KARNATAKA NEWS/ ONLINE / Malenadu today/ Oct 12, 2023 SHIVAMOGGA NEWS
ಪೋಕ್ಸೋ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸರಿಗೆ ಇವತ್ತು ಎಸ್ಪಿ ಮಿಥುನ್ ಕುಮಾರ್ ಸನ್ಮಾನ ಮಾಡಿದ್ದಾರೆ
2020ನೇ ಸಾಲಿನಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಮತ್ತು ಎಸ್.ಸಿ ಎಸ್.ಟಿ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖಾಧಿಕಾರಿಗಳಾದ ಉಮೇಶ್ ಈಶ್ವರ್ ನಾಯಕ್, ಡಿವೈಎಸ್.ಪಿ, ಹಾಲೀ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ, ಮತಿ ಶಾಂತಲಾ, ಪಿಎಸ್ಐ ಹಾಲಿ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ಮತ್ತು ಸಹಾಯಕ ತನಿಖಾಧಿಕಾರಿಗಳಾದ ಮತಿ ಲಕ್ಷ್ಮಿ ಮಹೆಚ್ ಸಿ ಹಾಲಿ ಮಹಿಳಾ ಪೊಲೀಸ್ ಠಾಣೆ ರವರುಗಳು ಮತ್ತು
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣದ ತನಿಖಾಧಿಕಾರಿಗಳಾದ ಮಂಜುನಾಥ್ ಪಿಎಸ್ಐ, ಹಾಲಿ ತುಂಗಾನಗರ ಪೊಲೀಸ್ ಠಾಣೆ ಮತ್ತು ಸಹಾಯಕ ತನಿಖಾಧಿಕಾರಿಗಳಾದ ಜಿ. ಬಿ. ನಾಗರಾಜ್, ಹೆಚ್.ಸಿ ಹಾಲಿ ಹೊಳೆಹೊನ್ನೂರು ಪೊಲೀಸ್ ಠಾಣೆ ರವರುಗಳು ಸದರಿ ಪ್ರಕರಣಗಳಲ್ಲಿನ ಆರೋಪಿತರಿಗೆ ಘನ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಜಿಲ್ಲಾ ಪೊಲೀಸ್ ಪೊಲೀಸ್ ಕಛೇರಿಯಲ್ಲಿ ತಮ್ಮ ಸಿಬ್ಬಂದಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿ ಗೌರವಿಸಿರುತ್ತಾರೆ.
ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಪ್ರಭು ಡಿ.ಟಿ, ಪೊಲೀಸ್ ಉಪಾಧೀಕ್ಷಕರು, ಡಿಸಿಆರ್.ಬಿ, ಶಿವಮೊಗ್ಗ ಜಿಲ್ಲೆ ರವರು ಉಪಸ್ಥಿತರಿದ್ದರು.
ಇನ್ನಷ್ಟು ಸುದ್ದಿಗಳು
