ಶಿವಮೊಗ್ಗ ಜಿಲ್ಲಾ ಮತದಾರರ ಪಟ್ಟಿ ಬಿಡುಗಡೆ, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ. ಪೂರ್ತಿ ಪಟ್ಟಿ ಇಲ್ಲಿದೆ ಓದಿ

Malenadu Today

ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿ ಫೈನಲ್ ಆಗಿದೆ. ಈ ಮೊದಲು ನೀಡಿದ್ದ ಕರಡು ಪ್ರತಿಯ ಪರಿಷ್ಕರಣೆಯ ಬಳಿಕ ಇದೀಗ ಮತದಾರರ ಪಟ್ಟಿ ಅಂತಿಮಗೊಂಡು ಬಿಡುಗಡೆಗೊಂಡಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಜಿಲ್ಲೆಯ ವಿವರಗಳನ್ನು ನೋಡುವುದಾದರೆ, ಒಟ್ಟಾರೆ, ಮತದಾರರ ಸಂಖ್ಯೆ ಹಾಗೂ ಅದಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ ಓದಿ. 

ಕ್ಷೇತ್ರ ಪುರುಷ  ಮಹಿಳೆಯರುತೃತಿಯ ಲಿಂಗಿಒಟ್ಟು
ಶಿವಮೊಗ್ಗ ನಗರ123770 129204 15 2,52,989
ಶಿವಮೊಗ್ಗ ಗ್ರಾಮಾಂತರ103534 104525 032,08,062 
ಭದ್ರಾವತಿ 101058 106546 032,07,609 
ತೀರ್ಥಹಳ್ಳಿ91376 93475031,84,854
ಶಿಕಾರಿಪುರ 98281 97086041,95,371 
ಸೊರಬ9707095148021,92,220 
ಸಾಗರ99401101326012,00,728 
ಒಟ್ಟು714490 727310 3314,41,833 

ಇದನ್ನು ಸಹ ಓದಿ NIA NEWS / ಸತ್ಯ ಬಾಯ್ಬಿಟ್ಟ ಮಾಜ್​/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್​/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್​ ಏನು?

2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಂಬಂಧದಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಗೆ ಚುನಾವಣಾ ಆಯೋಗ ನಿಗದಿಪಡಿಸುವ ದಿನಾಂಕದವರೆಗೂ ಹೆಸರು ಸೇರಿಸಲು ಅವಕಾಶವಿರುತ್ತದೆ. ನಮೂನೆ -6 ಸೇರ್ಪಡೆ, ನಮೂನೆ-6ಎ ಅನಿವಾಸಿ ಭಾರತೀಯರು ಹೆಸರು ನೊಂದಾಯಿಸಿಕೊಳ್ಳಲು, 6-ಬಿ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಲು, ನಮೂನೆ-7 ತೆಗೆದು ಹಾಕಲು, ನಮೂನೆ-8ರಲ್ಲಿ ತಿದ್ದುಪಡಿ, ವರ್ಗಾವಣೆ, ಬದಲಿ ಎಪಿಕ್‍ಗೆ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರು ವಿವರ ದಾಖಲಿಸಲು ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು https://ceo.karnataka.gov.in ನಲ್ಲಿ ಲಭ್ಯವಿದ್ದು, ಮತದಾರರು ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article