ಶಿವಮೊಗ್ಗದ ಪ್ರಮುಖ ಭಾಗದಲ್ಲಿಂದು ನಡೆಯಲಿದೆ ಪೊಲೀಸ್ ರೂಟ್ ಮಾರ್ಚ್ ! ಎಲ್ಲೆಲ್ಲಿ? ಏಕೆಗೊತ್ತಾ?
Police route march will be held in important parts of Shimoga city this evening, ಶಿವಮೊಗ್ಗ ನಗರದ ಪ್ರಮುಖ ಭಾಗಗಳಲ್ಲಿ ಇಂದು ಸಂಜೆ ಪೊಲೀಸ್ ರೂಟ್ ಮಾರ್ಚ್ ನಡೆಯಲಿದೆ
KARNATAKA NEWS/ ONLINE / Malenadu today/ Sep 19, 2023 SHIVAMOGGA NEWS
ಶಿವಮೊಗ್ಗದಲ್ಲಿ ಪ್ರತಿಷ್ಟಾಪನೆಗೊಂಡಿರುವ ಪ್ರಮುಖ ಗಣಪತಿಗಳಲ್ಲಿ ಒಂದಾದ ಹಿಂದೂ ಮಹಾಸಭಾ ಗಣಪತಿ ಹಾಗೂ ಒಂ ಗಣಪತಿಯ ಮೆರವಣಿಗೆಯ ದಿನಾಂಕಗಳು ಸ್ಪಷ್ಟಗೊಂಡಿವೆ. ಇನ್ನೊಂದೆಡೆ ಈದ್ ಮಿಲಾದ್ ಮೆರವಣಿಗೆಯ ದಿನಾಂಕವನ್ನೂ ನಿಕ್ಕಿಯಾಗಿದೆ. ಇದರ ಜೊತೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ಶಾಂತಿಯುತ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಗಾಗಿ ಸಖಲ ಬಂದೋಬಸ್ತ್ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಇವತ್ತು ಶಿವಮೊಗ್ಗ ನಗರದಲ್ಲಿ ರೂಟ್ ಮಾರ್ಚ್ ನಡೆಸಲಿದೆ.ಈ ಸಂಬಂಧ ಪ್ರಕಟಣೆಯನ್ನು ನೀಡಲಾಗಿದೆ. ‘
ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಈ ದಿನ ದಿನಾಂಕಃ 19-09-2023 ರಂದು ಸಂಜೆ 04:00 ಗಂಟೆಗೆ ಶಿವಮೊಗ್ಗ ನಗರದಲ್ಲಿ ರೂಟ್ ಮಾರ್ಚ್ (ಪಥ ಸಂಚಲನ) ವನ್ನು ಹಮ್ಮಿಕೊಳ್ಳಲಾಗಿದೆ.
ಈ ಪಥ ಸಂಚಲನ ಶಿವಮೊಗ್ಗ ನಗರದ ಮುರಾದ್ ನಗರ ದಿಂದ ಪ್ರಾರಂಭಿಸಿ, ಬಿ ಬಿ ರಸ್ತೆ, ಎಂಕೆಕೆ ರಸ್ತೆ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶೆಟ್ಟಿ ಪಾರ್ಕ್, ಎಸ್.ಪಿ. ಎಂ ರಸ್ತೆ ಮುಖಾಂತರ ಬಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಮುಕ್ತಾಯಗೊಳ್ಳಲಿದೆ.
ಇನ್ನೂ ಇದೇ ರೀತಿಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಲ್ಲಿ ಗೌರಿ-ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ನಿನ್ನೆ ದಿನಾಂಕಃ 18-09-2023 ರಂದು ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್, ಡಿವೈಎಸ್.ಪಿ, ಸಾಗರ ಉಪ ವಿಭಾಗ ರವರ ನೇತೃತ್ವದಲ್ಲಿ, ಸಾಗರ ಟೌನ್ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ರೂಟ್ ಮಾರ್ಚ್ ನಲ್ಲಿ ಮಹಾಬಲೇಶ್ವರ ನಾಯ್ಕ್, ಪಿಐ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ಸೀತಾರಾಂ, ಪಿಐ ಸಾಗರ ಟೌನ್ ಪೊಲೀಸ್ ಠಾಣೆ, ಪಿಎಸ್ಐ ಸಾಗರ ಟೌನ್ ಮತ್ತು ಸಾಗರ ಗ್ರಾಮಾಂತರಪೊಲೀಸ್ ಠಾಣೆ, KSRP ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಮತ್ತು ಸಾಗರ ಟೌನ್ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಮತ್ತು ಹೋಂ ಗಾರ್ಡ್ ಸಿಬ್ಬಂಧಿಗಳು ಭಾಗವಹಿಸಿದ್ದರು.
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ