BREAKING NEWS/ ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಸಾವು/ ಕುಟುಂಬಸ್ಥರ ಆರೋಪವೇ ಬೇರೆ/ ನಿಜಕ್ಕೂ ನಡೆದಿದ್ದೇನು?

Malenadu Today

KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE


ಶಿವಮೊಗ್ಗ  ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ (central jail shivamogga ) ವಿಚಾರಣಾಧೀನ ಖೈದಿಯೊಬ್ಬ ಸಾವನ್ನಪ್ಪಿದ್ದಾರೆ.ಕಲೀಂ (37) ಸಾವು ಕಂಡ ಕೈದಿ. 

ಏನಾಗಿತ್ತು?

ಕಳೆದೊಂದು ತಿಂಗಳ ಹಿಂದೆ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಯು ಕಿಡ್ನಿ ಸಮಸ್ಯೆ ಹಾಗೂ ಲೋ ಬಿಪಿಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಅಲ್ಲದೆ ಈತ ಮಾನಸಿಕ ಖಿನ್ನತೆಯಲ್ಲಿದ್ದ ಎಂದು ತಿಳಿದುಬಂದಿದೆ. 

ಇತ್ತೀಚೆಗೆ ಈತನ ಅನಾರೋಗ್ಯ ಇನ್ನಷ್ಟು ಹೆಚ್ಚಾಗಿದ್ದು, ವಾಂತಿ, ಬೇದಿಯಿಂದ ಬಳಲುತ್ತಿದ್ದ ಈತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಸಾವನ್ನಪ್ಪಿದ್ದಾನೆ. 

ಈ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಕಲೀಂನನ್ನ ಜೈಲಿನಲ್ಲಿ ಕೊಲೆ ಮಾಡಲಾಗಿದೆ ಎಂದು ದೂರಿದ್ದಾರೆ,. ಆದರೆ ಜೈಲು ಮೂಲಗಳು ಕಲಿಂ ಸಾವಿಗೆ ಆತನ ಅನಾರೋಗ್ಯ ಕಾರಣ ಎಂದು ಸ್ಪಷ್ಟಪಡಿಸಿದೆ.

Malenadutoday.com Social media

 

Share This Article