ಹೊಡೆದಾಟದ ರಣಾಂಗಣಕ್ಕೆ ಕಾರಣವಾದ ಹುಟ್ಟುಹಬ್ಬ ಆಚರಣೆ

A birthday celebration in Biranakere, Shivamogga, turned violent when a resident objected to the group celebrating in the circle. A fight broke out, and both sides filed complaints with the police. 

ಹೊಡೆದಾಟದ ರಣಾಂಗಣಕ್ಕೆ ಕಾರಣವಾದ  ಹುಟ್ಟುಹಬ್ಬ ಆಚರಣೆ
Biranakere, Shivamogga,

SHIVAMOGGA | MALENADUTODAY NEWS | May 27, 2024  ಮಲೆನಾಡು ಟುಡೆ

ಕೆಲವೊಂದನ್ನ ಮಾಡಬಾರದು ಎಂದು ಗೊತ್ತಿದ್ದು ಮಾಡುತ್ತೇವೆ. ಹಾಗೆ ಮಾಡಿದ ಸಂದರ್ಭದಲ್ಲಿ ಆಗಬಾರದು ಆಗುತ್ತದೆ ಎಂಬುದಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಇಲ್ಲಿನ ಬೀರನಕೆರೆಯಲ್ಲಿ ಸರ್ಕಲ್‌ ನಲ್ಲಿ ಹುಟ್ಟುಹಬ್ಬ ಆಚರಿಸುವ ವಿಚಾರಕ್ಕೆ ಹೊಡೆದಾಟ ನಡೆದು ಎರಡು ಕಡೆಗಳಿಂದ ದೂರು ಪ್ರತಿ ದೂರು ದಾಖಲಾಗಿದೆ. ಒಟ್ಟಾರೆ 12 ಮಂದಿ ವಿರುದ್ಧ ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಬೀರನಕೆರೆ ಸರ್ಕಲ್‌ವೊಂದರಲ್ಲಿ ಕಳೆದ 24 ನೇ ತಾರೀಖು ರಾತ್ರಿ ಹತ್ತು ಗಂಟೆ ಸುಮಾರಿಗೆ ಗುಂಪೊಂದು ತಮ್ಮಲ್ಲೆ ಒಬ್ಬರ ಹುಟ್ಟುಹಬ್ಬವನ್ನು ಆಚರಿಸಲು ಆರಂಭಿಸಿದೆ. ಕೇಕ್‌ ಕತ್ತರಿಸಿ ಪಟಾಕಿ ಸಿಡಿಸಿ ಸರ್ಕಲ್‌ನಲ್ಲಿ ಬರ್ತ್‌ಡೇ ಆಚರಿಸಿದಕ್ಕೆ ಅಲ್ಲಿಯ ನಿವಾಸಿಯೊಬ್ಬರು ಆಕ್ಷೇಪಿಸಿದ್ದಾರೆ. ಈ ವೇಳೆ ಪರಸ್ಪರ ಹೊಡೆದಾಟವಾಗಿದೆ. ಅಲ್ಲದೆ ಚಾಕು, ಕುಡುಗೋಲಿನಿಂದ ಹಲ್ಲೆ ಮಾಡಲಾಗಿದೆ. ಎರಡು ಕಡೆಯ ಗುಂಪಿನವರು ಘಟನೆಯಲ್ಲಿ ಗಾಯಗೊಂಡಿದ್ದು, ಪರಸ್ಪರ ದೂರು, ಪ್ರತಿದೂರು ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯವರು ತನಿಖೆ ಆರಂಭಿಸಿದ್ದಾರೆ.  

A birthday celebration in Biranakere, Shivamogga, turned violent when a resident objected to the group celebrating in the circle. A fight broke out, and both sides filed complaints with the police.