BREAKING NEWS : ಅನೈತಿಕ ಸಂಬಂಧ ಅಪರಾಧಕ್ಕೆ ಹಾದಿ! ತಾಯಿ ಜೊತೆಗಿದ್ದ ವ್ಯಕ್ತಿಯನ್ನ ಹೊಡೆದು ಕೊಂದ ಮಗ! ಶಿರಾಳಕೊಪ್ಪ ಕೇಸ್!

ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೊಲೀಸರು 48 ಗಂಟೆಯೊಳಗೆ ಕೊಲೆ ಪ್ರಕರಣವೊಂದನ್ನ ಭೇದಿಸಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ಧಾರೆ. ಶಿಕಾರಿಪುರ ತಾಲ್ಲೂಕಿನ ಇನಾಮ್ ಮುತ್ತಳ್ಳಿಯಲ್ಲಿ ನಡೆದ ಕೊಲೆ ಪ್ರಕರಣ ಇದಾಗಿದ್ದು, ತಪ್ಪಿಸಿಕೊಳ್ತಿದ್ದ ಆರೋಪಿಗಳನ್ನ ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ನಡೆದಿದ್ದೇನು? 

ಇಲ್ಲಿನ ಸೋಮಪ್ಪ ಎಂಬಾತನ ಶವ ಈ ಮೊದಲು ಪತ್ತೆಯಾಗಿತ್ತು. ಅದು ಅಸಹಜ ಸಾವು ಎಂಬುದು ಪೊಲೀಸರಿಗೆ ಮೊದಲೇ ಖಾತರಿಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು (shivamogga police) ಆರೋಪಿಗಿದ್ದ ಅಕ್ರಮ ಸಂಬಂಧದ ಜಾಡು ಹಿಡಿದಿದ್ದಾರೆ. ಸೋಮಪ್ಪ ಹಿರೇಕರೂರಿನ ಗ್ರಾಮವೊಂದರ ಮಹಿಳೆ ಜೊತೆ ಸಂಬಂಧ ಹೊಂದಿದ್ದ. ಮತ್ತು ಕೊಲೆಯಾದ ದಿನ ಮಹಿಳಗೆ ಸಂಬಂಧಿಸಿದ ವ್ಯಕ್ತಿಗಳು ಸೋಮಪ್ಪನನ್ನು ಕರೆಸಿಕೊಂಡಿರುವುದು ಪೊಲೀಸರಿಗೆ ಗೊತ್ತಾಗಿದೆ. ಅದರಲ್ಲಿಯು ಮುಖ್ಯವಾಗಿ ಸೋಮಪ್ಪನನ್ನ ಊಟಕ್ಕೆ ಕರೆತರುವಂತೆ ಹನುಮಂತಪ್ಪ ಎಂಬವರ ಬಳಿಯಲ್ಲಿ ಹೇಳಿದ್ದರಂತೆ. ಅದರಂತೆ ಹನುಮಂತಪ್ಪ ಸೋಮಪ್ಪನನ್ನ ಹುಡುಕಿಕೊಂಡು ಹೋದಾಗ, ಆತನ ಮೇಲೆ ಹಲ್ಲೆ ನಡೆಯುತ್ತಿರುವುದನ್ನ ಗಮನಿಸಿದ್ದಾರೆ. ಅಲ್ಲದೆ ಅದನ್ನ ತಪ್ಪಿಸಲು ಯತ್ನಿಸಿದ್ದಾರೆ. ಆದರೆ ಆರೋಪಿಗಳು ಅವರ ಮೇಲೆಯು ಹಲ್ಲೆ ನಡೆಸಿದ್ದಾರೆ. ಈ ಮಧ್ಯೆ ಪೆಟ್ಟು ತಿನ್ನಲಾಗದೇ , ಸೋಮಪ್ಪ ಪ್ರಾಣ ಬಿಟ್ಟಿದ್ಧಾನೆ. ನಂತರ ಆರೋಪಿಗಳು ಸೋಮಪ್ಪನ ಶವವನ್ನು ಬೈಕ್​ ಮೇಲೆ ಹೇರಿಕೊಂಡು ಇನಾಮ್ ಮುತ್ತಳ್ಳಿ ಮಧ್ಯೆ ಎಸೆದು ಪರಾರಿಯಾಗಿದ್ದಾರೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿರುವ ಹನುಮಂತಪ್ಪ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಸಂದೀಪ್​ ಹಾಗೂ ರಮೇಶ್ ಎಂಬವರನ್ನ ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸ್ತಿದ್ಧಾರೆ. 

ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ಯಾ? ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಳ್ಳುತ್ತಿದೆ ಕ್ರಮ! ಏನದು ? ವಿವರ ಇಲ್ಲಿದೆ ಓದಿ

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

.

Leave a Comment