ಮಲೆನಾಡಿನ ಒಂಟಿ ಮನೆಯ ಹಾದಿಯಲ್ಲಿ ಎದುರಾದ ಕಾಡುಕೋಣಗಳ ಹಿಂಡು

photo received by Malenadu Today shows a group of wild gaur bison on one such road in Menase village near Haratalu. 

ಮಲೆನಾಡಿನ ಒಂಟಿ ಮನೆಯ ಹಾದಿಯಲ್ಲಿ ಎದುರಾದ ಕಾಡುಕೋಣಗಳ ಹಿಂಡು
Menase village near Haratalu, Malenadu Today

SHIVAMOGGA | MALENADUTODAY NEWS | May 27, 2024  ಮಲೆನಾಡು ಟುಡೆ 

ಮಲೆನಾಡು ಶಿವಮೊಗ್ಗದಲ್ಲಿ ಕಾಡು ಪ್ರಾಣಿಗಳು ಆಗಾಗ ಊರು ಮನೆ ಸಮೀಪ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.ಅದರಲ್ಲಿಯು ಕಾಡಂಚಿನ ಒಂಟಿ ಮನೆಗಳಿಗೆ ತೆರಳುವ ಮಣ್ಣಿನ ದಾರಿಯಲ್ಲಿ ಕಾಡು ಪ್ರಾಣಿಗಳು ನಿರ್ಭಯವಾಗಿ ಓಡಾಡುತ್ತವೆ. ಅಂತಹದ್ದೊಂದು ದೃಶ್ಯ ಹರತಾಳು ಸಮೀಪದ ಮೆಣಸೆ ಗ್ರಾಮದಲ್ಲಿ ಕಾಣಸಿಕ್ಕಿದೆ. ಕಾಡುಕೋಣಗಳ ಗುಂಪೊಂದು ಇಲ್ಲಿನ ದಾರಿಯೊಂದರಲ್ಲಿ ದಾರಿಹೋಕರಿಗೆ ಕಾಣ ಸಿಕ್ಕಿದೆ. ಅದರ ಫೋಟೋವೊಂದು ಮಲೆನಾಡು ಟುಡೆಗೆ ಲಭ್ಯವಾಗಿದೆ. 

ಕಾಡುಕೋಣಗಳು ಮಲೆನಾಡ ಹಾದಿಗಳಲ್ಲಿ ದುತ್ತೆಂದು ಅಡ್ಡ ಬರುವುದಿರುತ್ತದೆ. ಅದರಲ್ಲಿಯು ಬೈಕ್‌ಗಳಲ್ಲಿ  ಓಡಾಡುವಾಗ ಕಾಡೆಮ್ಮೆ, ಕಾಡುಕೋಣ ಡಿಕ್ಕಿಯಾಗಿ ಮೈ ಕೈಗೆ ಪೆಟ್ಟು ಮಾಡಿಕೊಂಡವರು ಬಹಳ ಮಂದಿ ಇದ್ಧಾರೆ. ಆದಾಗ್ಯು ಕಾಡುಕೋಣಗಳ ಓಡಾಟಕ್ಕೆ ಜನರಾಗಲಿ, ಅರಣ್ಯ ಇಲಾಖೆಯಾಗಲಿ ಅಡ್ಡಿಪಡಿಸುವುದಿಲ್ಲ. ಅಚಾನಕ್‌ ನಡೆವ ಘಟನೆಗಳ ಹೊರತಾಗಿ ಕಾಡಿನ ಅತಿಥಿಗಳನ್ನು ಪ್ರೀತಿಯಿಂದಲೇ ಜನರು ನೋಡುತ್ತಿರುತ್ತಾರೆ. ಉಪದ್ರ ಕೊಡಬೇಡ, ಮತ್ತೆಂತ ಬೇಕಾದ್ರು ಮಾಡ್ಕೋ ಅಂತಾ ಕಾಡಿನ ಪ್ರಾಣಿಯ ಜೊತೆಗೆ ಮಾತನಾಡುವ ಕಾಡು ಮಂದಿ ಸೆರೆ ಹಿಡಿದ ಫೋಟೋದ ಬಗ್ಗೆ ಹೇಳುವ ಸಲುವಾಗಿ ಇಷ್ಟೆಲ್ಲಾ ವಿವರಿಸಬೇಕಾಯ್ತು. 

Wild animals are frequently seen near villages in Malenadu Shivamogga, especially on the mud roads leading to remote forest houses. A photo received by Malenadu Today shows a group of wild gaur bison on one such road in Menase village near Haratalu.