ಡಿಸಿಸಿ ಬ್ಯಾಂಕ್‌ನಿಂದ ಎರಡು ಕಾಲು ಲಕ್ಷ ರೂಪಾಯಿ ಬಿಡಿಸಿಕೊಂಡು ಮನೆಗೆ ಹೋದ ರೈತನಿಗೆ ಎದುರಾಗಿದ್ದು ಶಾಕ್‌

A case of theft of money withdrawn from DCC Bank has been registered at Shiralakoppa Police Station

ಡಿಸಿಸಿ ಬ್ಯಾಂಕ್‌ನಿಂದ ಎರಡು ಕಾಲು ಲಕ್ಷ ರೂಪಾಯಿ ಬಿಡಿಸಿಕೊಂಡು ಮನೆಗೆ ಹೋದ ರೈತನಿಗೆ ಎದುರಾಗಿದ್ದು ಶಾಕ್‌
Shiralakoppa Police Station

SHIVAMOGGA | MALENADUTODAY NEWS | May 27, 2024  ಮಲೆನಾಡು ಟುಡೆ 

 

ತಂದೆಗೆ ಸರ್ಕಾರದಿಂದ ಸಾಕ್ಷ್ಯನ್‌ ಆದ ಬೆಳೆಸಾಲದ ಬಾಬ್ತನ್ನ ಚೆಕ್‌ ಮೂಲಕ ಬಿಡಿಸಿಕೊಂಡು ಮನೆಗೆ ಬರುವಾಗ ಹಣದ ಗಂಟನ್ನ ಕಳ್ಳರು ಕಳವು ಮಾಡಿರುವ ಘಟನೆಯ ಸಂಬಂಧ ಶಿರಾಳಕೊಪ್ಪ ಪೊಲೀಸ್‌ ಸ್ಟೇಷನ್‌ ನಲ್ಲಿ ಕೇಸ್‌ ದಾಖಲಾಗಿದೆ. 

 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದ ಸಮೀಪದ ನಿವಾಸಿಯೊಬ್ಬರು ತಮ್ಮ ತಂದೆಗೆ ಬಿಡುಗಡೆಯಾದ ಬೆಳೆಸಾಲದ ಬಾಬ್ತನ್ನು ಪಡೆದುಕೊಳ್ಳಲು ಡಿಸಿಸಿ ಬ್ಯಾಂಕ್‌ಗೆ ತೆರಳಿದ್ದಾರೆ. ಡಿಸಿಸಿ ಬ್ಯಾಂಕ್‌ನಿಂದ ತಮ್ಮ ತಂದೆ ನೀಡಿದ ಚೆಕ್‌ನ್ನ ಕ್ಯಾಶ್‌ಗೆ ಹಾಕಿ  ಬ್ಯಾಂಕಿನಿಂದ 2,25,000 ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಆ ಹಣವನ್ನು  ಸಣ್ಣನೆಯ ಕೈಚೀಲದಲ್ಲಿ ಹಾಕಿಕೊಂಡ ಅವರು,  ಬೈಕಿನ ಬ್ಯಾಗಿನಲಿ ಅದನ್ನ ಇಟ್ಟಿದ್ದಾರೆ. ಆ ಬಳಿಕ  ಬೈಕನ್ನು ಸ್ಮಾರ್ಟ ಮಾಡಿಕೊಂಡು 11-25 ಗಂಟೆ  ಮನೆಗೆ ತೇರಳಿದ್ದಾರೆ. ಅಲ್ಲಿ ಹೋಗಿ ಹಣದ ಚೀಲವನ್ನು ತೆಗೆದುಕೊಳ್ಳಲು ಮುಂದಾದಾಗ  ಬೈಕಿನ ಬ್ಯಾಗಿನಲ್ಲಿದ್ದ ಹಣದ ಚೀಲ ಇಲ್ಲದಿರುವುದು ಕಂಡು ಬಂದಿದೆ. ಆತಂಕಗೊಂಡ ಅವರು ಕಳುವಾದ ಹಣ ಹಾಗೂ ಕಳ್ಳನನ್ನ ಹಿಡಿಯಿರಿ ಎಂದು ಪೊಲೀಸರಿಗೆ ದೂರು ನೀಡಿದ್ದು  ಪೊಲೀಸರು ತತ್ಸಂಬಂಧ ತನಿಖೆ ನಡೆಸ್ತಿದ್ದಾರೆ. 

 

A man from Shiralakoppa went to DCC Bank to withdraw ₹2,25,000 that was released to his father as crop loan. He kept the money in a small bag and placed it inside his bike bag. When he reached home, he found the money missing. He filed a complaint with the police, who are now investigating the theft.