ಎತ್ತು ಸಾಗಿಸ್ತಿದ್ದವನ ಮೇಲೆ ಹಲ್ಲೆ ಆರೋಪಕ್ಕೆ ದಾಖಲಾಯ್ತು 9 ಮಂದಿ ವಿರುದ್ಧ ಕೇಸ್! ಹೆಚ್ಚುವರಿಯಾಗಿ ಪೊಲೀಸರೇ ಹಾಕಿದ್ರು ಸುಮೋಟೋ ಕೇಸ್​

Case registered against 9 for assaulting a bull-carrying man Additionally, the suo motu case was filed by the police.

ಎತ್ತು ಸಾಗಿಸ್ತಿದ್ದವನ ಮೇಲೆ ಹಲ್ಲೆ ಆರೋಪಕ್ಕೆ ದಾಖಲಾಯ್ತು 9 ಮಂದಿ ವಿರುದ್ಧ ಕೇಸ್! ಹೆಚ್ಚುವರಿಯಾಗಿ ಪೊಲೀಸರೇ ಹಾಕಿದ್ರು  ಸುಮೋಟೋ ಕೇಸ್​

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

ಶಿರಾಳಕೊಪ್ಪ ಪೊಲೀಸ್ ಸ್ಠೇಷನ್​ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರ ಸಂಬಂಧ ಸುಮೊಟೋ ಕೇಸ್ ಹಾಗೂ ಹಲ್ಲೆ ಪ್ರಕರಣದ ಕೇಸ್ ದಾಖಲಾಗಿದೆ. ಎತ್ತುಗಳನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನ ತಡೆದು ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪದ ಅಡಿಯಲ್ಲಿ9 ಮಂದಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಇನ್ನೂ ಪ್ರಾಣಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿಯಲ್ಲಿ ವಾಹನದ ಚಾಲಕನ ವಿರುದ್ಧವೂ ಕೇಸ್ ದಾಖಲಾಗಿದೆ. 

ನಡೆದಿದ್ಧೇನು? 

ಇಲ್ಲಿ ಮಂಚಿಕೊಪ್ಪ ಗ್ರಾಮದ ಬಳಿ ಶುಕ್ರವಾರ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ವಾಹನವೊಂದನ್ನ ಗುಂಪೊಂದು ತಡೆದು ವಿಚಾರಿಸಿದೆ. ಆ ಸಂದರ್ಭದಲ್ಲಿ  ದಾದಾಪೀರ್ ಎಂಬುವವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು, ಇನ್ನೊಂದೆಡೆ ಅಕ್ರಮವಾಗಿ ಎತ್ತುಗಳನ್ನ ಕೊಂಡೊಯ್ದ ಆರೋಪ ಸಂಬಂಧವೂ ಸುಮೊಟೊ ಕೇಸ್ ದಾಖಲಾಗಿದೆ. 

ವೃದ್ಧನ ಕಿಡ್ನ್ಯಾಪ್​ ಕೇಸ್! 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಅಪಹರಣಕಾರರು 24 ಗಂಟೆಯಲ್ಲಿ ಸೆರೆ

ದಾವಣಗೆರೆ/ ವೃದ್ದರೊಬ್ಬರ ಕಿಡ್ನ್ಯಾಪ್​ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಬರೋಬ್ಬರಿ 20 ಲಕ್ಷ ರೂಪಾಯಿ ನೀಡುವಂತೆ ಈ ಪ್ರಕರಣದಲ್ಲಿ ಅಪಹರಣ ಕಾರರು ಬೇಡಿಕೆಯಿಟ್ಟಿದ್ದರು. ಒಟ್ಟಾರೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕೆಟಿಜೆ ನಗರ ಪೊಲೀಸರು ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು,  ದಾವಣಗೆರೆಯ ನಿಟುವಳ್ಳಿಯ ಸಾಗರ್, ನಂದಿಹಳ್ಳಿ ಯುವರಾಜ, ಸುಂದರ್‌ ನಾಯ್ಕ, ಚೇತನ್ ಕುಮಾರ, ಸೇರಿದಂತೆ ಐವರನ್ನ ಬಂಧಿಸಿದ್ದಾರೆ.  

ನಡೆದಿದ್ದೇನು?.

ಗುರುವಾರ ಮಧ್ಯಾಹ್ನದ ಸಮಯದಲ್ಲಿ ಅಂಬಿಕಾ ನಗರದಲ್ಲಿ ಲೊಕೇಶ್ ಎಂಬ 60 ವರ್ಷದ ವೃದ್ಧನನ್ನು ದುಷ್ಕರ್ಮಿಗಳು ಅಪಹರಣಮಾಡಿದ್ದರು.ಈ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಕರೆ ಬಂದ ಮೊಬೈಲ್ ಹಾಗೂ ಲೋಕಲ್ ಪೊಲೀಸಿಂಗ್ ಮೂಲಕ ಆರೋಪಿಗಳನ್ನ ಬಂಧಿಸಿದ್ಧಾರೆ.