ಸಾಗರದಲ್ಲಿ ಸಿಡಿದೆದ್ದ ಸರ್ಕಾರಿ ನೌಕರರು!? ಡೆಡ್​ಲೈನ್​! ಕಾರಣವೇನು!

Government employees protested in Sagar taluk of Shimoga district ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದಾರೆ

ಸಾಗರದಲ್ಲಿ ಸಿಡಿದೆದ್ದ ಸರ್ಕಾರಿ ನೌಕರರು!? ಡೆಡ್​ಲೈನ್​! ಕಾರಣವೇನು!

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga  |  ಸಾಗರ ತಾಲ್ಲೂಕಿನಲ್ಲಿ ಸರ್ಕಾರಿ ನೌಕರರ ಸಂಘದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಗುರುವಾರ ತಾಲ್ಲೂಕಿನ ಆವಿನಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕ ಗೌರೀಶ್ ಬಿ. ಅವರ ಮೇಲೆ ದೈಹಿಕ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿರುವ ಲೋಹಿತ್‌ ಕಣ್ಣೂರು ಅವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

READ : ಹೈದ್ರಾಬಾದ್ ಟೂರ್​ ಪ್ಲಾನ್​ ಇದ್ಯಾ? ಇಲ್ಲಿದೆ ಮೊದಲು ಬಂದವರಿಗೆ ಮೊದಲ ಅವಕಾಶ!

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ನ 6ರಂದು ಆವಿನಹಳ್ಳಿ ಹೋಬಳಿ ರಾಜಸ್ವ ನಿರೀಕ್ಷಕ ಗೌರೀಶ್‌ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಲೋಹಿತ್‌ ಕಣ್ಣೂರು ಎಂಬುವವರು ಏಕಾಏಕಿ ಕಚೇರಿಗೆ -ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆ ಜೊತೆ ಜಾತಿ ನಿಂದನೆ ಮಾಡಿರುವ ಕ್ರಮವನ್ನು ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕಲ್ಲಪ್ಪ ಮೆಣಸಿನಾಳ್‌, ಸರ್ಕಾರಿ ನೌಕರರ ಸಂಘದ ಪ್ರಮುಖರಾದ ಜಿ.ಬಸವರಾಜ್‌, ರಾಘವೇಂದ್ರ ಕುಮಾರ್, ಲಕ್ಷ್ಮೀ ಭಾಗವತ್, ವಿ.ಎಸ್. ಶ್ರೀಧರ್, ಮಾಲತೇಶ್, ಕೋದಂಡ, ಅಣ್ಣಪ್ಪ ಡಿ.ಕೆ. ಇನ್ನಿತರರು ಹಾಜರಿದ್ದರು.