ಊರ ತೇರು ಎಳೆಯುವಾಗ ಡ್ಯಾನ್ಸ್‌ ಮಾಡಿದ್ದಕ್ಕೆ ಕಿರಿಕ್‌ | ದಾಖಲಾಯ್ತು FIR

A case has been registered at the Sagar Rural Police Station under IPC for an alleged assault on individuals who were dancing during a temple chariot festival in Shiruvante village, Sagar taluk, Shivamogga district.

ಊರ ತೇರು ಎಳೆಯುವಾಗ ಡ್ಯಾನ್ಸ್‌ ಮಾಡಿದ್ದಕ್ಕೆ ಕಿರಿಕ್‌ | ದಾಖಲಾಯ್ತು FIR
Sagar Rural Police Station

SHIVAMOGGA | MALENADUTODAY NEWS | May 27, 2024  ಮಲೆನಾಡು ಟುಡೆ

ದೇವರ ಜಾತ್ರೆಯಲ್ಲಿ ಡ್ಯಾನ್ಸ್‌ ಮಾಡಿದ್ದನ್ನ ಪ್ರಶ್ನಿಸಿ ಹಲ್ಲೆ ಮಾಡಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ನಡೆದಿದೆ. ಸಾಗರ ಉಪವಿಭಾಗದ ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ  IPC 1860 (U/s-504,323,324,34) ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಪ್ರಕರಣದ ವಿವರ ಹೀಗಿದೆ. ಇಲ್ಲಿನ ಶಿರುವಂತೆ ಗ್ರಾಮದಲ್ಲಿ ಊರಿನ ದೇವರ ರಥೋತ್ಸವದ ವೇಳೆ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ದೇವರ ತೇರು ಎಳೆಯುವ ಸಂದರ್ಭದಲ್ಲಿ ಕೆಲವು ಡ್ಯಾನ್ಸ್‌ ಮಾಡುತ್ತಿದ್ದು, ಆ ವೇಳೆ ಅಲ್ಲಿಗೆ ಬಂದ ಆರೋಪಿಗಳು ಡ್ಯಾನ್ಸ್‌ ಮಾಡುತ್ತಿದ್ದವರನ್ನ ಇಲ್ಲೇಕೆ ಡ್ಯಾನ್ಸ್‌ ಮಾಡುತ್ತಿದ್ದೀರಾ ಅಂತಾ ತಳ್ಳಿ ದೂಡಿದ್ದಾರೆ. ಈ ವೇಳೆ ತಂತಿ ಬೇಲಿ ಮೇಲೆ ಬಿದ್ದು ಒರ್ವರಿಗೆ ಗಾಯವಾಗಿದೆ ಎನ್ನಲಾಗಿದೆ. ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಬೆದರಿಕೆ ಹಾಕಿದ ಆರೋಪವನ್ನ ಸಹ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. 

A case has been registered at the Sagar Rural Police Station under IPC 1860 (U/s-504,323,324,34) for an alleged assault on individuals who were dancing during a temple chariot festival in Shiruvante village, Sagar taluk, Shivamogga district.