ವೇದ ಸಿನಿಮಾದ ಸಕ್ಸಸ್ ಟೂರ್ನಲ್ಲಿರುವ ಶಿವಣ್ಣ ನಿನ್ನೆ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬಂದಿದ್ದರು, ರಾತ್ರಿ 10 ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ಎಂಟ್ರಿಕೊಟ್ಟ ಶಿವಣ್ಣ , ಮೊದಲೇ ನಿಗದಿಯಾದಂತೆ ಡಿವಿಎಸ್ ವಿದ್ಯಾಸಂಸ್ಥೆಗೆ ಭೇಟಿಕೊಟ್ಟರು.
ಅಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಶಿವರಾಜ್ ಕುಮಾರ್, ಫ್ಯಾನ್ಸ್ಗೆ ನಿರಾಸೆ ಮಾಡದೇ, ಬಿಂದಾಸ್ ಆಗಿ ಟಗರು ಬಂತು ಟಗರು ಹಾಡಿಗೆ ಸ್ಟೆಪ್ ಹಾಕಿದ್ರು.
ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್ಪಿಮಿಥುನ್ ಕುಮಾರ್! ಏನಿದು ಕೇಸ್? JP ಸ್ಟೋರಿ
ಅಲ್ಲಿಯವರೆಗೂ ಶಿವಣ್ಣ ಬರುವುದು ತಡವಾದರೂ ಅಭಿಮಾನಿಗಳು ಹ್ಯಾಟ್ರಿಕ್ ಹೀರೋರನ್ನು ನೋಡಲು ಕಾಯುತ್ತಿದ್ದರು. ಇನ್ನೂ ಶಿವಣ್ಣ ಡ್ಯಾನ್ಸ್ ಆರಂಭಿಸಿದ ಮೇಲಂತೂ ಅಭಿಮಾನಿಗಳು ಅವರ ಜೊತೆಗೇನೆ ಕುಣಿದು ಕುಪ್ಪಳ್ಳಿಸಿದರು, ವಿಶೇಷವಾಗಿ ಲೇಡಿಸ್ ಫ್ಯಾನ್ಸ್ ಶಿವಣ್ಣ.. ಶಿವಣ್ಣ.. ಅಂತಾ ಕೂಗುತ್ತಾ ಟಗರು ಹಾಡಿಗೆ ಸ್ಟೆಪ್ಟ್ ಹಾಕಿದ್ರು.
ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್?



