ಶಿವಮೊಗ್ಗದ ತುಂಗಾ ನದಿಯಲ್ಲಿ ಸೀತಾರಾಮ ತೆಪ್ಪೋತ್ಸವದ ವೈಭವ/ ಸಿಡಿಮದ್ದಿನ ಚಿತ್ತಾರದ ಜೊತೆ ಬೆಳಕಿನ ಅಲಂಕಾರ

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಬಳಿ ತುಂಗಾ ನದಿಯಲ್ಲಿ (Kote Anjaneya Temple)ಶುಕ್ರವಾರ ರಾತ್ರಿ ನಡೆದ ದೇವರ ತೆಪ್ಪೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸೀತಾ ಕಲ್ಯಾಣೋತ್ಸವದ ಅಂಗವಾಗಿ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ ನಡೆಯಿತು

BREAKING NEWS / ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಕೆಲ ಮಕ್ಕಳ ಆರೋಗ್ಯ ದಲ್ಲಿ ಏರುಪೇರು/ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ/ BEO ಹೇಳಿದ್ದೇನು?

ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮೂರ್ತಿಗಳನ್ನು ತೆಪ್ಪದಲ್ಲಿಟ್ಟು ಉತ್ಸವ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಗಸದಲ್ಲಿ ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಭಕ್ತರು ನದಿ ತೀರದಲ್ಲಿ ದೀಪಗಳನ್ನು ಹಚ್ಚಿ ತೇಲಿ ಬಿಟ್ಟಿದ್ದು, ತೆಪ್ಪೋತ್ಸವದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತ್ತು. 

ಶಿವಮೊಗ್ಗದ ತುಂಗಾ ನದಿಯಲ್ಲಿ ಸೀತಾರಾಮ ತೆಪ್ಪೋತ್ಸವದ ವೈಭವ/ ಸಿಡಿಮದ್ದಿನ ಚಿತ್ತಾರದ ಜೊತೆ ಬೆಳಕಿನ ಅಲಂಕಾರ

ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

ತುಂಗಾನದಿಯಲ್ಲಿ ಜಗಮಗ

ಶಿವಮೊಗ್ಗದ ಪುರಾತನ ದೇವಾಲಯ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಬಳಿ ಹರಿಯುವ ತುಂಗಾನದಿಯಲ್ಲಿ ಸೀತಾರಾಮ ದೇವರ ತೆಪ್ಪೋತ್ಸವ  (tunga teppotastava) ವಿಶೇಷವಾಗಿ ನಡೆಯಿತು. ಸೀತಾರಾಮ ಕಲ್ಯಾಣೋತ್ಸವದ ಅಂಗವಾಗಿ ಈ ತೆಪ್ಪೋತ್ಸವ ನಡೆಯಿತು.  ಸೀತಾರಾಮಾಂಜನೇಯ ಸ್ವಾಮಿ ಮೂರ್ತಿಗಳನ್ನು ತೆಪ್ಪದಲ್ಲಿಟ್ಟು ತುಂಗೆಯಲ್ಲಿ ತುಸುದೂರ ಸಾಗಲಾಯ್ತು,  ಈ ವೇಳೆ  ಸಿಡಿಮದ್ದುಗಳನ್ನು ಸಿಡಿಸಲಾಯಿತು. ಭಕ್ತರು ನದಿ ತೀರದಲ್ಲಿ ದೀಪಗಳನ್ನು ಹಚ್ಚಿ ತೇಲಿ ಬಿಟ್ಟರು. ಕೋರ್ಪಳಯ್ಯನ ಛತ್ರದ ಬಳಿಯಲ್ಲಿ ತೆಪ್ಪೋತ್ಸವಕ್ಕಾಗಿಯೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಶಿವಮೊಗ್ಗದ ತುಂಗಾ ನದಿಯಲ್ಲಿ ಸೀತಾರಾಮ ತೆಪ್ಪೋತ್ಸವದ ವೈಭವ/ ಸಿಡಿಮದ್ದಿನ ಚಿತ್ತಾರದ ಜೊತೆ ಬೆಳಕಿನ ಅಲಂಕಾರ

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ತೆಪ್ಪೋತ್ಸವದ ವಿಶೇಷ 

ಸುಮಾರು ಎಂಟು ದಿನಗಳ ಕಾಲ ಸೀತಾರಾಮರ ಕಲ್ಯಾಣ ನಡೆಸಲಾಗುತ್ತದೆ. ಕಲ್ಯಾಣೋತ್ಸವದ ಎರಡನೇ ದಿನ ವೈಕುಂಠ ಏಕಾದಶಿ ಬರುತ್ತದೆ. ಕಲ್ಯಾಣೋತ್ಸವ ಮುಗಿಯುವ ಹಿಂದಿನ ದಿನ ಅಂದರೆ ಹುಣ್ಣಿಮೆಯ ದಿನ ತೆಪ್ಪೋತ್ಸವ ನಡೆಸಲಾಗುತ್ತದೆ.ತೆಪ್ಪೋತ್ಸವಕ್ಕೂ ಮುನ್ನ ಕೋಟೆ ಆಂಜನೇಯ ದೇವಾಲಯದಿಂದ ಸರ್ವಭೂಷಣ ಅಲಂಕೃತವಾಗಿ ಸೀತಾರಾಮ ದೇವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಮಂಟಪದ ಬಳಿಗೆ ಬರಲಾಯ್ತು,  ನಂತರ ದೇವರನ್ನು ಮೂರ್ತಿಗಳನ್ನು ತೆಪ್ಪದಲ್ಲಿ ಕೂರಿಸಿ ನದಿಯಲ್ಲಿ ಸುತ್ತಾಟ ಮಾಡಲಾಯ್ತು. 

ಶಿವಮೊಗ್ಗದ ತುಂಗಾ ನದಿಯಲ್ಲಿ ಸೀತಾರಾಮ ತೆಪ್ಪೋತ್ಸವದ ವೈಭವ/ ಸಿಡಿಮದ್ದಿನ ಚಿತ್ತಾರದ ಜೊತೆ ಬೆಳಕಿನ ಅಲಂಕಾರ

ಶಿವಮೊಗ್ಗ ಜಿಲ್ಲಾ ಮತದಾರರ ಪಟ್ಟಿ ಬಿಡುಗಡೆ, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ. ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಸೀತಾರಾಮೋತ್ಸವ 

ಮದುವೆಯ ನಂತರ ಗಂಡ-ಹೆಂಡತಿಯನ್ನು ಹೇಗೆ ಸುತ್ತಾಟಕ್ಕೆ ಕಳುಹಿಸಲಾಗುತ್ತದೆಯೋ ಹಾಗೆ ತೆಪ್ಪದಲ್ಲಿ ಸೀತಾರಾಮರ ಮೂರ್ತಿಗಳನ್ನು ಉತ್ಸವದ ರೀತಿಯಲ್ಲಿ ತಿರುಗಾಟ ನಡೆಸಲಾಗುತ್ತದೆ. ನದಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ‌ ಕಾಲ ಸುತ್ತಾಟದ ಬಳಿಕ  ಮಹಾ ಮಂಗಳಾರತಿ ನಡೆಸಿ, ದೇವರನ್ನು ಪುನಃ ಸ್ವಸ್ಥಾನಕ್ಕೆ ಕರೆ ತರಲಾಗುತ್ತದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor