಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ...ಗಿಲ್ಲಕ್ಕೋ/ ಶಿವಣ್ಣನ ಟಗರು ಡ್ಯಾನ್ಸ್​ಗೆ , ಬಿಂದಾಸ್​ ಆಗಿ ಕುಣಿದ ಲೇಡಿಸ್ ಫ್ಯಾನ್ಸ್​

ಶಿಕಾರಿಪುರದ ಗ್ರಾಮಾಂತರ ಘಟಕ ವ್ಯಾಪ್ತಿಯಲ್ಲಿ ಬರುವ ಕಪ್ಪನಹಳ್ಳಿ ಯಲ್ಲಿ ಟ್ರಾನ್ಸಪಾರಮ್​ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಲೈನ್ ಮ್ಯಾನ್​ ಒಬ್ಬರು ಸಾವನ್ನಪ್ಪಿದ್ದಾರೆ. ಟ್ರಾನ್ಸ್​ಫಾರಮ್​ ರಿಪೇರಿ ಮಾಡುತ್ತಿದ್ದ ವೇಳೆ, ಹೈಟೆನ್ಸನ್​ ವಿದ್ಯುತ್ ಪ್ರವಹಿಸಿ ಶ್ರೀಶೈಲ ಎಂಬವರು ಸಾವನ್ನಪ್ಪಿದ್ಧಾರೆ. 

BREAKING NEWS / ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಕೆಲ ಮಕ್ಕಳ ಆರೋಗ್ಯ ದಲ್ಲಿ ಏರುಪೇರು/ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ/ BEO ಹೇಳಿದ್ದೇನು?

ಘಟನೆ ನಡೆದಿದ್ದು ಹೇಗೆ? 

ಶಿಕಾರಿಪುರ ಗ್ರಾಮಾಂತರ ಘಟಕದ ವ್ಯಾಪ್ತಿಯಲ್ಲಿರುವ ಕಪ್ಪನಹಳ್ಳಿ ಟ್ರಾನ್ಸಫಾರಮ್​ನಲ್ಲಿ ಇದ್ದ ಸಮಸ್ಯೆಯನ್ನು ಸರಿಪಡಿಸುವ ಸಂಬಂದ ಲೈನ್​ ಮ್ಯಾನ್​ ಶ್ರೀಶೈಲ ಎಂಬವರು ಸ್ಥಳಕ್ಕೆ ತೆರಳಿದ್ದರು. ಈ ವೇಳೇ ಸ್ಠೇಷನ್​ನಿಂದ ಎಲ್​ಸಿ ಸಹ ತೆಗೆದುಕೊಂಡಿದ್ದರು. 

ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

ಎಲ್​ಸಿ ಎಂದರೆ ಲೈನ್​ ಕ್ಲೀಯರೆನ್ಸ್ ಎಂದು ಅರ್ಥ. ಲೈನ್​ ಮ್ಯಾನ್ ತನ್ನ ಸ್ಟೇಷನ್​ ನನ್ನ ಸಂಪರ್ಕಿಸಿ ತಾನು ಕೆಲಸ ಮಾಡಬೇಕಿರುವ ವಿದ್ಯುತ್ ಲೈನ್​ಗೆ ಸಂಬಂಧಿಸಿದ ಲೈನ್​ನ ವಿದ್ಯುತ್ ಸಪ್ಲೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಕೊಳ್ಳುತ್ತಾನೆ. ಅದರ ಬಗ್ಗೆ ಖಾತರಿ ಪಡಿಸಿಕೊಂಡೇ ಆತ ಕಂಬವನ್ನಾಗಲಿ, ಟ್ರಾನ್ಸಫಾರಮ್​ನ್ನಾಗಲಿ ಹತ್ತುತ್ತಾನೆ. 

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ಇಲ್ಲಿಯು ಸಹ, ಲೈನ್​ ಮ್ಯಾನ್​ ಟ್ರಾನ್ಸಫಾರಮ್​ನ ಫೀಡರ್​ ಲೈನ್​ ಸಪ್ಲೆಗಳನ್ನು ಕಡಿತಗೊಳಿಸಿದ್ಧಾನೆ. ಆದಾಗ್ಯು ಈ ದುರ್ಘಟನೆ ಸಂಭವಿಸಿದೆ. ಎಲ್​ಸಿ ತೆಗೆದುಕೊಂಡಿದ್ಧಾಗಲೂ ವಿದ್ಯುತ್ ಪ್ರವಹಿಸಿದ್ದು ಹೇಗೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ವಿದ್ಯುತ್ ಸಿಬ್ಬಂದಿಗಳು ಹೇಳುವ ಪ್ರಕಾರ, ಬೇರೊಂದು ಲೈನ್​ ತಾಗಿ ವಿದ್ಯುತ್ ಪ್ರವಹಿಸಿರಬಹುದು ಎನ್ನಲಾಗುತ್ತಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com