ವೃದ್ಧನ ಕಿಡ್ನ್ಯಾಪ್​ ಕೇಸ್! 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಅಪಹರಣಕಾರರು 24 ಗಂಟೆಯಲ್ಲಿ ಸೆರೆ

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

ದಾವಣಗೆರೆ/ ವೃದ್ದರೊಬ್ಬರ ಕಿಡ್ನ್ಯಾಪ್​ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಬರೋಬ್ಬರಿ 20 ಲಕ್ಷ ರೂಪಾಯಿ ನೀಡುವಂತೆ ಈ ಪ್ರಕರಣದಲ್ಲಿ ಅಪಹರಣ ಕಾರರು ಬೇಡಿಕೆಯಿಟ್ಟಿದ್ದರು. ಒಟ್ಟಾರೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕೆಟಿಜೆ ನಗರ ಪೊಲೀಸರು ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು,  ದಾವಣಗೆರೆಯ ನಿಟುವಳ್ಳಿಯ ಸಾಗರ್, ನಂದಿಹಳ್ಳಿ ಯುವರಾಜ, ಸುಂದರ್‌ ನಾಯ್ಕ, ಚೇತನ್ ಕುಮಾರ, ಸೇರಿದಂತೆ ಐವರನ್ನ ಬಂಧಿಸಿದ್ದಾರೆ.  

ನಡೆದಿದ್ದೇನು?.

ಗುರುವಾರ ಮಧ್ಯಾಹ್ನದ ಸಮಯದಲ್ಲಿ ಅಂಬಿಕಾ ನಗರದಲ್ಲಿ ಲೊಕೇಶ್ ಎಂಬ 60 ವರ್ಷದ ವೃದ್ಧನನ್ನು ದುಷ್ಕರ್ಮಿಗಳು ಅಪಹರಣಮಾಡಿದ್ದರು.ಈ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಕರೆ ಬಂದ ಮೊಬೈಲ್ ಹಾಗೂ ಲೋಕಲ್ ಪೊಲೀಸಿಂಗ್ ಮೂಲಕ ಆರೋಪಿಗಳನ್ನ ಬಂಧಿಸಿದ್ಧಾರೆ.  

 

 

Leave a Comment